ಸೀತಾ ರಾಮಂ ಮೃಣಾಲ್ ಜೊತೆಗೆ ಧನುಷ್​ ಕಲ್ಯಾಣ..?!

ವ್ಯಾಲಂಟೈನ್ಸ್ ಡೇ ದಿನವೇ ಸಪ್ತಪದಿ ತುಳಿಯೋಕೆ ಸಜ್ಜು..!

BeFunky collage 2026 01 17T184129.949

ಚಿತ್ರರಂಗದಲ್ಲಿ ಸ್ಟಾರ್ ನಟನಿಗೆ ಸಂಬಂಧಿಸಿದ ಸುದ್ದಿಯೊಂದು ಬಹುದೊಡ್ಡ ಕಿಚ್ಚು ಹಚ್ಚಿದೆ.  ಕಾಲಿವುಡ್ ನಟ ಧನುಷ್ ಎರಡನೇ ಮದುವೆಯಾಗ್ತಿದಂತೆ. ಅದು ಯಾರ್ ಜೊತೆ ಅನ್ನೋ ಕ್ಯೂರಿಯಾಸಿಟಿ ಜೊತೆಗೆ ಆ ನಟಿಯೊಂದಿಗೆ ಸ್ನೇಹವೋ, ಅದಕ್ಕಿಂತ ಹೆಚ್ಚೋ ಅನ್ನೋ ಪ್ರಶ್ನೆ ಟಾಕ್ ಆಫ್ ದಿ ಟೌನ್ ಆಗಿದೆ. ಸದ್ಯ ಇಬ್ಬರ ಮಧ್ಯೆ ಕ್ಲೋಸ್‌ನೆಸ್ ಜಾಸ್ತಿ ಆಗಿ, ವ್ಯಾಲಂಟೈನ್ಸ್ ಡೇ ದಿನ ಸಪ್ತಪದಿ ತುಳಿಯಲಿದ್ದಾರಂತೆ.

ಕಾಲಿವುಡ್​ ನಟ ಧನುಷ್​ ರಜನಿಕಾಂತ್​ ಪುತ್ರಿ ಐಶ್ವರ್ಯ ಜೊತೆ ಜೊತೆಗಿನ ದಾಂಪತ್ಯ ಜೀವನಕ್ಕೆ ಫುಲ್​ಸ್ಟಾಪ್​ ಇಟ್ಟು 3 ವರ್ಷಗಳೇ ಕಳೆದಿದೆ. ಇದೀಗ ಸಿಂಗಲ್​ ಆಗಿರೋ ಧನುಷ್ ಎರಡನೇ ಮದುವೆ ಆಗುವ ಮೂಲಕ ಮತ್ತೆ ಮಿಂಗಲ್​ ಆಗಲು ರೆಡಿಯಾಗಿದ್ದಾರಂತೆ.  ಸದ್ದಿಲ್ಲದೇ ಧನುಷ್​ ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ಗಾಸಿಪ್​ ಚಿತ್ರರಂಗದಲ್ಲಿ ಹರಿದಾಡಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆಯಿಂದಲೂ ನಟಿ ಮೃಣಾಲ್​ ಠಕೂರ್​ ಹೆಸರು ಧನುಷ್​ ಜೊತೆ ತಳುಕಿಹಾಕಿಕೊಂಡಿತ್ತು. ಇಬ್ಬರು ಲವ್​ ಮಾಡುತ್ತಿದ್ದಾರೆ.. ಎಂಬ ಅಂತೆಕಂತೆಗಳು ಕೇಳಿಬಂದಿತ್ತು.. ಇದೀಗ ಮತ್ತೆ ಈ ವಿಚಾರ ಮುನ್ನಲೆಗೆ ಬಂದಿದ್ದು, ಧನುಷ್​ ಮೃಣಾಲ್​ ಅವರನ್ನ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ.

ಸ್ಟಾರ್ ಕಪಲ್ ಡೇಟಿಂಗ್..ಅದು ಸ್ನೇಹನಾ..? ಪ್ರೀತಿನಾ..?

ಸದ್ದಿಲ್ಲದೆ ಎರಡನೇ ಮದ್ವೆಗೆ ಸಜ್ಜಾದ್ರಾ ತಲೈವಾ ಅಳಿಯ..?

