ಜನನಾಯಗನ್ ನೋಡಲು ಹೋದ ನಟಿ ಆನಂದಿಗೆ ಬಿಗ್ ಶಾಕ್

ಥಿಯೇಟರ್‌ನಲ್ಲೇ ಕುಸಿದ ನಟಿ ಆನಂದಿ ಕನಸು..!

NEET ಪ್ರತಿಭಟನೆ ಅಂತ್ಯ, ವಿದ್ಯಾರ್ಥಿಗಳ ಮೇಲಿನ FIR ರದ್ದು ಸಿಜೆಪಿ ವಕ್ತಾರ ಸೌರವ್ ದಾಸ್ ಘೋಷಣೆ (2)

ಬಾಕ್ಸಾಫೀಸ್‌ನಲ್ಲಿ ದಳಪತಿ ವಿಜಯ್ ಧೂಳೆಬ್ಬಿಸ್ತಿರೋ ಹೊತ್ತಲ್ಲೇ, ಇತ್ತ  ನಟಿಯೊಬ್ಬರು ನೆಟ್ಟಿಗರ ಮುಂದೆ ಕಣ್ಣೀರಿಟ್ಟು ಗೋಳಡಿದ್ದಾರೆ. ಥಿಯೇಟರ್‌ಗೆ ಪಟಾಕಿ ಹೊಡೆಯೋಕೆ ಹೋದ ನಟಿಗೆ ಕಾದಿತ್ತಾ ಕಹಿ ಆಘಾತ? ಎಡಿಟಿಂಗ್ ಮೇಜಿನ ಮೇಲೆ ಸೀನ್ ಕಟ್ ಆಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ನಟಿ ಯಾರು..? ಜನನಾಯಗನ್ ವಿರುದ್ಧ ಕಣ್ಣೀರು ಹಾಕಿದ್ದೇಕೆ ಹೇಳ್ತೀವಿ ಈ ಸ್ಟೋರಿ ನೋಡಿ.

ದಳಪತಿ ವಿಜಯ್ ಅಭಿನಯದ ಜನನಾಯಗನ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸ್ತಿದೆ. ವಿಜಯ್ ಅವರ ಲಾಸ್ಟ್ ಅಂಡ್ ಬೆಸ್ಟ್ ಸಿನಿಮಾ ಅಂತಲೇ ಬಿಂಬಿತವಾಗಿರೋ ಈ ಆಕ್ಷನ್ ಎಂಟರ್‌ಟೈನರ್ ನೋಡೋಕೆ ಫ್ಯಾನ್ಸ್ ಜಮಾಯಿಸ್ತಿದ್ದಾರೆ. ಆದ್ರೆ, ಇದೇ ಸಿನಿಮಾವನ್ನು ಕಣ್ಣುತುಂಬಿಕೊಳ್ಳಲು ಫುಲ್ ಎಕ್ಸೈಟ್‌ಮೆಂಟ್‌ನಿಂದ ಥಿಯೇಟರ್ ಮೆಟ್ಟಿಲೇರಿದ ನಟಿ ಆನಂದಿಗೆ ಮಾತ್ರ ಬಿಗ್ ಶಾಕ್ ಎದುರಾಗಿದೆ. ತಾನು ಪಟ್ಟ ಕಷ್ಟ, ಕಂಡ ಕನಸು ಪ್ರೊಡಕ್ಷನ್ ಹೌಸ್‌ನ ಕತ್ತರಿಗೆ ಬಲಿಯಾಯ್ತಲ್ಲ ಅಂತ ಆ ನಟಿ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಮೆರಾ ಮುಂದೆ ಕಣ್ಣೀರಿಟ್ಟು ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದಾರೆ.

ಅಷ್ಟಕ್ಕೂ ಯಾರೀ ಆನಂದಿ ಅಂದ್ರಾ? ತಮಿಳು ಕಿರುತೆರೆಯ ‘ಜೋಡಿ ನಂ. 1 ಸೀಸನ್ 7’ ರಿಯಾಲಿಟಿ ಶೋ ಗೆದ್ದು, ಆಮೇಲೆ ಬಾಲಾ ಅವರ ‘ತಾರೈ ತಪ್ಪತ್ತೈ’ ನಂಥ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದ ಹಾರ್ಟ್‌ಥ್ರೋಬ್. ಆದ್ರೆ ಇತ್ತೀಚೆಗೆ ಈ ಚೆಲುವೆಗೆ ಬ್ಯಾಡ್ ಲಕ್ ಬೆನ್ನತ್ತಿದ ಹಾಗಿದೆ. ರತ್ನಕುಮಾರ್ ನಿರ್ದೇಶನದ ’29’, ಸೂರ್ಯ ಅಭಿನಯದ ‘ಕರುಪ್ಪು’ ಮತ್ತು ಈಗ ವಿಜಯ್ ಅಭಿನಯದ ‘ಜನ ನಾಯಕನ್’… ಹೀಗೆ ಸತತ ಮೂರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ರೂ, ಅಷ್ಟೂ ಸೀನ್‌ಗಳನ್ನು ಎಡಿಟಿಂಗ್ ಟೇಬಲ್‌ನಲ್ಲೇ ಬಲಿ ಕೊಡಲಾಗಿದೆ.

