ದೂರದ ಮುಂಬೈನಲ್ಲಿ ಕೂತು ನಿರ್ಮಾಪಕರುಗಳನ್ನ ಬುಗುರಿಯಂತೆ ಆಡಿಸೋ ಪಿವಿಆರ್, ಐನಾಕ್ಸ್ ಮಾಲೀಕರಿಗೆ ಹೊಂಬಾಳೆ ಫಿಲಂಸ್ ಬಿಗ್ ಶಾಕ್ ನೀಡಿದೆ. ಸರ್ಕಾರ ಕೂಡ ಅಂಕುಶ ಹಾಕೋಕೆ ಆಗದೇ ಇರೋ ಪಿವಿಆರ್, ಸದ್ಯ ನಮ್ಮ ಕನ್ನಡಿಗರ ಹೆಮ್ಮೆಯ ಹೊಂಬಾಳೆ ಮುಂದೆ ಮಂಡಿಯೂರಿದೆ. ಇಷ್ಟಕ್ಕೂ ಅಂಥದ್ದೇನಾಯ್ತು ಅನ್ನೋ ಎಕ್ಸ್‌ಕ್ಲೂಸಿವ್ ಸ್ಟೋರಿ ಇಲ್ಲಿದೆ.
- ಹೊಂಬಾಳೆ ಮುಂದೆ ಮಂಡಿಯೂರಿದ PVR & ಐನಾಕ್ಸ್..!
- ಕಾಂತಾರ ಶೋಗಳನ್ನ ಕಡಿತಗೊಳಿಸಿದ್ದಕ್ಕೆ ಮಾಸ್ಟರ್ ಸ್ಟ್ರೋಕ್
- ಕಂಟೆಂಟ್ ಲೈಸೆನ್ಸ್‌ಗೆ ಬ್ರೇಕ್.. ಹೊಂಬಾಳೆಗೆ PVR ಕ್ಷಮೆ..!
- ಕೈಗೆ, ಫೋನ್‌ಗೆ ಸಿಗಲ್ಲ.. ಇ-ಮೇಲ್ ಮೂಲಕ ಮಾತುಕಥೆ
ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡೋ ನಿರ್ಮಾಪಕರುಗಳಿಗೆ ಪಿವಿಆರ್ ಹಾಗೂ ಐನಾಕ್ಸ್‌ನಿಂದ ಸಮಸ್ಯೆಗಳು ತಪ್ಪಿದ್ದೇ ಇಲ್ಲ. ಅದ್ರಲ್ಲೂ ಹೊಂಬಾಳೆ ಫಿಲಂಸ್ ಅಂತಹ ನ್ಯಾಷನಲ್ ಲೆವೆಲ್ ಪ್ರೊಡಕ್ಷನ್ ಬ್ಯಾನರ್‌ಗಳಿಗೇ ಮುಂಬೈವಾಲಾಗಳು ಬುಗುರಿಯಂತೆ ಆಟ ಆಡಿಸೋಕೆ ನೋಡ್ತಾರೆ. ಕೈಗೆ ಸಿಗಲ್ಲ, ಫೋನ್ ಕಾಲ್‌ಗೂ ಸಿಗಲ್ಲ. ಎಲ್ಲಾ ವ್ಯವಹಾರಗಳು ಇ ಮೇಲ್ ಮೂಲಕವಷ್ಟೇ ನಡೆಯಲಿದೆ. ಆದ್ರೆ ಸರ್ಕಾರ ಕೂಡ ಅಂಕುಶ ಹಾಕೋಕೆ ಆಗದೆ ಇದ್ದಂತಹ ಪಿವಿಆರ್, ಐನಾಕ್ಸ್‌ಗಳಿಗೆ ಅಕ್ಷರಶಃ ನಮ್ಮ ಕನ್ನಡದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಶಾಕ್ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯೆಸ್.. ಇಡೀ ವಿಶ್ವವೇ ಒಪ್ಪಿ, ಮೆಚ್ಚಿ, ಪದೇ ಪದೆ ಕುಟುಂಬ ಸಮೇತ ಕಾಂತಾರವನ್ನು ಕಣ್ತುಂಬಿಕೊಳ್ತಿದ್ದಾರೆ. ಅದ್ರಲ್ಲೂ ಪ್ಯಾನ್ ಇಂಡಿಯಾದಾದ್ಯಂತ ಎಲ್ಲಾ ಭಾಷೆಗಳಲ್ಲಿ ಕಾಂತಾರ ಕಹಳೆ ಜೋರಿದೆ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕೂಡ ಕಾಣ್ತಿದೆ. ಹೀಗಿರುವಾಗ ಪಿವಿಆರ್ ಹಾಗೂ ಐನಾಕ್ಸ್ ಮ್ಯಾನೇಜ್ಮೆಂಟ್, ಹಿಂದಿ ಚಿತ್ರವೊಂದಕ್ಕಾಗಿ ದಕ್ಷಿಣ ಭಾರತದಲ್ಲಿ ಕಾಂತಾರ-1ಗಿದ್ದ ಶೋಗಳನ್ನ ಕಡಿತಗೊಳಿಸೋ ಕಾರ್ಯ ಮಾಡಿದೆ. ಅದಕ್ಕೆ ತಕ್ಕ ಕೌಂಟರ್ ನೀಡಿದ ಹೊಂಬಾಳೆ, ಪಿವಿಆರ್ ಮಂದಿಯೇ ಹೆದರುವಂತಹ ಮಾಸ್ಟರ್ ಸ್ಟ್ರೋಕ್ ನೀಡಿದ್ದು ಇಂಟರೆಸ್ಟಿಂಗ್.
