ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸ್ಯಾಂಡಲ್ ವುಡ್ ಸಲಗ ವಿಜಯ್ ತಮ್ಮ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮಿಳಿನ ಸ್ಟಾರ್ ನಟನ ಸಿನಿಮಾದಲ್ಲಿ ಒಂದು ಪವರ್ ಫುಲ್ ರೋಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹಾಗಾದ್ರೆ ಆ ಸಿನಿಮಾ ಯಾವ್ದು..? ಆ ಸಿನಿಮಾದ ಹೀರೋ ಯಾರು..? ಟಾಲಿವುಡ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಲಿವುಡ್ಗೆ ಒಲಸೆ ಹೋಗಿದ್ಯಾಕೆ..? ಇವೆಲ್ಲವುಗಳಿಗೂ ಇಲ್ಲಿದೆ ನೋಡಿ ಉತ್ತರ.
ಕನ್ನಡ ಸಿನಿಮಾ ರಂಗದ ಗಡಿ ದಾಟಿ ತನ್ನ ಸ್ಟಾರ್ ವ್ಯಾಲ್ಯೂ ಅನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕರೆದೊಯ್ಯುತ್ತಿರುವ ಸ್ಯಾಂಡಲ್‌ವುಡ್ ಸಲಗ ವಿಜಯ್ ಇದೀಗ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಮಾಸ್, ರಾ ಮತ್ತು ರಿಯಲ್ ಪಾತ್ರಗಳಿಂದಲೇ ಗುರುತಿಸಿಕೊಂಡಿರುವ ವಿಜಯ್, ಈಗ ತಮಿಳು–ತೆಲುಗು ಇಂಡಸ್ಟ್ರಿಗಳಲ್ಲಿ ತನ್ನ ಹಾಜರಾತಿ ಗಟ್ಟಿಗೊಳಿಸುತ್ತಿದ್ದಾರೆ. ವಿಜಯ್ ಸೇತುಪತಿ ಹಾಗೂ ಟಬು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ಟಾಲಿವುಡ್‌ನ ಸಕ್ಸಸ್‌ಫುಲ್ ಡೈರೆಕ್ಟರ್ ಪುರಿ ಜಗನ್ನಾಥ್ ಅವರ ಮುಂಬರುವ ಸಿನಿಮಾ ‘ಸ್ಲಮ್ ಡಾಗ್’ ನಲ್ಲಿ ವಿಜಯ್ ಕಾಣಿಸಿಕೊಳ್ಳುತ್ತಿರುವುದು ಅಧಿಕೃತವಾಗಿದೆ. ಈ ಸುದ್ದಿ ಸ್ಯಾಂಡಲ್‌ವುಡ್ ಫ್ಯಾನ್ಸ್‌ಗಳಿಗೆ ಭಾರೀ ಖುಷಿ ತಂದಿದೆ.
ವಿಜಯ್ ಕುಮಾರ್ ಫ್ಯಾನ್ಸ್ಗೆ ಗುಡ್ ನ್ಯೂಸ್..!
ಕಾಲಿವುಡ್ಗೆ ಸಲಗ ಎಂಟ್ರಿ.. ‘ಸ್ಲಂ ಡಾಗ್’ ನಲ್ಲಿ ‘ಲ್ಯಾಂಡ್ ಲಾರ್ಡ್ ವಿಜಿ’
ವಿಜಯ್ ಸ್ಲಮ್ ಡಾಗ್ ನಲ್ಲಿ ಅಭಿನಯಿಸುತ್ತಿರುವುದು ಚಿತ್ರದ ನಿರ್ಮಾಪಕಿ ಚಾರ್ಮಿ ಕೌರ್ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದುನಿಯಾ ವಿಜಯ್ ಅವರನ್ನು ಸಿನಿಮಾ ತಂಡಕ್ಕೆ ಸ್ವಾಗತಿಸುವ ಜೊತೆಗೆ, ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಬರ್ತ್‌ಡೇ ವಿಶ್ ಕೂಡ ಮಾಡಿದ್ದಾರೆ. ಈ ಪೋಸ್ಟರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಲಗ ಪ್ಯಾನ್ ಇಂಡಿಯಾ ಎಂಟ್ರಿ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪುರಿ ಜಗನ್ನಾಥ್ ಸ್ಟೈಲ್‌ನ ರಗಡ್ ಸಿನಿಮಾ ಮತ್ತು ದುನಿಯಾ ವಿಜಯ್ ರಾ ಆಕ್ಟಿಂಗ್ ಈ ಕಾಂಬಿನೇಷನ್ ಏನೋ ದೊಡ್ಡ ಸದ್ದು ಮಾಡಲಿದೆ ಅನ್ನೋ ನಿರೀಕ್ಷೆ ಜೋರಾಗಿದೆ.
