ಥಗ್ ಲೈಫ್ ಟ್ರೈಲರ್ ರಿಲೀಸ್ ಆದ ಬಳಿಕ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್‌ಗೊಂದು ಕಳಂಕ ಅಂಟಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ತಿದ್ದಾರೆ. ಅರೇ ಅಂಥದ್ದೇನಾಯ್ತು..? ಕಮಲ್ ಮಾಡಿದ ತಪ್ಪಾದ್ರು ಏನು ಅಂತೀರಾ..? ಜಸ್ಟ್ ವಾಚ್.
- ಕಮಲ್ ಲಿಪ್‌ಲಾಕ್‌ಗೆ ನೆಟ್ಟಿಗರು ಕ್ಲಾಸ್.. ಇದೆಲ್ಲಾ ಬೇಕಿತ್ತಾ?
- ಅಭಿರಾಮಿ ಜೊತೆ ಹಾಟ್ ಕಿಸ್.. ಟ್ರೈಲರ್‌ನಲ್ಲಿ ಕಿಸ್ ಹೈಲೆಟ್
- ಮಗಳ ವಯಸ್ಸಿನ ನಟಿ ಜೊತೆ ಕಮಲ್ ಹೀಗೆ ಮಾಡಿದ್ದೇಕೆ..?
- ವಯಲೆನ್ಸ್ ಓಕೆ.. ಆದ್ರೆ ಇಳಿವಯಸ್ಸಲ್ಲಿ ರೊಮ್ಯಾನ್ಸ್ ಯಾಕೆ?
ಸಕಲಕಲಾ ವಲ್ಲಭ ಕಮಲ್ ಹಾಸನ್ ಹಾಗೂ ಸಿಂಬು ನಟನೆಯ ಮಲ್ಟಿಸ್ಟಾರರ್ ಮೂವಿ ‘ಥಗ್ ಲೈಫ್’ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಾಂಗ್ಸ್‌ನಿಂದಲೇ ಹವಾ ಸೃಷ್ಟಿಸಿದ್ದ ಈ ಗ್ಯಾಂಗ್‌ಸ್ಟರ್ ಮೂವಿಯ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಯ್ತು. ಟ್ರೈಲರ್ ಮೇಕಿಂಗ್‌ಗೆ ಬೊಂಬಾಟ್ ರೆಸ್ಪಾನ್ಸ್ ಸಿಗ್ತಿದೆ ಆದ್ರೂ, ಅದ್ರಲ್ಲಿರೋ ಕಮಲ್ ಹಾಸನ್ ಲಿಪ್‌ಲಾಕ್ ದೃಶ್ಯಕ್ಕೆ ಟೀಕೆ, ಟಿಪ್ಪಣಿಗಳು ಹೆಚ್ಚಾಗ್ತಿವೆ.
ಯೆಸ್.. ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಚಿತ್ರದ ಟ್ರೈಲರ್, ತಮಿಳು ಭಾಷೆಯೊಂದರಲ್ಲೇ ಒಂದೇ ದಿನಕ್ಕೆ ಹೆಚ್ಚು ಕಡಿಮೆ ಮೂರು ಕೋಟಿ ವೀವ್ಸ್ ಪಡೆದು ಟ್ರೆಂಡಿಂಗ್ ನಂಬರ್ ಒನ್‌ನಲ್ಲಿದೆ.
ಆದ್ರೆ ಸಿನಿಮಾದಲ್ಲಿ ನಟಿಯ ತುಟಿಗೆ ತನ್ನ ತುಟಿಯನ್ನು ಒತ್ತಿರೋ ಕಮಲ್ ಹಾಸನ್ ಹಾಟ್ ಕಿಸ್ಸಿಂಗ್ ದೃಶ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣ ಕಮಲ್ ಹಾಸನ್ ವಯಸ್ಸು. ಹೌದು.. 70 ವರ್ಷದ ಕಮಲ್, ಇಳಿವಯಸ್ಸಿನಲ್ಲಿ ಇಂತಹ ರೊಮಾನ್ಸ್ ಮಾಡಬೇಕಿತ್ತಾ ಅಂತಿದ್ದಾರೆ ನೆಟ್ಟಿಗರು.
ಅದೂ ಅಲ್ಲದೆ, ಮಗಳ ವಯಸ್ಸಿನ ಅಭಿರಾಮಿ ಜೊತೆ ರೊಮ್ಯಾನ್ಸ್ ಮಾಡೋಕೆ ಹೇಗೆ ಮನಸ್ಸು ಬಂತು ಈ ಮುದುಕನಿಗೆ ಅಂತಿದ್ದಾರೆ ಟ್ರಾಲರ್ಸ್. ಹೌದು.. ನಟಿ ಅಭಿರಾಮಿ ವಯಸ್ಸು 41 ವರ್ಷ, ಮಗಳು ಶ್ರುತಿ ಹಾಸನ್ ವಯಸ್ಸು ಕೂಡ 39 ವರ್ಷ.
ಹೀಗಾಗಿ ಸಹನಟಿ ಜೊತೆ ಇಷ್ಟು ಹಸಿಬಿಸಿ ದೃಶ್ಯ ಮಾಡುವ ಅವಶ್ಯಕತೆ ಏನಿತ್ತು ಅನ್ನೋ ಅಲೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.
ವಿಕ್ರಮ್ ಸಿನಿಮಾ ಬಳಿಕ ಕಮಲ್ ಹಾಸನ್ ಇಷ್ಟು ವಯಲೆನ್ಸ್ ಬೇರಾವ ಚಿತ್ರದಲ್ಲೂ ಮಾಡಿಲ್ಲ. ಹಾಗಾಗಿ ಸ್ಟಾರ್‌ಡಮ್‌ಗೆ ಕ್ರೌರ್ಯ ಓಕೆ.. ರೊಮ್ಯಾನ್ಸ್ ಯಾಕೆ ಅಂತಲೂ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಕಮಲ್ ಹಾಸನ್ ಏನಂತ ಸ್ಪಷ್ಟನೆ ಕೊಡ್ತಾರೆ ಅನ್ನೋದು ಕಾದು ನೋಡಬೇಕಿದೆ. ಇಲ್ಲಿ ಕಮಲ್ ಜೊತೆ ಮಣಿರತ್ನಂಗೂ ಜನ ಕಾಲೆಳೆಯುತ್ತಿದ್ದಾರೆ. ಕಮಲ್‌ಗೆ ಬುದ್ದಿ ಇಲ್ಲ, ನಿರ್ದೇಶಕರಿಗೂ ಬುದ್ದಿ ಇರಲಿಲ್ವಾ ಅಂತಿದ್ದಾರೆ.