ಆಗಿದ್ದು ಇಷ್ಟೇ.. ಚೆನ್ನಾಗಿ ಓಡ್ತಾ ಇರುವಂತಹ ಹಾಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋ ಅಂತಹ ಕಾಂತಾರ-1ಗೆ ಶೋಗಳನ್ನ ಕಡಿತಗೊಳಿಸ್ತೀರಾ..? ಸರಿ ಆಯ್ತು ಬಿಡಿ. ನಾವು ಕಂಪ್ಲೀಟ್ ಸೌತ್ ಇಂಡಿಯಾದ ಪಿವಿಆರ್ ಹಾಗೂ ಐಕಾನ್ಸ್‌ಗೆ ನೀಡಿರೋ ಕಾಂತಾರ-1 ಕಂಟೆಂಟ್ ಲೈಸೆನ್ಸ್‌ನ ಸ್ಟಾಪ್ ಮಾಡ್ತೀವಿ ಎಂದಿದೆ ಹೊಂಬಾಳೆ. ರಾತ್ರೋರಾತ್ರಿ ಈ ರೀತಿಯ ಇ ಮೇಲ್ ವಿನಿಮಯ ಆಗ್ತಿದ್ದಂತೆ, ಎಲ್ಲಿ ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡಿರೋರಿಗೆ ತೊಂದರೆ ಆಗುತ್ತೋ ಏನೋ ಅಂತ ಹೆದರಿದ್ದಾರೆ ಮುಂಬೈವಾಲಾಗಳು. ಹಾಗಾಗಿಯೇ ಹೊಂಬಾಳೆ ಹೊತೆ ರಾಜಿಯಾಗಿ, ಸಂಧಾನ ಮಾಡಿಕೊಂಡಿದ್ದಾರೆ.
ಕೂಡಲೇ ಹೆಚ್ಚುವರಿ ಶೋಗಳನ್ನ ನೀಡುವುದರ ಮೂಲಕ ಕ್ಷಮೆ ಕೂಡ ಯಾಚಿಸಿದೆ. ಇನ್ಮೇಲೆ ಈ ರೀತಿಯ ತೊಂದರೆ ಆಗುವುದಿಲ್ಲ ಅನ್ನೋ ಭರವಸೆ ಕೂಡ ಹೊಂಬಾಳೆ ಫಿಲಂಸ್‌ಗೆ ನೀಡಿದೆ. ಇದು ನಿಜಕ್ಕೂ ಒಳ್ಳೆಯ ಕಂಟೆಂಟ್‌ಗಿರೋ ಅಸಲಿ ಶಕ್ತಿ. ಇಲ್ಲಿಯವರೆಗೆ ನಮ್ಮವರು ಅವರುಗಳು ನೀಡಿದಷ್ಟು ಶೋಗಳನ್ನ ತಗೋಬೇಕಿತ್ತು. ಹೆಚ್ಚುವರಿ ಶೋಗಳನ್ನ ಕೇಳಿದ್ರೆ ಕ್ಯಾರೆ ಅಂತಿರಲಿಲ್ಲ. ಆದ್ರೀಗ ಕಾಂತಾರ-1ನಂತಹ ಬಿಗ್ ಸಿನಿಮಾ ಹಾಗೂ ಅದ್ರ ನಿರ್ಮಾಣ ಸಂಸ್ಥೆ ಜೊತೆ ಕಿರಿಕ್ ಮಾಡ್ಕೊಂಡ್ರೆ ಅವರುಗಳಿಗೇ ಲಾಸ್ ಆಗಲಿದೆ. ಅದನ್ನ ಅರಿತು ಬೇಗ ಸಂಧಾನ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡಿದೆ ಪಿವಿಆರ್. ಅಂದಹಾಗೆ ಏಕರೂಪ ಟಿಕೆಟ್ ದರ ನೀತಿ ಜಾರಿ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಪಿವಿಆರ್ ಕೋರ್ಟ್ ಮೆಟ್ಟಿಲೇರಿದಾಗ ಅವ್ರ ಬೆನ್ನಿಗೆ ನಿಂತಿದ್ದೇ ಹೊಂಬಾಳೆ. ಇದೀಗ ಹೊಂಬಾಳೆ ಬೆನ್ನಿಗೇ ಚೂರಿ ಹಾಕಿದ್ರೆ ನೋಡ್ತಾ ಸುಮ್ಮನಿರೋಕೆ ಸಾಧ್ಯವೇ..? ಅದೇ ಕಾರಣದಿಂದ ಪಿವಿಆರ್-ಐನಾಕ್ಸ್‌ಗೆ ತಕ್ಕ ಪಾಠ ಕಲಿಸಿದೆ ಪ್ರತಿಷ್ಠಿತ ಕನ್ನಡಿಗರ ಹೊಂಬಾಳೆ ಫಿಲಂಸ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
 
			
 
					




 
                             
                             
                             
                            