ದಂತಕಥೆಗಳ ಮಹಾದೃಶ್ಯಕಾವ್ಯ ಕಾಂತಾರ. ನಾಲ್ಕೇ ದಿನಕ್ಕೆ 335 ಕೋಟಿ ಪೈಸಾ ವಸೂಲ್ ಮಾಡಿರೋ ಕಾಂತಾರ, ಕೆಜಿಎಫ್ ಬಳಿಕ ಸಾರ್ವಕಾಲಿಕ ದಾಖಲೆ ಬರೆದಿದೆ. ರಿಷಬ್ ಶೆಟ್ಟಿಗೆ ಅನುಪಮ್ ಖೇರ್ ವಿಡಿಯೋ ಕಾಲ್ ಮಾಡಿ ಹೇಳಿದ್ದೇನು ಅನ್ನೋದ್ರ ಜೊತೆಗೆ ರಾಷ್ಟ್ರಪತಿ ಭವನದಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಆದ ಕಾಂತಾರ ಕರಾಮತ್ತು ಕಹಾನಿ ಹೇಳ್ತೀವಿ ಈ ಸ್ಟೋರಿ ನೋಡಿ
ಕಾಂತಾರ.. ಕಾಂತಾರ.. ಕಾಂತಾರ.. ರಿಷಬ್ ಶೆಟ್ಟಿ ಕರಿಯರ್‌ನ ಬಹುದೊಡ್ಡ ಪ್ಯಾನ್ ಇಂಡಿಯಾ ಮೂವಿ. ಒಂದೇ ಬಾರಿ 7 ಭಾಷೆಗಳಲ್ಲಿ ವಿಶ್ವದ 30ಕ್ಕೂ ಅಧಿಕ ರಾಷ್ಟ್ರಗಳಲ್ಲಿ ತೆರೆಕಂಡ ಮಾಸ್ಟರ್‌ಪೀಸ್ ಸಿನಿಮಾ. ಕಾಂತಾರ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಜನಕ್ಕೆ ಅತೀವ ನಿರೀಕ್ಷೆಯಿತ್ತು. ಅದ್ರಂತೆ ಅವ್ರ ಅಭಿರುಚಿಗೆ ತಕ್ಕನಾದ ಸಿನಿಮಾ ನೀಡುವಲ್ಲಿ ಶೆಟ್ರು ಸಕ್ಸಸ್ ಆಗಿದ್ದಾರೆ. ಎಲ್ಲೆಡೆಯಿಂದ ಚಿತ್ರಕ್ಕೆ ಅಭೂತಪೂರ್ವ ಪ್ರಶಂಸೆ ಮತ್ತು ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ.
KGF ನಂತ್ರ ಕಾಂತಾರ ಮತ್ತೊಂದು ಸಾರ್ವಕಾಲಿಕ ದಾಖಲೆ
ನಾಲ್ಕೇ ದಿನಕ್ಕೆ 335 ಕೋಟಿ.. 50 ಲಕ್ಷ ಟಿಕೆಟ್ಸ್ ಸೋಲ್ಡ್..!!
90 ವರ್ಷಗಳ ಇತಿಹಾಸವಿರೋ ನಮ್ಮ ಕನ್ನಡ ಚಿತ್ರರಂಗದಲ್ಲಿ 90 ರಿಂದ 100 ಕೋಟಿ ಗಳಿಸೋ ಸಿನಿಮಾಗಳು ಬರ್ತಿರೋದೇ ಇತ್ತೀಚೆಗೆ. ಅಂಥದ್ರಲ್ಲಿ ರಿಲೀಸ್ ಆದ ಮೊದಲ ದಿನವೇ 100 ಕೋಟಿ ಗಡಿ ಮುಟ್ಟುವ ಚಿತ್ರಗಳು ಬರ್ತಿರೋದು ಖುಷಿಯ ವಿಚಾರ. ಯೆಸ್.. ಕೆಜಿಎಫ್ ಚಾಪ್ಟರ್-2 ಬಳಿಕ ಕಾಂತಾರ-1 ಅಂಥದ್ದೊಂದು ಸಾರ್ವಕಾಲಿಕ ದಾಖಲೆಗೆ ಮುನ್ನುಡಿ ಬರೆದಿದೆ. ಯಶ್ ನಟನೆಯ ಕೆಜಿಎಫ್ ಸೀಕ್ವೆಲ್ ತೆರೆಕಂಡ ಮೊದಲ ದಿನವೇ ವರ್ಲ್ಡ್‌ವೈಡ್ ಬರೋಬ್ಬರಿ 165 ಕೋಟಿ ಗಳಿಸಿತ್ತು. ಇದೀಗ ಕಾಂತಾರ ಪ್ರೀಕ್ವೆಲ್ 89 ಕೋಟಿ ಕಲೆಕ್ಷನ್‌ನಿಂದ 2ನೇ ಸ್ಥಾನ ಅಲಂಕರಿಸಿದೆ.
