ಕಾಮಿಡಿ ಕಿಲಾಡಿ ಮನು ಅತ್ಯಾಚಾರ ಕೇಸ್‌: ಪೊಲೀಸರ ನಿರ್ಲಕ್ಷ್ಯ, ಸಂತ್ರಸ್ಥೆ ಗರಂ!

Add a heading (19)

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪೊಲೀಸರ ನಿರ್ಲಕ್ಷ್ಯ ಮತ್ತು ತನಿಖೆಯಲ್ಲಿನ ದೋಷಗಳ ಬಗ್ಗೆ ಸತ್ಯವನ್ನು ಬಹಿರಂಗಪಡಿಸಲು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೇಲೆ ಯಾವುದೇ ಭರವಸೆ ಇಲ್ಲದಿರುವುದರಿಂದ, ಕೇಸ್ ತನಿಖೆಯನ್ನು ಬೇರೆ ಠಾಣೆಗೆ ವರ್ಗಾಯಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಮಡೆನೂರು ಮನು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ, ಪೊಲೀಸರು ದೂರನ್ನು ದುರ್ಬಲಗೊಳಿಸಿದ್ದಾರೆ, ಇದರಿಂದಾಗಿ ಆರೋಪಿಗೆ ಜಾಮೀನು ಸಿಗಲು ಕಾರಣವಾಯಿತು. “ಕೇಸ್ ಸ್ಕ್ವಾಷ್ ಆಗುತ್ತದೆ ಎಂದು ಅವರೇ ಹೇಳುತ್ತಾರೆ. ಪೊಲೀಸರು ನನ್ನ ದೂರನ್ನು ದುರ್ಬಲಗೊಳಿಸಿದ್ದಾರೆ, ಇದರಿಂದ ನನಗೆ ಅನ್ಯಾಯವಾಗಿದೆ. ನನಗೆ ನ್ಯಾಯ ಸಿಗಬೇಕು, ಶಿಕ್ಷೆಯಾಗಲೇ ಬೇಕು,” ಎಂದು ಸಂತ್ರಸ್ತೆ ತಮ್ಮ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ADVERTISEMENT
ADVERTISEMENT
ಸಂತ್ರಸ್ತೆಯ ಆರೋಪಗಳೇನು?

ಸಂತ್ರಸ್ತೆ 2022ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 2025ರ ಜನವರಿ 20ರಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ, ಪೊಲೀಸರು “ನಾಳೆ ಬನ್ನಿ” ಎಂದು ವಾಪಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಬ್‌ ಇನ್ಸ್‌ಪೆಕ್ಟರ್ ಮಹದೇವ್ ಎಂಬವರಿಗೆ ದೂರು ನೀಡಿದರೂ, ಅವರು ತಮಗೆ ಬೇಕಾದಂತೆ ದೂರನ್ನು ರಚಿಸಿ, ಕಾನೂನಿನ ಜ್ಞಾನವಿಲ್ಲದ ಸಂತ್ರಸ್ತೆಯಿಂದ ಖಾಲಿ ಕಾಗದದ ಮೇಲೆ ಸಹಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ದೂರಿನ ಕಾಪಿಯನ್ನು ದುರ್ಬಲಗೊಳಿಸಲಾಗಿದ್ದು, ಸಾಕ್ಷಿಗಳನ್ನು ಭಯಭೀತರನ್ನಾಗಿ ಮಾಡಲಾಗಿದೆ. “ನಾನು ಒಂದು ಟವಲ್‌ನಲ್ಲಿ ಸ್ಪರ್ಮ ಇದೆ ಎಂದು ತಂದುಕೊಟ್ಟೆ, ಆದರೆ ಅದನ್ನು ನನ್ನದೆಂದು ಬರೆದಿದ್ದಾರೆ. ಸಾಕ್ಷಿದಾರರನ್ನೂ ಪೊಲೀಸರು ಹೆದರಿಸಿದ್ದಾರೆ, ಆದ್ದರಿಂದ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ,” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದರ ಜೊತೆಗೆ, 164 ಹೇಳಿಕೆಯ ಮೇಲೆ ಪ್ರಕರಣ ನಿಲ್ಲುತ್ತದೆ ಎಂದು ದಾರಿತಪ್ಪಿಸಲಾಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಪೊಲೀಸರು ತನಿಖೆಯಲ್ಲಿ ಗಂಭೀರವಾಗಿರಲಿಲ್ಲ. “ಮಹಜರು ಮಾಡುವಾಗ ಮಾತ್ರ ಇನ್ಸ್‌ಪೆಕ್ಟರ್‌ ಭೇಟಿಯಾಗಿದ್ದರು. FIR ಕಾಪಿಯನ್ನು ನನಗೆ ನೀಡಲಿಲ್ಲ. ಪೊಲೀಸರು ನನ್ನನ್ನು ದಾರಿತಪ್ಪಿಸಿದ್ದಾರೆ,” ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಈ ಕಾರಣದಿಂದ ಆಕೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೇಲೆ ಯಾವುದೇ ವಿಶ್ವಾಸವಿಲ್ಲ. “ನನ್ನ ಪ್ರಕರಣವನ್ನು ಬೇರೆ ಠಾಣೆಗೆ ವರ್ಗಾಯಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು,” ಎಂದು ಸಂತ್ರಸ್ತೆ ಒತ್ತಾಯಿಸಿದ್ದಾರೆ.

Exit mobile version