ಯಪ್ಪಾ ಯಪ್ಪಾ ಯಪ್ಪಾ.. ಗಿಲ್ಲಿ ಹವಾ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿರೋ ಕಿಚ್ಚ-ದಚ್ಚು ರೆಕಾರ್ಡ್‌ನ ಸರಿಗಟ್ಟೋಕೆ ಬಿಗ್ ಮನೆಯ ನೂರು ದಿನದ ಆಟ ಸಾಕಾಗಿದೆ ಗಿಲ್ಲಿಗೆ. ಗಲ್ಲಿ ಗಲ್ಲಿಯಲ್ಲಿ ಸದ್ದು, ಸುದ್ದಿ ಆಗ್ತಿರೋ ಕರುನಾಡ ಕಲಾವಿದ ಗಿಲ್ಲಿ ನಟನ ಇನ್ಸ್‌ಟಾ ನಯಾ ರೆಕಾರ್ಡ್ ತೋರಿಸ್ತೀವಿ ಬನ್ನಿ.
- ಗಿಲ್ಲಿ ಸೆನ್ಸೇಷನ್.. 20 ವರ್ಷದ ಕಿಚ್ಚ-ದಚ್ಚು ದಾಖಲೆ ಬ್ರೇಕ್..?!
- ನೂರೇ ದಿನ.. ಗಿಲ್ಲಿಗೆ ಒಲಿದ 1.4 ಮಿಲಿಯನ್ ಫಾಲೋವರ್ಸ್
- ಈ ಬಾರಿ ಬಿಗ್‌ಬಾಸ್ ವಿನ್ನರ್ ಕಿರೀಟ ಹಳ್ಳಿ ಹೈದ ಗಿಲ್ಲಿ ಪಾಲು?
ಮಂಡ್ಯ ಜಿಲ್ಲೆಯ ಯಾವುದೋ ಕುಗ್ರಾಮವೊಂದರ ಗಲ್ಲಿಗಳಲ್ಲಿ ಇದ್ದಂತಹ ಗಿಲ್ಲಿ ನಟ ಅನ್ನೋ ಕಲಾವಿದ ಇಂದು ಇಡೀ ಕರ್ನಾಟಕ ಮಾತನಾಡುವಂತಹ ಮನೆ ಮಗನಾಗಿದ್ದಾರೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಆತನಲ್ಲಿರೋ ಪ್ರತಿಭೆ. ಯೆಸ್.. ಯೂಟ್ಯೂಬ್ ವಿಡಿಯೋಸ್ ಮಾಡಿಕೊಂಡು, ಅದ್ರಿಂದ ಕಾಮಿಡಿ ಕಿಲಾಡಿಗಳು ಅನ್ನೋ ಶೋಗೆ ಎಂಟ್ರಿ ಪಡೆದು, ಸದ್ಯ ಸಿನಿಮಾಗಳಲ್ಲಿ ಕೂಡ ಮಿಂಚು ಹರಿಸ್ತಿದ್ದಾರೆ. ಮಿಗಿಲಾಗಿ ಬಿಗ್‌ಬಾಸ್ ಸೀಸನ್-12ರ ಕಂಟೆಸ್ಟೆಂಟ್ ಆಗಿದ್ದು, ಬಿಗ್ ಮನೆಯಲ್ಲಿ ಗಿಲ್ಲಿ ಆಟಕ್ಕೆ ಎಲ್ರೂ ಥಂಡಾ ಹೊಡೆದಿದ್ದಾರೆ.
ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳೋಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಎಲ್ಲರ ಚಿತ್ತ ಗಿಲ್ಲಿಯತ್ತ ನೆಟ್ಟಿದೆ. ಗಲ್ಲಿ ಗಲ್ಲಿಗಳಲ್ಲಿ ಆತನ ಬಗ್ಗೆ ಮಾತನಾಡ್ತಿದ್ದಾರೆ ಜನ. ನಮ್ಮ ಗ್ಯಾರಂಟಿ ನ್ಯೂಸ್ ಕೂಡ ಗಿಲ್ಲಿ ನಟನ ಊರಿಗೆ ತೆರಳಿ ಸಾಕಷ್ಟು ಮಂದಿಯನ್ನ ಮಾತನಾಡಿಸಿದೆ. ಎಲ್ಲರೂ ಹೇಳ್ತಿರೋದು ಒಂದೇ ಈ ಬಾರಿಯ ಬಿಗ್‌ಬಾಸ್ ಗರಿ ಗಿಲ್ಲಿ ಪಾಲಾಗಲಿ ಅನ್ನೋದು. ಇನ್ನು ಕಿಚ್ಚ-ದಚ್ಚು ಕಳೆದ 20-25 ವರ್ಷಗಳಿಂದ ಪಡೆದ ಇನ್ಸ್‌ಟಾ ಫಾಲೋವರ್ಸ್ ಸಂಖ್ಯೆಯನ್ನ ಗಿಲ್ಲಿ ಕೇವಲ ನೂರು ದಿನದಲ್ಲಿ ಮುಟ್ಟುವ ಕಾರ್ಯ ಮಾಡಿದ್ದಾರೆ.
ಅರೇ.. ಸುದೀಪ್-ದರ್ಶನ್ ಅವರ ಇನ್ಸ್‌ಟಾ ಫಾಲೋವರ್ಸ್ ಸಂಖ್ಯೆಗಿಂತ ಗಿಲ್ಲಿ ಫಾಲೋವರ್ಸ್ ಜಾಸ್ತಿ ಇದ್ದಾರಾ ಅಂತ ಹುಬ್ಬೇರಿಸಬೇಡಿ. ಕಿಚ್ಚನ ಫಾಲೋವರ್ಸ್ 2.9 ಮಿಲಿಯನ್, ದಚ್ಚು ಫಾಲೋವರ್ಸ್ 2.5 ಮಿಲಿಯನ್. ಆದ್ರೆ ಈ ಗಿಲ್ಲಿ ನಟ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಾಗ ಕೇವಲ ಒಂದು ಲಕ್ಷ ಫಾಲೋವರ್ಸ್ ಇತ್ತು. ಇದೀಗ 1.4 ಮಿಲಿಯನ್‌ಗೆ ಅದು ಏರಿಕೆ ಆಗಿದೆ. ಇದು ಹೀಗೆಯೇ ಮುಂದುವರೆದರೆ ಬಹುಶಃ ಇನ್ನೊಂದು ತಿಂಗಳಲ್ಲಿ ಕಿಚ್ಚ-ದಚ್ಚು ಫಾಲೋವರ್ಸ್ ದಾಖಲೆಯನ್ನ ಬ್ರೇಕ್ ಮಾಡ್ತಾರೆ ಗಿಲ್ಲಿ. ಇದು ರಿಯಲ್ ಟ್ಯಾಲೆಂಟ್‌ಗೆ ಸಿಕ್ಕ ಬಲ, ಬೆಂಬಲ ಅಂದ್ರೆ ತಪ್ಪಾಗಲ್ಲ. ಆದ್ರೆ ಆ ಸ್ಟಾರ್‌ಡಮ್‌ನ ತಲೆಗತ್ತಿಸಿಕೊಂಡ್ರೆ ಅಂದೇ ಗಿಲ್ಲಿಯ ಅಧಃಪತನ ಶುರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





