ಹುಷಾರು ಲೇ ಹುಷಾರು ಅಂತಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಅದಕ್ಕೆ ಕಾರಣ ನಿವೇದಿತಾ ಶಿವರಾಜ್ ಕುಮಾರ್. ಹೌದು.. ಫೈರ್ ಫ್ಲೈ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಹಾಡೊಂದನ್ನ ಲಾಂಚ್ ಮಾಡೋ ಮೂಲಕ ಸಾಥ್ ನೀಡಿದ್ದಾರೆ ಬಹದ್ದೂರ್ ಗಂಡು. ಸಾಂಗ್ ಹೇಗಿದೆ..? ಧ್ರುವ ಏನಂದ್ರು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರ ಇದೇ ಏಪ್ರಿಲ್ 24ಕ್ಕೆ ತೆರೆಗೆ ಬರ್ತಿದೆ. ಸಿನಿಮಾ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಪ್ರಚಾರ ಬಿರುಸಿನಿಂದ ಸಾಗಿದೆ. ಅದರ ಭಾಗವಾಗಿ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಧ್ರುವ ಸರ್ಜಾ ಫೈರ್ ಫ್ಲೈ ಸಿನಿಮಾದ ಹುಷಾರು ಲೇ ಹುಷಾರು ಅನ್ನೋ ಹಾಡನ್ನ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ನಾಯಕ ವಿಕ್ಕಿಯನ್ನು ಗುಣಗಾನ ಮಾಡುವ ಹಾಡು ಇದಾಗಿದ್ದು, ಈ ಗೀತೆಯಲ್ಲಿ ಅಣ್ಣಾವ್ರ ಸಿನಿಮಾಗಳ ಡೈಲಾಗ್ ಗಳನ್ನ ಸಹ ಬಳಸಿರುವುದು ಮತ್ತೊಂದು ವಿಶೇಷ. ಧನಂಜಯ್ ರಂಜನ್ ಕ್ಯಾಚಿ ಮ್ಯಾಚಿ ಪದಗಳನ್ನ ಪೋಣಿಸುವ ಮೂಲಕ ಸಾಹಿತ್ಯ ರಚಿಸಿದ್ದಾರೆ. ದೀಪಕ್ ಬ್ಲೂ ಹಾಗೂ ಕಾರ್ತಿಕ್ ಚೆನ್ನೋಜಿರಾವ್ ಈ ಹಾಡಿಗೆ ಧ್ವನಿಯಾಗಿದ್ದು, ಚರಣ್ ರಾಜ್ ಸಂಗೀತ ಮೆಚ್ಚುವಂತಿದೆ.
ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್ ಫ್ಲೈ ಸಿನಿಮಾವನ್ನು ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನವೂ ಹೌದು. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್ ಫ್ಲೈ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿರೋದು ಇಂಟರೆಸ್ಟಿಂಗ್.
ವಿಶೇಷ ಅಂದ್ರೆ ಮಗಳು ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದಲ್ಲಿ ತಯಾರಾದ ಈ ಫೈರ್ ಫ್ಲೈ ಸಿನಿಮಾದಲ್ಲಿ ನಟ ಶಿವಣ್ಣ ಕೂಡ ಬಣ್ಣ ಹಚ್ಚಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿ ಕಾಣಸಿಗಲಿದ್ದಾರೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ- ನಿರ್ದೇಶನ ಈ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರ್ಮುಗಮ್ ಸಂಕಲನ, ವರದರಾಜ್ ಕಾಮತ್ ಕಲೆ, ಅರ್ಜುನ್ ರಾಜ್ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಫೈರ್ ಫ್ಲೈ ಚಿತ್ರಕ್ಕಿದೆ.
ಈ ಸಿನಿಮಾ ಅಣ್ಣಾವ್ರ 96ನೇ ಜಯಂತ್ಯೋತ್ಸವ ವಿಶೇಷ ಪ್ರೇಕ್ಷಕರ ಮುಂದೆ ಬರ್ತಿದ್ದು, ಚಿತ್ರ ನಿರ್ಮಾಣಕ್ಕೆ ಕೈ ಹಾಕಿರೋ ನಿವೇದಿತಾ ಶಿವರಾಜ್‌ಕುಮಾರ್ ಗೆಲ್ಲಬೇಕಿದೆ. ಈ ಸಿನಿಮಾ ಗೆದ್ರೆ, ಈ ತಂಡದಿಂದ ಮತ್ತಷ್ಟು, ಮಗದಷ್ಟು ಸಿನಿಮಾಗಳು ತೆರೆಗೆ ಬರಲಿವೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್