ತಲೆ ತಲಾಂತರಗಳಿಂದ ಸಿನಿಮಾನೇ ಜೀವನ. ಸಿನಿಮಾನೇ ಉಸಿರಾಗಿಸಿಕೊಂಡು.. ಕಲಾಸೇವೆ ಮಾಡ್ತಾ ಬರ್ತಿರೋ ಕನ್ನಡದ ಖ್ಯಾತ ಸಿನಿಮಾ ಪ್ರಚಾರಕರ್ತರ ಕುಟುಂಬವೊಂದು ಭಾವನಾತ್ಮಕ ಕಿರುಚಿತ್ರ ಮಾಡಿದೆ. ಅಂಬರೀಶ್, ಅನಂತ್‌ನಾಗ್, ಜಗ್ಗೇಶ್ ಅಂತಹ ದಿಗ್ಗಜರಿಗೆ ಸಿನಿಮಾಗಳನ್ನ ಪ್ರೊಡ್ಯೂಸರ್ ಮಾಡಿರೋ ಪಿಆರ್‌ಓ ಸುಧೀಂದ್ರ ಅವ್ರ ಮೊಮ್ಮಗ ಪವನ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಅದ್ರ ಹೈಲೈಟ್ಸ್ ಇಲ್ಲಿದೆ, ನೋಡ್ಕೊಂಡ್ ಬನ್ನಿ.
ಇದು ಫಸ್ಟ್ ಸ್ಯಾಲರಿ ಅನ್ನೋ ಕಿರುಚಿತ್ರದ ಝಲಕ್. 30 ನಿಮಿಷಗಳ ರನ್ ಟೈಂ ಇರೋ ಈ ಚಿತ್ರ, ಯಾವ ಕಮರ್ಷಿಯಲ್ ಸಿನಿಮಾಗೂ ಕಮ್ಮಿ ಇಲ್ಲ. ಅಷ್ಟರ ಮಟ್ಟಿಗೆ ಕಥೆ, ಪಾತ್ರಗಳು ಹಾಗೂ ಟೆಕ್ನಿಕಲಿ ಇಂಪ್ರೆಸ್ಸೀವ್ ಆಗಿದೆ. ಅದ್ರಲ್ಲೂ ಓದು ಮುಗಿಸಿ, ಜಾಬ್‌ಗಾಗಿ ಅಲೆದಾಡುವ ತೀರಾ ಮಿಡಲ್ ಕ್ಲಾಸ್ ಫ್ಯಾಮಿಲಿ ಯುವಕನೊಬ್ಬನ ಕಥೆ ಇದು. ಇದು ತಾಯಿ-ಮಗ, ಅಕ್ಕ-ತಮ್ಮನ ಸೆಂಟಿಮೆಂಟ್ಸ್ ಜೊತೆ ಸಾಕಷ್ಟು ಭಾವನಾತ್ಮಕ ಅಂಶಗಳಿಂದ ಕೂಡಿದೆ. ಇತ್ತೀಚೆಗೆ ಇದನ್ನ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಹಿರಿಯನಟಿ ಶ್ರುತಿ ಬಿಡುಗಡೆ ಮಾಡಿ, ತಂಡವನ್ನು ಅಭಿನಂದಿಸಿದರು.
‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು
ಅಂಬಿ, ಅನಂತ್, ಜಗ್ಗೇಶ್‌ಗೆ ಸಿನಿಮಾ ಮಾಡಿದ್ದ ಕುಟುಂಬ..!
ಈ ಚಿತ್ರದ ಕೇಂದ್ರಬಿಂದು ನಾಯಕನಟ ವಿಜಯ್. ಈತ ಮೂಲತಃ ಬಳ್ಳಾರಿ ಹುಡುಗ. ಯೂಟ್ಯೂಬರ್ ಆಗಿ ಬದುಕು ಕಟ್ಟಿಕೊಂಡಿರೋ ಈತನಿಗೆ ಸಿನಿಮಾ ಮೇಲೆ ಒಲವು ಜಾಸ್ತಿ. ಅದೇ ಕಾರಣದಿಂದ ಸಿನಿಮಾ ಆಕ್ಟಿವಿಟೀಸ್‌ಗೆ ಸಂಬಂಧಪಟ್ಟ ಸುದ್ದಿಗಳನ್ನೇ ತನ್ನ ಯೂಟ್ಯೂಬ್‌ನಲ್ಲಿ ಬಿತ್ತರಿಸುತ್ತಾನೆ. ಆದ್ರೆ ಮೊದಲ ಹೆಜ್ಜೆಯಲ್ಲೇ ನುರಿತ ಕಲಾವಿದನ ರೀತಿ ಹಾವ, ಭಾವಗಳನ್ನ ತೋರಿದ್ದಾರೆ. ಹಾಗಾಗಿ ಭರವಿಷ್ಯದಲ್ಲಿ ಒಳ್ಳೆಯ ಹೀರೋ ಆಗುವ ಮುನ್ಸೂಚನೆ ನೀಡಿದ್ದಾರೆ.
