ರಾಮಾಯಣ ರೀತಿ ಸಿಕ್ಕಾಪಟ್ಟೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತಿರೋ ಗ್ರಾಮಾಯಣ ಚಿತ್ರದ ಆಲ್ಬಮ್ನಿಂದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಬರೋಬ್ಬರಿ 39 ವರ್ಷಗಳ ಹಿಂದೆ ಮನಮೆಚ್ಚಿದ ಹುಡುಗಿ ಜೊತೆ ಶಿವರಾಜ್ಕುಮಾರ್ ಸ್ಟೆಪ್ ಹಾಕಿದ್ದ ಆ ಎವರ್ಗ್ರೀನ್ ಸಾಂಗ್ಗೆ ಈಗ ವಿನಯ್ ರಾಜ್ಕುಮಾರ್ ಕುಣಿದಿದ್ದಾರೆ. ಇಷ್ಟಕ್ಕೂ ಹೇಗಿದೆ ಬೆಂಕಿ ಸಾಂಗ್..? ಶಿವಣ್ಣ ಹೇಳಿದ್ದೇನು..? ವಿನಯ್ ಮೆಚ್ಚಿದ ಹುಡ್ಗಿ ಯಾರು ಅನ್ನೋದಕ್ಕೆ ಉತ್ತರ ಇಲ್ಲಿದೆ.
- ಮನಮೆಚ್ಚಿದ ಹುಡ್ಗಿ ಜೊತೆ ವಿನಯ್ ರಾಜ್ ‘ಬೆಂಕಿ’ ಡ್ಯಾನ್ಸ್!
- ಗ್ರಾಮಗಳಲ್ಲೆಲ್ಲಾ ಸದ್ದು ಮಾಡ್ತಿದೆ ಗ್ರಾಮಾಯಣ ಬೆಂಕಿ ಸಾಂಗ್
- ಆಗ ಶಿವರಾಜ್ಕುಮಾರ್.. ಈಗ ವಿನಯ್ ರಾಜ್ಕುಮಾರ್
- ಕಲರ್ಫುಲ್ ಕಾಸ್ಟ್ಯೂಮ್.. ಕ್ಯೂಟ್ ಜೋಡಿ.. ಜಾನಪದ ಟಚ್
ವಿನಯ್ ರಾಜ್ಕುಮಾರ್ ಹಾಗೂ ಮೇಘ ಶೆಟ್ಟಿ ಜೋಡಿಯ ಗ್ರಾಮಾಯಣ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ಯೆಸ್.. ಮಕರ ಸಂಕ್ರಾಂತಿ ಹಬ್ಬದ ವಿಶೇಷ ಬೆಂಕಿ ಸಾಂಗ್ ಬಿಡುಗಡೆಯಾಗಿದ್ದು, ಇದನ್ನ ಲಿವಿಂಗ್ ಲೆಜೆಂಡ್ ನಟ ಡಾ. ಶಿವರಾಜ್ಕುಮಾರ್ ಲಾಂಚ್ ಮಾಡಿರೋದು ಇಂಟರೆಸ್ಟಿಂಗ್. ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರುವ ಸೂಚನೆ ನೀಡಿದೆ.
ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲೆಂದು ಶಿವಣ್ಣ ಹಾರೈಸಿದರು. ಶಿವಣ್ಣ ಜೊತೆ ಗೀತಾ ಶಿವರಾಜಕುಮಾರ್ ಕೂಡ ಉಪಸ್ಥಿತರಿದ್ದರು. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಈ ಹಾಡನ್ನು ಕಪಿಲ ಕಪಿಲನ್ ಹಾಗೂ ಐರಾ ಉಡುಪಿ ಹಾಡಿದ್ದಾರೆ. ಇದು ಶಿವಣ್ಣ ಅವರೇ ಅಭಿನಯಿಸಿದ್ದ ಮನಮೆಚ್ಚಿದ ಹುಡುಗಿ ಚಿತ್ರದ ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು ಹಾಡಿನ ರೀಮಿಕ್ಸ್ ಆಗಿದೆ. ಲಾಂಚ್ ಮಾಡೋದ್ರ ಜೊತೆ ಹೀರೋ-ಹೀರೋಯಿನ್ ಜೊತೆ ಶಿವಣ್ಣ ಸ್ಟೆಪ್ ಕೂಡ ಹಾಕಿದ್ರು.
