666 ಆಪರೇಷನ್ ಡ್ರೀಮ್ ಥಿಯೇಟರ್.. ಶಿವಣ್ಣ-ಡಾಲಿ ಜುಗಲ್ಬಂದಿಯ ಮತ್ತೊಂದು ನಯಾ ವೆಂಚರ್. ರೆಟ್ರೋ ಲುಕ್‌ನಲ್ಲಿ ಕಿಕ್ ಕೊಡೋಕೆ ಬರ್ತಿರೋ ಟಗರು ಜೋಡಿ ಒನ್ಸ್ ಅಗೈನ್ ಮೋಡಿ ಮಾಡೋ ಮುನ್ಸೂಚನೆ ನೀಡಿದೆ. ಹೇಮಂತ್ ರಾವ್ ಸೃಷ್ಟಿಸಿರೋ ಆ ರೆಟ್ರೋ ವರ್ಲ್ಡ್ ಮೆಟ್ರೋದವರಿಗೆ ರುಚಿಸ್ತಿರೋ ಕಲರ್‌ಫುಲ್ ಕಹಾನಿ ಇಲ್ಲಿದೆ ನೋಡಿ…
- ಮೆಟ್ರೋ ಯುಗದಲ್ಲಿ ರೆಟ್ರೋ ಬಾಂಡ್ ಶೈಲಿಯ ಚಿತ್ರ
- ಬೆಳ್ಳಿತೆರೆ ಮೇಲೆ ಮತ್ತೆ ಶುರು ಶಿವಣ್ಣ-ಡಾಲಿ ಜುಗಲ್ಬಂದಿ
- ಡ್ರೀಮ್ ಥಿಯೇಟರ್ನಲ್ಲಿ ಏಜೆಂಟ್ಗಳ ಆಪರೇಷನ್
- ಪ್ರಿಯಾಂಕಾ ಮೋಹನ್ ಕಂಬ್ಯಾಕ್.. ಡಾಲಿ ಗುಣಗಾನ
ಇದು 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಟೀಸರ್ ಝಲಕ್. ಶಿವಣ್ಣ ಬರ್ತ್ ಡೇ ವಿಶೇಷ ಅಡ್ವಾನ್ಸ್ ಆಗಿ ಈ ಟೀಸರ್ ಲಾಂಚ್ ಆಗಿದ್ದು, ಟಗರು, ಬೈರಾಗಿ ಚಿತ್ರಗಳ ಬಳಿಕ ಒನ್ಸ್ ಅಗೈನ್ ಶಿವಣ್ಣ-ಡಾಲಿ ಜೋಡಿ ಮೋಡಿ ಮಾಡೋಕೆ ಸಜ್ಜಾಗಿದ್ದಾರೆ. ಗೋಧಿ ಬಣ್ಣ, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಸಿನಿಮಾಗಳ ಡೈರೆಕ್ಟರ್ ಹೇಮಂತ್ ರಾವ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ವೈಶಾಕ್ ಅನ್ನೋ ಹೊಚ್ಚ ಹೊಸ ಸಿನಿಮೋತ್ಸಾಹಿ ನಿರ್ಮಾಪಕ ಮೊದಲ ಬಾರಿಗೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಏಜೆಂಟ್ ಪ್ರಕಾಶ್ ಆಗಿ ಶಿವಣ್ಣ, ಏಜೆಂಟ್ ಶಂಕರ್ ಆಗಿ ಡಾಲಿ ಕಮಾಲ್ ಮಾಡ್ತಿದ್ದು, ಮೆಟ್ರೋ ಯುಗದಲ್ಲಿ ರೆಟ್ರೋ ಬಾಂಡ್ ಶೈಲಿಯ ಸಿನಿಮಾ ಬರ್ತಿರೋದು ಇಂಟರೆಸ್ಟಿಂಗ್. ಇದಕ್ಕಾಗಿ ವಿಶೇಷ ಸೆಟ್‌ಗಳನ್ನ ಹಾಕಿ, ವಿಭಿನ್ನ ಶೈಲಿಯ ಹಿನ್ನೆಲೆ ಸಂಗೀತ ಮಾಡಿ ಕಟ್ಟಿಕೊಡಲಾಗ್ತಿದೆ. ಪ್ರಿಯಾಂಕಾ ಮೋಹನ್ ಬಹಳ ದಿನಗಳ ನಂತರ ಕನ್ನಡಕ್ಕೆ ವಾಪಸ್ ಆಗಿದ್ದು, ಡಾಲಿಯನ್ನ ತಲೈವಾ ರಜನಿಕಾಂತ್‌ಗೆ ಹೋಲಿಸಿದ್ದು ವಿಶೇಷ.
ಕನ್ನಡ ಹಾಗೂ ತೆಲುಗು ದ್ವಿಭಾಷಾ ಚಿತ್ರವಾಗಿ ಮೂಡಿಬರ್ತಿರೋ ಈ ಸಿನಿಮಾನ ಡಾ ವೈಶಾಕ್ ಬಹಳ ಇಷ್ಟ ಪಟ್ಟು ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ, ಅದ್ವೈತ್ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ನೋಡುಗರನ್ನ 70, 80ರ ದಶಕಕ್ಕೆ ಕೊಂಡೊಯ್ಯಲಿದೆ.
ಒಟ್ಟಾರೆ ಮೇಕಿಂಗ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ, ಇದೀಗ ಟೀಸರ್ ಔಟ್‌ಪುಟ್‌ನಿಂದ ಶೂರ್ ಶಾಟ್ ಮೂವಿ ಅನಿಸಿದೆ. ಆ ಏಜೆಂಟ್ ಲುಕ್ಸ್‌ನಲ್ಲಿ ಶಿವಣ್ಣ-ಡಾಲಿ ಸಖತ್ ಕಿಕ್ ನೀಡ್ತಿದ್ದು, ಅಣ್ಣಾವ್ರ ಬಾಂಡ್ ಜಾನರ್ ಚಿತ್ರಗಳನ್ನ ನೆನಪಿಸ್ತಿರೋದು ಸುಳ್ಳಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
