ಸರ್ಕಾರದ ದಸರಾ ವೇದಿಕೆಯಲ್ಲಿ ನಟ ಧನ್ವೀರ್ ವಿವಾದಾತ್ಮಕ ಹೇಳಿಕೆ

ಮೊನ್ನೆ ರಚ್ಚು.. ಇಂದು ದಚ್ಚು ಭಂಟ ಧನ್ವೀರ್.. ಇದೆಲ್ಲಾ ಬೇಕಾ?

Untitled design 2026 10 19T164103.752

ಜೈಲಲ್ಲಿರೋ ದಾಸ ದರ್ಶನ್ ಯಾವಾಗ ಹೊರಗೆ ಬರ್ತಾರೆ ಅನ್ನೋದಕ್ಕೆ ಯಾರ ಬಳಿಯೂ ಉತ್ತರ ಇಲ್ಲ. ಆದ್ರೆ ಅವ್ರನ್ನ ಆರಾಧಿಸುವವರ ಕಾನ್ಫಿಡೆನ್ಸ್ ಲೆವೆಲ್ ಮಾತ್ರ ಮೆಚ್ಚಲೇಬೇಕು. ಇತ್ತೀಚೆಗೆ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ರಚಿತಾ ರಾಮ್ ದಚ್ಚು ಬಗ್ಗೆ ಮಾತಾಡಿದ್ರು. ಈಗ ಚಾಮರಾಜನಗರ ದಸರಾ ಸ್ಟೇಜ್‌‌ನಲ್ಲಿ ಧನ್ವೀರ್ ಗೌಡ ಮಾತನಾಡಿದ್ದಾರೆ. ನಾಯಿ, ನರಿ ಅಂತೆಲ್ಲಾ ಆಕ್ರೋಶ ಹೊರಹಾಕಿರೋದು ಅಚ್ಚರಿ ಮೂಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜೈಲೂಟ ಸವಿಯುತ್ತಿರೋದು ಎಲ್ಲರಿಗೂ ಗೊತ್ತೇಯಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅದರಡಿಯಲ್ಲಿ ಆರೋಪಿಗಳಿಗೆ ಏನು ಶಿಕ್ಷೆ ಆಗಬೇಕೋ ಅದನ್ನ ಲಾ & ಆರ್ಡರ್ ನೋಡಿಕೊಳ್ಳುತ್ತೆ. ಆದ್ರೆ ಡಿಬಾಸ್ ದರ್ಶನ್ ಅವರ ಕೆಲವು ಫ್ಯಾನ್ಸ್ ಹೇಗೆ ಅವರಿಗೆ ಸಂಕಷ್ಟ ತಂದೊಡ್ಡಿದರೋ.. ಅದೇ ರೀತಿ ಅವರ ಆಪ್ತರು ಕೂಡ ಸಮಸ್ಯೆಗಳನ್ನ ದಚ್ಚು ಮೈಮೇಲೆ ಎಳೆದು ತರ್ತಿರೋದು ಅಚ್ಚರಿಯ ಸಂಗತಿ.

ಯೆಸ್.. ದಚ್ಚು ಭಂಟ ಅಂತಲೇ ಕರೆಯಲ್ಪಡುವ ನಟ ಧನ್ವೀರ್ ಗೌಡ ಅವರ ಈ ಮಾತುಗಳನ್ನ ಒಮ್ಮೆ ಆಲಿಸಿ. ‘ನೀವು ಎಷ್ಟೇ ಕೂಗಿರಿ.. ಏನೇ ಮಾಡ್ರಿ.. ಯಾವ ನಾಯಿ, ನರಿಗಳು ಏನೇ ಕುತಂತ್ರ ಮಾಡಿದ್ರೂ.. ಆಯಪ್ಪನನ್ನ ಯಾರು ಏನೂ ಮಾಡೋಕೆ ಆಗಲ್ಲ. ಈಚೆ ಬಂದೇ ಬರ್ತಾರೆ. ಸ್ವಲ್ಪ ತಾಳ್ಮೆಯಿಂದ ಇರಿ ಅಷ್ಟೇ’. ಹೀಗಂತ ಸ್ಯಾಂಡಲ್‌ವುಡ್ ಶೋಕ್ದಾರ್ ದಸರಾ ವೇದಿಕೆಯಲ್ಲಿ ಘಂಟಾಘೋಷವಾಗಿ ಹೇಳಿದ್ದಾರೆ.