ಮೋಸ್ಟ್ ಎಕ್ಸೈಟಿಂಗ್ ಮೂಮೆಂಟ್ ನೋಡೋಕೆ ಜನ ನಾಯಕನ್ ಫಸ್ಟ್ ಡೇ ಫಸ್ಟ್ ಶೋಗೆ ಹೋದ ಆನಂದಿಗೆ, ಸ್ಕ್ರೀನ್ ಮೇಲೆ ತಮ್ಮ ಮುಖವೇ ಕಾಣಿಸದೇ ಇದ್ದಾಗ ತಲೆ ಮೇಲೆ ಸಿಡಿಲು ಬಡಿದಂತಾಗಿದೆ. ತಕ್ಷಣವೇ ಇನ್‌ಸ್ಟಾಗ್ರಾಮ್‌ಗೆ ಬಂದು ವಿಡಿಯೋ ಹಂಚಿಕೊಂಡಿರೋ ನಟಿ, ನಾನು ಎಷ್ಟೋ ಸಿನಿಮಾಗಳಲ್ಲಿ ನಟಿಸಿದ್ದೀನಿ, ಸೀನ್ ಕಟ್ ಆದಾಗ ಬೇಸರ ಆಗ್ತಿರಲಿಲ್ಲ. ಆದ್ರೆ ‘ಜನ ನಾಯಕನ್’ ಸೀನ್ ಡಿಲೀಟ್ ಆಗಿದ್ದು ನನ್ನ ಸೀದಾ ಹೃದಯಕ್ಕೇ ನಾಟಿದೆ. ಯಾಕಂದ್ರೆ ಈ ಒಂದೇ ಒಂದು ಸೀನ್‌ಗಾಗಿ ನಾನು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದೆ, ಅಂತ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ತಮ್ಮ ನೆಚ್ಚಿನ ನಟ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿದ ಕ್ಷಣವನ್ನು ನೆನೆದ ಆನಂದಿ, “ನಾನು ಚಿತ್ರರಂಗಕ್ಕೆ ಬಂದಿದ್ದೇ ದಳಪತಿ ವಿಜಯ್ ಅವರ ಜೊತೆ ಆಕ್ಟ್ ಮಾಡಬೇಕು ಅನ್ನೋ ಒಂದೇ ಒಂದು ಕನಸಿನಿಂದ. ಅವರ ಜೊತೆ ನಟಿಸೋ ಸುವರ್ಣ ಅವಕಾಶ ಸಿಕ್ಕಾಗ ನನ್ನ ಜನ್ಮ ಧನ್ಯವಾಯ್ತು ಅಂದುಕೊಂಡಿದ್ದೆ. ಖಂಡಿತಾ ನನ್ನ ಸೀನ್ ಸ್ಕ್ರೀನ್ ಮೇಲೆ ಬಂದೇ ಬರುತ್ತೆ ಅಂತ ಹೆಮ್ಮೆಯಿಂದ ಥಿಯೇಟರ್‌ಗೆ ಹೋಗಿದ್ದೆ. ಆದ್ರೆ, ಆ ಸೀನ್‌ಗೆ ಎಡಿಟರ್ ಕತ್ತರಿ ಹಾಕಿದ್ದಾರೆ. ನಾನು ನಿಜಕ್ಕೂ ದುರದೃಷ್ಟವಂತೆ,” ಅಂತ ಕಣ್ಣೀರು ಸುರಿಸುತ್ತಾ ತನಗಾದ ನೋವನ್ನ ಹಂಚಿಕೊಂಡಿದ್ದಾರೆ.

ಆದ್ರೆ, ತಮ್ಮ ಸ್ವಂತ ಬೇಸರವನ್ನು ಬದಿಗಿಟ್ಟು ಸಿನಿಮಾ ಬಗ್ಗೆ ಮಾತಾಡಿದ ಆನಂದಿ, ಜನ ನಾಯಕನ್ ನಿಜಕ್ಕೂ ಮಾಸ್ ಅಂಡ್ ಕ್ಲಾಸ್ ಸಿನಿಮಾ, ಮಹಿಳೆಯರ ಪ್ರಗತಿ ಮತ್ತು ಹಕ್ಕುಗಳ ಬಗ್ಗೆ ಸಿನಿಮಾ ಸೂಪರ್ ಆಗಿ ಮಾತನಾಡುತ್ತದೆ. ಪ್ರತಿಯೊಬ್ಬರೂ ಥಿಯೇಟರ್‌ಗೆ ಬಂದು ಈ ಸಿನಿಮಾ ನೋಡಿ, ಅಂತ ಕೊನೆಯಲ್ಲಿ ವಿನಂತಿಸಿಕೊಂಡಿದ್ದಾರೆ. ಎಷ್ಟೇ ಶ್ರಮಪಟ್ಟು ನಟಿಸಿದ್ರೂ ಎಡಿಟಿಂಗ್‌ನಲ್ಲಿ ಸೀನ್ ಅಳಿಸಿಹೋದಾಗ ಒಬ್ಬ ಆರ್ಟಿಸ್ಟ್‌ಗೆ ಆಗುವ ನೋವು ಎಷ್ಟು ದೊಡ್ಡದು ಅನ್ನೋದಕ್ಕೆ ಆನಂದಿ ಅವರ ಈ ವೈರಲ್ ವಿಡಿಯೋವೇ ಸಾಕ್ಷಿಯಾಗಿದೆ

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version