ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ

ಭಗವದ್ಗೀತೆ ತಿರುಚಬೇಡಿ.. ಧುರಂಧರ್ ಬಗ್ಗೆ ದುರ್ಗುಟ್ಟಿದ ರಮ್ಯಾ..!

Untitled design 2026 03 22T181358.006

ಧುರಂಧರ್-2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಬಾಕ್ಸ್ ಆಫೀಸ್ ಮಾತ್ರವಲ್ಲ… ವಿವಾದದ ಕಿಡಿಯೂ ಹೊತ್ತಿಕೊಂಡಿದೆ. ‘ಧುರಂಧರ್-2’ ಸಿನಿಮಾ ಈಗ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಸ್ಟಾರ್‌ಗಳು ಮೆಚ್ಚುಗೆ ವ್ಯಕ್ತಪಡಿಸ್ತಿದ್ದರೆ… ಮತ್ತೊಂದೆಡೆ ನಟಿ ರಮ್ಯಾ ನೇರವಾಗಿ ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ. ಹೀಗಾಗಿ ಈ ಸಿನಿಮಾ ಸುತ್ತ ಇದೀಗ ಪರ-ವಿರೋಧದ ಫುಲ್ ಫೈಟ್ ಶುರುವಾಗಿದೆ. ಅಷ್ಟಕ್ಕೂ ರಮ್ಯಾ ಸಿನಿಮಾನ ಭಗವತ್ ಗೀತೆಗೆ ತಿರುಚಬೇಡಿ ಅಂದಿದ್ಯಾಕೆ..? ಹೇಳ್ತಿವಿ ಈ ಸ್ಟೋರಿ ನೋಡಿ.

‘ಧುರಂಧರ್-2’ ಸಿನಿಮಾ ರಿಲೀಸ್ ಆದ ಕ್ಷಣದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮಳೆ ಸುರಿಸುತ್ತಿದೆ. ಓಪನಿಂಗ್ ಡೇಯಲ್ಲೇ ಭರ್ಜರಿ ಕಲೆಕ್ಷನ್ ಮಾಡಿರುವ ಈ ಚಿತ್ರ, ಹಲವು ಸೆಂಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್ ಹಾಕಿಸಿಕೊಂಡು ಸದ್ದು ಮಾಡಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಕೋಟಿ ಕೋಟಿ ಗಳಿಕೆ ಮಾಡಿ ಟ್ರೇಡ್ ಸರ್ಕಲ್‌ಗಳಲ್ಲಿ ಹಾಟ್ ಟಾಪಿಕ್ ಆಗಿರುವ ‘ಧುರಂಧರ್-2’, ಮಲ್ಟಿಪ್ಲೆಕ್ಸ್‌ನಿಂದ ಸಿಂಗಲ್ ಸ್ಕ್ರೀನ್‌ವರೆಗೂ ಭರ್ಜರಿ ರನ್ ಮುಂದುವರಿಸಿದೆ. ಹಾಗೆ ವಿವಾದಗಳಿಗೂ ಆಹಾರವಾಗಿದೆ. ಹೌದು ‘ಧುರಂಧರ್’ ಸಿನಿಮಾ ಬಗ್ಗೆ ನಟಿ ರಮ್ಯಾ ಮಾಡಿರೋ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದಂತಾಗಿದೆ. ಈ ಸಿನಿಮಾ ನೋಡಿದ್ರೆ ಹಣ ವ್ಯರ್ಥ… ನಿದ್ದೆ ಬರಿಸುವಂತಿದೆ ಅಂತ ನೇರವಾಗಿ ಟೀಕೆ ಮಾಡಿದ ರಮ್ಯಾ, ಕೆಲ ಸನ್ನಿವೇಶಗಳು ತಮಾಷೆ ಎನಿಸುತ್ತವೆ ಅಂತ ಹೇಳಿ ಚಿತ್ರ ತಂಡಕ್ಕೆ ಶಾಕ್ ಕೊಟ್ಟಿದ್ದಾರೆ. ಇದು ಸಾಕಾಗಿಲ್ಲ ಅನ್ನೋ ಹಾಗೆ ‘ಧುರಂಧರ್-2’ ಬಗ್ಗೆ ಇನ್ನಷ್ಟು ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

