ಬ್ಲಾಕ್‌ಬಸ್ಟರ್ ಸಿನಿಮಾ ಯಾವತ್ತಿದ್ರೂ ಬ್ಲಾಕ್ ಬಸ್ಟರ್.. ರೀ-ರಿಲೀಸ್ ಕಂಡ ರಂಗಿತರಂಗ, ಈಗಲೂ ಭರ್ಜರಿ ಕಲೆಕ್ಷನ್ ಮಾಡಿ ನಿರ್ಮಾಪಕ ಪ್ರಕಾಶ್ ಬ್ಯಾಂಕ್ ಖಾತೆಯನ್ನು ತುಂಬಿಸ್ತಿದೆ. ಸದ್ಯ HK ಪ್ರಕಾಶ್ ಈಗ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಯನ್ನೇ ನಂಬಿ ದುಡ್ಡು ಸುರಿದಿದ್ದಾರೆ. ಪ್ರೊಡ್ಯೂಸರ್ ಬ್ಯಾಂಕ್ ಖಾತೆಗೆ ಭಾಗ್ಯಲಕ್ಷ್ಮಿ ತಥಾಸ್ತು ಅನ್ನೋ ಟೈಮ್ ಬಂದೇ ಬಿಟ್ಟಿದೆ. ಹಾಗೆಯೇ ಅದ್ರ ಟೀಸರ್ ಕೂಡ ರಿಲೀಸ್ ಆಗಿದೆ.
- ‘ರಂಗಿತರಂಗ’ ಪ್ರೊಡ್ಯೂಸರ್ ‘ಬ್ಯಾಂಕ್’ ಖಾತೆಗೆ ಭಾಗ್ಯಲಕ್ಷ್ಮೀ
- ಸಖತ್ ಇಂಟರೆಸ್ಟಿಂಗ್ & ಇಂಪ್ರೆಸ್ಸೀವ್ ಆಗಿದೆ BOB ಟೀಸರ್
- ದಿಯಾ ದೀಕ್ಷಿತ್ ಜೊತೆ ಸ್ಮೈಲ್ ಕ್ವೀನ್ ಬೃಂದಾ ಆಚಾರ್ಯ..!
- ಶ್ರುತಿ ಹರಿಹರನ್, ಗೋಪಾಲಕೃಷ್ಣ ದೇಶಪಾಂಡೆ & 66,999ರೂ
ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರಿಗೆ ಡಬಲ್ ಧಮಾಕ. ಯೆಸ್.. ಒಂದ್ಕಡೆ ರಂಗಿತರಂಗ 10 ವರ್ಷ ಕಂಪ್ಲೀಟ್ ಮಾಡಿದ ಹಿನ್ನೆಲೆಯಲ್ಲಿ ಸಿನಿಮಾ ರೀ-ರಿಲೀಸ್ ಆಗಿದೆ. ಮತ್ತೊಂದ್ಕಡೆ ಅದೇ ನಿರ್ಮಾಪಕರ ಮತ್ತೊಂದು ಹೊಚ್ಚ ಹೊಸ ಸಿನಿಮಾ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಟೀಸರ್ ಲಾಂಚ್ ಆಗಿದೆ.
ಯೆಸ್.. ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ-ಸಾಯಿಕುಮಾರ್ ನಟನೆಯ ರಂಗಿತರಂಗ ಸಿನಿಮಾ ಇತ್ತೀಚೆಗೆ ಮರು ಬಿಡುಗಡೆ ಆಗಿತ್ತು. ಚಿತ್ರತಂಡ ಸುದ್ದಿಗೋಷ್ಠಿ ಮಾಡಿ, ಅದ್ದೂರಿಯಾಗಿಯೇ ಚಿತ್ರವನ್ನು ರೀ-ರಿಲೀಸ್ ಮಾಡಿತ್ತು. ಇತರೇ ಯಾವುದೇ ಚಿತ್ರಗಳು ಥಿಯೇಟರ್‌ನಲ್ಲಿ ಇಲ್ಲದ ಕಾರಣ ರಂಗಿತರಂಗ ರೀ-ರಿಲೀಸ್‌ನಲ್ಲೂ ಹೌಸ್‌ಫುಲ್ ಪ್ರದರ್ಶನಗಳ ಮೂಲಕ ಒಳ್ಳೆಯ ಕಲೆಕ್ಷನ್ ಮಾಡ್ತಿದೆ.
