ಲೋಕಲ್ ಹುಡುಗರಿಗೆ ಶಾಕ್ ಕೊಟ್ಟು, ಗಾರ್ಡನ್ ಸಿಟಿಯ ಹಳೇ ಗತ್ತನ್ನ ನೆನಪಿಸೋಕೆ ಬರ್ತಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್. ಹೌದು, ಸದಾ ಲವರ್ ಬಾಯ್ ಆಗಿ ಕಣ್ಣು ಹೊಡೆಯುತ್ತಿದ್ದ ನೆನಪಿರಲಿ ಪ್ರೇಮ್, ಈಗ ಕೈಯಲ್ಲಿ ಕತ್ತಿ ಹಿಡಿದು ನಾಡಪ್ರಭು ಕೆಂಪೇಗೌಡರಾಗಿ ಅಬ್ಬರಿಸಿದ್ದಾರೆ.
ಲವರ್ ಬಾಯ್ ಇಮೇಜ್‌ಗೆ ಬ್ರೇಕ್, ಗಂಡುಗಲಿಯಾದ ಪ್ರೇಮ್..!
ಬೆಂಗಳೂರು ಇತಿಹಾಸ ಹೇಳೋ ‘ಕೆಂಪಾಂಬುಧಿ’ ಟೀಸರ್ ರಿಲೀಸ್..!
‘ಕೆಂಪಾಂಬುಧಿ’ ಟೀಸರ್‌ನಲ್ಲಿ ರಾಜಗಾಂಭೀರ್ಯ ಮೆರೆದ ಪ್ರೇಮ್..!
ಲಾಂಗ್ ಹೇರ್.. ಗತ್ತಿನ ಮೀಸೆ.. ಪ್ರೇಮ್ ಹೊಸ ಅವತಾರ..!
ಇಷ್ಟು ವರ್ಷ ರೋಮ್ಯಾಂಟಿಕ್ ಹಾಡುಗಳಿಗೆ ಸ್ಟೆಪ್ ಹಾಕ್ತಿದ್ದ ಲವ್ಲಿ ಸ್ಟಾರ್ ಪ್ರೇಮ್ ಅವರ ಕೆರಿಯರ್‌ನಲ್ಲೇ ಇಂತಹದೊಂದು ಸಾಹಸಕ್ಕೆ ಕೈ ಹಾಕಿರ್ಲಿಲ್ಲ. ಸದಾ ಕ್ಯೂಟ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ಪ್ರೇಮ್, ಇಲ್ಲಿ ಕಂಪ್ಲೀಟ್ ಆಗಿ ಟ್ರಾನ್ಸ್‌ಫಾರ್ಮ್ ಆಗಿದ್ದಾರೆ. ರಾಜ ಗಾಂಭೀರ್ಯ, ಮುಖದಲ್ಲಿ ರೌದ್ರಾವತಾರ, ಹೆಗಲ ಮೇಲೆ ನಾಡಪ್ರಭುವಿನ ಜವಾಬ್ದಾರಿಯನ್ನ ಹೊತ್ತ ಗೆಟಪ್‌ನಲ್ಲಿ ಪ್ರೇಮ್ ಅವರನ್ನ ನೋಡೋದೆ ಒಂದು ಹಬ್ಬ. ಅವರ ಈ ಮಾಸ್ ಮತ್ತು ಕ್ಲಾಸ್ ಕಾಂಬಿನೇಷನ್‌ನ ಐತಿಹಾಸಿಕ ಅವತಾರ ನೋಡಿ ಸ್ಯಾಂಡಲ್‌ವುಡ್ ಫ್ಯಾನ್ಸ್ ಮದ್ವೆ ಗಂಡಿನ ತರ ಇದ್ದ ಪ್ರೇಮ್ ಹೀಗೆ ಗರ್ಜಿಸ್ತಿದ್ದಾರಲ್ಲ ಅಂತ ಫುಲ್ ಫಿದಾ ಆಗಿದ್ದಾರೆ.
