ದಳಪತಿ ವಿಜಯ್ ಜನ ನಾಯಗನ್ ಸಿನಿಮಾ ಕೊನೆಗೂ ಅಂದುಕೊಂಡ ಡೇಟ್‌ಗೆ ರಿಲೀಸ್ ಆಗಲೇ ಇಲ್ಲ. ವರ್ಲ್ಡ್ ವೈಡ್ ಬುಕ್ ಮೈ ಶೋ ಮೂಲಕ ಆಗಿದ್ದ ಆನ್‌ಲೈನ್ ಟಿಕೆಟ್ ಬುಕಿಂಗ್‌ನ 42 ಕೋಟಿ ರೂಪಾಯಿ ಹಣವನ್ನು ರೀಫಂಡ್ ಮಾಡಲಾಗಿದೆ. ಇದೀಗ ಮದ್ರಾಸ್ ಹೈ ಕೋರ್ಟ್‌ನಿಂದ ಅಲ್ಪ ಜಯ ಸಿಕ್ಕಿದ್ದು, ಇಂದಿಗೂ ರಿಲೀಸ್ ಮಾತ್ರ ಅತಂತ್ರದಲ್ಲೇ ಇದೆ.
ಜನ ನಾಯಗನ್..ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಈ ಸಿನಿಮಾ, ಇಂದು ವರ್ಲ್ಡ್‌ವೈಡ್ ತೆರೆಗಪ್ಪಳಿಸಬೇಕಿತ್ತು. ಪೊಂಗಲ್ ಹಬ್ಬದ ವಿಶೇಷ ಬಿಡುಗಡೆಗೆ ಸಜ್ಜಾಗಿದ್ದ ಈ ಸಿನಿಮಾಗೆ ಸೆನ್ಸಾರ್ ಬೋರ್ಡ್ ಅಕ್ಷರಶಃ ಮೂಗುದಾರ ಹಾಕಿದೆ. ನಿಜಕ್ಕೂ ಹೇಳಬೇಕು ಅಂದ್ರೆ ಸೆನ್ಸಾರ್ ಬೋರ್ಡ್ ಮೂಲಕ ಡಿಎಂಕೆ ಸರ್ಕಾರ ಅಡ್ಡಗಾಲು ಹಾಕಿದೆ.
ವಿಜಯ್‌ಗೆ ಅಲ್ಪ ಜಯ.. 42ಕೋಟಿ ರೂಪಾಯಿ ರೀಫಂಡ್!
ಇಂದು ವರ್ಲ್ಡ್‌ವೈಡ್ 5000 ಸ್ಕ್ರೀನ್ಸ್‌ಗೆ ಲಗ್ಗೆ ಇಡಬೇಕಿದ್ದ ಚಿತ್ರ
ಇಂದು ವಿಶ್ವದಾದ್ಯಂತ 5 ಸಾವಿರ ಸ್ಕ್ರೀನ್ಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್‌ಗೆ ಸಜ್ಜಾಗಿದ್ದ ಈ ಸಿನಿಮಾ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದ ಚಿತ್ರಪ್ರೇಮಿಗಳಿಗೆ ಶಾಕ್ ನೀಡಿದೆ. ಬರೋಬ್ಬರಿ 42 ಕೋಟಿ ರೂಪಾಯಿ ಆನ್‌ಲೈನ್ ಟಿಕೆಟ್ ಬುಕ್ ಮಾಡಿರೋರಿಗೆ ಹಣವನ್ನು ರೀಫಂಡ್ ಮಾಡಲಾಗಿದೆ. ಇದು ವಿಜಯ್ ಸಿನಿ ಕರಿಯರ್‌ನ ಕಟ್ಟ ಕಡೆಯ ಸಿನಿಮಾ ಆಗಿದ್ದು, ಅಪಜಯ ಆಗಿದ್ದು ಮಾತ್ರ ಅವ್ರ ಜೊತೆ ಅವ್ರ ಫ್ಯಾನ್ಸ್‌ಗೆ ಇನ್ನಿಲ್ಲದೆ ಬೇಸರ ತಂದಿದೆ.
ಅಂದಹಾಗೆ ಆಗಿರೋದು ಇಷ್ಟೇ.. 300 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಹಣ ಸುರಿದು, ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅದ್ಧೂರಿಯಾಗಿ ನಿರ್ಮಿಸಿರೋ ಸಿನಿಮಾ ಜನ ನಾಯಗನ್. ಈ ಚಿತ್ರದ ಟ್ರೈಲರ್ ರಿಲೀಸ್ ಬಳಿಕ ಖಳನಟ ಬಾಬಿ ಡಿಯೋಲ್ ಪಾಕಿಸ್ತಾನದವ ಅನ್ನೋದು ಕಾತರಿ ಆಗಿದೆ. ಹಾಗಾಗಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟು, ಡಿಎಂಕೆನ ಸೋಲಿಸುವಷ್ಟು ಭಯ ಹುಟ್ಟಿಸಿರೋ ದಳಪತಿ ವಿಜಯ್‌ನ ಆ್ಯಂಟಿ ಮುಸ್ಲಿಂ ಅಂತ ಬಿಂಬಿಸೋಕೆ ಮುಂದಾಗಿದೆ ಡಿಎಂಕೆ. ಅದೇ ಕಾರಣದಿಂದ ಸೆನ್ಸಾರ್‌ನಿಂದ ಸುಮಾರು 26 ಕಟ್ಸ್ ಅಂಡ್ ಮ್ಯೂಟ್ಸ್ ಕೂಡ ನೀಡಲಾಗಿತ್ತು. ಐದು ಮಂದಿ ಸೆನ್ಸಾರ್ ಕಮಿಟಿಯಲ್ಲಿ ನಾಲ್ಕು ಮಂದಿ ಓಕೆ ಮಾಡಿದ್ರೂ ಸಹ, ಕೆಲ ಆಕ್ಷೇಪಾರ್ಹ ಕಂಟೆಂಟ್‌ಗೆ ಒಬ್ಬ ಸೆನ್ಸಾರ್ ಆಫೀಸರ್ ತಗಾದೆ ತೆಗೆದಿದ್ದರು.