ಅದರೊಟ್ಟಿಗೆ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ ಅಭಿಷೇಕ್ ಎಂ ಅನ್ನೋ ಪ್ರತಿಭೆಯ ಚೊಚ್ಚಲ ನಿರ್ದೇಶನದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದ ಟೀಸರ್ ಸಂಥಿಂಗ್ ಸ್ಪೆಷಲ್ ಆಗಿದೆ. ಹೌದು.. ದಿಯಾ, ದಸರಾ ಸಿನಿಮಾಗಳು ಖ್ಯಾತಿಯ ದೀಕ್ಷಿತ್ ಶೆಟ್ಟಿ ಲೀಡ್‌ನಲ್ಲಿ ನಟಿಸಿರೋ ಈ ಚಿತ್ರಕ್ಕೆ ಕೌಸಲ್ಯ ಸುಪ್ರಜಾ ರಾಮ ಹಾಗೂ X&Y ಖ್ಯಾತಿಯ ಬೃಂದಾ ಆಚಾರ್ಯ ನಾಯಕನಟಿ.
ಭಾಗ್ಯಲಕ್ಷ್ಮೀ ಕೋ ಆಪರೇಟೀವ್ ಸೊಸೈಟಿ ಬ್ಯಾಂಕ್‌ನ ರಾಬರಿ ಮಾಡೋಕೆ ಅಂತ ಹೋಗುವ ಹೀರೋ ಅಂಡ್ ಗ್ಯಾಂಗ್‌ಗೆ ಏನೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಅನ್ನೋದೇ ಈ ಸಿನಿಮಾ. ಕಷ್ಟಪಟ್ಟು ಒಳಗೆ ಹೋಗಿ ಲಾಕರ್ ತೆಗೆದರೆ ಅಲ್ಲಿರೋದು ಬರೀ 66,999 ರೂಪಾಯಿಗಳಷ್ಟೇ. ನಂತ್ರ ಏನೆಲ್ಲಾ ಆಗುತ್ತೆ ಅನ್ನೋ ಡ್ರಾಮಾನೇ ಸಿನಿಮಾ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿ ಶ್ರುತಿ ಹರಿಹರನ್ ಹಾಗೂ ಗೋಪಾಲ್ ಕೃಷ್ಣ ದೇಶಪಾಂಡೆ ಕೂಡ ಕಾಣಸಿಗಲಿದ್ದು, ಮೊದಲ ನೋಟದಲ್ಲಿ ಭರವಸೆ ಮೂಡಿಸಿದೆ ಬಿಓಬಿ.
ಈ ಹಿಂದೆ ರಿಲೀಸ್ ಆಗಿದ್ದ ಶಿವನ ಕುರಿತ ಹರ ಓಂ ಸಾಂಗ್ ಕೂಡ ಕೇಳುಗರ ಹೃದಯ ತಟ್ಟಿತ್ತು. ಜೂಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅಭಿಷೇಕ್ ಜಿ ಕಾಸರಗೋಡು ಸಿನಿಮಾಟೋಗ್ರಫಿ ಈ ಬ್ಯಾಂಗ್ ಆಫ್ ಭಾಗ್ಯಲಕ್ಷ್ಮೀಗಿದೆ. ಸ್ಪೂಕಿ ಕಾಲೇಜ್ ಸಿನಿಮಾದಿಂದ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದ ರಂಗಿತರಂಗ ಪ್ರೊಡ್ಯೂಸರ್‌ಗೆ ಈ ಸಿನಿಮಾ ಜೇಬು ತುಂಬಿಸೋ ಲಕ್ಷಣ ತೋರಿದೆ. ಭಾಗ್ಯಲಕ್ಷ್ಮೀ ಚಿತ್ರದಿಂದ ಧನಲಕ್ಷ್ಮೀ ಬಂದ್ರೆ ಅವರ ಬತ್ತಳಿಕೆಯಿಂದ ಮತ್ತಷ್ಟು ಸದಭಿರುಚಿಯ ಚಿತ್ರಗಳು ಹೊರಬರಲಿವೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್