ಮೂರೇ ದಿನದಲ್ಲಿ 235 ಕೋಟಿ ಗಳಿಸಿದ ಶೆಟ್ರ ಕಾಂತಾರ ಚಿತ್ರ, ನಾಲ್ಕು ದಿನಗಳಿಗೆ 335 ಕೋಟಿ ಗಳಿಸಿ 300 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ. ಅಲ್ಲದೆ, ಬುಕ್ ಮೈ ಶೋನಲ್ಲಿ 5 ದಿನದಲ್ಲಿ ಬರೋಬ್ಬರಿ 50 ಲಕ್ಷ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ. ಕನ್ನಡ ಸಿನಿಮಾವೊಂದಕ್ಕೆ ಈ ರೀತಿ ಎಲ್ಲೆಡೆ ಡಿಮ್ಯಾಂಡ್ ಹೆಚ್ಚಾಗಿ, ಲಕ್ಷಾಂತರ ಟಿಕೆಟ್ಸ್ ಆನ್‌ಲೈನ್ ಬುಕಿಂಗ್ ಆಗಿರೋದು ಹೆಮ್ಮೆಯ ವಿಷಯ.
ಬಾಕ್ಸ್ ಆಫೀಸ್ ನಾಗಾಲೋಟ.. ಎಲ್ಲೆಡೆ ಹೌಸ್‌ಫುಲ್ ಓಟ
ನೆಗೆಟೀವ್ ರಿವ್ಯೂಸ್ ಇಲ್ವೇ ಇಲ್ಲ.. ದೈವ ಶಕ್ತಿಗೆ ಪ್ರೇಕ್ಷಕರ ಭಕ್ತಿ
ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರೆಸಿರೋ ಕಾಂತಾರ-1 ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನಗಳನ್ನ ಕಾಣ್ತಿದೆ. ದೈವಿಕ ಅಂಶಗಳಿಂದ ಕೂಡಿರೋ ಕಾಂತಾರ ಚಿತ್ರವನ್ನು ಭಕ್ತಿ ಪ್ರಧಾನ ಸಿನಿಮಾಗಳ ಜಾನರ್‌ಗಹೆ ಸೇರಿಸಿ, ಅತೀವ ಭಕ್ತಿಯಿಂದ ಜನ ನೋಡ್ತಿದ್ದಾರೆ. ಅಲ್ಲದೆ, ಇಲ್ಲಿ ಸಂಘರ್ಷದ ಅಂಶಗಳು ನೋಡುಗರ ನಾಡಿಮಿಡಿತ ಹೆಚ್ಚಿಸುತ್ತಿವೆ. ನಮ್ಮ ಮಣ್ಣಿನ ಸೊಗಡು, ಸೊಬಗು, ನಂಬಿಕೆಗಳ ಪ್ರತಿರೂಪವಾಗಿ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ ಕಾಂತಾರ.
ಅನುಪಮ್ ಖೇರ್ ವಿಡಿಯೋ ಕಾಲ್.. ಶೆಟ್ರಿಗೆ ಹೇಳಿದ್ದೇನು?
‘ಮಾತೇ ಬರ್ತಿಲ್ಲ’ ಅಂದಿದ್ಯಾಕೆ ಬಾಲಿವುಡ್ ಹಿರಿಯ ನಟ..?!
ಸಾಮಾನ್ಯವಾಗಿ ಎಂಥದ್ದೇ ಹಿಟ್ ಮೂವಿ ಬಂದರೂ ಸಹ ಒಂದಷ್ಟು ಕಲಾವಿದರು ಹಾಗೂ ನಿರ್ದೇಶಕರುಗಳು ಅವುಗಳನ್ನ ತೆಗಳುವುದು ಉಂಟು. ಆದ್ರೆ ಇದೇ ಫಸ್ಟ್ ಟೈಂ, ಕಾಂತಾರ ಚಿತ್ರಕ್ಕೆ ಭಾರತೀಯ ಚಿತ್ರರಂಗದ ಎಲ್ಲಾ ಸ್ಟಾರ್‌ಗಳು ಹಾಗೂ ಸ್ಟಾರ್ ಡೈರೆಕ್ಟರ್‌ಗಳು ಫುಲ್ ಮಾರ್ಕ್ಸ್ ನೀಡ್ತಿದ್ದಾರೆ. ಆರ್‌ಜಿವಿ, ಸಂದೀಪ್ ರೆಡ್ಡಿ ವಂಗಾ, ಪ್ರಭಾಸ್, ಹೃತಿಕ್ ರೋಷನ್, ಎನ್‌ಟಿಆರ್, ಉಪೇಂದ್ರರಿಂದ ಹಿಡಿದು ಎಲ್ಲರೂ ವ್ಹಾವ್ ಎಂದಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಕೂಡ ಇದ್ರಿಂದ ಹೊರತಾಗಿಲ್ಲ.