ಅರೇ.. ಇದು ಸರ್ಕಾರದ ವೇದಿಕೆ. ಚಾಮರಾಜನಗರದಲ್ಲಿ ನಡೆದ ದಸರಾ ಕಾರ್ಯಕ್ರಮ. ಈ ವೇದಿಕೆಗೆ ಗೆಸ್ಟ್ ಆಗಿ ಹೋಗಿರೋ ಧನ್ವೀರ್.. ಹಬ್ಬದ ಬಗ್ಗೆ ಮಾತಾಡಬೇಕು. ಅದನ್ನ ಬಿಟ್ಟು ವ್ಯವಸ್ಥೆ ವಿರುದ್ಧ ನಾಯಿ, ನರಿ ಅಂತೆಲ್ಲಾ ವಿವಾದಾತ್ಮಕ ಹೇಳಿಕೆ ನೀಡೋದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ. ಇದೊಂಥರಾ ಸರ್ಕಾರಕ್ಕೆ ಕರೆದು ಕೆರದಲ್ಲಿ ಹೊಡೆಸಿಕೊಂಡಂತಾಗಿದೆ. ಅದಕ್ಕೆ ಅಲ್ಲಿರೋ ಆ್ಯಂಕರ್ ನಿರಂಜನ್ ದೇಶಪಾಂಡೆ ಬೇರೆ ಮತ್ತೊಂದಷ್ಟು ಬಕೆಟ್ ಹಿಡಿಯೋ ಮಾತುಗಳನ್ನ ಆಡಿದ್ದಾರೆ. ‘ಇದು ಬಹಳ ಬಲವಾದ ಸ್ಟೇಟ್ಮೆಂಟ್. ಬಟ್ ಎನಿವೇ.. ಇಲ್ಲಿರೋ ಎಲ್ಲಾ ಅಭಿಮಾನಿಗಳೂ ಅದನ್ನೇ ಆಸೆ ಪಡ್ತಿದ್ದಾರೆ. ಆದಷ್ಟು ಬೇಗ ಬಾಸ್ ಆಚೆ ಬರ್ಲಿ ಅಷ್ಟೇ’ ಎಂದಿದ್ದಾರೆ.

ಇವರಿಗೆಲ್ಲಾ ಏನಾಗಿದೆ..? ಯಾಕೆ ಹೀಗೆ ಆಡ್ತಾರೆ..? ಇಂದು ದರ್ಶನ್‌ಗೆ ಬೇಲ್ ಸಿಗದೆ ಒಳಗೆ ಒದ್ದಾಡೋಕೆ ಕಾರಣನೇ ಇಂತಹ ತಲೆ ಬುಡ ಇಲ್ಲದ ಕಾಂಟ್ರವರ್ಸಿಯಲ್ ಸ್ಟೇಟ್ಮೆಂಟ್ಸ್ ಅನ್ನೋದು ಇವರುಗಳಿಗೆ ಯಾಕೆ ಅರ್ಥ ಆಗ್ತಿಲ್ಲ. ಎಲ್ಲರೂ ಸೇರಿ ಅವರನ್ನ ಪರ್ಮನೆಂಟ್ ಆಗಿ ಜೈಲಲ್ಲೇ ಇರೋಕೆ ಪ್ಲ್ಯಾನ್ ಮಾಡಿದಂತಿದೆ. ಅದೇ ಕಾರಣದಿಂದ ಈ ರೀತಿ ಪೊಲೀಸ್ ವ್ಯವಸ್ಥೆ ಹಾಗೂ ರಾಜಕೀಯ ವ್ಯವಸ್ಥೆ ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ಕೊಂಕು ಮಾತಾಡ್ತಾ.. ಸಮಸ್ಯೆ ಕೆರೆದು ಕೆರೆದು ದೊಡ್ಡ ಗಾಯ ಮಾಡಿಕೊಳ್ತಿದ್ದಾರೆ. ಇವರಿಗೆ ಬುದ್ದಿ ಬರೋದು ಯಾವಾಗ..? ಬುದ್ದಿ ಹೇಳೋದಾದ್ರೂ ಯಾರು..? ಆ ದೇವರೇ ಬಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version