ಟ್ರೈಲರ್ ಮೂಲಕ ಡೆವಿಲ್ ದರ್ಶನ ಕೊಟ್ಟಾಗಿದೆ. ಸ್ಟೈಲಿಶ್ ಲುಕ್ಸ್‌ನಲ್ಲಿ ಕಿಕ್ ಕೊಡ್ತಿದ್ದಾರೆ ಡಿಬಾಸ್. ಲುಕ್‌ನಲ್ಲೇನೋ ಹೀರೋ ಆದ್ರೆ ಕಿಕ್‌ನಲ್ಲಿ ಟೆರರ್. ಕ್ಯಾರೆಕ್ಟರ್ ಅಸಾಸಿನೇಷನ್, ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ, ಗ್ರಹಣ ತುಂಬಾ ಹೊತ್ತು ಹಿಡಿಯಲ್ಲ, ನಾ ಬರ್ತಿದ್ದೀನಿ ಚಿನ್ನಾ.. ಹೀಗೆ ಸಾಕಷ್ಟು ವಿಷಯಗಳಿಂದ ಸಖತ್ ಕಲರ್‌ಫುಲ್ ಆಗಿದೆ ಡೆವಿಲ್ ಟ್ರೈಲರ್ ಗುಚ್ಚ. ದರ್ಶನ್ ಪರ್ಸನಲ್ ಲೈಫ್‌ನ ಕೈಗನ್ನಡಿಯಂತಿರೋ ಡೆವಿಲ್ ವರ್ಲ್ಡ್‌ನಲ್ಲಿ ಬೇರೆ ಏನೆಲ್ಲಾ ಇದೆ ಅನ್ನೋದ್ರ ಕಂಪ್ಲೀಟ್ ಝಲಕ್ ಇಲ್ಲಿದೆ ನೋಡಿ.
ಇದು ಡಿಬಾಸ್ ದರ್ಶನ್ ಡೆವಿಲ್ ಚಿತ್ರದ ಲೇಟೆಸ್ಟ್ ಟ್ರೈಲರ್ ಝಲಕ್. ತಾರಕ್ ಬಳಿಕ ದರ್ಶನ್-ಪ್ರಕಾಶ್ ವೀರ್ ಎರಡನೇ ಕಾಂಬೋ ಮೂವಿ ಇದಾಗಿದ್ದು, ಸಿಕ್ಕಾಪಟ್ಟೆ ರಿಚ್ ಆ್ಯಂಡ್ ಲ್ಯಾವಿಶ್ ಆಗಿ ಮೂಡಿಬಂದಿದೆ. ಯೆಸ್.. ದರ್ಶನ್ ಕರಿಯರ್‌ನಲ್ಲೇ ಯಾವೊಬ್ಬ ಡೈರೆಕ್ಟರ್ ತೋರಿಸದಷ್ಟು ಸ್ಟೈಲಿಶ್ ಲುಕ್ಸ್‌ನಲ್ಲಿ ಅವ್ರನ್ನ ಪರದೆ ಮೇಲೆ ತೋರಿಸೋಕೆ ಮುಂದಾಗಿದ್ದಾರೆ. ಟ್ರೈಲರ್‌ನ ಒಂದೊಂದು ಫ್ರೇಮ್ ಕೂಡ ಸಿಕ್ಕಾಪಟ್ಟೆ ಶ್ರೀಮಂತವಾಗಿದ್ದು, ಇದ್ರಿಂದ ಪ್ರಕಾಶ್ ವೀರ್ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದು ಎದ್ದು ಕಾಣ್ತಿದೆ.
ಬೆಂಕಿ, ಬಿರುಗಾಳಿ.. ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್
ಸಿಕ್ಕಾಪಟ್ಟೆ ರಿಚ್ & ಲ್ಯಾವಿಶ್..ಮಾಸ್ ಪೊಲಿಟಿಕಲ್ ಡ್ರಾಮಾ
ಡಿಸೆಂಬರ್ 11ರಂದು ಸಿನಿಮಾ ತೆರೆಗೆ ಬರ್ತಿದ್ದು, ಸದ್ಯ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಲ್ಲಿ ಕೂತಿದ್ದಾರೆ. ಸಾರಥಿ ಬಳಿಕ ಅಂಥದ್ದೊಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ಈ ಸಿನಿಮಾ ರಿಲೀಸ್ ಆಗ್ತಿದ್ದು, ನೂರಾರು ಮಂದಿ ಕಲಾವಿದರು, ತಂತ್ರಜ್ಞರು, ಸಾವಿರಾರು ಜೂನಿಯರ್ ಆರ್ಟಿಸ್ಟ್‌ಗಳು ಈ ಚಿತ್ರಕ್ಕಾಗಿ ಹಗಲಿರುಳು ದುಡಿದಿದ್ದಾರೆ.
