ಸುಪ್ರೀಂನಲ್ಲಿ ಅರ್ಜಿ ಅನರ್ಹ..ದಾಸ ದರ್ಶನ್‌ಗೆ ಭಾರೀ ಹಿನ್ನಡೆ

ವಿಚಾರಣೆಗೆ ಮೊದ್ಲೇ ರಿಜೆಕ್ಟ್.. ಸುಪ್ರೀಂ ಕಡೆ ತಲೆ ಹಾಕುವಂತಿಲ್ಲ

Untitled design 2026 07 04T171320.068

ತಾಳಿದವನು ಬಾಳಿಯಾನು ಅನ್ನೋ ಮಾತನ್ನ ದೊಡ್ಡವ್ರು ಸುಮ್ ಸುಮ್ನೆ ಹೇಳಿಲ್ಲ. ಆದ್ರೆ ನಟ ದರ್ಶನ್‌ ಡಿಕ್ಷನರಿಯಲ್ಲಿ ಮಾತ್ರ ಆ ತಾಳ್ಮೆ ಅನ್ನೋ ಪದವೇ ಇಲ್ಲ ಅನಿಸ್ತಿದೆ. ತಪ್ಪಿನ ಮೇಲೆ ತಪ್ಪು ಮಾಡುತ್ತಾ ಆಗಿರೋ ಗಾಯವನ್ನ ಸಿಕ್ಕಾಪಟ್ಟೆ ದೊಡ್ಡದು ಮಾಡಿಕೊಳ್ತಿದ್ದಾರೆ. ಒಂದು ವರ್ಷ ಬೇಲ್‌‌ ಸಿಗಲ್ಲ ಅಂತ ಗೊತ್ತಿದ್ದೂ ಮತ್ತೆ ಸುಪ್ರೀಂಗೆ ಹೋಗಿ ಭಾರೀ ಮುಖಭಂಗ ಮಾಡಿಕೊಂಡು ಬಂದಿದ್ದಾರೆ. ಸಾಲದು ಅಂತ ಸಾಕ್ಷ್ಯನಾಶ ಯತ್ನದಿಂದ ಪ್ರಪಾತಕ್ಕೆ ಬಿದ್ದಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಿಂದ ನಟ ದರ್ಶನ್‌ಗೆ ಸದ್ಯಕ್ಕಂತೂ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ಪ್ರಕರಣಕ್ಕೀಗ ಎರಡು ವರ್ಷ. ಆದ್ರೆ ಇನ್ನೂ ಒಂದು ವರ್ಷ ಬೇಲ್ ಸಿಗದೆ ದಚ್ಚು ಜೈಲಲ್ಲೇ ಮುದ್ದೆ ಮುರಿಯಬೇಕಿದೆ. ಇದು ಕಾನೂನು ಲಿಖಿತ.. ಅಫ್‌‌ಕೋರ್ಸ್ ವಿಧಿ ಲಿಖಿತವೂ ಹೌದು. ಸುಪ್ರೀಂನಿಂದಲೇ ಬೇಲ್ ರಿಜೆಕ್ಟ್ ಆಗಿತ್ತು. ಆದ್ರೆ ಅದೇ ಸುಪ್ರೀಂ ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ಆಗಬೇಕು ಅಂತ ಆದೇಶಿಸಿದೆ. ಇನ್ ಕೇಸ್ ಒಂದು ವರ್ಷದೊಳಗೆ ಆಗಲಿಲ್ಲ ಅಂದ್ರೆ ಆಗ ದರ್ಶನ್ ಬೇಲ್‌‌ಗೆ ಅರ್ಜಿ ಸಲ್ಲಿಸಲು ಅರ್ಹ ಎಂದಿದೆ.

