ಸ್ಯಾಂಡಲ್‌ವುಡ್‌ನ ನಟರಾಕ್ಷಸ ಹಾಗೂ ನಟರಕ್ಷಕ ಡಾಲಿ ಧನಂಜಯ ಬರ್ತ ಡೇಗೆ ಬ್ರೇಕ್ ಹಾಕಿದ್ದಾರೆ. ಹೌದು, ಈ ವರ್ಷ ಡಾಲಿ ಜನುಮ ದಿನವನ್ನು ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡಿಕೊಳ್ತಿಲ್ಲ. ಅದಕ್ಕೆ ಅಸಲಿ ಕಾರಣ ಇದೇನಾ..? ಮುಂದಿನ ವರ್ಷ ಡಬಲ್ ಎನರ್ಜಿ ಜೊತೆ ಭೇಟಿ ಮಾಡೋ ಪ್ಲಾನ್ ಹೇಗಿದೆ ಅನ್ನೋದರ ಡಿಟೇಲ್ಸ್ ಇಲ್ಲಿದೆ.
- ಡಾಲಿ ಧನಂಜಯ ಫ್ಯಾನ್ಸ್‌ಗೆ ನಿರಾಸೆ.. ಬರ್ತ್ ಡೇಗೆ ಸಿಗಲ್ಲ ಕೈಗೆ
- ಡಬಲ್ ಸಂಭ್ರಮದೊಂದಿದೆ ಸಿಗೋಣ.. ಡಾಲಿ ಗ್ರೀನ್ ಸಿಗ್ನಲ್..!
- ಆಪರೇಷನ್ ಡ್ರೀಮ್ ಥಿಯೇಟರ್ & ಹಲಗಲಿ ಡಬಲ್ ಡೋಸ್
ನಟ ಡಾಲಿ ಧನಂಜಯ ಸದ್ಯ ಕನ್ನಡದ ಬಹುಬೇಡಿಕೆಯ ನಟರಲ್ಲೊಬ್ರು. ವಿಲನ್ ಆಗಿ, ಹೀರೋ ಆಗಿ ಡಾಲಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನ ಸಂಪಾದಿಸಿದ್ದು ತಮ್ಮದೇ ಆದ ಅಭಿಮಾನಿಗಳಿಗೆ ಬರ್ತ್ ಡೇ ದಿನ ದರ್ಶನ ಕೊಡ್ತಿರ್ತಾರೆ. ಆದ್ರೆ ಈ ವರ್ಷ ಆಗಸ್ಟ್ 23ಕ್ಕೆ ಡಾಲಿ ತಮ್ಮ ಬರ್ತ್ ಡೇ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಫ್ಯಾನ್ಸ್‌ಗೆ ಪತ್ರ ಬರೆದು ಪ್ರೀತಿಪೂರ್ವಕ ಮನವಿ ಕೂಡ ಮಾಡಿದ್ದಾರೆ.
ಅಂದಹಾಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಡಾಲಿ, ಈ ವರ್ಷ ಕೆಲವೇ ಕೆಲವು ಸಿನಿಮಾಗಳ ಮೂಲಕ ಫ್ಯಾನ್ಸ್ ನ ಫಿದಾ ಮಾಡಿದ್ದಾರೆ. ವಿದ್ಯಾಪತಿಯಲ್ಲಿ ಗೆಸ್ಟ್ ರೋಲ್ ಮಾಡಿ ಸೈ ಅನ್ನಿಸಿಕೊಂಡ ಡಾಲಿ, ಈಗ ಹಲಗಲಿ ಸಿನಿಮಾ ಮೂಲಕ ಬೇಡರ ನಾಯಕನಾಗಿ ಬಿಗ್ ಬಜೆಟ್ ಸಿನಿಮಾದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಹಲಗಲಿ ಬಹು ನಿರೀಕ್ಷಿತ ಸಿನಿಮಾ ಮಾತ್ರವಲ್ಲ ಡಾಲಿ ಧನಂಜಯ ಕರಿಯರ್‌ನ ಬಿಗ್ ಬಜೆಟ್ ಸಿನಿಮಾ ಕೂಡ ಹೌದು.
