ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನ ಮೇಲೆ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಾಗಿದೆ. ಇಷ್ಟಕ್ಕೂ ದೂರು ಯಾರು ಕೊಟ್ರು..? ಯಾಕೆ ಕೊಟ್ರು ಅಂತ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ. ತಾನು ನಟಿಸಿದ ಸಿನಿಮಾ ಟೀಮ್‌ನಿಂದಲೇ ಗಿಲ್ಲಿ ಮೇಲೆ ಕಂಪ್ಲೆಂಟ್ ಆಗಿದೆ.
ಗಿಲ್ಲಿ ಗಿಲ್ಲಿ ಗಿಲ್ಲಿ.. ಯಾವ ಗಲ್ಲಿಯಲ್ಲಿ ನೋಡಿದ್ರೂ ಗಲ್ಲಿಯದ್ದೇ ಕಾರುಬಾರು. ಯಾಕಂದ್ರೆ ಗಿಲ್ಲಿ ಗಳಿಸಿದ್ದು ಬರೀ ಬಿಗ್‌ಬಾಸ್ ಟ್ರೋಫಿ ಅಷ್ಟೇ ಅಲ್ಲ. ಕೋಟ್ಯಂತರ ಮಂದಿಯ ಮನಸುಗಳಲ್ಲಿ ಜಾಗವನ್ನ ಅನ್ನೋದು ಮೊದಲು ಅರಿತುಕೊಳ್ಳಬೇಕಾಗುತ್ತೆ. ಒಬ್ಬ ಸಾಮಾನ್ಯ ಯೂಟ್ಯೂಬರ್, ಇಂದು ಕಾಮಿಡಿ ಕಿಲಾಡಿಯಾಗಿ, ರಿಯಾಲಿಟಿ ಶೋಗಳ ಮೂಲಕ ಸಿಕ್ಕಾಪಟ್ಟೆ ನೇಮು, ಪೇಮು ಗಳಿಸಿ, ಸಾಲು ಸಾಲು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ತನ್ನ ಟ್ಯಾಲೆಂಟ್‌ಗೆ ತಕ್ಕ ಅವಕಾಶಗಳನ್ನ ಪಡೆಯುತ್ತಿದ್ದಾರೆ.

ಗಿಲ್ಲಿ ಮೇಲೆ ಕಂಪ್ಲೆಂಟ್.. ಇದ್ಯಾಕೆ ಹೀಗೆ ಮಾಡಿದ್ರು ಪ್ರೊಡ್ಯೂಸರ್ ?
ತಾನು ನಟಿಸಿದ ಚಿತ್ರತಂಡದಿಂದ್ಲೇ ಕಿರಿಕ್.. ದಾಖಲಾಯ್ತು ದೂರು
ಗಿಲ್ಲಿ ಇನ್ಸ್‌ಟಾ ಫಾಲೋವರ್ಸ್ ಸಂಖ್ಯೆ ಕೂಡ ಎರಡು ಮಿಲಿಯನ್‌ಗೆ ಏರಿಕೆ ಆಗಿತ್ತು. ಇದ್ರಿಂದ ಗಿಲ್ಲಿಯ ಕ್ರೇಜ್ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಗಿಲ್ಲಿ ಕಾಣಿಸಿದ್ರೆ ಸಾಕು ಜನ ಶಿಳ್ಳೆ, ಚಪ್ಪಾಳೆಗಳನ್ನ ಹೊಡೆಯುತ್ತಾರೆ. ಅದ್ರಲ್ಲೂ ಇತ್ತೀಚೆಗೆ ಗಿಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವೇದಿಕೆಗಳ ಮೇಲೆ ಆಡುವ ಮಾತುಗಳು, ಮಾಡುವ ಹಾಸ್ಯ, ಹೊಡೆಯುವ ಡೈಲಾಗ್ಸ್ ಹುಚ್ಚೆದ್ದು ಕುಣಿಯುವಂತೆ ಮಾಡ್ತಿದೆ. ಆತ ಬಿಗ್‌ಬಾಸ್‌ಗೂ ಮುನ್ನ ಒಂದು ಪ್ರೋಗ್ರಾಮ್‌ಗೆ 10 ಸಾವಿರ ಸಂಭಾವನೆ ತಗೋತಿದ್ರಂತೆ. ಆದ್ರೀಗ ಕನಿಷ್ಟ ಐದು ಲಕ್ಷ ಇಲ್ಲದೆ ಕಾಲು ಕೂಡ ಆ ಕಡೆ ಇಡಲ್ಲ ಎನ್ನಲಾಗ್ತಿದೆ.