ಯಾವಾಗಲೂ ಕ್ಲೀನ್ ಶೇವ್ ಲುಕ್‌ನಲ್ಲಿ, ಚಾಕೊಲೇಟ್ ಬಾಯ್ ತರ ಕಾಣಿಸ್ತಿದ್ದ ಪ್ರೇಮ್ ಈ ಸಿನಿಮಾಗೆ ಮಾಡಿರೋ ಬಾಡಿ ಮತ್ತು ಲುಕ್ ಟ್ರಾನ್ಸ್‌ಫಾರ್ಮೇಷನ್ ಮಾತ್ರ ನೆಕ್ಸ್ಟ್ ಲೆವೆಲ್. ನಾಡಪ್ರಭುಗಳ ಪಾತ್ರಕ್ಕೆ ಜೀವ ತುಂಬಲು ಪ್ರೇಮ್ ತಮ್ಮ ಎಂದಿನ ಸ್ಟೈಲ್ ಬಿಟ್ಟು, ರಗಡ್ ಆಗಿ ಲಾಂಗ್ ಹೇರ್ ಬಿಟ್ಟು, ಗತ್ತಿನ ಮೀಸೆ ತಿರುವಿ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಗಾಂಭೀರ್ಯದ ಗೆಟಪ್‌ಗಾಗಿ ಅವರು ತಮ್ಮ ದೇಹದ ತೂಕ ಮತ್ತು ಫಿಟ್ನೆಸ್ ಅನ್ನು ಕಂಪ್ಲೀಟ್ ಆಗಿ ಬದಲಾಯಿಸಿಕೊಂಡಿದ್ದು, ಟೀಸರ್‌ನಲ್ಲಿ ರಾಜಮನೆತನದ ಆ ಗತ್ತು ನೋಡುಗರ ಕಣ್ಣು ಕುಕ್ಕುವಂತಿದೆ.
ಹೊಂಬಾಳೆ ಮ್ಯೂಸಿಕ್ ಸಹಯೋಗದಲ್ಲಿ ಬಂದಿರೋ ಈ ಟೀಸರ್ ಕೇವಲ ಆಕ್ಷನ್ ಮಾತ್ರವಲ್ಲ, ನಮ್ಮ ಹೆಮ್ಮೆಯ ಬೆಂಗಳೂರು ಹೇಗೆ ಹುಟ್ಟಿತು ಅನ್ನೋ ಭವ್ಯ ಇತಿಹಾಸವನ್ನ ಕಣ್ಣಿಗೆ ಕಟ್ಟುವಂತೆ ತೋರಿಸ್ತಿದೆ. ನಿರ್ದೇಶಕ ರಮೇಶ್ ಬೇಗಾರ್ ಜಾಣಗೆರೆ ವೆಂಕಟರಾಮಯ್ಯನವರ ಪ್ರಸಿದ್ಧ ಕಾದಂಬರಿಯನ್ನ ತೆರೆಗೆ ತರ್ತಿದ್ದು, ಇದರಲ್ಲಿ ಯಾವುದೇ ಫೇಕ್ ಮಸಾಲೆ ಇಲ್ಲ. ಕಾಂಕ್ರೀಟ್ ಕಾಡಾಗಿರೋ ಇಂದಿನ ಸಿಟಿಗೂ, ಅಂದು ಕೆಂಪೇಗೌಡರು ಪರಿಸರ ಕಾಳಜಿಯಿಂದ ಕಟ್ಟಿದ ಹಸಿರು ಸಾಮ್ರಾಜ್ಯಕ್ಕೂ ಇರೋ ಕನೆಕ್ಷನ್ ಅನ್ನ ಟೀಸರ್‌ನಲ್ಲಿ ಸಖತ್ ಇಂಟರೆಸ್ಟಿಂಗ್ ಆಗಿ ಬಿಟ್ಟುಕೊಡಲಾಗಿದೆ. ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತ ಮತ್ತು ಗ್ರಾಂಡ್ ವಿಶುವಲ್ಸ್ ಟೀಸರ್‌ನ ತೂಕ ಹೆಚ್ಚಿಸಿದೆ.
ಈ ಚಿತ್ರಕ್ಕೆ ಕೇವಲ ಪ್ರೇಮ್ ಒಬ್ಬರೇ ಬಲವಲ್ಲ, ಮೇಘನಾ ಗಾಂವ್ಕರ್, ಸಂಯುಕ್ತಾ ಹೊರನಾಡು, ರಾಜೇಶ್ ನಟರಂಗ, ಮತ್ತು ಸುಧಾ ಬೆಳವಾಡಿ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಅರ್ಪಿಸುತ್ತಿರೋ ಈ ಸಿನಿಮಾಗೆ ಸ್ಯಾಂಡಲ್‌ವುಡ್ ಕಿಂಗ್ ಮೇಕರ್ಸ್ ಹೊಂಬಾಳೆ ಮ್ಯೂಸಿಕ್ ಕೈ ಜೋಡಿಸಿರೋದ್ರಿಂದ ಚಿತ್ರದ ಹೈಪ್ ನೆಕ್ಸ್ಟ್ ಲೆವೆಲ್‌ಗೆ ಹೋಗಿದೆ. ಒಟ್ಟಿನಲ್ಲಿ, ಪ್ರೇಮ್ ಅವರ ಈ ಬಿಗ್ ಚೇಂಜ್ ಓವರ್ ಮತ್ತು ಬೆಂಗಳೂರಿನ ಮಣ್ಣಿನ ಕತೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ಹವಾ ಸೃಷ್ಟಿಸೋ ಮುನ್ಸೂಚನೆ ಸಿಗುತ್ತಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
