ದಿ ಹಾಲಿವುಡ್ ರಿಪೋರ್ಟರ್ ರೌಂಡ್ ಟೇಬಲ್ ಕಾನ್ವರ್ಸೇಷನ್‌ನಲ್ಲಿ 2025 ಟಾಪ್ ಪರ್ಫಾಮರ್ಸ್ ಭಾಗಿಯಾಗಿದ್ದಾರೆ. ವಿಕ್ಕಿ ಕೌಶಲ್, ಕಲ್ಯಾಣಿ ಪ್ರಿಯದರ್ಶನ್, ಕೃತಿ ಸನನ್ ಹಾಗೂ ಧ್ರುವ್ ವಿಕ್ರಮ್ ಜೊತೆ ನಮ್ಮ ಕಾಂತಾರದ ಚೆಲುವೆ ರುಕ್ಮಿಣಿ ವಸಂತ್ ಕೂಡ ವೇದಿಕೆ ಹಂಚಿಕೊಂಡಿದ್ದಾರೆ. ಅದ್ರ ಕಂಪ್ಲೀಟ್ ಝಲಕ್ ಇಲ್ಲಿದೆ ನೋಡಿ.
- 2025 ಟಾಪ್ ಪರ್ಫಾಮರ್ಸ್ ಲಿಸ್ಟ್‌ನಲ್ಲಿ ಕಾಂತಾರ ರುಕ್ಕು
- THR ಇಂಡಿಯಾ ರೌಂಡ್ ಟೇಬಲ್‌ನಲ್ಲಿ ಕನ್ನಡತಿ ಮಿಂಚು
- ವಿಕ್ಕಿ ಕೌಶಲ್, ಕೃತಿ ಸನನ್, ಕಲ್ಯಾಣಿ, ಧ್ರುವ್ ಜೊತೆ ರುಕ್ಮಿಣಿ
- ಖಳನಾಯಕಿ ರೋಲ್ ಮಾಡೋ ಚಾಲೆಂಜ್ ಬಿಚ್ಚಿಟ್ಟ ಚೆಲುವೆ
ರಾಕಿಂಗ್ ಸ್ಟಾರ್ ಯಶ್.. ಇತ್ತೀಚೆಗೆ ತಮ್ಮ ಟಾಕ್ಸಿಕ್ ಚಿತ್ರದ ಫೋಟೋಶೂಟ್ ಸಮೇತ ದಿ ಹಾಲಿವುಡ್ ರಿಪೋರ್ಟರ್ ಇಂಟರ್‌ನ್ಯಾಷನಲ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ರು. ಅದಾದ ಬಳಿಕ ನಮ್ಮ ಕಾಂತಾರ ಚಾಪ್ಟರ್-1 ಚೆಲುವೆ ಕಮ್ ಖಡಕ್ ಖಳನಾಯಕಿ ರುಕ್ಮಿಣಿ ವಸಂತ್ ಕೂಡ ಈಗ ಹಾಲಿವುಡ್ ರಿಪೋರ್ಟರ್ ರೌಂಡ್ ಟೇಬಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ಲ್ಯಾಕ್ ಬಾಡಿಕಾನ್ ಔಟ್‌ಫಿಟ್‌ನಲ್ಲಿ ಮಿಂಚ್ತಿರೋ ರುಕ್ಮಿಣಿ ವಸಂತ್, ಈ ವರ್ಷದ ಟಾಪ್ ಪರ್ಫಾಮರ್ಸ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಯೆಸ್.. ಹಿಂದಿ ಜೊತೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸ್ಟಾರ್‌ಗಳನ್ನೆಲ್ಲಾ ಒಟ್ಟಿಗೆ ಸೇರಿಸುವ ಕಾರ್ಯ ಮಾಡಿರೋ ಹಾಲಿವುಡ್ ರಿಪೋರ್ಟರ್ ಜೊತೆ ನಮ್ಮ ಕನ್ನಡತಿ ಕೂಡ ಕಮಾಲ್ ಮಾಡಿದ್ದಾರೆ.
ಅಂದಹಾಗೆ ವಿಕ್ಕಿ ಕೌಶಲ್ ಛಾವಾ ಚಿತ್ರದಿಂದ ಈ ವರ್ಷ ಎಲ್ಲರ ಹುಬ್ಬೇರಿಸಿದ್ರು. ಕಲ್ಯಾಣಿ ಪ್ರಿಯದರ್ಶನ್ ಸೂಪರ್ ವುಮನ್ ಮೂವಿ ಲೋಕ್ಹಾದಲ್ಲಿ ಮಿಂಚಿದ್ರು. ವಿಕ್ರಮ್ ಮಗ ಧ್ರುವ್, ಬೈಸನ್ ಚಿತ್ರದಲ್ಲಿ ಔಟ್‌ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ರು. ಇನ್ನು ಧನುಷ್ ಜೊತೆ ಕೃತಿ ಸನನ್ ನಟನೆಯ ತೇರೆ ಇಷ್ಕ್ ಮೈನ್ ಸಿನಿಮಾ ಮಾಡಿದ ಹಂಗಾಮವನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಾಗಿ ಇವರೆಲ್ಲರೂ ಒಟ್ಟಿಗೆ ಸೇರಿ, ತಮ್ಮ ಪಾತ್ರಗಳು, ಆ ಸಿನಿಮಾಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ.
ಅಂದಹಾಗೆ ವಿಕ್ಕಿ ಕೌಶಲ್, ಕೃತಿ ಸನನ್, ಕಲ್ಯಾಣಿ ಪ್ರಿಯದರ್ಶನ್ ಹಾಗೂ ಧ್ರುವ್ ವಿಕ್ರಮ್ ಸೇರಿದಂತೆ ಏಳೆಂಟು ಮಂದಿ ಜೊತೆ ಗಮನ ಸೆಳೆದ ನಮ್ಮ ರುಕ್ಮಿಣಿ, ನೆಗೆಟಿವ್ ರೋಲ್ ಮಾಡೋದ್ರ ಹಿಂದಿನ ಭಯದ ಕಥೆ ಕೂಡ ತೆರೆದಿಟ್ಟಿದ್ದಾರೆ.
ಸದ್ಯ ರುಕ್ಕಮ್ಮ ಜೂನಿಯರ್ ಎನ್‌ಟಿಆರ್- ಪ್ರಶಾಂತ್ ನೀಲ್ ಕಾಂಬೋನ ಡ್ರ್ಯಾಗನ್ ಸಿನಿಮಾ, ಯಶ್ ಅವರ ಟಾಕ್ಸಿಕ್ ಚಿತ್ರ ಸೇರಿದಂತೆ ಮೆಗಾ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡತಿಯೋರ್ವಳು ಹೀಗೆ ದೇಶದ ಗಮನ ಸೆಳೆದು, ವಿಶ್ವ ಸಿನಿದುನಿಯಾದ ಹುಬ್ಬೇರಿಸಿರೋದು ನಿಜಕ್ಕೂ ಖುಷಿಯ ವಿಚಾರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