U/A 16+ ಪತ್ರ ನೀಡಲು CBFCಗೆ ಹೈ ಕೋರ್ಟ್ ನಿರ್ದೇಶನ
ಕೋರ್ಟ್ ಆದೇಶವನ್ನೇ ಪ್ರಶ್ನಿಸಲು ಸೆನ್ಸಾರ್ ಬೋರ್ಡ್ ಸಜ್ಜು
ಇದನ್ನ ಪ್ರಶ್ನಿಸಿ ರಿವೈಸಿಂಗ್ ಕಮಿಟಿಗೆ ತೆರಳಿತು ಜನ ನಾಯಗನ್ ಚಿತ್ರತಂಡ. ಜೊತೆಗೆ ಈ ವಿವಾದ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ತೀರ್ಪನ್ನು ಕಾಯ್ದಿರಿಸಿದ್ದ ಹೈಕೋರ್ಟ್, ಇಂದು ಜನ ನಾಯಗನ್ ಚಿತ್ರತಂಡದ ಪರ ತೀರ್ಪು ನೀಡಿದೆ. ಸಿಬಿಎಫ್‌ಸಿಗೆ ಚಿತ್ರಕ್ಕೆ U/A 16+ ಸೆನ್ಸಾರ್ ಪ್ರಮಾಣ ಪತ್ರ ನೀಡಿ, ರಿಲೀಸ್‌ಗೆ ಅನುವು ಮಾಡಿಕೊಡಲು ಆದೇಶ ನೀಡಿದೆ. ಇದು ವಿಜಯ್‌ಗೆ ಅಲ್ಪ ವಿಜಯ ಸಿಕ್ಕಂತಾದರೂ ಸಹ, ಸದ್ಯ ಜಸ್ಟೀಸ್ ಪಿ.ಟಿ. ಆಶಾ ನೀಡಿದ ಹೈ ಕೋರ್ಟ್ ಆದೇಶವನ್ನೇ ಪ್ರಶ್ನಿಸಲು ಸಜ್ಜಾಗಿದೆ CBFC.
ಸಿನಿಮಾ ಹೇಗೋ ಜನವರಿ 9ಕ್ಕೆ ರಿಲೀಸ್ ಆಗೋದು ಕೈ ಮೀರಿ ಹೋಗಿದೆ. ಆದ್ರೀಗ ಸೆನ್ಸಾರ್ ಪತ್ರ ನೀಡಲು ಆದೇಶ ನೀಡಿದ್ರೂ ಸಹ ಸಿಬಿಎಫ್‌ಸಿ ನೀಡೋಕೆ ಸಿದ್ಧವಾಗಿಲ್ಲ. ಸೋ..ಇಂದಿಗೂ ಅತಂತ್ರದಲ್ಲೇ ಇದೆ ಜನ ನಾಯಗನ್ ಬಿಡುಗಡೆ ದಿನಾಂಕ. ಆಡಿಯೋ ಲಾಂಚ್ ಇವೆಂಟ್‌ಗೂ ಖ್ಯಾತೆ ತೆಗೆದಿದ್ದ ಸರ್ಕಾರದ ವಿರುದ್ಧ ಮಲೇಷ್ಯಾಗೆ ಹೋಗಿ ಫಂಕ್ಷನ್ ಮಾಡಿಕೊಂಡು ಬಂದಿದ್ರು ವಿಜಯ್. ಆದ್ರೀಗ ಸಿನಿಮಾನ ಫಂಕ್ಷನ್ ರೀತಿ ಮಾಡೋಕೆ ಅಗಲ್ಲವಲ್ಲ..? ಇದು ರಾಜಕಾರಣಕ್ಕೆ ಬಲಿಯಾಗ್ತಿರೋ ಸಾವಿರಾರು ಮಂದಿಯ ಬೆವರು, ನೆತ್ತರು, ಶ್ರಮದ ಪ್ರತಿಫಲದ ಸಿನಿಮಾ ಆಗಿದೆ. ಮಿಗಿಲಾಗಿ ಕಲೆಯ ಕಗ್ಗೊಲೆ ಅಂತಲೇ ಹೇಳಬಹುದು.
