“ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ವಿನಯ ಪ್ರಕಾಶ ಪಾತ್ರದಲ್ಲಿ ಅಭಿನಯಿಸಿದ ರವಿಶಂಕರ್ ಗೌಡ

Untitled design 2025 07 06t161143.442

ಇಡೀ ವಿಶ್ವವೇ ಮೆಚ್ಚಿಕೊಂಡ “ಕಾಂತಾರ”ದಂತಹ ಸೂಪರ್ ಹಿಟ್ ಚಿತ್ರಗಳ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಿ.ಆರ್.ಬಾಬಿ ಅವರ ಜೊತೆಗೂಡಿ ” ಜಸ್ಟ್ ಮ್ಯಾರೀಡ್ ” ಚಿತ್ರ ನಿರ್ಮಿಸಿದ್ದಾರೆ.

ಈಗಾಗಲೇ ಹಲವು ವಿಶಷತೆಗಳಿಂದ ಎಲ್ಲರ ಗಮನ ಸೆಳೆದಿರುವ ” ಜಸ್ಟ್ ಮ್ಯಾರೀಡ್ “ಚಿತ್ರವನ್ನು ಸಿ.ಆರ್ ಬಾಬಿ ಅವರೆ ನಿರ್ದೇಶಿಸಿದ್ದಾರೆ. ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ನಾಯಕ – ನಾಯಕಿಯಾಗಿ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಟಿಸಿರುವ ಪ್ರಮುಖ ಕಲಾವಿದರನ್ನು ಚಿತ್ರತಂಡ ಈಗ ಪರಿಚಯಿಸುತ್ತಿದೆ.

ADVERTISEMENT
ADVERTISEMENT

ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ವಾಣಿ ಹರಿಕೃಷ್ಣ ಇದೇ ಮೊದಲ ಬಾರಿಗೆ ಚಲನಚಿತ್ರದಲ್ಲಿ ನಟಿಸಿದ್ದು, ಮಂಗಳ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ರವಿಶಂಕರ್ ಗೌಡ ” ಜಸ್ಟ್ ಮ್ಯಾರೀಡ್ ” ಚಿತ್ರದಲ್ಲಿ ವಿನಯ ಪ್ರಕಾಶ ಎಂಬ ಪಾತ್ರ ನಿರ್ವಹಿಸಿದ್ದಾರೆ.

Exit mobile version