ತ್ರಿಶಾ ಟಚ್..ವಿಜಯ್‌ಗೆ CM ಲಕ್..ಸೂರ್ಯಗೆ ಹಿಟ್

ಬಾಕ್ಸಾಫೀಸ್‌‌ನಲ್ಲಿ ಕರುಪ್ಪು ಸುನಾಮಿ..ಎಷ್ಟು ಕೋಟಿ ಲೂಟಿ?

BeFunky collage (5)

ಸಿನಿಮಾ ಬಿಟ್ಟು ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟು, ತಮಿಳುನಾಡಿನ ರಿಯಲ್ ಲೈಫ್ ‘CM’ ಆಗಿರೋ ಜೋಸೆಫ್ ವಿಜಯ್ ಚಿತ್ರಗಳಿಗೂ ಈ ನಟಿನೇ ಬಿಗ್ಗೆಸ್ಟ್ ಲಕ್ಕಿ ಚಾರ್ಮ್. ಅಷ್ಟೇ ಯಾಕೆ, ಇತ್ತ ಬಾಕ್ಸ್ ಆಫೀಸ್‌ನಲ್ಲಿ ಸಾಲಿಡ್ ಹಿಟ್ ಇಲ್ಲದೆ ಕಾಯುತ್ತಿದ್ದ ಸಿಂಗಂ ಸೂರ್ಯ ಕರುಪ್ಪು ಸಿನಿಮಾಗೂ ತ್ರಿಶಾ ಲಕ್ ವರ್ಕ್ ಆಗಿದೆ. ಹಾಗಾದ್ರೆ ತ್ರಿಶಾ ಲಕ್ ಫ್ಯಾಕ್ಟರ್ ಎಂಥದ್ದು..?

ಸದ್ಯ ಕಾಲಿವುಡ್‌ನ ಅಲ್ಟಿಮೇಟ್ ಗೋಲ್ಡನ್ ಲೆಗ್ ಅಂದ್ರೆ ಅದು ಕ್ವೀನ್ ತ್ರಿಶಾ ಕೃಷ್ಣನ್. ದಳಪತಿ ವಿಜಯ್ ಸಿನಿಮಾಗಳಿಗೆ ತ್ರಿಶಾ ಲಕ್ಕಿ ಚಾರ್ಮ್ ಆಗಿದ್ದ ಕಾಲವಿತ್ತು. ಈಗ ತಮಿಳುನಾಡಿನ ರಿಯಲ್ ಲೈಫ್ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವ್ರ ಹಿಸ್ಟಾರಿಕಲ್ ಜರ್ನಿಯಲ್ಲೂ ತ್ರಿಶಾ ಪಾಲು ದೊಡ್ಡದಿದೆ. ಮ್ಯಾಜಿಕ್ ಅಂದ್ರೆ, ಬರೀ ವಿಜಯ್ ಮಾತ್ರವಲ್ಲ, ಸಾಲು ಸಾಲು ಸೋಲುಗಳ ಬಳಿಕ ಕಂಬ್ಯಾಕ್ ಮಾಡಿರೋ ಸಿಂಗಂ ಸೂರ್ಯ ಅವರಿಗೂ ತ್ರಿಶಾ ಲಕ್ಕಿ ಲೇಡಿಯಾಗಿದ್ದಾರೆ. ಆರ್ ಜೆ ಬಾಲಾಜಿ ನಿರ್ದೇಶನದ ಕರುಪ್ಪು ಸಿನಿಮಾದಲ್ಲಿ ಸೂರ್ಯ-ತ್ರಿಶಾ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿ ಕಿಚ್ಚು ಹಚ್ಚುತ್ತಿದ್ದು, ಸೂರ್ಯನ ಈ ಸಾರ್ವಕಾಲಿಕ ದಾಖಲೆಯ ಯಶಸ್ಸಿನ ಹಿಂದೆ ತ್ರಿಶಾ ಲಕ್ಕಿ ಮ್ಯಾಜಿಕ್ ಸೀಕ್ರೆಟ್ ವರ್ಕೌಟ್ ಆಗಿದೆ.

ತ್ರಿಶಾ ಟಚ್..ವಿಜಯ್‌ಗೆ CM ಲಕ್..ಸೂರ್ಯಗೆ ಹಿಟ್

ಕಂಗುವ ಬಳಿಕ ಕುಸಿದ ಸೂರ್ಯಗೆ ಕರುಪ್ಪು ರೀ-ಬರ್ತ್..!

