ಈ ವಾರ ಸ್ಯಾಂಡಲ್‌ವುಡ್‌ಗೊಬ್ಬ ಹೊಚ್ಚ ಹೊಸ ಭರವಸೆಯ ನಾಯಕನಟನ ಆಗಮನ ಆಗ್ತಿದೆ. ಗತ ವೈಭವ ಸಿನಿಮಾದಿಂದ ಜನ್ಮ ಜನ್ಮಾಂತರದ ನಾಲ್ಕು ಕಥೆಗಳ ಒಂದೇ ಚಿತ್ರದಲ್ಲಿ ಉಣಬಡಿಸೋಕೆ ಬರ್ತಿದ್ದಾರೆ ದುಷ್ಯಂತ್. ಸಿಂಪಲ್ ಸುನಿಯ ಈ ಅಭೂತಪೂರ್ವ ಪ್ರಯೋಗಕ್ಕೆ ಬಾದ್‌ಷಾ ಕಿಚ್ ಸುದೀಪ್ ಸಾಥ್ ನೀಡಿರೋದು ಇಂಟರೆಸ್ಟಿಂಗ್.
- ಗತವೈಭವ ತೇರೆಳೆದ ಕಿಚ್ಚ.. ದುಷ್ಯಂತ್‌ರಿಂದ ಕಲಿತದ್ದೇನು?
- ನ-14ಕ್ಕೆ ತೆರೆಗೆ.. ಮಾಲ್‌ನಲ್ಲಿ ಕಿಚ್ಚನ ನೋಡಲು ಜನಸಾಗರ
- ಸುನಿಯನ್ನ ಕೊಂಡಾಡಿದ ಬಾದ್‌ಷಾ.. ಕೆತ್ತಿ ತೆಗೆದ ಫ್ರೇಮ್ಸ್
- ಒಂದೇ ಟಿಕೆಟ್ 4 ಸಿನಿಮಾ.. ಯಾಕಂದ್ರೆ 4 ಕಥೆಗಳ ಚಿತ್ರಣ
ಟೀಸರ್ ಹಾಗೂ ಸಾಂಗ್ಸ್‌ನಲ್ಲಿ ನೋಡಿದ್ದು ಏನೇನೂ ಇಲ್ಲ. ಯಾಕಂದ್ರೆ ಗತವೈಭವದ ದೃಶ್ಯವೈಭವ ಅದನ್ನು ಮೀರಿದ್ದಾಗಿದೆ. ಅದಕ್ಕೆ ಬಾದ್‌ಷಾ ಕಿಚ್ಚ ಸುದೀಪ್ ಅವ್ರು ಲಾಂಚ್ ಮಾಡಿರೋ ಲೇಟೆಸ್ಟ್ ಟ್ರೈಲರ್ ಝಲಕ್ ಉತ್ತರವಾಗಿದೆ. ಯೆಸ್.. ಇದು ನವೆಂಬರ್ 14ರಂದು ಅಂದ್ರೆ ಇದೇ ಶುಕ್ರವಾರ ಕನ್ನಡದ ಜೊತೆ ತೆಲುಗಿನಲ್ಲೂ ತೆರೆಗೆ ಬರ್ತಿರೋ ಗತವೈಭವ ಚಿತ್ರದ ಟ್ರೈಲರ್ ವೈಭವ. ಮಂತ್ರಿ ಮಾಲ್‌ನಲ್ಲಿ ನಡೆದ ಇವೆಂಟ್‌ನಲ್ಲಿ ಸುದೀಪ್ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಕೋರಿದ್ರು. ಅಲ್ಲದೆ, ದುಷ್ಯಂತ್‌ರಿಂದ ನಾನು ಕಲಿಯೋದಿದೆ ಅಂದ್ರು ಕಿಚ್ಚ.
