ಕೆಡಿ ಸಿನಿಮಾದ ಬಳಿಕ ಧ್ರುವ ಸರ್ಜಾ ನೆಕ್ಸ್ಟ್ ವೆಂಚರ್ ಯಾವುದು..? ಯಾರ ಜೊತೆ ಅಂತ ತಲೆಕೆಡಿಸಿಕೊಂಡಿದ್ದವರಿಗೆ ಗ್ಯಾರಂಟಿ ಪಿಚ್ಚರ್ ಕೊಡ್ತಿದೆ ಎಕ್ಸ್‌ಕ್ಲೂಸಿವ್ ಖಬರ್. ಯೆಸ್.. ಸದ್ದಿಲ್ಲದೆ ತೆರೆಮರೆಯಲ್ಲಿ ಸಿನಿಮಾಗೆ ಡೈರೆಕ್ಟರ್ ಕೂಡ ಫಿಕ್ಸ್ ಆಗಿದ್ದು, ಈ ಕಾಂಬೋ ದಿ ಬೆಸ್ಟ್ ಕಾಂಬಿನೇಷನ್ ಆಗಿ ಬೆಳ್ಳಿತೆರೆಮೇಲೆ ಮೋಡಿ ಮಾಡಲಿದೆ.
- ನರ್ತನ್ ಮಾಸ್ ಮೇಕಿಂಗ್ ವರ್ಲ್ಡ್‌ಗೆ ಧ್ರುವ ಕಿಂಗ್..!!
- ಮಫ್ತಿ, ಭೈರತಿ ರಣಗಲ್ ಸಾರಥಿಗೆ ಆ್ಯಕ್ಷನ್ ಪ್ರಿನ್ಸ್ ಡೇಟ್ಸ್
- ಫಸ್ಟ್ ಧ್ರುವ ಸರ್ಜಾ.. ಚರಣ್-ಸೂರ್ಯ ಪ್ರಾಜೆಕ್ಟ್ಸ್ ನೆಕ್ಸ್ಟ್
- ಮೇಕಿಂಗ್ ಮಾಸ್ಟರ್ ನರ್ತನ್-ಧ್ರುವ ಸದ್ಯದಲ್ಲೇ ಅನೌನ್ಸ್
ಮಾರ್ಟಿನ್ ರಿಲೀಸ್‌ಗೂ ಮೊದಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಯಲ್ಲಿ ಕೆಡಿ ಸಿನಿಮಾ ಇತ್ತು. ಆದ್ರೀಗ ಮಾರ್ಟಿನ್ ತೆರೆಗಪ್ಪಳಿಸಿದ ಬಳಿಕ ಕೆಡಿ ಸಿನಿಮಾ ಒಂದೇ ಉಳಿದಿದೆ. ಜೋಗಿ ಪ್ರೇಮ್ ನಿರ್ದೇಶನ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗ್ತಿರೋ ಕೆಡಿ, ಸ್ಯಾಂಪಲ್ಸ್‌ನಿಂದಲೇ ಪ್ಯಾನ್ ಇಂಡಿಯಾ ಹವಾ ಸೃಷ್ಠಿಸಿದೆ.
ಯೆಸ್.. ಟೀಸರ್ ಹಾಗೂ ಸಾಂಗ್ಸ್ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತೆರೆ ಮೇಲೆ ಕಾಳಿದಾಸನ ಅಸಲಿ ಆಟ ನೋಡೋದೊಂದೇ ಬಾಕಿಯಿದೆ. ಫ್ಯಾನ್ಸ್ ಕೆಡಿ ಸಿನಿಮಾದ ರಿಲೀಸ್ ಡೇಟ್‌ಗಾಗಿ ಕಾಯ್ತಿದ್ದಾರೆ. ಅದರ ನಡುವೆ, ಕೆಡಿ ಶೂಟಿಂಗ್ ಮುಗಿದ್ರೂ ಧ್ರುವ ನ್ಯೂ ವೆಂಚರ್ ಅನೌನ್ಸ್ ಮಾಡದೇ ಇರೋದ್ಯಾಕೆ ಅಂತಿದ್ದಾರೆ. ಅದಕ್ಕೀಗ ಆನ್ಸರ್ ಕೊಡೋ ಸಮಯ ಬಂದಿದೆ. ಗ್ಯಾರಂಟಿ ಪಿಚ್ಚರ್ ಬಿಚ್ಚಿಡ್ತಿದೆ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ನೆಕ್ಸ್ಟ್ ಪ್ರಾಜೆಕ್ಟ್ ಡಿಟೇಲ್ಸ್.
