ಥಿಯೇಟರ್‌ನಲ್ಲಿ ಕಾಂತಾರದ ಅಬ್ಬರ, ಆರ್ಭಟ ಇನ್ನೂ ಜೋರಿರುವಾಗಲೇ ಇನ್ನೂ ಸಿನಿಮಾ ನೋಡದ ಚಿತ್ರಪ್ರೇಮಿಗಳಿಗೆ ಖುದ್ದು ರಿಷಬ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದಾರೆ. ಮನೆಯಲ್ಲೇ ಕೂತು ಕುಟುಂಬ ಸಮೇತ ಕಾಂತಾರ-1 ಕಣ್ತುಂಬಿಕೊಳ್ಳಿ ಅಂತಿದ್ದಾರೆ. ಯೆಸ್.. ಓಟಿಟಿಗೆ ಬರ್ತಿರೋ ಕಾಂತಾರ ಚಿತ್ರದ ಲೇಟೆಸ್ಟ್ ಅಪ್ಡೇಟ್ ಜೊತೆ ಶೆಟ್ರ ಮನೆ ದೀಪಾವಳಿ ಸಂಭ್ರಮ ಕೂಡ ಇಲ್ಲಿದೆ ನೋಡಿ.
ಕಾಂತಾರ ಚಾಪ್ಟರ್-1.. ಬರೀ ಸಿನಿಮಾ ಅಲ್ಲ. ಡಿವೈನಿಟಿಗೆ ಕೇರ್ ಆಫ್ ಅಡ್ರೆಸ್. ಸಂಘರ್ಷದ ದಂತಕಥೆಯಾಗಿ ಎಲ್ಲರನ್ನ ರಂಜಿಸಿದ ಸಿನಿಮಾ. ರಿಷಬ್ ಶೆಟ್ಟಿ ನಿರ್ದೇಶಿಸಿ, ಲೀಡ್‌ನಲ್ಲಿ ಬಣ್ಣ ಹಚ್ಚಿದ್ದ ಈ ಸಿನಿಮಾ ಕಾಂತಾರ ಪ್ರೀಕ್ವೆಲ್ ಆಗಿದ್ದು, ಕರಾವಳಿ ನೆಲದ ಆಚಾರ, ವಿಚಾರಗಳು, ದೈವಗಳಿಗೆ ಜಾಗತಿಕ ವೇದಿಕೆ ಮಾಡಿದ ಕಥೆಯಾಗಿದೆ. ವಿಶ್ವದಾದ್ಯಂತ ಈ ಚಿತ್ರವನ್ನು ನಿಬ್ಬೆರಗಾಗಿ ಕಣ್ತುಂಬಿಕೊಂಡ ಚಿತ್ರಪ್ರೇಮಿಗಳಿಂದ ವರ್ಲ್ಡ್ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಆಗಿದ್ದು ಬರೋಬ್ಬರಿ 850 ಕೋಟಿ ರೂಪಾಯಿಗೂ ಅಧಿಕ ಅಂದ್ರೆ ನೀವು ನಂಬಲೇಬೇಕು.
ಮನೆಯಲ್ಲೇ ನೋಡಿ ಕಾಂತಾರ.. ಬಂದೇ ಬಿಡ್ತು ಓಟಿಟಿಗೆ
ದೀಪಾವಳಿ ಸೆಲೆಬ್ರೇಷನ್.. ಶೆಟ್ರು ಕೊಟ್ರು ಗುಡ್ ನ್ಯೂಸ್
ದೀಪಾವಳಿ ಹಬ್ಬವನ್ನು ಕಾಂತಾರ-1 ಬಿಗ್ಗೆಸ್ಟ್ ಸಕ್ಸಸ್ ಸಂಭ್ರಮದ ಜೊತೆಗೆ ಆಚರಿಸಿದ ರಿಷಬ್ ಶೆಟ್ಟಿಗೆ ನಿಜಕ್ಕೂ ಸಾರ್ಥಕ ಭಾವವಿದೆ. ಇಷ್ಟೆಲ್ಲಾ ಕಷ್ಟ ಪಟ್ಟು, ಇಷ್ಟ ಪಟ್ಟು ಮಾಡಿದ ಸಿನಿಮಾದಿಂದ ಜನಮನ್ನಣೆ ಸಿಕ್ಕಿದ್ದರ ಬಗ್ಗೆ ಹೆಮ್ಮೆಯಿದೆ. ಅದೇ ಕಾರಣದಿಂದ ಇನ್ನೂ ಸಿನಿಮಾ ಥಿಯೇಟರ್ ಅಂಗಳದಲ್ಲಿ ಇರುವಾಗಲೇ, ಪ್ರೇಕ್ಷಕರ ಮನೆಗಳಿಗೇ ತಲುಪಿಸೋ ಕಾರ್ಯ ಮಾಡ್ತಿದ್ದಾರೆ. ಹೌದು.. ನೀವು ಇನ್ನೂ ಕಾಂತಾರ ನೋಡಿಲ್ಲ ಅಂದ್ರೆ, ಮನೆಯಲ್ಲಿ ಇದ್ದಲ್ಲೇ ಸಕುಟುಂಬ ಸಮೇತ ಚಿತ್ರ ನೋಡಿ ಅಂತಿದ್ದಾರೆ ಶೆಟ್ರು.
ಇದೇ ಅಕ್ಟೋಬರ್ 31ರಂದು ಓಟಿಟಿಗೆ ಲಗ್ಗೆ ಇಡ್ತಿರೋ ಕಾಂತಾರ-1 ಕುರಿತು ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿಯೇ ಅಧಿಕೃತ ಪೋಸ್ಟ್ ಹಾಕಿ ಗುಡ್ ನ್ಯೂಸ್ ನೀಡಿದ್ದಾರೆ. ಅಮೆಜಾನ್ ಪ್ರೈಮ್‌ಗೆ ಎಂಟ್ರಿ ಕೊಡ್ತಿರೋ ಕಾಂತಾರ ಇದೀಗ ಮತ್ತಷ್ಟು, ಮಗದಷ್ಟು ಮಂದಿಯ ಮನ ಮೆಚ್ಚಲಿದೆ.
ಅಕ್ಟೋಬರ್ 31ರಿಂದ ನಿಮ್ಮ ಮನೆ, ಮನೆಗೆ ಕಾಂತಾರ-1
ಬ್ರೇಕ್ ಮಾಡಲೇ ಇಲ್ಲ KGF-2 ಗಲ್ಲಾಪೆಟ್ಟಿಗೆ ರೆಕಾರ್ಡ್
ಎಲ್ಲೋ ಒಂದ್ಕಡೆ ಹೊಂಬಾಳೆ ಫಿಲಂಸ್ ಸಂಸ್ಥೆಯ ಹೆಮ್ಮೆಯ ಸಿನಿಮಾ ಕೆಜಿಎಫ್-2 ಗಳಿಸಿದ್ದ 1250 ಕೋಟಿ ಗಲ್ಲಾ ಪೆಟ್ಟಿಗೆ ರೆಕಾರ್ಡ್‌ನ ಕಾಂತಾರ-1 ಬ್ರೇಕ್ ಮಾಡಲಿಲ್ಲವಲ್ಲ ಅನಿಸಲಿದೆ. ಕೇವಲ 850 ಕೋಟಿ ಗಳಿಸುವಲ್ಲಿ ಯಶಸ್ವಿ ಆಗಿದೆ ಈ ಬಾರಿಯ ದಂತಕಥೆ. ಅದೇನೇ ಇರಲಿ.. ಇಲ್ಲಿ ರೆಕಾರ್ಡ್‌ಗಳಿಗಿಂತ ಎಚ್ಚು ಮಂದಿಯ ಮೆಚ್ಚುಗೆಗೆ ಪಾತ್ರವಾಯ್ತು..? ಇಡೀ ಭಾರತೀಯ ಚಿತ್ರರಂಗ ಕಾಂತಾರಗೆ ಬೆರಗಾದ ಪರಿ ಎಂಥದ್ದು ಅನ್ನೋದು ಮುಖ್ಯವಾಗಲಿದೆ.
 
			
 
					




 
                             
                             
                             
                            