ಹಿಟ್ ಸಿನಿಮಾಗಳ ಸರದಾರ ತರುಣ್ ಸುಧೀರ್, ತಮ್ಮ ಪ್ರೊಡಕ್ಷನ್ ಹೌಸ್‌ನಿಂದ ಮತ್ತೊಂದು ಇಂಟರೆಸ್ಟಿಂಗ್ ಸಿನಿಮಾನ ಹೊತ್ತು ಬರ್ತಿದ್ದಾರೆ. ಅದೇ ಏಳುಮಲೆ. ಕರ್ನಾಟಕ- ತಮಿಳುನಾಡು ಬಾರ್ಡರ್ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲು ನಡೆಯೋ ಇಂಟರೆಸ್ಟಿಂಗ್ ಕಥೆಯ ಟೀಸರ್‌ನ ಶಿವಣ್ಣ ಲಾಂಚ್ ಮಾಡಿ ಶುಭ ಹಾರೈಸಿದ್ರು. ಇಲ್ಲಿ ಶಿವಣ್ಣ, ಪ್ರೇಮ್, ತರುಣ್ ಚಿತ್ರರಂಗದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಿದ್ದು ಇಂಟರೆಸ್ಟಿಂಗ್.
- ತರುಣ್ ಏಳುಮಲೆಯಲ್ಲಿ ಶಿವಣ್ಣ, ಪ್ರೇಮ್ ಒಗ್ಗಟ್ಟಿನ ಮಂತ್ರ
- ರಾಣಾ ಈಸ್ ಬ್ಯಾಕ್.. ನೈಜ ಘಟನೆ ಆಧಾರಿತ ಕ್ರೈಂ ಥ್ರಿಲ್ಲರ್
- AK47, ಮಲೆ ಮಹದೇಶ್ವರ.. ಶಿವಣ್ಣನಿಗೂ ಸ್ಪೆಷಲ್ ಕನೆಕ್ಷನ್
- ಪುನೀತ್ ಪ್ರಾಮಿಸಿಂಗ್ ಪ್ರಯೋಗ.. ನಾಗಾಭರಣ ಬೆನ್ನೆಲುಬು
ಮೊನ್ನೆಯಷ್ಟೇ ಕ್ವೀನ್ಸ್ ಪ್ರೀಮಿಯರ್ ಲೀಗ್ ಸೀಸನ್ 2 ಲೋಗೋ ಲಾಂಚ್ ಮಾಡಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂದಿದ್ದರು. ಅದಕ್ಕೆ ಉತ್ತರ ನೀಡಿರುವ ಸ್ಟಾರ್ ಡೈರೆಕ್ಟರ್, ಅದು ಅವರ ಅಭಿಪ್ರಾಯ ಇರಬಹುದು. ಅವರ ಅನುಭವ ಕೂಡ ಆಗಿರಬಹುದು. ಆದ್ರೆ ನಮ್ಮಲ್ಲಿ ಒಗ್ಗಟ್ಟು ಕಂಡಿತ ಇದೆ. ಅದರಿಂದಲೇ ಏಳು ಮಲೆ ಟೀಸರ್ ಲಾಂಚ್‌ಗೆ ಶಿವಣ್ಣ, ಪ್ರೇಮ್, ಜಡೇಶ್, ಗುರುದೇಶ್ ಪಾಂಡೆ ಬಂದಿದ್ದಾರೆ ಅಂದಿದ್ದಾರೆ ನಿರ್ದೇಶಕ ತರುಣ್ ಸುಧೀರ್.
ಯೆಸ್.. ಇದು ತರುಣ್ ಸುಧೀರ್ ಹೋಮ್ ಬ್ಯಾನರ್‌ನಡಿ ತಯಾರಾದ ಏಳು ಮಲೆ ಚಿತ್ರದ ಟೀಸರ್ ಝಲಕ್. ಕರ್ನಾಟಕ ತಮಿಳುನಾಡು ಬಾರ್ಡರ್ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ನಡೆದ ನೈಜ ಘಟನೆಗಳನ್ನ ಆಧರಿಸಿ ತಯಾರಾದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ವಿತ್ ಲವ್ ಸ್ಟೋರಿ ಇರೋ ಸಿನಿಮಾ. ಇಲ್ಲಿ ಏಕ್ ಲವ್ ಯಾ ಖ್ಯಾತಿಯ ನಟಿ ರಕ್ಷಿತಾ ಸಹೋದರ ರಾಣಾ ನಾಯಕನಟನಾಗಿ ಬಣ್ಣ ಹಚ್ಚಿದ್ದು, ಮಹಾನಟಿ ಶೋನ ಪ್ರಿಯಾಂಕಾ ನಾಯಕಿಯಾಗಿ ಕಾಣಸಿಗಲಿದ್ದಾರೆ.