ಲುಕ್‌ನಲ್ಲಿ ಹೀರೋ.. ಕಿಕ್‌ನಲ್ಲಿ ಫುಲ್ ಟೆರರ್ ಈ ‘ಡೆವಿಲ್’
ಕ್ಯಾರೆಕ್ಟರ್ ಅಸಾಸಿನೇಷನ್.. ಕ್ಷಣಕ್ಕೊಂದು ಬಣ್ಣ ಮತ್ತು ವೇಷ
ಡೆವಿಲ್ ಚಿತ್ರದಲ್ಲಿ ದರ್ಶನ್ ಡಬಲ್ ಕ್ಯಾರೆಕ್ಟರ್ ಎನ್ನಲಾಗಿತ್ತು. ಇದ್ರೂ ಇರಬಹುದು. ಆದ್ರೆ ಹತ್ತು, ಹಲವು ಶೇಡ್‌ಗಳಂತೂ ಎದ್ದು ಕಾಣ್ತಿವೆ. ನಾಯಕನಟಿ ಹೇಳುವ ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ, ನಿನ್ನ ನಿಜವಾದ ರೂಪವನ್ನ ನಾನು ಸರಿಯಾಗಿ ನೋಡೇ ಇಲ್ವಲ್ಲೋ ಡೈಲಾಗ್ ಮಜಾ ಕೊಡ್ತಿದೆ. ಯಾಕಂದ್ರೆ ದರ್ಶನ್ ಲುಕ್‌ನಲ್ಲಿ ಹೀರೋ ಆಗಿ ಕಾಣ್ತಿದ್ರೂ ಸಹ, ಕಿಕ್‌ನಲ್ಲಿ ಫುಲ್ ಆನ್ ಟೆರರ್ ಆಗಿ ಕಾಣಿಸ್ತಾರೆ. ಅದೇ ಕಾರಣಕ್ಕೆ ಆ ಬಗೆಯ ಡೈಲಾಗ್ಸ್ ಅಬ್ಬರ, ಆರ್ಭಟ ಡೆವಿಲ್ ಟ್ರೈಲರ್‌ನಲ್ಲಿ ಜೋರಿವೆ.
ಆತನ ಒಂದು ಸಣ್ಣ ಲೂಪ್ ಹೋಲ್ ಸಿಕ್ರೂ ಸಾಕು ಅಂತ ಅವರ ಕ್ಯಾರೆಕ್ಟರ್ ಅಸಾಸಿನೇಷನ್ ಮಾಡೋಕೆ ಎದುರಾಳಿಗಳು ಕಾಯ್ತಿರ್ತಾರೆ. ಇದೆಲ್ಲವನ್ನ ನೋಡಿದಾಗ ಇದು ಎಲ್ಲೋ ಒಂದ್ಕಡೆ ಡಿಬಾಸ್ ದರ್ಶನ್ ವೈಯಕ್ತಿಕ ಜೀವನಕ್ಕೆ ಬಹಳ ಹತ್ತಿರ ಆಗಿರೋ ಎಲಿಮೆಂಟ್ಸ್‌ನಿಂದ ಕೂಡಿದೆ ಅನಿಸದೆ ಇರಲ್ಲ.
ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ.. ‘ಬರ್ತಿದೀನಿ ಚಿನ್ನಾ’..!!
ಡಿಬಾಸ್ ದಚ್ಚು ವೈಯಕ್ತಿಕ ಜೀವನಕ್ಕೆ ಹತ್ತಿರ ಡೆವಿಲ್ ಟ್ರೈಲರ್
ನಾನ್ ಬರ್ತಿದೀನಿ ಚಿನ್ನಾ ಅನ್ನೋ ಟ್ರೈಲರ್‌ಗೂ ಮುನ್ನ ರಿವೀಲ್ ಆಗಿದ್ದ ಸಣ್ಣ ಝಲಕ್ ಒಂದು ಸಖತ್ ಸಂಚಲನ ಮೂಡಿಸಿತ್ತು. ಜೈಲಲ್ಲಿರೋ ದರ್ಶನ್ ನಿಜ್ವಾಗ್ಲೂ ಬರ್ತಿದ್ದಾರಾ ಅಂತ ಫ್ಯಾನ್ಸ್ ಖುಷ್ ಆಗಿದ್ರು. ಆದ್ರೆ ಟ್ರೈಲರ್‌ನಲ್ಲಿರೋ ಒಂದು ಡೈಲಾಗ್ ನಿಜಕ್ಕೂ ವಾಸ್ತವಕ್ಕೆ ಬಹಳ ಹತ್ತಿರವಾಗಿದೆ. ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದೀನಿ ಚಿನ್ನಾ..ಅನ್ನೋ ಮಾತುಗಳು ಎಷ್ಟು ಅದ್ಭುತ ಅನಿಸ್ತಿವೆ.