ಮೃಣಾಲ್​ ಅವರ ಸನ್​ ಆಫ್​ ಸರ್ದಾರ್​ ಚಿತ್ರದ ಪ್ರಿ ರಿಲೀಸ್​ ಈವೆಂಟ್​ನಲ್ಲೂ ಧನುಷ್​ ಭಾಗಿಯಾಗಿದ್ರು. ಹಾಗೇ ಮೃಣಾಲ್​ ಬರ್ತ್​ಡೇ ಪಾರ್ಟಿ ಸೇರಿದಂತೆ ಹಲವು ಕಡೆ ಧನುಷ್​ ಹೋಗಿದ್ದಾರೆ. ಈ ಫೋಟೋಗಳು ವೈರಲ್​ ಆಗಿತ್ತು. ಇದೀಗ ಕೇಳಿಬಂದಿರುವ ಸುದ್ದಿ ಪ್ರಕಾರ ಧನುಶ್ ಹಾಗೂ ಮೃಣಾಲ್ ಠಾಕೂರ್ ಪರಸ್ಪರ ಪ್ರೀತಿಯಲ್ಲಿದ್ದು, ಇಬ್ಬರೂ ಸಹ ಶೀಘ್ರವೇ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಮೃಣಾಲ್  ಮತ್ತು ಧನುಶ್ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಸೀತಾ ರಾಮಂ ಮೃಣಾಲ್ ಜೊತೆಗೆ ಧನುಷ್​ ಕಲ್ಯಾಣ..?!

ವ್ಯಾಲಂಟೈನ್ಸ್ ಡೇ ದಿನವೇ ಸಪ್ತಪದಿ ತುಳಿಯೋಕೆ ಸಜ್ಜು..!

ಮುಂದಿನ ತಿಂಗಳು ಫೆಬ್ರವರಿ 14ಕ್ಕೆ ಇವರ ಮದುವೆ ಕೂಡ ನಡೆಯಲಿದೆ ಎನ್ನಲಾಗಿದೆ ಈ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಧನುಶ್ ಅವರಿಗೆ ಇದು ಎರಡನೇ ಮದುವೆ ಆದರೆ ಮೃಣಾಲ್ ಅವರಿಗೆ ಇದು ಮೊದಲ ಮದುವೆ ಆಗಲಿದೆ. ಮೃಣಾಲ್ ಠಾಕೂರ್ ಗೆ ಈಗ 33 ವರ್ಷ ವಯಸ್ಸು, ಧನುಶ್ ಗೆ 42 ವರ್ಷ. ಸದ್ಯ ಈ ಕುರಿತು ಇಬ್ಬರು ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೆ ಅಂತ ಕಾದುನೋಡಬೇಕಿದೆ.

ಮೃಣಾಲ್ ಠಾಕೂರ್ ಈಗ ಸೌತ್‌ನಲ್ಲೂ ಬೇಡಿಕೆಯ ನಟಿ. ಸೀತಾ ರಾಮಂ ಚಿತ್ರದ ಬಳಿಕ ಅವರ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಬಳಿಕ ಹಾಯ್ ನಾನ್ನಾ, ಸನ್ ಆಫ್ ಸರ್ದಾರ್ 2 ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಗಮನ ಸೆಳೆದಿದ್ದಾರೆ. ಇಂಥ ಸಮಯದಲ್ಲೇ ಧನುಷ್ ಜೊತೆ ಹೆಸರು ತಳುಕು ಹಾಕ್ತಿರೋದು ಸಿನಿ ವಲಯದಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

ಇದಕ್ಕೆ ಇನ್ನೊಂದು ಟ್ವಿಸ್ಟ್ ಕೂಡ ಇದೆ. ಧನುಷ್ ಅಭಿನಯದ ‘ತೇರೆ ಇಷ್ಕ್ ಮೇ’ ಚಿತ್ರದ ರ್ಯಾಪ್ ಪಾರ್ಟಿಯಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದು, ಹಾಗೇ ಧನುಷ್ ಮನೆಯವರನ್ನೇ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಿರೋದು ಈ ಎಲ್ಲ ಸಣ್ಣ ಸಣ್ಣ ಸುಳಿವುಗಳು ಸಾಮಾನ್ಯ ಸ್ನೇಹ ಅಲ್ಲ ಅನ್ನೋ ಮಾತಿಗೆ ದಾರಿ ಮಾಡಿಕೊಡ್ತಿವೆ. ಇದೀಗ ಈ ಡೇಟಿಂಗ್ ಗುಸುಗುಸು ಇನ್ನೊಂದು ಹಂತಕ್ಕೆ ಹೋಗಿದ್ದು ಸ್ನೇಹದಿಂದ ಪ್ರೀತಿಗೆ, ಪ್ರೀತಿಯಿಂದ ಮದುವೆವರೆಗೂ ಇಬ್ಬರ ಪ್ರೇಮ ಸಾಗ್ತಿದೆಯಾ ಅನ್ನೋ ಪ್ರಶ್ನೆ ಎದ್ದಿದೆ.

 ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version