ಕೆಜಿಎಫ್ ಸಿನಿಮಾದ ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ದಿಲ್ಮಾರ್ ತೆರೆಗೆ ಬರಲು ಸಜ್ಜಾಗಿದೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ದಿಲ್ಮಾರ್ ಚಿತ್ರದ ನೀನಿಲ್ಲದೇ ಎಂಬ ಪ್ಯಾಥೋ ಗೀತೆಯನ್ನು ಅನಾವರಣ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.
ಶ್ರೀಮುರಳಿ ಮಾತನಾಡಿ, ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಒಳ್ಳೆದಾಗುವ ವಿಷಯಗಳು ಕೆಲವೊಮ್ಮೆ ತಡ ಆಗುತ್ತವೆ. ಕಷ್ಟ ಕೊಡುತ್ತವೆ. ಆ ಬಗ್ಗೆ ಯೋಚನೆ ಮಾಡಬೇಡಿ. ಚಂದ್ರಮೌಳಿ ಮೇಲೆ ಒಂದು ಕಣ್ಣಿತ್ತು. ನೀವೆಲ್ಲಾ ಟ್ಯಾಲೆಂಟ್ ಡೈರೆಕ್ಟರ್, ರೈಟರ್. ನೀವು ಜಾಸ್ತಿ ಸಿನಿಮಾ ಮಾಡಿದರೆ ನಮಗೆ ಒಳ್ಳೊಳ್ಳೆ ಸಿನಿಮಾ ಬರುತ್ತದೆ. ನೀವು ತಡ ಮಾಡಬಾರದು. ರಾಮ್ ಚಿತ್ರದಲ್ಲಿ ಪಾತ್ರವಾಗಿ ಕಾಣಿಸುತ್ತಾರೆ. ಹೀರೋ ಆಕ್ಟಿಂಗ್ ಚೆನ್ನಾಗಿದೆ. ಡೈರೆಕ್ಟರ್ ಗೆ ಒಳ್ಳೆ ಟೆಸ್ಟ್ ಇರುವುದು ಕಾಣಿಸುತ್ತದೆ. ಸಾಧನೆ ಸುಲಭ ಅಲ್ಲ. ಬರುತ್ತದೆ. ಸಿಗುತ್ತದೆ. ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ಯಾರಿಂದಲೂ ಅದನ್ನು ಕಿತ್ತುಕೊಳ್ಳಲು ಆಗಿಲ್ಲ. ಅದು ನಿಮಗೆ ಈ ಸಿನಿಮಾ ಮೂಲಕ ಆಗುತ್ತದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನಟ ರಾಮ್ ಮಾತನಾಡಿ, ಹೀರೋ ಆಗಬೇಕು ಎಂದು 19 ವರ್ಷದಿಂದ ಹೋರಾಟ ಮಾಡುತ್ತಿದ್ದೆ. ಆ ಅವಕಾಶ ದಿಲ್ಮಾರ್ ಮೂಲಕ ನೆರವೇರಿದೆ. ಒಂದಷ್ಟು ವರ್ಷ ಡೈರೆಕ್ಷನ್ ಟೀಂ ನಲ್ಲಿ ಕೆಲಸ ಮಾಡಿದೆ. ನಾನು ಇಲ್ಲಿ ಹೀರೋ ಆಗಿ ನಿಂತಿದ್ದೇನೆ ಎಂದರೆ ಕಾರಣ ಚಂದ್ರಮೌಳಿ ಅವರು. ಪ್ರತಿ ವಿಷಯದಲ್ಲಿ ನನ್ನನ್ನು ತಿದ್ದಿದ್ದಾರೆ. ನಿರ್ಮಾಪಕರು ಹೊಸಬರು ಆದರೂ ಒಂದು ದಿನ ಶೂಟಿಂಗ್ ಸೆಟ್ ಗೆ ಬಂದಿಲ್ಲ. ನಿರ್ದೇಶಕರು ಹಾಗೂ ತಂಡದ ಮೇಲೆ ಅವರು ನಂಬಿಕೆ ಇಟ್ಟಿದ್ದಾರೆ. ಹೊಸಬರಿಗೆ ಶ್ರೀಮುರಳಿ ಸರ್ ಸಪೋರ್ಟ್ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ಇಡೀ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದರು.