ಇನ್ನು ಧನಂಜಯ ಸದ್ಯ ಶಿವಣ್ಣ ಜೊತೆ 666 ಆಪರೇಷನ್ ಡ್ರೀಮ್ ಥೀಯೇಟರ್ ಸಿನಿಮಾ ಮಾಡ್ತಿದ್ದು, ಡಾಲಿ 39ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂಭ್ರಮಕ್ಕೆ ಸಾಕ್ಷಿಯಾಗಿ, ಚಿತ್ರದ ಹೊಸ ಲುಕ್ ಬಿಡುಗಡೆಯಾಗಿದೆ. ಕೈಯಲ್ಲಿ ಗನ್ನು, ಧನಂಜಯ್ ರೆಟ್ರೋ ಲುಕ್ ಫ್ಯಾನ್ಸ್ ಗೆ ಕಿಕ್ ಕೊಟ್ಟಿದೆ. ಟಗರು ಮತ್ತು ಭೈರಾಗಿ ಚಿತ್ರಗಳ ನಂತರ, ಶಿವಣ್ಣ ಮತ್ತು ಧನಂಜಯ್ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡ ಸದ್ಯ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸುತ್ತಿದೆ.
- ಈ ವರ್ಷ ಬಿಡುಗಡೆ ಆಗ್ತಿರೋ ಡಾಲಿ ಸಿನಿಮಾ ಯಾವುದು..?!
- ಅಭಿಮಾನಿಗಳನ್ನು ಬಿಟ್ಟು ಪತ್ನಿ ಜೊತೆ ಧನಂಜಯ ಸೆಲೆಬ್ರೇಷನ್
ಅಣ್ಣ ಫ್ರಮ್ ಮೆಕ್ಸಿಕೋ, ಉತ್ತರಕಾಂಡ, ಹಲಗಲಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಡಾಲಿ ಈ ವರ್ಷ ಬ್ಯುಸಿಯಾಗಿದ್ದಾರೆ. ಇತ್ತ ಉತ್ತರಕಾಂಡ ಕೂಡ ಈ ವರ್ಷ ತರೆಗೆ ಬರೋ ಸಾಧ್ಯತೆ ಇದೆ. ಆದ್ರೆ ಸದ್ಯ ಬರ್ತ್ ಡೇ ಸ್ಪೆಷಲ್ ಅಂತ ಡಾಲಿ ವಿಶೇಷವಾಗಿ ಯಾವುದೇ ಸಿನಿಮಾ ಅನೌನ್ಸ್ ಬಗ್ಗೆ ಅಪ್ಡೇಟ್ ಇಲ್ಲ. ಮದುವೆ ಆದ ಮೇಲೆ ಆರಾಮಾಗಿ ಸಾಂಸಾರಿಕ ಜೀವನ ನಡೆಸ್ತಿರೋ ಡಾಲಿ, ಸದ್ಯ ಕುಟುಂಬದೊಂದಿಗೆ ಪತ್ನಿ ಡಾಕ್ಟರ್ ಧನ್ಯ ಜೊತೆ ಈ ಬಾರಿಯ ಬರ್ತ್ ಡೇ ಸೆಲೆಬ್ರೇಟ್ ಮಾಡೋ ಪ್ಲಾನ್‌ನಲ್ಲಿದ್ದಾರೆ.
ಒಟ್ಟಿನಲ್ಲಿ ವರ್ಷಕ್ಕೊಮ್ಮೆ ತಮ್ಮನೆಚ್ಚಿನ ನಟನ ನೋಡೋಕೆ, ಕೈ ಕುಲುಕೋಕೆ, ಪೋಟೋ ತೆಗೆಸಿಕೊಳ್ಳೋಕೆ ಬರ್ತ್ ಡೇ ದಿನ ಬರೋ ಪ್ಲಾನ್ ಮಾಡಿದ್ದ ಧನಂಜಯ ಫ್ಯಾನ್ಸ್, ಈ ಭಾರಿ ಸೋಶಿಯಲ್‌ಮೀಡಿಯಾದಲ್ಲೇ ವಿಶ್ ಮಾಡಬೇಕಷ್ಟೆ. ಎನಿವೇ ನಮ್ ಗ್ಯಾರಂಟಿ ನ್ಯೂಸ್ ಕಡೆಯಿಂದ ಹ್ಯಾಪಿ ಬರ್ತ್ ಡೇ ಟು ಯು ಡಾಲಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್