ಜೈಲರ್ 2 ಸಿನಿಮಾದ ತಾರಾಗಣದ ಬಗ್ಗೆ ಈಗ ಸಂಚಲನ ಮೂಡಿಸುವ ಸುದ್ದಿ ಹೊರಬಿದ್ದಿದೆ. ಕಿಂಗ್ ಖಾನ್ ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ದಕ್ಷಿಣದ ಸಿನಿಮಾಗಳಲ್ಲಿ ಶಾರುಖ್ ಕ್ಯಾಮಿಯೋ ಪಾತ್ರದಲ್ಲಿ ನಟಿಸಬೇಕೆಂದರೆ ಅದಕ್ಕೆ ಬಹಳ ಮಹತ್ವದ ಕಾರಣ ಇರಬೇಕು, ಇದೀಗ ಕಿಂಗ್ ಖಾನ್ ಜೈಲರ್ 2ನಲ್ಲಿ ಅಭಿನಯಿಸುತ್ತಿದ್ದು ಅವರ ಪಾತ್ರ ಏನು..? ಎಷ್ಟು ನಿಮಿಷ ಸ್ಕ್ರೀನ್ ಟೈಮ್ ಇದೆ ಅನ್ನೋದರ ಡೀಟೇಲ್ಸ್ ಇಲ್ಲಿದೆ ನೋಡಿ.
- ತಲೈವಾ ಜೊತೆ ಕಿಂಗ್ ಖಾನ್ ಮಿಥುನ್ ಚಕ್ರವರ್ತಿ ಹೇಳಿದ್ರಾ ಸತ್ಯ?
- ಜೈಲರ್-2ಗೆ ಶಾರೂಖ್ ಎಂಟ್ರಿ.. ತಲೈವಾಗಾಗಿ ಚೆನ್ನೈ ಕಡೆ ಖಾನ್
- ಅಂದು ‘ರಾ ವನ್’ನಲ್ಲಿ ರಜನಿ..ಇಂದು ‘ಜೈಲರ್’ನಲ್ಲಿ ಖಾನ್
- ಋಣ ತೀರಿಸಲು ತಮಿಳಿಗೆ ಬರುತ್ತಿದ್ದಾರೆ ಶಾರೂಖ್ ಖಾನ್
ಪಠಾಣ್, ಜವಾನ್, ಡಂಕಿ ಮೂಲಕ ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ಇದೀಗ ಕಿಂಗ್ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ಜೈಲರ್ 2 ಸಿನಿಮಾದ ತಾರಾಗಣದ ಬಗ್ಗೆ ಈಗ ಸಂಚಲನ ಮೂಡಿಸುವ ಸುದ್ದಿ ಹೊರಬಿದ್ದಿದೆ. ಬಾಲಿವುಡ್ನ ಹಿರಿಯ ನಟ ಮಿಥುನ್ ಚಕ್ರವರ್ತಿ ಇತ್ತೀಚಿನ ಸಂದರ್ಶನವೊಂದರಲ್ಲಿ ಜೈಲರ್ 2 ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿರುವುದನ್ನು ಅಧಿಕೃತಗೊಳಿಸುವಂತೆ ಮಾತನಾಡಿದ್ದಾರೆ.
ರಜನೀಕಾಂತ್ ನಟಿಸುತ್ತಿರುವ ‘ಜೈಲರ್-2’ ಸಿನಿಮಾನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿಯೇ ಹರಿದಾಡುತ್ತಿದೆ. ಜೈಲರ್ ಸಿನಿಮಾ ತನ್ನ ವಿಶೇಷ ಕ್ಯಾಮಿಯೋ ಪಾತ್ರಗಳಿಂದಲೇ ದೊಡ್ಡ ಹಿಟ್ ಆಗಿತ್ತು. ಶಿವರಾಜ್ ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ತಮನ್ನಾ, ಸುನಿಲ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ಜೈಲರ್ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಜೈಲರ್ 2 ನಿರ್ಮಾಣ ಆಗುತ್ತಿದ್ದು, ನಿರ್ದೇಶಕ ನೆಲ್ಸನ್ ಬಿಗ್ ಪ್ಲ್ಯಾನ್ ಮಾಡಿದ್ದಾರೆ.
ಇದೇ ಕಾರಣಕ್ಕೆ ಜೈಲರ್-2 ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರನ್ನೇ ಕರೆತರಲು ನೆಲ್ಸನ್ ಸಜ್ಜಾಗಿದ್ದಾರೆ. ಆದರೆ ಶಾರುಖ್ ಖಾನ್ ಈ ಆಫರ್ ಅನ್ನು ಒಪ್ಪಿಕೊಳ್ಳಲು ಕಾರಣವೂ ಇದೆ. ಈ ಹಿಂದೆ 2011 ರಲ್ಲಿ ಶಾರುಖ್ ಖಾನ್ ರಾ ಒನ್ ಹೆಸರಿನ ಭಾರಿ ಅದ್ಧೂರಿ ಸಿನಿಮಾ ಮಾಡಿದ್ದರು. ಆ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹಾಕಿ, ಅದ್ಧೂರಿ ಪ್ರಚಾರ ಮಾಡಿದ್ದರು, ಅದ್ಧೂರಿ ಸೆಟ್ಗಳು, ಹಾಲಿವುಡ್ ಲೆವೆಲ್ ವಿಎಫ್ಎಕ್ಸ್ ಬಳಸಿದ್ದರು. ಆ ಸಿನಿಮಾನಲ್ಲಿ ರಜನೀಕಾಂತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ ಜೈಲರ್ 2 ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಆ ಋಣ ತೀರಿಸುತ್ತಿದ್ದಾರೆ ಶಾರುಖ್ ಖಾನ್.
ಅಲ್ಲದೆ ಶಾರುಖ್ ಖಾನ್ ಅವರಿಗೆ ತಮಿಳು ಚಿತ್ರರಂಗದೊಂದಿಗೆ ಆಪ್ತ ನಂಟಿದೆ. 2000 ರಲ್ಲಿ ಬಿಡುಗಡೆ ಆದ ತಮಿಳು ಸಿನಿಮಾ ಹೇ ರಾಮ್ ನಲ್ಲಿ ಕಮಲ್ ಹಾಸನ್ ಜೊತೆಗೆ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಅವರ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾdಲ್ಲಿ ತಮಿಳು ಚಿತ್ರರಂಗಕ್ಕೆ ವಿಶೇಷ ಉಲ್ಲೇಖಗಳನ್ನು ಮಾಡಿದ್ದರು. ಸಾಕಷ್ಟು ತಮಿಳು ನಟರು ಅದರಲ್ಲಿ ನಟಿಸಿದ್ದರು. ಶಾರುಖ್ ಖಾನ್ ಅವರ ಜವಾನ್ ಸಿನಿಮಾ ನಿರ್ದೇಶಿಸಿದ್ದು ಸಹ ತಮಿಳು ನಿರ್ದೇಶಕ ಅಟ್ಲಿ. ಈಗ ಮತ್ತೊಮ್ಮೆ ತಮಿಳು ಸಿನಿಮಾನಲ್ಲಿ ನಟಿಸಲು ಬರುತ್ತಿದ್ದಾರೆ ಶಾರುಖ್ ಖಾನ್.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