ಕತ್ತಲು ಕವಿದ ಮೇಲೆ ಮತ್ತೆ ಬೆಳಕು ಹರಿಯಲೇ ಬೇಕು. ಆ ಕತ್ತಲು ಕಗ್ಗತ್ತಲಾಗಿಯೇ ಉಳಿಯೋಕೆ ಸಾಧ್ಯವಿಲ್ಲ. ಸದ್ಯ ದರ್ಶನ್ ಜೈಲಲ್ಲಿ ಇರಬಹುದು. ಕಡು ಕಷ್ಟದ ದಿನಗಳನ್ನೇ ಫೇಸ್ ಮಾಡ್ತಿರಬಹುದು. ಆದ್ರೆ ಒಂದಲ್ಲ ಒಂದು ದಿನ ಬಂದೇ ಬರ್ತಾರೆ ಹೊರಕ್ಕೆ. ಆ ಗ್ರಹಣ ಬಹಳ ದಿನ ಇರಲ್ಲ ಅನ್ನೋದ್ರ ಮುನ್ಸೂಚನೆಯೂ ಇದಾಗಿದೆ ಅನ್ನೋದು ಹಲವರ ಅಭಿಪ್ರಾಯ.
ಅಂದಹಾಗೆ ಡಿ ಫ್ಯಾನ್ಸ್‌ಗೆ ಈ ಸಿನಿಮಾ ಸ್ಪೆಷಲ್ ಟ್ರೀಟ್ ಆಗಲಿದೆ. ಅಷ್ಟೊಂದು ಮಾಸ್ ಡೈಲಾಗ್ಸ್, ಹೈ ವೋಲ್ಟೇಜ್ ಫೈಟ್ಸ್, ಸ್ಟಾರ್‌ಕಾಸ್ಟ್, ರಿಚ್ ಲೊಕೇಷನ್ಸ್, ದುಬಾರಿ ಕಾರ್‌ಗಳು, ದರ್ಶನ್ ಕಾಸ್ಟ್ಯೂಮ್ಸ್ ಎಲ್ಲವೂ ಮಜಬೂತಾಗಿವೆ. ಈ ಸಿನಿಮಾನ ದರ್ಶನ್ ಅನುಪಸ್ಥಿತಿಯಲ್ಲಿ ಅವ್ರ ಫ್ಯಾನ್ಸ್ ನೆಕ್ಸ್ಟ್ ಲೆವೆಲ್ ಸೆಲೆಬ್ರೇಷನ್‌ನಿಂದ ಗೆಲ್ಲಿಸೋಕೆ ಸಜ್ಜಾಗಿದ್ದಾರೆ. ಈ ಟ್ರೈಲರ್ ಲಾಂಚ್‌ನಿಂದಲೇ ಅದು ಶುರು ಆಗಿದ್ದು, ರಿಲೀಸ್ ದಿನ ಅಂದ್ರೆ ಡಿಸೆಂಬರ್ 11ರ ಮುಂಜಾನೆ 5 ಗಂಟೆಯಿಂದಲೇ ಸಖತ್ ಸೆಲೆಬ್ರೇಷನ್ ಇರಲಿದೆ.
ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ ದರ್ಶನ್ ವೈಯಕ್ತಿಕ ಜೀವನಕ್ಕೂ ಈ ಡೆವಿಲ್ ಚಿತ್ರದ ಕಥೆಗೂ ಯಾವುದೇ ಸಂಬಂಧ ಇಲ್ಲವಂತೆ. ಇದನ್ನ ಸ್ವತಃ ಡೈರೆಕ್ಟರ್ ಪ್ರಕಾಶ್ ವೀರ್ ಅವರೇ ನಮ್ಮ ಗ್ಯಾರಂಟಿ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ. ಸೋ ಇದೊಂದು ಔಟ್ ಅಂಡ್ ಔಟ್ ಮಾಸ್, ಮಸಾಲ, ಕರ್ಮಷಿಯಲ್ ಎಂಟರ್‌ಟೈನರ್ ಆಗಿ ಹೊರಹೊಮ್ಮಲಿದೆ.
ನಾಯಕನಟಿ ರಚನಾ ರೈ ಗ್ಲಾಮರ್, ಅಚ್ಯುತ್ ರಾವ್, ಶರ್ಮಿಳಾ ಮಾಂಡ್ರೆ, ಮಹೇಶ್ ಮಂಜ್ರೇಕರ್, ರೋಜರ್ ನಾರಾಯಣ್, ಶೋಭರಾಜ್, ಶ್ರೀನಿವಾಸ್ ಪ್ರಭು, ತುಳಸಿ ಶಿವಮಣಿ, ಗಿಲ್ಲಿ, ಹುಲಿ ಕಾರ್ತಿಕ್, ಜಿಜೆ ಸೇರಿದಂತೆ ದೊಡ್ಡ ತಾರಾಗಣವಿದೆ. ಸುಧಾಕರ್ ಸಿನಿಮಾಟೋಗ್ರಫಿ, ಅಜನೀಶ್ ಮ್ಯೂಸಿಕ್, ಮೋಹನ್ ಬಿ ಕೆರೆ ಆರ್ಟ್ ವರ್ಕ್, ಸಂತು ಕೊರಿಯೋಗ್ರಫಿ, ಕಾಂತರಾಜ್ ಮಾಸ್ ಡೈಲಾಗ್ಸ್, ತಶ್ವಿನಿ ಕಾಸ್ಟ್ಯೂಮ್ಸ್.. ಹೀಗೆ ಎಲ್ಲವೂ ಚಿತ್ರಕ್ಕೆ ಪ್ಲಸ್ ಆಗಲಿವೆ.