ಟಿ.ಎಸ್. ನಾಗಾಭರಣ, ಕಿಶೋರ್, ಸರ್ದಾರ್ ಸತ್ಯ, ಜಗಪ್ಪ, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರಕ್ಕಿದ್ದು, ಶಿವಣ್ಣ ಟೀಸರ್ ಲಾಂಚ್ ಮಾಡಿದ್ರು. ಇಡೀ ಸಿನಿಮಾ ನೈಟ್ ಎಫೆಕ್ಟ್‌ನಲ್ಲಿ ತಯಾರಾಗಿದ್ದು, ತಮಿಳುನಾಡು ಮೂಲದ ನಟಿ, ಕರ್ನಾಟಕದ ನಟ, ತಮಿಳು ಸಿಎಂ, ಕರ್ನಾಟಕ ಸಿಎಂಗೆ ಕರೆ ಮಾಡೋದು, ಅಕ್ರಮವಾಗಿ ಎಕೆ47 ಗನ್‌ಗಳ ಸಾಗಣೆ ಸೇರಿದಂತೆ ಸಾಕಷ್ಟು ಅಂಶಗಳು ಟೀಸರ್‌ನಲ್ಲಿ ಗಮನ ಸೆಳೆಯುತ್ತವೆ.
ಕಾಟೇರ ಚಿತ್ರಕ್ಕೆ ಸಾಂಗ್ ಬರೆದಿದ್ದ ಪುನೀತ್ ನಿರ್ದೇಶನದ ಸಿನಿಮಾ ಇದಾಗಿದ್ದು, ಪುನೀತ್ ಹೆಸರು ಕೇಳ್ತಿದ್ದಂತೆ ಶೀವಣ್ಣ ದಿಲ್‌ಖುಷ್ ಆದ್ರು. ಮೊದಲ ಬಾರಿ ಡೈರೆಕ್ಷನ್ ಮಾಡ್ತೀನಿ ಅಂತ ತರುಣ್ ನನ್ನ ಬಳಿ ಬಂದಿದ್ದ, ಅವರ ಮನೆ ಕೋಳಿ ಸಾರು ತಿಂತಿದ್ದೀನಿ, ರಾಣಾ ಸಖತ್ ಹ್ಯಾಂಡ್ಸಮ್ ಹುಡ್ಗ. ಯಂಗ್‌ಸ್ಟರ್‌ಗಳು ಬರಬೇಕು. ಮೆಚ್ಚುಗೆ ಬಂದ ಬಳಿಕ ಹಣ ಮಾಡೋದು ಇದ್ದೇ ಇರುತ್ತೆ ಅಂತ ಶಿವಣ್ಣ ಇಡೀ ಟೀಮ್‌ಗೆ ಶುಭ ಕೋರಿದ್ರು.
ಸೋನಲ್ ಕೂಡ ಪತಿಗೆ ಸಾಥ್ ನೀಡೋದ್ರ ಜೊತೆಗೆ ಸಿನಿಮಾ ನೋಡೋಕೆ ಕಾತರಳಾಗಿದ್ದೀನಿ ಬಂಗಾರ ಎಂದರು.
ಒಟ್ಟಾರೆ ಏಳು ಮಲೆ ಸಿನಿಮಾಗೆ ಶಿವಣ್ಣನ ಬರ್ತ್ ಡೇ ಮಾಸದಲ್ಲಿ ಪ್ರಮೋಷನ್ಸ್‌ಗೆ ಒಂದೊಳ್ಳೆ ಕಿಕ್‌ಸ್ಟಾರ್ಟ್ ಸಿಕ್ಕಿದೆ. ಇನ್ನು ತರುಣ್ ಸುಧೀರ್, ತಮ್ಮ ಸಹೋದರ ನಂದಕಿಶೋರ್ 22 ಲಕ್ಷ ರೂಪಾಯಿ ವಂಚನೆ ಆರೋಪದ ಬಗ್ಗೆಯೂ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಜನರ ನಿರೀಕ್ಷೆಗೆ ತಕ್ಕನಾಗಿ ಸಿನಿಮಾ ಮಾಡುವ ತರುಣ್ ಸುಧೀರ್, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಭೇಷ್ ಅನಿಸಿಕೊಂಡಿದ್ದಾರೆ. ಈ ಏಳುಮಲೆ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಸದ್ಯದಲ್ಲೇ ಥಿಯೇಟರ್‌ಗೆ ಲಗ್ಗೆ ಇಡಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್