ಕಾಂತಾರ ಚಾಪ್ಟರ್-1 ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ವಿಜಯದಶಮಿ ದಿನ ಮಹೋನ್ನತ ವಿಜಯ ಸಾಧಿಸೋಕೆ ಬರ್ತಿರೋ ಡಿವೈನ್ ಸ್ಟಾರ್ ನಟನೆಯ ಕಾಂತಾರ, ಬರೀ ದಂತಕಥೆ ಅಲ್ಲ. ದಾಖಲೆಗಳ ದಂತಕಥೆ ಆಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಟಿಕೆಟ್ಸ್ ಪ್ರೀ ಬುಕಿಂಗ್ ಆಗಿದ್ದು, ಹೈದ್ರಾಬಾದ್ ಇವೆಂಟ್, ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನದ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
ದೈವಿಕ ಅಂಶಗಳಿಂದ ಕೂಡಿರೋ ಸಂಘರ್ಷದ ಕಥಾನಕ ಕಾಂತಾರ ಚಾಪ್ಟರ್-1 ಅನ್ನೋದು ಟ್ರೈಲರ್ ಝಲಕ್‌ನಿಂದ ಎಲ್ಲರಿಗೂ ಗೊತ್ತಾಗಿದೆ. ಇದೀಗ ಈ ಸಿನಿಮಾದ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅಕ್ಟೋಬರ್ 2ರ ವಿಜಯದಶಮಿ ದಿನ ವರ್ಲ್ಡ್‌ವೈಡ್ ಕಾಂತಾರ-1 ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಮುಂಜಾನೆ 6 ಗಂಟೆಯಿಂದಲೇ ಶೋಗಳು ಪ್ರದರ್ಶನಗೊಳ್ಳಲಿವೆ.
ದಾಖಲೆಗಳ ದಂತಕಥೆ ಕಾಂತಾರ.. 5Cr ರೂ ಟಿಕೆಟ್ಸ್ ಸೇಲ್
24 ಗಂಟೆಯಲ್ಲಿ ಪ್ರೀ-ಬುಕಿಂಗ್‌ನಲ್ಲಿ ಸಾರ್ವಕಾಲಿಕ ದಾಖಲೆ..!
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರೋ ಈ ಸಿನಿಮಾಗೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದು, ಸ್ಯಾಂಪಲ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ ಚಿತ್ರ. ಈಗಾಗ್ಲೇ ನೂರಾರು ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್‌ನಿಂದ ದಾಖಲೆ ಬರೆದಿರೋ ಕಾಂತಾರ-1, ಬರೀ ದಂತಕಥೆ ಅಲ್ಲ, ದಾಖಲೆಗಳ ದಂಯಕಥೆ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡ್ತಿದೆ.
ಆನ್‌ಲೈನ್ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಬುಕ್ ಮೈ ಶೋನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿಯಷ್ಟು ಟಿಕೆಟ್‌ಗಳು ಪ್ರೀ-ಬುಕಿಂಗ್ ಆಗಿರೋದು ಇಂಟರೆಸ್ಟಿಂಗ್. ಅದೂ ಕೇವಲ 24 ಗಂಟೆಗಳಲ್ಲಿ ಅನ್ನೋದು ಮತ್ತೊಂದು ಹೈಲೈಟ್. ಈಗಾಗ್ಲೇ ಚಿತ್ರತಂಡ ಕೊಚ್ಚಿಯಲ್ಲಿ ಇವೆಂಟ್ ಮಾಡಿ ಬಂದಿದೆ. ಬೆಂಗಳೂರಿನಲ್ಲೂ ಇತ್ತೀಚೆಗೆ ಟ್ರೈಲರ್ ಲಾಂಚ್ ಇವೆಂಟ್ ಮಾಡಿ, ಸಾಕಷ್ಟು ಕೌತುಕದ ಪ್ರಶ್ನೆಗಳಿಗೆ ಉತ್ತರಿಸಿತ್ತು. ಇದೀಗ ಪರರಾಜ್ಯಗಳ ಸರದಿ.
ಕೊಲ್ಲೂರಿನಲ್ಲಿ ರಿಷಬ್.. ಹೈದ್ರಾಬಾದ್ ಇವೆಂಟ್‌ಗೆ Jr. NTR
ಸೆಪ್ಟೆಂಬರ್ 28ಕ್ಕೆ ರಂಗೇರಲಿದೆ ತೆಲುಗು ಪ್ರೀ-ರಿಲೀಸ್ ಫಂಕ್ಷನ್
ಯೆಸ್.. ನಾಳೆ ಅಂದ್ರೆ ಸೆಪ್ಟೆಂಬರ್ 28ರ ಸಂಜೆ ಹೈದ್ರಾಬಾದ್‌ನ ಜೆಆರ್‌ಸಿ ಕನ್ವೆಂಷನ್ ಸೆಂಟರ್‌ನಲ್ಲಿ ಸಂಜೆ 5 ಗಂಟೆಗೆ ಕಾಂತಾರ-1 ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಅದಕ್ಕೆ ಕುಂದಾಪುರದ ಹೆಣ್ಣು ಮಗಳ ಮಗನಾದ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಚೀಫ್ ಗೆಸ್ಟ್ ಆಗಿ ಆಗಮಿಸಿಲಿದ್ದಾರೆ. ಇದು ರಿಷಬ್ ಶೆಟ್ಟಿ-ಎನ್‌ಟಿಆರ್ ನಡುವಿನ ಬಾಂಧವ್ಯದ ಪ್ರತೀಕವೂ ಹೌದು.
