ಕಳೆದ ಕೆಲವು ತಿಂಗಳಿನಿಂದ ಸೋತು ಸುಣ್ಣವಾಗಿದ್ದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಯಶಸ್ಸನ್ನು ತಂದು ಕೊಟ್ಟಿದ್ದು ರಿಷಬ್ ಶೆಟ್ಟಿ. ಸದ್ಯ 50 ದಿನಗಳನ್ನು ಪೂರೈಸಿರುವ ಸಂಭ್ರಮದಲ್ಲಿರುವ ಕಾಂತಾರ ಚಾಪ್ಟರ್ 1 ಇಲ್ಲಿವರೆಗೂ ಗಳಿಸಿದ್ದೆಷ್ಟು? ಸಕ್ಸಸ್ ಬೆನ್ನಲೇ ರಾಜಕೀಯ ಗಣ್ಯರನ್ನು ಭೇಟಿ ಮಾಡಿರೋ ರಿಷಬ್ ಚಿತ್ರರಂಗದ ಬಗ್ಗೆ ನಡೆಸಿದ ಮಾತುಕತೆ ಏನು..?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಅಧ್ಯಾಯ 1 ಅಕ್ಟೋಬರ್ 2ರಂದು ಜಾಗತಿಕವಾಗಿ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಕಾಂತಾರ ಅಧ್ಯಾಯ 1 ಬರೋಬ್ಬರಿ 50 ದಿನಗಳನ್ನು ಪೂರೈಸಿದೆ. ವಿಶ್ವದಾದ್ಯಂತ ಈ ಸಿನಿಮಾದ ಕಲೆಕ್ಷನ್ ದಾಖಲೆ ಅಂತಲೇ ಹೇಳಬಹುದು. ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದರೂ ಕೆಲವೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಥಿಯೇಟರ್ನಲ್ಲಿ 50 ದಿನ ಪೂರೈಸಿದ ಕಾಂತಾರ 1
ರಿಷಬ್- ಹೊಂಬಾಳೆ ಕಾಂಬಿನೇಷನ್ ಬಾಕ್ಸಾಫೀಸ್‌ನಲ್ಲಿ ಜಾದು
50ನೇ ದಿನ ಕಾಂತಾರ 1 ಸಿನಿಮಾ 13 ಲಕ್ಷ ಕಲೆಕ್ಷನ್ ಆಗಿದೆ. ಸದ್ಯ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಕಾಂಬಿನೇಷನ್ ಮತ್ತೆ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದೆ ಅಂತಾನೆ ಹೇಳ್ಬೋದು. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಹಾಗೂ ಮಲಯಾಳಂ ನಟ ಜಯರಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಶ್ವದಾದ್ಯಂತ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. 50 ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ 900 ಕೋಟಿ ಕಲೆಕ್ಷನ್ ಮಾಡಿದೆ ಎಂಬ ವರದಿಯಿದೆ.
ರಿಷಬ್ ಹಾಗು ಕಾಂತಾರ ಚಿತ್ರತಂಡದ ಮೂರು ವರ್ಷದ ಪರಿಶ್ರಮಕ್ಕೆ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಪ್ರತಿಫಲ ನೀಡಿದ್ದಾರೆ. ಇನ್ನು ರಿಷಬ್ ಶೆಟ್ಟಿ ‘ಕಾಂತಾರ -1’ ಸಿನಿಮಾದ ಕೆಲಸದಲ್ಲಿ ಬ್ಯುಸಿಯಿರುವಾಗಲೇ ಅವರು ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳ ಬಗ್ಗೆ ಅನೌನ್ಸ್‌ಮೆಂಟ್ ಆಗಿದ್ದವು. ಇವೆಲ್ಲ ಪ್ರಾಜೆಕ್ಟ್‌ಗಳು ಪ್ಯಾನ್ ಇಂಡಿಯಾದಲ್ಲಿ ತೆರೆಗೆ ಬರಲಿರುವ ಬಿಗ್ ಬಜೆಟ್ ಪ್ರಾಜೆಕ್ಟ್ ಎನ್ನುವುದು ಗಮನಿಸಬೇಕಾದ ವಿಚಾರ.

ಕಾಂತಾರದ ಬಳಿಕ ರಿಷಬ್ ಅವರ ಬೇಡಿಕೆ ಹೆಚ್ಚಾಗಿದೆ. ಹಿಂದಿ ,ತೆಲುಗು ಚಿತ್ರರಂಗಕ್ಕೂ ರಿಷಬ್ ಕಾಲಿಟ್ಟಿದ್ದಾರೆ. ಡಿವೈನ್ ಅವತಾರದಲ್ಲೇ ಅವರನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಹೀಗಿರುವಾಗ ರಿಷನ್ ಮುಂದಿನ ನಡೆ ಏನು ಅನ್ನೋ ಕುತೂಹಲವು ಹೆಚ್ಚಿದೆ. ಶೆಟ್ರು ಮೊದಲು ಕೈಗೆತ್ತಿಕೊಳ್ಳೋ ಸಿನಿಮಾ ಯಾವ್ದು ಅನ್ನೋ ಕ್ಯೂರಿಯಸಿಟಿ ಬಿಲ್ಡ್ ಆಗಿದೆ.

