ವರ್ಲ್ಡ್ ಸಿನಿದುನಿಯಾದಲ್ಲಿ ಗಿಲ್ಲಿ ನಟಿ ರಕುಲ್ ಪ್ರೀತ್ ಆಲ್‌‌ ಟೈಂ ರೆಕಾರ್ಡ್

ಯೂಟ್ಯೂಬ್‌‌ನಲ್ಲಿ 1 ಬಿಲಿಯನ್ ವೀವ್ಸ್ ಕಂಡ ತೆಲುಗು ಚಿತ್ರ

Untitled design 2026 07 04T181340.279

ವಿಶ್ವ ಸಿನಿದುನಿಯಾದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ ನಮ್ಮ ಕನ್ನಡದ ಗಿಲ್ಲಿ ನಟಿ ಬಣ್ಣ ಹಚ್ಚಿರೋ ಸಿನಿಮಾ. ಯೆಸ್.. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಹಾಗೂ ರಕುಲ್ ಪ್ರೀತ್ ಸಿಂಗ್ ಜೋಡಿ ಮಾಡಿರೋ ಈ ಗ್ಲೋಬಲ್ ರೆಕಾರ್ಡ್‌ಗೆ ಹಾಲಿವುಡ್ ಕೂಡ ದಂಗಾಗಿದೆ. ಹಾಗಾದ್ರೆ ಅದೇನು ಅಂಥದ್ದು ಅನ್ನೋದಕ್ಕೆ ಉತ್ತರ ಇಲ್ಲಿದೆ.

ಜಯ ಜಾನಕಿ ನಾಯಕ.. ಇದು 2017ರ ಆಗಸ್ಟ್ 11ರಂದು ತೆರೆ ಕಂಡ ತೆಲುಗಿನ ಬ್ಲಾಕ್‌ ಬಸ್ಟರ್ ಹಿಟ್ ಮೂವಿ. ಬೋಯಪಾಟಿ ಶ್ರೀನು ನಿರ್ದೇಶನದ ರೊಮ್ಯಾಂಟಿಕ್ ಆ್ಯಕ್ಷನ್ ಡ್ರಾಮಾ ಚಿತ್ರದಿಂದ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅನ್ನೋ ಹೀರೋ ಹುಟ್ಟಿಕೊಂಡಿದ್ರು. ಇಂಟರೆಸ್ಟಿಂಗ್ ಅಂದ್ರೆ ನಮ್ಮ ಕನ್ನಡದ ಗಿಲ್ಲಿ ಚಿತ್ರದ ಮೂಲಕ ಕನ್ನಡಿಗರ ದಿಲ್ ದೋಚಿದ್ದ ರಕುಲ್ ಪ್ರೀತ್ ಸಿಂಗ್ ಈ ಚಿತ್ರದ ನಾಯಕನಟಿ.

ಸಾಲ್ಟ್ ಅಂಡ್ ಪೆಪ್ಪರ್ ಲುಕ್‌‌ನಲ್ಲಿ ಜಗಪತಿ ಬಾಬು ಜಗಮೆಚ್ಚುವ ಮನೋಜ್ಞ ಅಭಿನಯ ನೀಡಿದ್ರು. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕೂಡ ಚಿತ್ರಕ್ಕೆ ಪ್ಲಸ್ ಆಗಿತ್ತು. ಈ ಸಿನಿಮಾ ತೆಲುಗಲ್ಲಿ ಹಿಟ್ ಆಗ್ತಿದ್ದಂತೆ ಹಿಂದಿಗೆ ಡಬ್ ಆಗಿ ಯೂಟ್ಯೂಬ್‌‌ನಲ್ಲಿ ರಿಲೀಸ್ ಆಗಿತ್ತು. ಅಲ್ಲೀಗ ಇಡೀ ವಿಶ್ವ ಸಿನಿದುನಿಯಾ ತಿರುಗಿ ನೋಡುವಂತಹ ಸಾರ್ವಕಾಲಿಕ ದಾಖಲೆ ಬರೆದಿದೆ ಜಯ ಜಾನಕಿ ನಾಯಕ ಹಿಂದಿ ವರ್ಷನ್ ಖೂನ್‌ಖಾರ್ ಸಿನಿಮಾ.

ಯೆಸ್.. ಯೂಟ್ಯೂಬ್‌‌ನಲ್ಲಿ ಬರೋಬ್ಬರಿ ಒಂದು ಬಿಲಿಯನ್ ವೀವ್ಸ್ ಕಂಡ ವಿಶ್ವದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಜಯ ಜಾನಕಿ ನಾಯಕ ಹಿಂದಿ ಅವತರಣಿಕೆಯ ಖೂನ್‌ಖಾರ್. ಹೌದು.. ಹತ್ತು ಮಿಲಿಯನ್‌ಗೆ ಒಂದು ಕೋಟಿ ವೀವ್ಸ್ ಅಂತ ನಾವು ಹೇಳ್ತೀವಿ. ಅಂಥದ್ದು 1000 ಮಿಲಿಯನ್ ವೀವ್ಸ್‌ನಿಂದ ಒಂದು ಬಿಲಿಯನ್ ಕ್ಲಬ್ ಸೇರಿದೆ ಈ ಚಿತ್ರ. ಅಲ್ಲಿಗೆ ಬರೋಬ್ಬರಿ 100 ಕೋಟಿ ವೀವ್ಸ್ ಮೂಲಕ ವಿಶ್ವದ ನಂಬರ್ ಒನ್ ಚಿತ್ರ ಅನಿಸಿಕೊಂಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version