ಅಂದಹಾಗೆ ಸ್ಲಮ್ ಡಾಗ್ ಸಿನಿಮಾವನ್ನು ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ದುನಿಯಾ ವಿಜಯ್‌ಗೆ ಇದು ತಮಿಳಿನ ಎರಡನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಮೂಕುತಿ ಅಮ್ಮನ್–2 ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಅದು ಬಿಡುಗಡೆಯ ಹಂತದಲ್ಲಿದೆ. ಇದಕ್ಕೂ ಮುನ್ನ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ವಿಜಯ್, ಅಲ್ಲಿ ಕೂಡ ತಮ್ಮ ವಿಭಿನ್ನ ಪಾತ್ರದಿಂದ ಗಮನ ಸೆಳೆದಿದ್ದರು. ಹೀಗಾಗಿ, ‘ಸ್ಲಮ್ ಡಾಗ್’ ಮೂಲಕ ಅವರ ಪ್ಯಾನ್ ಇಂಡಿಯಾ ಜರ್ನಿ ಮತ್ತಷ್ಟು ಗಟ್ಟಿಯಾಗಲಿದೆ.
‘ಸ್ಲಂ ಡಾಗ್’ಗೆ ಪುರಿ ಜಗನ್ನಾಥ್ ಆ್ಯಕ್ಷನ್..ವಿಜಯ್ ಸೇತುಪತಿ ಹೀರೋ
ತಮಿಳಿನ ಎರಡು ಸಿನಿಮಾಗಳಲ್ಲಿ ಕನ್ನಡದ ನಟ ದುನಿಯಾ ವಿಜಿ..!
‘ಲೈಗರ್’ ಸಿನಿಮಾದ ಸೋಲು ಪುರಿಗೆ ಭಾರೀ ಶಾಕ್ ನೀಡಿದ್ದು, ಆ ನಂತರ ಮಾಡಿದ ಚಿತ್ರಗಳೂ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳು ಪುರಿಗೆ ಚಾನ್ಸ್ ಕೊಡ್ತಿಲ್ಲ ಅನ್ನೋ ಗುಸುಗುಸುಗಳು ಕೂಡ ಹರಿದಾಡುತ್ತಿವೆ. ಅದಕ್ಕಾಗಿಯೇ ಪುರಿ ತಮಿಳು ಮತ್ತು ಪ್ಯಾನ್ ಇಂಡಿಯಾ ಮಾರ್ಗ ಹಿಡಿದಿದ್ದಾರೆ ಅನ್ನೋ ಮಾತುಗಳು ಸಿನಿ ವಲಯದಲ್ಲಿ ಕೇಳಿಬರುತ್ತಿವೆ. ‘ಸ್ಲಮ್ ಡಾಗ್’ ಪುರಿ ಪಾಲಿಗೆ ಕಮ್‌ಬ್ಯಾಕ್ ಸಿನಿಮಾ ಆಗುತ್ತಾ ಅನ್ನೋ ಕುತೂಹಲ ಜೋರಾಗಿದೆ.
ಒಟ್ಟಿನಲ್ಲಿ, ‘ಸ್ಲಮ್ ಡಾಗ್’ ಸಿನಿಮಾ ಹಲವು ಅರ್ಥಗಳಲ್ಲಿ ಕುತೂಹಲ ಮೂಡಿಸಿದೆ. ವಿಜಯ್ ಸೇತುಪತಿ, ಟಬು, ದುನಿಯಾ ವಿಜಯ್ ಸ್ಟ್ರಾಂಗ್ ಕಾಸ್ಟಿಂಗ್, ಪುರಿ ಜಗನ್ನಾಥ್ ಅವರ ಮಾಸ್ ಮೇಕಿಂಗ್, ಪ್ಯಾನ್ ಇಂಡಿಯಾ ರಿಲೀಸ್ ಪ್ಲ್ಯಾನ್ ಎಲ್ಲವೂ ಸೇರಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾ ಪುರಿ ಜಗನ್ನಾಥ್ ಅವರನ್ನು ಮತ್ತೆ ಗೆಲುವಿನ ಹಾದಿಗೆ ತರುತ್ತಾ? ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಾರಾ? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗೋದು ‘ಸ್ಲಮ್ ಡಾಗ್’ ರಿಲೀಸ್ ಆದ ಮೇಲೆ.