ಯೆಸ್.. ಉಪೇಂದ್ರ ಕುಮಾರ್ ಸಂಗೀತ ಸಂಯೋಜಿಸಿದ್ದ ಈ ಹಾಡನ್ನು ಚಿ.ಉದಯಶಂಕರ್ ಬರೆದಿದ್ದರು. ಎಸ್.ಪಿ.ಬಿ ಹಾಗೂ ಎಸ್ ಜಾನಕಿ ಕಂಠದಲ್ಲಿ ಆ ಹಾಡು ಅಷ್ಟೇ ಸೊಗಸಾಗಿ ಮೂಡಿಬಂದಿತ್ತು. ಈಗ ಇದೇ ಹಾಡನ್ನು ಬರೋಬ್ಬರಿ 39 ವರ್ಷಗಳ ನಂತ್ರ ಗ್ರಾಮಾಯಣ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇಂದಿಗೂ ಆ ಸಾಂಗ್ ಎವರ್ಗ್ರೀನ್. ರೀಮಿಕ್ಸ್ ಸಾಂಗ್ ಅದರಷ್ಟೇ ಕಲರ್ಫುಲ್.
ಗ್ರಾಮಾಯಣ ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ದೇವನೂರು ಚಂದ್ರು ಒಂದೊಳ್ಳೆ ಗ್ರಾಮೀಣ ಸೊಗಡಿನ ಚಿತ್ರ ಮಾಡಿಕೊಂಡಿದ್ದಾರೆ. ವಿನಯ್ ರಾಜಕುಮಾರ್, ಮೇಘ ಶೆಟ್ಟಿ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ ಎಂದ ಲಹರಿ ವೇಲು, ಸಾಂಗ್ ಲಾಂಚ್ ಮಾಡಿಕೊಟ್ಟ ಶಿವಣ್ಣ ದಂಪತಿಗೆ ಧನ್ಯವಾದ ತಿಳಿಸಿದ್ರು. ಕಾರಣಾಂತರದಿಂದ ನಿಂತು ಹೋಗಿದ್ದ ಈ ಚಿತ್ರವನ್ನ ನಿರ್ಮಾಣ ಮಾಡಿ ಫೆಬ್ರವರಿಯಲ್ಲಿ ಅದ್ದೂರಿ ಬಿಡುಗಡೆ ಮಾಡಲು ಮುಂದಾಗಿರುವ ನಿರ್ಮಾಣ ಸಂಸ್ಥೆ ಹಾಗೂ ಕೆಪಿ ಶ್ರೀಕಾಂತ್ ಅವ್ರಿಗೆ ಡೈರೆಕ್ಟರ್ ಥ್ಯಾಂಕ್ಸ್ ಹೇಳಿದ್ರು.
ವಿನಯ್ ರಾಜ್ಕುಮಾರ್ ಜೊತೆ ಮೇಘಶೆಟ್ಟಿ, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ದಿವಂಗತ ನಟಿ ಅಪರ್ಣ, ಸೀತಾ ಕೋಟೆ ಹೀಗೆ ಅನುಭವಿ ಕಲಾವಿದರ ದೊಡ್ಡ ದಂಡೇ ಇದೆ. ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕೂಡ ಅಭಿನಯಿಸಿದ್ದಾರೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿ, ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರದ ಸ್ಟ್ರೆಂಥ್.
50 ವರ್ಷಗಳ ಸಂಭ್ರಮದಲ್ಲಿರೋ ಲಹರಿ ಸಂಸ್ಥೆ ಈ ಸಂದರ್ಭದಲ್ಲಿ ಗ್ರಾಮಾಯಣ ಮಾಡಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ರು ನಟ ವಿನಯ್ ರಾಜ್. ಎಲ್ಲರೂ ನನ್ನ ನಟನೆ ಚೆನ್ನಾಗಿದೆ ಅಂತಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕರು. ಬೆಂಕಿ ಹಾಡನ್ನು ಬಿಡುಗಡೆ ಮಾಡಿಕೊಟ್ಟ, ನಾನು ಹೆಚ್ಚಾಗಿ ಪ್ರೀತಿಸುವ ಹಾಗೂ ಗೌರವಿಸುವ ದೊಡ್ಡಪ್ಪ, ದೊಡ್ಡಮ್ಮ ಅವರಿಗೆ ಧನ್ಯವಾದ ಅಂದ್ರು ವಿನಯ್.
ಚಿತ್ರದಲ್ಲಿ ನಾನು ಕುಸುಮ. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ ನನ್ನದು ಅಂತ ನಾಯಕಿ ಮೇಘ ಶೆಟ್ಟಿ ಹಿಂಟ್ ನೀಡಿದ್ರು.
ಒಟ್ಟಾರೆ ಗ್ರಾಮಾಯಣ ಜಸ್ಟ್ ಒಂದು ಹಾಡಿನಿಂದ ಎಲ್ಲೆಡೆ ಸದ್ದು ಮಾಡ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