ಹೌದು.. ನಿನ್ನೆ ಸಂಡೇ ಹಿನ್ನೆಲೆ ಕುಟುಂಬ ಸಮೇತ ಮುಂಬೈನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿರೋ ಅನುಪಮ್ ಖೇರ್, ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿಗೆ ವಿಡಿಯೋ ಕಾಲ್ ಮಾಡಿ, ಮಾತೇ ಬರ್ತಿಲ್ಲ.. ನಂಬಲಾಗದಂತಹ ದೃಶ್ಯಚಿತ್ತಾರವಿದು ಅಂತ ಹಾಡಿ ಹೊಗಳಿದ್ದಾರೆ. ಅನುಪಮ್ ಖೇರ್ ತಾಯಿ ಕೂಡ ರಿಷಬ್‌ಗೆ ದೇವರು ನಿಮಗೆ ಒಳ್ಳೆಯದು ಮಾಡಲಿ ಅಂತ ಆಶೀರ್ವದಿಸಿದ್ದು ಇಂಟರೆಸ್ಟಿಂಗ್. ಇದಲ್ಲವೇ ನಮ್ಮ ಕನ್ನಡಿಗರ ಗತ್ತು, ಗೈರತ್ತು..?
ಡೆಲ್ಲಿ ರಾಷ್ಟ್ರಪತಿ ಭವನದಲ್ಲಿ ಕಾಂತಾರ-1 ಸ್ಪೆಷಲ್ ಸ್ಕ್ರೀನಿಂಗ್
ಕಾಂತಾರ ವೀಕ್ಷಿಸಿದ ಸ್ಟ್ಯಾಫ್.. ಸದ್ಯದಲ್ಲೇ ರಾಷ್ಟ್ರಪತಿ ವೀಕ್ಷಣೆ
ಇತ್ತೀಚೆಗೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, 60 ಸಾವಿರಕ್ಕೂ ಅಧಿಕ ರೂಪಾಯಿಗೆ ಟಿಕೆಟ್ಸ್ ಖರೀದಿಸಿ, ತಮ್ಮ ಬಿಜೆಪಿ ಕಾರ್ತಕರ್ತರಿಗೆ ಮೈಸೂರಿನ ಡಿಆರ್‌ಸಿನಲ್ಲಿ ಕಾಂತಾರ ಸಿನಿಮಾ ತೋರಿಸಿದ್ರು. ಇದೀಗ ನವದೆಹಲಿಯಲ್ಲಿರೋ ರಾಷ್ಟ್ರಪತಿ ಭವನದಲ್ಲಿ ಕಾಂತಾರ-1 ಸ್ಪೆಷಲ್ ಸ್ಕ್ರೀನಿಂಗ್ ಆಗಿದೆ. ಹೌದು.. ಅಕ್ಟೋಬರ್ 5ರ ಭಾನುವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಶೇಷ ಪ್ರದರ್ಶನದ ಮೂಲಕ ಹೊಂಬಾಳೆ ಸಿನಿಮಾ ತೋರಿಸಿದೆ. ಸದ್ಯದಲ್ಲೇ ದೇಶದ ಮೊದಲ ಪ್ರಜೆಗಳಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಕಾಂತಾರ ಕಣ್ತುಂಬಿಕೊಳ್ಳಲಿದ್ದಾರಂತೆ.
ನ್ಯಾಷನಲ್ ಅವಾರ್ಡ್ ಪಡೆದ ಕಾಂತಾರ ಸಿನಿಮಾ, ಈ ಹಿಂದೆ ವಿಶ್ವಸಂಸ್ಥೆಯಲ್ಲಿ ವಿಶೇಷ ಪ್ರದರ್ಶನ ಕಂಡಿತ್ತು. ಇದೀಗ ಕಾಂತಾರ-1 ಕೂಡ ಅದೇ ಶೈಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಸ್ಕ್ರೀನಿಂಗ್ ಆಗಿರೋದು ಕನ್ನಡಿಗರಾದ ನಾವೆಲ್ಲಾ ಹೆಮ್ಮೆ ಪಡುವ ವಿಷಯವಾಗಿದೆ. ಇನ್ನು ಚಿತ್ರದ ವೀಕ್ಷಣೆ ವೇಳೆ ಒಂದಷ್ಟು ಮೈ ಮೇಲೆ ದೈವ ಆವಾಹನೆ ಆಗ್ತಿರೋದು ಒಂದಷ್ಟು ಚರ್ಚೆಗಳಿಗೆ ಗ್ರಾಸವಾಗ್ತಿದೆ. ಅದೇನೇ ಇರಲಿ, ಕಾಂತಾರ ಈ ರೇಂಜ್‌ಗೆ ಹೊಸ ಅಲೆಯನ್ನ ಎಬ್ಬಿಸಿ, ಇತಿಹಾಸದ ಪುಟಗಳನ್ನ ಸೇರಿರುವುದು ಚರಿತ್ರೆಯೇ ಸರಿ.