ದುಷ್ಯಂತ್ ಅನ್ನೋ ವೆರಿ ವೆರಿ ಪ್ರಾಮಿಸಿಂಗ್ ಟ್ಯಾಲೆಂಟ್ ಈ ಚಿತ್ರದ ಮೂಲಕ ನಾಯಕನಟನಾಗ್ತಿದ್ದು, ಆಶಿಕಾ ರಂಗನಾಥ್ ಗ್ಲಾಮರ್ ರಂಗು ಹೆಚ್ಚಿಸಿದ್ದಾರೆ. ಒಂದೇ ಟಿಕೆಟ್‌ನಲ್ಲಿ ನಾಲ್ಕು ಸಿನಿಮಾಗಳನ್ನ ನೋಡಬಹುದಾಗಿದೆ. ಅದಕ್ಕೆ ಕಾರಣ ಡೈರೆಕ್ಟರ್ ಸಿಂಪಲ್ ಸುನಿ. ಹೌದು.. ನಾಲ್ಕು ಜನ್ಮ ಜನ್ಮಾಂತರಗಳ ಕಥೆಯನ್ನ ಒಂದೇ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ಸಕ್ಸಸ್‌ಫುಲ್ ಡೈರೆಕ್ಟರ್ ಸುನಿ.
ಈ ಕಾರ್ಯಕ್ರಮ ಆಗೋಕೆ ಕಾರಣ ನಮ್ಮ ಪ್ರೀತಿಯ ಸುದೀಪ್ ಸರ್. ಅವರು ಯಾವಾಗ್ಲೂ ಹೊಸಬರಿಗೆ ಪ್ರೀತಿಯಿಂದ ಸಪೋರ್ಟ್ ಮಾಡ್ತಾರೆ. ಅದು ಅವರಲ್ಲಿ ಇರುವ ಸಿನಿಮಾ ಮೇಲಿನ ಪ್ರೀತಿ ಹಾಗೂ ಪ್ಯಾಷನ್. ನಮ್ಮ ಟ್ರೈಲರ್ ಲಾಂಚ್‌ಗೆ ಸುದೀಪ್ ಸರ್ ಮೆರುಗು ನೀಡಿದ್ದಾರೆ. ಗತವೈಭವ ಸಾಕಷ್ಟು ರೀತಿಯಲ್ಲಿ ಸ್ಪೆಷಲ್. ಅತಿ ಹೆಚ್ಚು ದಿನಗಳ ಕಾಲ ಶೂಟ್ ಮಾಡಿದ ಸಿನಿಮಾ ಎಂದ್ರು ಆಶಿಕಾ.
ನಮ್ಮ ಸಿನಿಮಾ ಗತವೈಭವಗೆ ಕಿಚ್ಚ ಸರ್ ಬೆನ್ನೆಲುಬಾಗಿ ನಿಂತಿರುವುದು ಖುಷಿ ಕೊಟ್ಟಿದೆ ಎಂದ ದುಷ್ಯಂತ್, ಎಂಟು ವರ್ಷಗಳ ಪ್ರಯತ್ನದ ಬಳಿಕ ನಾನು ನಟನಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ಇದೇ ತಿಂಗಳ 14ರಂದು ನಮ್ಮ ಚಿತ್ರ ತೆರೆಗೆ ಬರ್ತಿದೆ. ತ್ರಿಭಾಷಾ ನಟಿ ಆಶಿಕಾ ಅವರ ಜೊತೆ ನಟಿಸಿರುವುದು ಸಂತಸ. ಹತ್ತು ಯಶಸ್ವಿ ಚಿತ್ರಗಳ ನಿರ್ದೇಶಕ ಸಿಂಪಲ್ ಸುನಿ ಅವರ ಕನಸಿನ ಕೂಸು ಮಕ್ಕಳ ದಿನದಂದು ನಿಮ್ಮ ಮುಂದೆ ಬರ್ತಿದೆ. ನಿಮ್ಮ ಬೆಂಬಲ ಇರಲಿ ಎಂದರು.
ಪ್ಯಾಂಟಸಿ ಹಾಗೂ ಸಾನಾತನ ಧರ್ಮದ ಕಥೆಯ ಹಿನ್ನೆಲೆಯಲ್ಲಿ ಚಿತ್ರ ಸಾಗಲಿದ್ದು, ದುಷ್ಯಂತ್ ಆಪ್ತ ಮಿತ್ರ ದೀಪಕ್ ತಿಮ್ಮಪ್ಪ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