ಈ ಎಲ್ಲಾ ಬೆಳವಣಿಗೆಗೆಳ ನಡುವೆ ನಟ ದರ್ಶನ್ ಒನ್ಸ್ ಅಗೈನ್ ಸುಪ್ರೀಂಗೆ ಅರ್ಜಿ ಹಾಕಿದ್ರು. ಒಂದು ವರ್ಷದ ತನಕ ಬೇಲ್‌ಗೆ ಅಪ್ಲೈ ಮಾಡುವಂತಿಲ್ಲ ಅನ್ನೋ ನಿರ್ಧಾರವನ್ನ ಮರುಪರಿಶೀಲಿಸಿ ಅಂತ ಅರ್ಜಿ ಸಲ್ಲಿಸಿದ್ರು. ಆದ್ರೆ ಅದು ಬೆಂಚ್‌ಗೆ ಹೋಗಿ ವಿಚಾರಣೆ ಆಗುವ ಮೊದಲೇ ರಿಜೆಕ್ಟ್ ಆಗಿಬಿಟ್ಟಿದೆ. ಕಾರಣ.. ಒಮ್ಮೆ ಆದೇಶ ಬಂದ ನಂತರ ಮತ್ತೆ ಅದನ್ನ ಮರು ಪರಿಶೀಲಿಸುವ ಪ್ರಮೇಯವೇ ಇಲ್ಲ. ಸೋ.. ಸದ್ಯಕ್ಕಂತೂ ನಟ ದರ್ಶನ್ ಸುಪ್ರೀಂ ಕಡೆ ಹೋಗೋದಿರಲಿ.. ಆ ಕಡೆ ತಲೆ ಕೂಡ ಹಾಕಿ ಮಲಗುವಂತಿಲ್ಲ.

ಆಗಿರೋ ಗಾಯವನ್ನ ಕೆರೆದು ಕೆರೆದು ಮತ್ತಷ್ಟು ದೊಡ್ಡ ಗಾಯ ಮಾಡ್ಕೊಳ್ಳೋದು ಹೇಗೆ ಅನ್ನೋದನ್ನ ಬಹುಶಃ ದರ್ಶನ್‌ನ ನೋಡಿದ್ರೆ ಚೆನ್ನಾಗಿ ಅರ್ಥ ಆಗುತ್ತೆ. ಹೌದು.. ಈಗಾಗ್ಲೇ ದರ್ಶನ್ ಪರ ಒಂದು ನೆಗೆಟೀವ್ ಸಿಕ್ರೂ ಸಾಕು ಅಂತ ಕಾಯ್ತಿದ್ದಾರೆ ಎಸ್‌‌ಪಿಪಿ. ಹೀಗಿರುವಾಗ ಸಾಕ್ಷ್ಯನಾಶ ಮಾಡುವ ಹಂತಕ್ಕೆ ಹೋಗಿ ಸಿಲುಕಿಕೊಳ್ಳೋ ಅಂಥದ್ದೇನಿತ್ತು ಡಿ ಗ್ಯಾಂಗ್‌ಗೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ರೇಣುಕಾಸ್ವಾಮಿ ಕಿಡ್ನ್ಯಾಪ್ ಪ್ರಕರಣದ ಪ್ರಮುಖ ಸಾಕ್ಷಿ ಆಗಿರೋ ಸಂದೀಪ್‌ಗೆ ಸಾಕ್ಷ್ಯ ತಿರುಚಲು ಬೆದರಿಕೆ ಒಡ್ಡಿ ಕೊನೆಗೆ ಅಂದರ್ ಆಗಿದ್ದಾರೆ ದರ್ಶನ್ ಹುಡುಗರು.

ಇಂಟರೆಸ್ಟಿಂಗ್ ಅಂದ್ರೆ ಸದ್ಯ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಒಡ್ಡಿರೋ ಮೂವರು ಖಾಕಿ ಬಲೆಗೆ ಬಿದ್ದಿದ್ದಾರೆ. ಆದ್ರೆ ಆ ವಾಟ್ಸಾಪ್ ಗ್ರೂಪ್ ಕಾಲ್ ಮಾಡಿದ್ದವ್ರಲ್ಲಿ ಇನ್ನೂ ಇಬ್ಬರಿದ್ದು, ಆ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅವರು ಯಾರು ಅನ್ನೋದು ಖಾತರಿ ಆದ್ರೆ, ಆಗ ದರ್ಶನ್ & ಫ್ಯಾಮಿಲಿಗೆ ಸಮಾಜ ಹಾಗೂ ಕಾನೂನಿನ ಮುಂದೆ ಮತ್ತಷ್ಟು ಮುಖಭಂಗ ಆಗೋದ್ರಲ್ಲಿ ಎರಡು ಮಾತಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version