ದಿಯಾ, ದಸರಾ ಫೇಮ್ ದೀಕ್ಷಿತ್ ಶೆಟ್ಟಿಗೆ ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್. ಯೆಸ್.. ಕುಬೇರ ಸಕ್ಸಸ್ ಬಳಿಕ ರಶ್ಮಿಕಾ ತನ್ನ ಬಾಯ್‌ಫ್ರೆಂಡ್ ಜೊತೆ ಮಸ್ತ್ ರೊಮ್ಯಾನ್ಸ್ ಮಾಡ್ತಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ ಈ ಜೋಡಿ. ಅರೇ.. ಹಾಗಾದ್ರೆ ವಿಜಯ್ ದೇವರಕೊಂಡ ಕಥೆ ಏನು ಅಂತೀರಾ..? ಇಲ್ಲಿದೆ ನೋಡಿ.
- ‘ಗರ್ಲ್ ಫ್ರೆಂಡ್’ ರಶ್ಮಿಕಾ ಜೊತೆ ದೀಕ್ಷಿತ್ ಶೆಟ್ಟಿ ರೊಮ್ಯಾನ್ಸ್..!
- ಹದಿಹರೆಯದ ಮನಸುಗಳ ಕಾಲೇಜ್ ಡೇಸ್ ಲವ್ ಸ್ಟೋರಿ
- ಹೇಶಮ್ ಅಬ್ದುಲ್ ವಹಾಬ್ ಸ್ವರದ ರೊಮ್ಯಾಂಟಿಕ್ ಗೀತೆ
- ಅಲ್ಲು ಅರ್ಜುನ್ ಬ್ಯಾನರ್‌ನಲ್ಲಿ ನ್ಯಾಷನಲ್ ಕ್ರಶ್ ಮಿಂಚು..!
ಭಾರತೀಯ ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿಯರಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಒಬ್ರು. ಸಾಲು ಸಾಲು ಸಕ್ಸಸ್‌ಫುಲ್ ಸಿನಿಮಾಗಳ ನಡುವೆ ಇತ್ತೀಚೆಗೆ ಕುಬೇರ ಅನ್ನೋ ಮತ್ತೊಂದು ಹಿಟ್ ನೀಡಿದ್ರು ರಶ್ಮಿಕಾ. ಇದೀಗ ಸ್ಯಾಂಡಲ್‌ವುಡ್‌ನ ಮೋಸ್ಟ್ ಟ್ಯಾಲೆಂಟೆಡ್ ಹಾಗೂ ತೆಲುಗು ಚಿತ್ರರಂಗದಲ್ಲೂ ಚಿರಪರಿಚಿತರಾಗಿರೋ ಕನ್ನಡಿಗ ದೀಕ್ಷಿತ್ ಶೆಟ್ಟಿಗೆ ಗರ್ಲ್ ಫ್ರೆಂಡ್ ಆಗಿದ್ದಾರೆ ರಶ್ಮಿಕಾ.
ಅಯ್ಯೋ.. ವಿಜಯ್ ದೇವರಕೊಂಡಗೂ ಕೈ ಕೊಟ್ರಾ ರಶ್ಮಿಕಾ ಅಂತ ಜಾಸ್ತಿ ಕನ್ಫ್ಯೂಸ್ ಆಗ್ಬೇಡಿ. ರಶ್ಮಿಕಾ ದೀಕ್ಷಿತ್‌ಗೆ ಗರ್ಲ್ ಫ್ರೆಂಡ್ ಆಗಿರೋದು ಆನ್‌ಸ್ಕ್ರೀನ್‌ನಲ್ಲಿ ಅಷ್ಟೇ. ಯೆಸ್.. ದಿ ಗರ್ಲ್ ಫ್ರೆಂಡ್ ಅನ್ನೋ ಸಿನಿಮಾ ಬರ್ತಿದ್ದು, ಟೀಸರ್‌ನಿಂದ ಚಿತ್ರದ ಒನ್ ಲೈನ್ ಸ್ಟೋರಿ ಬಿಟ್ಟುಕೊಟ್ಟಿತ್ತು ಚಿತ್ರತಂಡ. ಆ ಟೀಸರ್‌ಗೆ ರೌಡಿ ವಿಜಯ್ ದೇವರಕೊಂಡ ಅವರೇ ಹಿನ್ನೆಲೆ ಧ್ವನಿ ಕೂಡ ನೀಡಿದ್ರು.
ರಾಹುಲ್ ರವೀಂದ್ರನ್ ನಿರ್ದೇಶನ ಹಾಗೂ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ನಿರ್ಮಾಣದ ಈ ಸಿನಿಮಾ ಗೀತಾ ಆರ್ಟ್ಸ್ ಬ್ಯಾನರ್‌ನಡಿ ತಯಾರಾಗಿದೆ. ಹದಿಹರೆಯದ ಮನಸುಗಳ ಪ್ರೇಮ್ ಕಹಾನಿ ಇದಾಗಿದ್ದು, ಕಾಲೇಜ್ ಡೇಸ್‌ಗೆ ನಿಮ್ಮನ್ನ ಕರೆದೊಯ್ಯಲಿದೆ. ದೀಕ್ಷಿತ್ ಶೆಟ್ಟಿ ಭಿನ್ನ ಅಲೆಯ ಸಿನಿಮಾಗಳಿಂದ ಗುರ್ತಿಸಿಕೊಳ್ತಿದ್ದು, ಅವರ ಕರಿಯರ್‌ನಲ್ಲಿ ಗರ್ಲ್ ಫ್ರೆಂಡ್ ಸಿನಿಮಾ ಮತ್ತೊಂದು ಮೈಲಿಗಲ್ಲು ಸಿನಿಮಾ ಆಗಿ ಹೊರಹೊಮ್ಮಲಿದೆ.
ಸಿಂಗಲ್ ಟೀಸರ್‌ನಿಂದ ವ್ಹಾವ್ ಫೀಲ್ ತರಿಸಿದ್ದ ದಿ ಗರ್ಲ್ ಫ್ರೆಂಡ್ ಸಿನಿಮಾ, ಇದೀಗ ಹಾಡೊಂದರ ಮೂಲಕ ಯೂತ್ಸ್‌ಗೆ ಇನ್ವಿಟೇಷನ್ ನೀಡಿದೆ. ನದಿವೇ ಅನ್ನೋ ಹಾಡು ಕನ್ನಡದಲ್ಲೇ ಸ್ವರವೇ ಹಾಡಾಗಿ ಹೊರಹೊಮ್ಮಿದೆ. ಈ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದು, ಕಣ್ಮನ ತಣಿಸುತ್ತಿದೆ. ದೀಕ್ಷಿತ್ ಹಾಗೂ ರಶ್ಮಿಕಾ ರೊಮ್ಯಾಂಟಿಕ್ ದೃಶ್ಯಗಳು ಫ್ರೆಶ್ ಫೀಲ್ ಕೊಡ್ತಿದೆ. ಡಿಫರೆಂಟ್ ಆಗಿ ಈ ಹಾಡನ್ನ ಚಿತ್ರಿಸಿದ್ದು, ಆ ಕ್ರಿಯೇಟಿವಿಟಿ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣ್ತಿದೆ. ತೆಲುಗಿನ ಜೊತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಈ ಚಿತ್ರ ತೆರೆಗೆ ಬರೋಕೆ ಸಜ್ಜಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್