ಇದೆಲ್ಲಾ ಗಿಲ್ಲಿಯೇ ಸ್ವತಃ ತಾನಾಗಿ ತಾನೇ ಫಿಕ್ಸ್ ಮಾಡಿಕೊಂಡಿರೋ ರೆಮ್ಯುನರೇಷನ್ ಅಲ್ಲ. ಆತನ ಪ್ರತಿಭೆಗೆ ತಕ್ಕನಾಗಿ ಸಿಗ್ತಿರೋ ಪ್ರಶಂಸೆ, ಪ್ರತಿಕ್ರಿಯೆ ಎನ್ನಬಹುದು. ಆದ್ರೀಗ ಅದನ್ನೇ ಒಂದಷ್ಟು ಮಂದಿ ಬಂಡವಾಳ ಮಾಡಿಕೊಂಡು, ಆತನ ಹೆಸರನ್ನ ದುರುಪಯೋಗ ಪಡಿಸಿಕೊಳ್ಳೋಕೆ ಮುಂದಾಗ್ತಿದ್ದಾರೆ. ಸರ್ಕಾರಿ ಶಾಲೆ ಹೆಚ್8 ಅನ್ನೋ ಸಿನಿಮಾದಲ್ಲಿ ಗಿಲ್ಲಿ ನಟಿಸಿದ್ದು, ಆ ಸಿನಿಮಾ ನಿನ್ನೆ ತೆರೆ ಕಂಡಿದೆ. ಆದ್ರೀಗ ಆ ಚಿತ್ರದ ಡೈರೆಕ್ಟರ್ ಹೋಗಿ ಫಿಲ್ಮ್ ಚೇಂಬರ್ ಮೇಲೆ ದೂರು ದಾಖಲಿಸಿದ್ದಾರೆ.
ಹೀರೋ ಅಲ್ಲ.. ಏನೂ ಅಲ್ಲ.. ಗಿಲ್ಲಿ ಡೇಟ್ಸ್ ಕೊಟ್ಟಿದ್ದು ಒಂದೇ ದಿನ
ಗಿಲ್ಲಿ ಹೆಸರು ಬಳಸಿಕೊಂಡು.. ಆತನನ್ನೇ ತಪ್ಪಿತಸ್ಥನನ್ನಾಗಿಸಿದ್ಯಾಕೆ..?
ಗಿಲ್ಲಿ ಪ್ರಮೋಷನ್ಸ್‌ಗೆ ಬರ್ತಿಲ್ಲ ಅನ್ನೋದು ಸರ್ಕಾರಿ ಶಾಲೆ ಹೆಚ್8 ಚಿತ್ರತಂಡದ ವಾದವಾಗಿದೆ. ಆದ್ರೆ ಗಿಲ್ಲಿ ಈ ಸಿನಿಮಾದ ಹೀರೋ ಅಲ್ಲ. ಒಬ್ಬ ಸಾಮಾನ್ಯ ಕಲಾವಿದನಷ್ಟೇ. ಮಿಗಿಲಾಗಿ ಗಿಲ್ಲಿ ಈ ಚಿತ್ರಕ್ಕಾಗಿ ಡೇಟ್ಸ್ ಕೊಟ್ಟಿದ್ದು, ಬಣ್ಣ ಹಚ್ಚಿದ್ದು ಕೇವಲ ಒಂದೇ ಒಂದು ದಿನ. ಹೀಗಿರುವಾಗ ಅವರಿಗೆ ಪಾಪ್ಯುಲಾರಿಟಿ ಇದೆ ಅಂತ ಅವ್ರನ್ನ ಹಾಗೆ ಅವ್ರ ಹೆಸರನ್ನ ದುರುಪಯೋಗಪಡಿಸಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ.

ತಾನಾಯ್ತು ತನ್ನ ದುಡಿಮೆ ಆಯ್ತು ಅಂತ ಗಿಲ್ಲಿ ಲವಲವಿಕೆಯಿಂದ ಓಡಾಡಿಕೊಂಡು ಇದ್ದಾರೆ. ಕಾಸು ಮಾಡೋಕೆ ಇದೊಂದು ಸಕಾಲ. ಹೀಗಾಗಿ ತನ್ನ ಎಫರ್ಟ್‌ಗಳನ್ನ ಸಾಕಷ್ಟು ಹಾಕಿ ದುಡ್ಡು ಮಾಡ್ತಿದ್ದಾರೆ. ಹೀಗಿರುವಾಗ ಹೀರೋ ರೇಂಜ್‌ಗೆ ಒಂದು ದಿನ ನಟಿಸಿದ್ದ ಗಿಲ್ಲಿ ಕೂಡ ಬಂದು ಸಿನಿಮಾದ ಎಲ್ಲಾ ಪ್ರಮೋಷನಲ್ ಆ್ಯಕ್ಟಿವಿಟೀಸ್‌ನಲ್ಲಿ ಭಾಗಿಯಾಗ್ಬೇಕು ಅನ್ನೋದು ಸ್ವಾರ್ಥ ಅಲ್ಲವೇ..?





