ತಮಿಳಿನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ತೆರೆ ಹಿಂದಿಯಿಂದ ಏಕ್ಧಮ್ ತೆರೆಮೇಲೆ ಬಂದು ಬಿಟ್ಟಿದ್ದಾರೆ. ಹೀರೋ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿರೋ ಕನಕರಾಜ್, ಕೋಲ್ಕತ್ತಾದಿಂದ ಬಂದ ಚಂದ್ರಗಾಗಿ ದೇವದಾಸ ಆಗಿಬಿಟ್ಟಿದ್ದಾರೆ. ಆಕೆಗಾಗಿ ರಕ್ತದ ಕೋಡಿ ಹರಿಸ್ತಿರೋ ಅವ್ರ ವೈಲೆಂಟ್ ಲುಕ್.
ಇದು ಇತ್ತೀಚೆಗೆ ರಿಲೀಸ್ ಆಗಿರೋ ತಮಿಳಿನ ಪ್ರಾಮಿಸಿಂಗ್ ಮೂವಿ ಡಿಸಿ ಟ್ರೈಲರ್ ಝಲಕ್. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಅರುಣ್ ಮಾಥೇಶ್ವರನ್ ನಿರ್ದೇಶನದಲ್ಲಿ ತಯಾರಾಗಿರೋ ಈ ಚಿತ್ರ, ನಮ್ಮ ಸ್ಯಾಂಡಲ್‌ವುಡ್‌ನ ಜೆಸಿ ಸಿನಿಮಾಗಿಂತ ರಾ & ರಗಡ್ ಆಗಿದೆ. ರಕ್ತಸಿಕ್ತ ಅಧ್ಯಾಯ ಅನ್ನೋದ್ರ ಹಿಂಟ್ ನೀಡಿದೆ. ಕಂಟೆಂಟ್ ಬೇಸ್ಡ್ ಇಂಟೆನ್ಸ್ ಲವ್ ಸ್ಟೋರಿ ಕಮ್ ಕ್ರೈಂ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.
ಹೀರೋ ಆಗೇಬಿಟ್ರು ಕನಕರಾಜ್..ರಕ್ತಸಿಕ್ತ ‘DC’ ಟ್ರೈಲರ್
ಕೋಲ್ಕತ್ತಾ ಚಂದ್ರಗಾಗಿ ದೇವದಾಸನಾದ ಸ್ಟಾರ್ ಡೈರೆಕ್ಟರ್..!
ದೇವದಾಸನ ಕ್ಲಾಸಿಕ್ ಲವ್ ಸ್ಟೋರಿಗೆ ವಯಲೆಂಟ್ ಟ್ವಿಸ್ಟ್
ಸೆನ್ಸೇಷನಲ್ ಡೈರೆಕ್ಟರ್ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್
ಚಂದ್ರ ಪಾತ್ರದಲ್ಲಿ ವಾಮಿಕಾ ಗಬ್ಬಿ ನಟಿಸಿದ್ದು, ಲೋಕೇಶ್ ಕನಕರಾಜ್‌ರಲ್ಲಿ ಒಬ್ಬ ಅದ್ಭುತ ಕಲಾವಿದ ಕೂಡ ಅಡಗಿದ್ದಾನೆ ಅನ್ನೋದು ಈ ಚಿತ್ರದಿಂದ ಮನದಟ್ಟಾಗಿದೆ. ದೇವದಾಸನ ಕ್ಲಾಸಿಕ್ ಲವ್ ಸ್ಟೋರಿ ಹೇಗೆ ಕ್ರೌರ್ಯಕ್ಕೆ ತಿರುಗುತ್ತೆ ಅನ್ನೋದನ್ನ ತುಂಬಾ ಸೂಕ್ಷ್ಮವಾಗಿ ತೋರಿಸುವ ಕಾರ್ಯ ಮಾಡಿರೋ ಡೈರೆಕ್ಟರ್, ನೈಜ ಘಟನೆ ಆಧಾರಿತ ವಿಷಯಗಳನ್ನೇ ಇಟ್ಕೊಂಡು ಸಿನಿಮಾ ಮಾಡಿರೋದು ಮತ್ತೊಂದು ಹೈಲೈಟ್.