ಸಿಂಗಂ ಸೀರೀಸ್ ಚಿತ್ರಗಳ ಬಳಿಕ ಸೂರ್ಯಗೆ ಸೂರರೈ ಪೋಟ್ರು ಹಿಟ್ ಆಗಿತ್ತು. ಆದ್ರೆ ಆ ಸಿನಿಮಾ ಡೈರೆಕ್ಟ್ ಓಟಿಟಿಗೆ ಲಗ್ಗೆ ಇಟ್ಟಿತ್ತು. ಕಂಗುವ, ರೆಟ್ರೋ ಚಿತ್ರಗಳ ಸಾಧಾರಣ ಪ್ರದರ್ಶನದ ನಂತರ ಬಂದ ಕರುಪ್ಪು ಹಾದಿ ಅಷ್ಟು ಸುಲಭ ಇರಲಿಲ್ಲ. ರಿಲೀಸ್ ದಿನವೇ ಸಾಲಗಾರರ ಕಾಟ, ಫೈನಾನ್ಶಿಯರ್ಸ್ ಕಿರಿಕಿರಿ ನಡೆದು ಶೋಗಳೇ ಕ್ಯಾನ್ಸಲ್ ಆಗಿತ್ತು. ಆದ್ರೆ ತೆರೆಯ ಮೇಲೆ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ತಾನೊಬ್ಬ ಹೀರೋ ಎಂದು ಸೂರ್ಯ ಸಾಬೀತುಪಡಿಸಿದರು. ಖುದ್ದಾಗಿ ತಾವೇ ಮಧ್ಯಸ್ಥಿಕೆ ವಹಿಸಿ ಹಣಕಾಸಿನ ವಿವಾದ ಬಗೆಹರಿಸಿ, ಸಿನಿಮಾ ರಿಲೀಸ್ ಮಾಡಿಸಿದ್ರು. 1.5 ಮಿಲಿಯನ್ ಟಿಕೆಟ್ಸ್ ಸೋಲ್ಡ್ ಔಟ್ ಆಗಿದ್ದು, ವೀಕೆಂಡ್ ವೇಳೆಗೆ ಬಾಕ್ಸ್ ಆಫೀಸ್‌ನಲ್ಲಿ 147 ಕೋಟಿ ಕಲೆಕ್ಷನ್ ಮಾಡಿ ಸುನಾಮಿ ಎಬ್ಬಿಸಿದೆ ಕರುಪ್ಪು.

ಬಾಕ್ಸಾಫೀಸ್‌‌ನಲ್ಲಿ ಕರುಪ್ಪು ಸುನಾಮಿ..ಎಷ್ಟು ಕೋಟಿ ಲೂಟಿ?

ಚಿತ್ರಪ್ರೇಮಿಗಳ ಮೈ ಮೇಲೆ ಕರುಪ್ಪಸ್ವಾಮಿ..ರುದ್ರತಾಂಡವ..!!

ಇನ್ನು ಚಿತ್ರಮಂದಿರಗಳ ಒಳಗಿನ ಪರಿಸ್ಥಿತಿಯಂತೂ ಈಗ ಅಕ್ಷರಶಃ ಹೈ-ವೋಲ್ಟೇಜ್ ಜಾತ್ರೆಯಂತಾಗಿದೆ. ಸಿನಿಮಾದಲ್ಲಿ ಕರುಪ್ಪಸ್ವಾಮಿಯ ದೈವಿಕ ಶಕ್ತಿಯ ದೃಶ್ಯಗಳು ಬರ್ತಿದ್ದಂತೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕರುಪ್ಪು ಥೀಮ್ ಸಾಂಗ್ ಮತ್ತು ಬಿಜಿಎಂ ಪ್ಲೇ ಆಗ್ತಿದ್ದಂತೆ ಜನ ಕುರ್ಚಿಗಳ ಮೇಲೇರಿ ವಿಚಿತ್ರವಾಗಿ ವರ್ತಿಸುತ್ತಾ, ರುದ್ರತಾಂಡವ ಆಡುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಂತೂ ಕರುಪ್ಪಸ್ವಾಮಿಯ ಆವೇಶ ಬಂದು ಮೈಮೇಲೆ ದೇವರು ಬಂದಂತೆ ಸ್ಕ್ರೀನ್ ಮುಂದೆ ನರ್ತಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.

ಸೂರ್ಯ ಮತ್ತು ತ್ರಿಶಾ ಕಾಂಬಿನೇಷನ್‌ನಲ್ಲಿ ಮೂಡಿಬಂದ ಮೌನಂ ಪೇಸಿಯದೇ ಚಿತ್ರದ ಕ್ಯೂಟ್ ಲವ್ ಸ್ಟೋರಿ, ಮಾಸ್ ಆ್ಯಕ್ಷನ್ ಧಮಾಕಾ, ಆರು ಸಿನಿಮಾ, ಅಷ್ಟೇ ಯಾಕೆ, ಮಣಿರತ್ನಂ ಅವರ ಎವರ್‌ಗ್ರೀನ್ ಕ್ಲಾಸಿಕ್ ಆಯುಧ ಎಳುತ್ತು ಚಿತ್ರದಲ್ಲೂ ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಕಿಚ್ಚು ಹಚ್ಚಿತ್ತು. ಈಗ ಬಂದಿರುವ ಕರುಪ್ಪು ಸಿನಿಮಾದಲ್ಲೂ ಈ ಜೋಡಿಯ ಮ್ಯಾಜಿಕ್ ಮುಂದುವರಿದಿದ್ದು, ಹಳೇ ಕಾಂಬೋ ಇಂದಿಗೂ ಬಾಕ್ಸ್ ಆಫೀಸ್‌ನಲ್ಲಿ ಬೆಂಕಿ ಹಚ್ಚಬಲ್ಲದು ಎಂಬುದನ್ನು ಸಾಬೀತುಪಡಿಸಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version