ಸೆಪ್ಟೆಂಬರ್ 29ರ ಸಂಜೆ ಮುಂಬೈನಲ್ಲಿ ಕಾಂತಾರ-1 ಟೀಂ ಸುದ್ದಿಗೋಷ್ಠಿ ನಡೆಸಲಿದ್ದು, ಸೆಪ್ಟೆಂಬರ್ 30ರ ಬೆಳಗ್ಗೆ ಚೆನ್ನೈ, ಅದೇ ದಿನ ಸಂಜೆ ವೈಜಾಗ್‌ನಲ್ಲಿ ಇವೆಂಟ್ಸ್ ಮಾಡುವ ಯೋಜನೆಯಲ್ಲಿದೆ. ಇದ್ರಿಂದ ಕಂಪ್ಲೀಟ್ ಪ್ಯಾನ್ ಇಂಡಿಯಾ ಕವರ್ ಆಗಲಿದೆ. ಈಗಾಗ್ಲೇ ಯೂನಿಯನ್ ಕಮ್ಯುನಿಕೇಷನ್ ಮಿನಿಸ್ಟರ್ ಜ್ಯೋತಿರಾದಿತ್ಯ ಇಂಡಿಯನ್ ಪೋಸ್ಟ್ ಲಕೋಟೆ ಮೇಲೆ ಕಾಂತಾರಗೆ ವಿಶೇಷ ಸ್ಥಾನ ನೀಡಿ, ಗೌರವಿಸಿದೆ.
ಇನ್ನು ಒಂದಲ್ಲ ಎರಡಲ್ಲ ಬರೋಬ್ಬರಿ 7 ಭಾಷೆಗಳಲ್ಲಿ ಏಕಕಾಲದಲ್ಲಿ ಕಾಂತಾರ ಪ್ರೀಕ್ವೆಲ್ ರಿಲೀಸ್ ಆಗ್ತಿದ್ದು, ಎಲ್ಲಾ ಭಾಷೆಗಳ ಸಿನಿಮಾಗಳಿಗೆ ಸೆನ್ಸಾರ್ ಆಗಬೇಕಿದೆ. ಕ್ಯೂಬ್ ಹಾಗೂ UFOಗೆ ಕಂಟೆಂಟ್ ಅಪ್‌ಲೋಡ್ ಆಗಬೇಕಿದೆ. ಇಷ್ಟೆಲ್ಲಾ ಬ್ಯುಸಿ ಶೆಡ್ಯೂಲ್ ನಡುವೆ ಸಣ್ಣದೊಂದು ಬಿಡುವು ಮಾಡಿಕೊಂಡು ನಟ ರಿಷಬ್ ಶೆಟ್ಟಿ ಪತ್ನಿ ಸಮೇತ ಕೊಲ್ಲೂರು ದೇವಿಯ ದರ್ಶನ ಪಡೆದಿದ್ದಾರೆ. ಹಲವು ವರ್ಷಗಳ ತಪಸ್ಸಿಗೆ ಫಲ ನೀಡು ತಾಯಿ ಅಂತ ಆ ಮೂಕಾಂಬಿಕಾ ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.
ಈ ಸಿನಿಮಾದ ಮೂಲಕ ಡಿವೈನ್ ಸ್ಟಾರ್ ಸ್ಟಾರ್ಡಮ್ ಮತ್ತಷ್ಟು ಉತ್ತುಂಗಕ್ಕೇರಲಿದ್ದು, ಇಂಥದ್ದೇ ಗಟ್ಟಿ ಕಥೆಗಳನ್ನ ಪ್ರೇಕ್ಷಕರಿಗೆ ಉಣಬಡಿಸೋ ಧಾವಂತದಲ್ಲಿದ್ದಾರೆ ರಿಷಬ್ ಶೆಟ್ರು. ಅಲ್ಲದೆ, ನಮ್ಮ ಆಚಾರ, ವಿಚಾರ, ದೈವಿಕ ವಿಷಯಗಳು, ಸಂಸ್ಕೃತಿಯನ್ನ ವಿಶ್ವದ ಮೂಲೆ ಮೂಲೆಗೆ ಪಸರಿಸುವ ರಾಯಭಾರಿಯಾಗಿ ಕಾರ್ಯೋನ್ಮುಖರಾಗಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಸೋ.. ಅಕ್ಟೋಬರ್ 2ಕ್ಕೆ ಸುಮಾರು 7 ಸಾವಿರಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ಕಾಂತಾರ ದರ್ಶನ ನೀಡಲಿದೆ.