ಸದ್ಯ ಸಕ್ಸಸ್ ಓಟದಲ್ಲಿರುವ ರಿಷಬ್ ಫ್ಯಾಮಿಲಿ ಜೊತೆ ಕ್ವಾಲಿಟಿ ಟೈಮ್ ಕಳೆಯುತಿದ್ದಾರೆ. ಹಾಗೆ ಪತ್ನಿ ಪ್ರಗತಿ ಶೆಟ್ಟಿ ಜೊತೆ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಕೆಲ ದಿನಗಳ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ 2018-19ನೇ ಸಾಲಿನ ರಾಜ್ಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮನರಂಜನಾ ಚಿತ್ರ ಹಾಗು ನಿರ್ದೇಶಕ ಎಂಬ ಎರಡು ಪ್ರಶಸ್ತಿಗಳು ಸಿಕ್ಕಿದೆ ಎಂಬುದನ್ನು ರಿಷಬ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದರು.

ಎಲ್ಲೆಡೆ ರಿಷಭೋತ್ಸವ.. DCM, ಅಪ್ಪಾಜಿ ನಾಡಗೌಡ ಸನ್ಮಾನ
ಸನ್ಮಾನಕ್ಕೆ ಕೂಲಿಂಗ್ ಗ್ಲಾಸ್ ಬೇಕಾ ಶೆಟ್ರೇ..? ಜಸ್ಟ್ ಆಸ್ಕಿಂಗ್

ಇತೀಚೆಗಷ್ಟೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚಿತ್ರರಂಗದ ಬೆಳವಣಿಗೆ ಮತ್ತು ಸಾಮಾಜಿಕ ಪ್ರಭಾವ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಡಿಸಿಎಂ ಶೆಟ್ಟಿ ಅವರ ಕಾರ್ಯವೈಖರಿಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.ಸದ್ಯ ರಿಷಬ್ ಜೊತೆಗಿನ ಮಾತುಕತೆ ಫೋಟೋಗಳನ್ನು ಹಂಚಿಕೊಂಡ ಡಿಕೆ ರಿಷಬ್ ಮುಂದಿನ ಚಿತ್ರರಂಗ ಪಯಣಕ್ಕೆ ಯಶಸ್ಸು ಹಾಗೂ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದ್ದಾರೆ.

ಇನ್ನು ಈ ಹಿಂದೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ‘ಕಾಂತಾರ’ ಚಿತ್ರದ ವೈಶಿಷ್ಟ್ಯತೆಯನ್ನು ಮೆಚ್ಚಿಕೊಂಡಿದ್ರು. ಜೊತೆಗೆ ಅಪ್ಪಾಜಿ ನಾಡಗೌಡ ಅವರು ರಿಷಬ್ ಅವರನ್ನ ಭೇಟಿ ಮಾಡಿ ಸನ್ಮಾನ ಮಾಡಿದ್ರು. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದ್ರು. ನಮ್ಮ ಕೆಎಸ್ & ಡಿಎಲ್ ಸಂಸ್ಥೆಯು ಕಾಂತಾರ ಚಿತ್ರಕ್ಕೆ ಪ್ರಾಯೋಜಕತ್ವದ ಸಹಭಾಗಿತ್ವ ಹೊಂದಿದ್ದು ಮತ್ತಷ್ಟು ಖುಷಿ ನೀಡಿದೆ. ರಿಷಭ್ ಶೆಟ್ಟರ ಸಿನಿಮಾ ಪಯಣ ಹೀಗೆಯೇ ಯಶಸ್ವಿಯಾಗಿ ಸಾಗಲಿ, ಅವರಿಂದ ಹಾಗೂ ಹೊಂಬಾಳೆ ಸಂಸ್ಥೆಯಿಂದ ಇನ್ನೂ ಸಾಕಷ್ಟು ಅದ್ಭುತ ಸಿನಿಮಾಗಳು ಮೂಡಿಬರಲಿ ಎಂದು ಬರೆದುಕೊಂಡಿದ್ರು.

ಎಲ್ಲಾ ಓಕೆ ಆದ್ರೆ ಸನ್ಮಾನ ಮಾಡುವಾಗ ಕೂಲಿಂಗ್ ಗ್ಲಾಸ್ ಬೇಕಿತ್ತಾ ಶೆಟ್ರೇ ಎಂಬ ಪ್ರಶ್ನೆ ಮೂಡಿದೆ. ಎಸ್, ವೃತ್ತಿಯಲ್ಲಿ ಆಗ್ಲಿ.. ವಯಸ್ಸಲ್ಲೇ ಆಗ್ಲಿ ನಮಕ್ಕಿಂತ ದೊಡ್ಡವರ ಎದುರು ಕಾಲು ಮೇಲೆ ಕಾಲಕಿ ಕೂರೋದೇ ತಪ್ಪು ಅನ್ನೋ ಮಾತಿದೆ. ಹೀಗಿರುವಾಗ ಸನ್ಮಾನ ಮಾಡುವಾಗ ಈ ಕೂಲಿಂಗ್ ಗ್ಲಾಸ್ ಹಾಕಿದ್ದು ಯಾಕೆ..? ಇದು ಸ್ವಲ್ಪ ಅತಿ ಆಯ್ತು ಅಲ್ವಾ ಅನ್ನೋ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ. ಏನಿವೆ ಬೆಳೆದ ಮೇಲೆ ಏನೆ ಮಾಡಿದ್ರು ಟ್ರೆಂಡಿಂಗ್ ಅನ್ಕೋಬೇಕು.
ರಿಷಬ್ ಶೆಟ್ಟಿ ಸದ್ಯ ಕಾಂತಾರ ಸಕ್ಸಸ್‌ನ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ನಂತರ ಕಾಂತಾರ ಪಾರ್ಟ್-2 ಕೈಗೆತ್ತಿಕೊಳ್ತಾರಾ..? ಅಥವಾ ಜೈ ಹನುಮಾನ್ ಸಿನಿಮಾವನ್ನ ಮೊದಲು ಮಾಡ್ತಾರಾ..? ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