“ಚಿತ್ರದಲ್ಲಿ ಹಿಂಸಾಚಾರ ಮಿತಿ ಮೀರಿ ಹೋಗಿದೆ ಸುತ್ತಮುತ್ತ ಇರುವ ವಸ್ತುಗಳನ್ನೇ ಆಯುಧಗಳಾಗಿ ಬಳಸಲಾಗಿದೆ. ಇದು ಥಿಯೇಟರ್‌ನಲ್ಲಿ ನೋಡೋ ಸಿನಿಮಾ ಅಲ್ಲ ನೋಡ್ಬೇಕು ಅಂದ್ರೆ OTTಯಲ್ಲಿ ನೋಡಿ” ಅಂತ ರಮ್ಯಾ ಹೇಳಿಕೆ ಕೊಟ್ಟಿದ್ದಾರೆ. ಇವರ ಪೋಸ್ಟ್ ಫ್ಯಾನ್ಸ್‌ಗೂ, ಚಿತ್ರತಂಡಕ್ಕೂ ಅಚ್ಚರಿ ತಂದಿದ್ದು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕೆಲವರು ರಮ್ಯಾ ಪರ ನಿಂತರೆ ಇನ್ನೂ ಕೆಲವರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದ್ರ ಮಧ್ಯೆ ಮತ್ತೊಂದು ಟ್ವೀಟ್ ಮೂಲಕ ರಮ್ಯಾ ಹೊಸ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧುರಂಧರ್- 2 ಚಿತ್ರದಲ್ಲಿ ಭಗವದ್ಗೀತೆಯನ್ನು ಬಳಸಿಕೊಂಡಿರುವ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ  “ತತ್ತ್ವಶಾಸ್ತ್ರವನ್ನು ತಪ್ಪಾಗಿ ತೋರಿಸಿ ದ್ವೇಷಕ್ಕೆ ಕಾರಣ ಮಾಡಬೇಡಿ” ಧರ್ಮದ ಅರ್ಥ ಯುದ್ಧ ಅಲ್ಲ… ಅದು ಒಳಗಿನ ಹೋರಾಟ ಅಂತ ಗಂಭೀರವಾಗಿ ಸಂದೇಶ ಹೇಳಿದ್ದಾರೆ. ಇನ್ನೊಂದು ಕಡೆ ನಟ ರಣ್‌ವೀರ್ ಸಿಂಗ್ ಬಗ್ಗೆ ಪೋಸ್ಟ್ ಮಾಡಿರೋ ರಮ್ಯಾ ‘ಧುರಂಧರ್-1’ನಲ್ಲಿ ಅವರ ಅಭಿನಯವನ್ನು ಹೊಗಳಿದರೂ, ಸೀಕ್ವೆಲ್‌ನಲ್ಲಿ ಕೋಪ-ಹಿಂಸೆ ಮಾತ್ರ ಹೆಚ್ಚಾಗಿದೆ. ನಮ್ಮ ಅಭಿಪ್ರಾಯಗಳು ಬೇರೆಬೇರೆ ಆಗಬಹುದು, ಅದರಲ್ಲಿ ತಪ್ಪೇನಿಲ್ಲ . ಮೊದಲೇ ಹೇಳಿದಂತೆ ರಣ್‌ವೀರ್ ಇದಕ್ಕಿಂತ ಚೆನ್ನಾಗಿ ನಟಿಸಬಲ್ಲರು. ಅವರ ಮುಂದಿನ ಚಿತ್ರಕ್ಕಾಗಿ ಕಾಯ್ತಿದ್ದೀನಿ ಎಂದು ಪೋಸ್ಟ್ ಮಾಡಿದ್ದಾರೆ.

ಇಷ್ಟು ದಿನ ಯಾವುದೇ ಸಿನಿಮಾ ಬಗ್ಗೆ ಮಾತನಾಡದ ರಮ್ಯಾ ಈಗ ಯಾಕೆ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದೇ ಸಮಯದಲ್ಲಿ ರಾಮ್‌ಚರಣ್, ಜ್ಯೂ. ಎನ್‌ಟಿಆರ್, ಅಲ್ಲು ಅರ್ಜುನ್, ರಾಜಮೌಳಿ, ರಿಷಬ್ ಶೆಟ್ಟಿ ಸೇರಿದಂತೆ ಹಲವು ಸ್ಟಾರ್‌ಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ವಿಭಿನ್ನ ಅಭಿಪ್ರಾಯಗಳು ಇದೀಗ ಸಿನಿ ವಲಯವನ್ನು ಎರಡು ಭಾಗಗಳಾಗಿ ವಿಭಜಿಸಿದೆ.

ಒಟ್ಟಿನಲ್ಲಿ ‘ಧುರಂಧರ್-2’ ಸಿನಿಮಾ ಇದೀಗ ಕಲೆಕ್ಷನ್‌ಗಿಂತ ಹೆಚ್ಚು ಕಾಂಟ್ರವರ್ಸಿಯಿಂದಲೇ ಸದ್ದು ಮಾಡುತ್ತಿದೆ. ರಮ್ಯಾ ಟ್ವೀಟ್‌ಗಳ ಹಿಂದೆ ಅಸಲಿ ಉದ್ದೇಶ ಏನು ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಇದು ಕೇವಲ ಅಭಿಪ್ರಾಯನಾ ಅಥವಾ ದೊಡ್ಡ ಚರ್ಚೆಗೆ ನಾಂದಿ ಹಾಕಿದ ಸ್ಫೋಟನಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version