ನಿರ್ದೇಶಕ ಚಂದ್ರಮೌಳಿ ಮಾತನಾಡಿ, ದಿಲ್ಮಾರ್ ಟೀಸರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ ಎಲ್ಲರೂ ರಿಲೀಸ್ ಯಾವಾಗ ಎಂದು ಕೇಳುತ್ತಿದ್ದರು . ಆದರೆ ಕಾರಣದಿಂದ ಸ್ವಲ್ಪ ತಡವಾಗಿದೆ. ಇನ್ಮೇಲೆ ಯಾವುದೇ ಸಮಸ್ಯೆ ಇಲ್ಲ. ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಶುರು ಮಾಡಿದ್ದೇವೆ. ಒಂದೇ ಒಂದು ಕಾಲ್ ಗೆ ಶ್ರೀಮುರಳಿ ಸರ್ ಬಂದು ಹಾಡನ್ನು ಬಿಡುಗಡೆ ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರದಲ್ಲಿ ಆಕ್ಷನ್ ಜೊತೆಗೆ ಎಮೋಷನ್, ಲವ್ ಇದೆ. ರಾಮ್ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.
ಹೇಗಿದೆ ಹಾಡು?
ನೀನಿಲ್ಲದೇ ಎಂಬ ಪ್ಯಾಥೋ ಗೀತೆಗೆ ಕೇಶವ್ ವಿಜಿ ಸಾಹಿತ್ಯ ಬರೆದಿದ್ದು, ಶರತ್ ಸಂತೋಷ್ ಧ್ವನಿಯಾಗಿದ್ದಾರೆ. ರದನ್ ಹಾಡಿಗೆ ಮಸ್ತ್ ಟ್ಯೂನ್ ಹಾಕಿದ್ದಾರೆ. ಲವ್ ನಲ್ಲಿ ಫೆಲ್ಯೂರ್ ಆದ ಪ್ರೇಮಿಗಳಿಗೆ ಹೇಳಿ ಮಾಡಿಸಿದ ರೀತಿ ಹಾಡಿದೆ.
ದಿಲ್ಮಾರ್ ಚಿತ್ರವನ್ನು ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ನಿರ್ಮಿಸಲಾಗುತ್ತಿದೆ. ನವನಾಯಕ ರಾಮ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ದಿಲ್ಮಾರ್ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು , ತೆಲುಗಿನ ನಟಿ ಡಿಂಪಲ್ ಹಯಾತಿ ಹಾಗೂ ಆದಿತಿ ಪ್ರಭುದೇವ ನಟಿಸಿದ್ದಾರೆ. ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಅಶೋಕ್ ಅವರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ.
ಇದೊಂದು ಲವ್ ಸ್ಟೋರಿಯಾದರೂ ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ. ಈ ಚಿತ್ರಕ್ಕೆ ಅರ್ಜುನ್ ರೆಡ್ಡಿ ಸಿನಿಮಾದ ಸಂಗೀತ ನಿರ್ದೇಶಕ ರದನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ತನ್ವಿಕ್ ಅವರ ಛಾಯಾಗ್ರಹಣ, ಶಶಾಂಕ್ ಮುರುಳಿಧರನ್ ಸಂಕಲನ ಚಿತ್ರಕ್ಕಿದೆ. ಚಿತ್ರವನ್ನು ನಾಗರಾಜ್ ಭದ್ರಾವತಿ ಹಾಗೂ ಮಹೇಶ್ ಕೆ ನಿರ್ಮಿಸುತ್ತಿದ್ದಾರೆ.