ಅಂದಹಾಗೆ ಈ ಚಿತ್ರದ ಡೈರೆಕ್ಟರ್ ಪವನ್ ವೆಂಕಟೇಶ್ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ಪಿಆರ್‌ಓ ಸುಧೀಂದ್ರ ವೆಂಕಟೇಶ್‌ರ ಮಗ. ಈ ಹಿಂದೆ ತಾತ ಸುಧೀಂದ್ರ, ಕೊರೋನಾ ಹಾಗೂ ರಾಮ ಜನ್ಮಭೂಮಿಯ ಮೇಲೆ ಡಾಕ್ಯುಮೆಂಟರಿಗಳನ್ನ ಮಾಡಿದ್ದ ಪವನ್, ಇದೇ ಮೊದಲ ಬಾರಿಗೆ ಫಸ್ಟ್ ಸ್ಯಾಲರಿ ಕಿರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ನಮ್ಮ ಸ್ಯಾಂಡಲ್‌ವುಡ್‌ನ ಭವಿಷ್ಯದ ಭರವಸೆಯ ನಿರ್ದೇಶಕ ಅನಿಸಿಕೊಂಡಿದ್ದಾರೆ.
ಮೊಮ್ಮಗನಿಂದ ತಾತ ಸುಧೀಂದ್ರ ಹೆಸ್ರು ಉಳಿಸೋ ಭರವಸೆ
ರಾಕ್‌ಲೈನ್, ಶ್ರುತಿ ಸಾಥ್..PRO ವೆಂಕಟೇಶ್ ದಿಲ್‌ಖುಷ್
ಈ ಮೂಲಕ ಪವನ್ ತಮ್ಮ ತಾತನಿಗೆ ತಕ್ಕ ಮೊಮ್ಮಗ ಅನಿಸಿಕೊಂಡಿದ್ದಾರೆ. ಹೌದು.. ಇವರ ತಾತ ಸುಧೀಂದ್ರ ನಮ್ಮ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಸಿನಿಮಾ ಪ್ರಚಾರಕರ್ತರಾಗಿದ್ದರು. ಅಷ್ಟೇ ಅಲ್ಲ, ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ಒಲವಿನ ಉಡುಗೊರೆ, ಅನಂತ್‌ನಾಗ್ ಜೊತೆ ಗಣೇಶನ ಮದುವೆ, ಗೌರಿ ಗಣೇಶ ಸಿನಿಮಾಗಳು, ಜಗ್ಗೇಶ್ ನಟನೆಯ ಪಟ್ಟಣಕ್ಕೆ ಬಂದ ಪುಟ್ಟ, ಗುಂಡನ ಮದುವೆ ಚಿತ್ರಗಳಿಗೆ ಸುಧೀಂದ್ರ ಅವರೇ ಪ್ರೊಡ್ಯೂಸರ್. ಶ್ರುತಿ, ಸುನೀಲ್ ಹಾಗೂ ತಾರಾ ನಟನೆಯ ನಗು ನಗುತಾ ನಲಿ ಚಿತ್ರ, ಲಹರಿ ಸಂಸ್ಥೆಗೆ ಮಾಡಿಕೊಟ್ಟ ಗಣೇಶನ ಗಲಾಟೆ ಚಿತ್ರಕ್ಕೂ ಇವರೇ ಸೂತ್ರಧಾರರು. ಹಾಗಾಗಿ ತಾತ ಸುಧೀಂದ್ರ ಅವ್ರ ಹೆಸರನ್ನ ಉಳಿಸೋ ಕಾರ್ಯ ಮೊಮ್ಮಗ ಪವನ್ ಮಾಡ್ತಿರೋದು ಖುಷಿಯ ವಿಚಾರ.
ಪವನ್ ಫಸ್ಟ್ ಡೈರೆಕ್ಷನ್ ಮೂವಿ ಫಸ್ಟ್ ಸ್ಯಾಲರಿಗೆ ರಾಘವೇಂದ್ರ ಚಿತ್ರವಾಣಿ ಬ್ಯಾನರ್‌ನಿಂದ ಪವನ್ ತಂದೆ ಸುಧೀಂದ್ರ ವೆಂಕಟೇಶ್ ಅವರೇ ಬಂಡವಾಳ ಹೂಡಿರೋದು ವಿಶೇಷ. 1976ರಿಂದ ಇಲ್ಲಿಯವರೆಗೆ 3600ಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರದ ಕಾರ್ಯಗಳನ್ನ ಮಾಡಿರೋ ರಾಘವೇಂದ್ರ ಚಿತ್ರವಾಣಿ ಮುಂದಿನ ತಿಂಗಳಿಗೆ ಭರ್ತಿ 50 ವರ್ಷ ಪೂರೈಸಲಿದೆ. ಸದ್ಯ ಸುಧೀಂದ್ರ ವೆಂಕಟೇಶ್, ಸುಧೀಂದ್ರ ಅವ್ರ ಮಗ ಸುನೀಲ್ ಹಾಗೂ ವಾಸು ಅವರು ಈ ಸಂಸ್ಥೆಯನ್ನ ಮುನ್ನಡೆಸುತ್ತಾ ಬರ್ತಿದ್ದಾರೆ. ಇವರ ಬತ್ತಳಿಕೆಯಿಂದ ಮತ್ತಷ್ಟು ಮಗದಷ್ಟು ಒಳ್ಳೆಯ ಚಿತ್ರಗಳು ಹೊರ ಹೊಮ್ಮಲಿ ಅಂತ ಹಾರೈಸೋಣ.