ಸದ್ದಿಲ್ಲದೆ ತೆರೆಮರೆಯಲ್ಲಿ ಬಹದ್ದೂರ್ ಗಂಡು ನೆಕ್ಸ್ಟ್ ಮೂವಿ ಫೈನಲ್ ಆಗಿದೆ. ಹೌದು.. ಈ ಹಿಂದೆ ಮಫ್ತಿ ಸಿನಿಮಾ ಮಾಡಿ, ಜಬರ್ದಸ್ತ್ ಮೇಕಿಂಗ್‌ನಿಂದ ಸಂಚಲನ ಮೂಡಿಸಿದ್ದ ಮೇಕಿಂಗ್ ಮಾಸ್ಟರ್ ನರ್ತನ್‌ಗೆ ಧ್ರುವ ಡೇಟ್ಸ್ ಕೊಟ್ಟಿದ್ದಾರೆ. ಇತ್ತೀಚೆಗೆ ಶಿವಣ್ಣ ಜೊತೆ ಭೈರತಿ ರಣಗಲ್ ಕೂಡ ಮಾಡಿದ್ರು ನರ್ತನ್. ಭಿನ್ನ ಅಲೆಯ ಕಥೆ, ಸಿನಿಮಾ, ಮೇಕಿಂಗ್‌ನಿಂದ ಎಲ್ಲರ ಗಮನ ಸೆಳೆದಿರೋ ನರ್ತನ್, ಇದೀಗ ತಮ್ಮ ಮಾಸ್ ವರ್ಲ್ಡ್‌ಗೆ ಧ್ರುವ ಸರ್ಜಾಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ.
ಕೆಡಿ ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್‌ನಡಿಯೇ ಧ್ರುವ-ನರ್ತನ್ ಹೊಸ ಸಿನಿಮಾ ನಿರ್ಮಾಣ ಆಗಲಿದ್ದು, ಸದ್ಯದಲ್ಲೇ ಇದರ ಅಫಿಶಿಯಲ್ ಅನೌನ್ಸ್‌ಮೆಂಟ್ ಆಗಲಿದೆ. ಅಂದಹಾಗೆ ನರ್ತನ್ ನಟ ರಾಮ್ ಚರಣ್ ಹಾಗೂ ಸೂರ್ಯ ಜೊತೆ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದ್ರೀಗ ಸೂರ್ಯ ಹಾಗೂ ಚರಣ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿರೋದ್ರಿಂದ ನರ್ತನ್ ಧ್ರುವಗೆ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.
ಒಬ್ಬ ಮಾಸ್ ಹೀರೋ ಹಾಗೂ ಮಾಸ್ ಡೈರೆಕ್ಟರ್ ಕಾಂಬೋ ಅಂದಾಗ ಸಹಜವಾಗಿಯೇ ಪ್ರೇಕ್ಷಕರಿಗೆ ನಿರೀಕ್ಷೆ ದೊಡ್ಡ ಮಟ್ಟಕ್ಕೆ ಇರಲಿದೆ. ಸದ್ಯ ಧ್ರುವ-ನರ್ತನ್ ಸಿನಿಮಾ ಅತೀವ ನಿರೀಕ್ಷೆ ಮೂಡಿಸಿದ್ದು, ಈ ಸುದ್ದಿಯನ್ನ ಎಕ್ಸ್‌ಕ್ಲೂಸಿವ್ ಆಗಿ ಗ್ಯಾರಂಟಿ ನ್ಯೂಸ್ ರಿವೀಲ್ ಮಾಡಿರೋದು ಇಂಟರೆಸ್ಟಿಂಗ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್