ಸಾಲು ಸಾಲು ಸಿನಿಮಾಗಳ ಫೇಲ್ಯೂರ್‌ನಿಂದ ಕಂಗೆಟ್ಟಿರೋ ಸಲ್ಮಾನ್ ಖಾನ್, ಸದ್ಯ ಸೌತ್ ಸಿನಿದುನಿಯಾದ ಮೊರೆ ಹೋಗಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಂಶಿ ಪೈಡಿಪಲ್ಲಿ ಜೊತೆ ಬಾಲಿವುಡ್ ಪ್ರಾಜೆಕ್ಟ್ ಮಾಡ್ತಿದ್ದಾರೆ. ಅದ್ಧೂರಿ ಮುಹೂರ್ತ ಜೊತೆ ಸಿನಿಮಾದ ಶೂಟಿಂಗ್ ಕೂಡ ಕಿಕ್‌ಸ್ಟಾರ್ಟ್ ಆಗಿರೋ ಕುರಿತ ಕಲರ್‌ಫುಲ್ ಕಹಾನಿ ಇಲ್ಲಿದೆ ನೋಡಿ.
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‌ಗೆ ಅತ್ತ ಮದ್ವೆನೂ ಆಗ್ತಿಲ್ಲ.. ಇತ್ತ ಸಿನಿಮಾಗಳ ಸಕ್ಸಸ್ ಕೂಡ ಸಿಗ್ತಿಲ್ಲ. ಇತ್ತೀಚೆಗೆ ಸಲ್ಲು ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನೆಲ ಕಚ್ಚಿವೆ. ಒಂದೇ ಒಂದು ಬ್ರೇಕ್‌ಗಾಗಿ ಕಾತರದಿಂದ ಕಾಯ್ತಿದ್ದಾರೆ ಭಾಯಿಜಾನ್. ಆದ್ರೆ ಅಂದುಕೊಂಡಷ್ಟು ಸುಲಭ ಆಗ್ತಿಲ್ಲ ಆ ಗೆಲುವು ಸಿಗೋದು. ಅದೇ ಕಾರಣದಿಂದ ಇದೀಗ ಸಲ್ಲು ಒಂದು ಮಾಸ್ಟರ್‌ಪ್ಲ್ಯಾನ್ ಮಾಡಿದ್ದಾರೆ. ಸೌತ್ ಸಿನಿ ಮಂದಿಯ ಮೊರೆ ಹೋಗಿದ್ದಾರೆ.
ಸೌತ್ ಮೊರೆ ಹೋದ ಸಲ್ಲು..ನ್ಯೂ ಪ್ರಾಜೆಕ್ಟ್ ಕಿಕ್‌ಸ್ಟಾರ್ಟ್
ಬಾಲಿವುಡ್‌ಗೆ ವಂಶಿ ಪೈಡಿಪಲ್ಲಿ..ಒನ್ಸ್ ಅಗೈನ್ ನಯನಾ..!
ದಿಲ್‌ರಾಜು ಒಡೆತನದ ಎಸ್‌ವಿಸಿ ಸಿನಿಮಾಸ್ ಬ್ಯಾನರ್ ಮೂಲಕ ಸಲ್ಮಾನ್ ಖಾನ್ ಬಾಲಿವುಡ್ ಸಿನಿಮಾ ಮಾಡ್ತಿದ್ದು, ಅದಕ್ಕೆ ಸೌತ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕನಟಿ ಆಗಿದ್ದಾರೆ. ಇತ್ತೀಚೆಗೆ ಸಿನಿಮಾ ಮುಹೂರ್ತ ಕಂಡಿದ್ದು, ಶೂಟಿಂಗ್ ಕೂಡ ಶುಭಾರಂಭ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸೋಲಿಲ್ಲದ ಸರದಾರ, ಸೌತ್‌ನ ಸೆನ್ಸೇಷನಲ್ ಡೈರೆಕ್ಟರ್ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಭಾಯಿಜಾನ್‌ಗೆ 100% ಅದೃಷ್ಠ ಪರೀಕ್ಷೆ.. ಗೆಲ್ಲಲೇಬೇಕು..!
ಹಿಟ್ ಮಷಿನ್.. ನಯನಾ ಲಕ್ ಫ್ಯಾಕ್ಟರ್ ಮೇಲೆ ಭಾರ..!
ಮುನ್ನಾ, ಬೃಂದಾವನಂ, ಎವಡು, ಊಪಿರಿ, ಮಹರ್ಷಿ ಹಾಗೂ ವಾರಿಸು.. ಹೀಗೆ ವಂಶಿ ಡೈರೆಕ್ಟ್ ಮಾಡಿದ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್‌ಗಳೇ. ಹಂಡ್ರೆಂಡ್ ಪರ್ಸೆಂಟ್ ರಿಸಲ್ಟ್ ಇರೋ ಅಂತಹ ನಿರ್ದೇಶಕನನ್ನೇ ಸಲ್ಲು ಆಯ್ಕೆ ಮಾಡಿಕೊಂಡಿದ್ದು. ವಂಶಿ ಹಿಟ್ ಮಷಿನ್ ಆಗಿದ್ದು, ನಯನತಾರಾ ಲಕ್ ಫ್ಯಾಕ್ಟರ್ ಕೂಡ ಸೇರಿದ್ರೆ ಪಕ್ಕಾ ಸಿಕ್ಸ್ ಹೊಡೆಯಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಸಲ್ಲು.
ಕಿಂಗ್ ಖಾನ್ ಶಾರೂಖ್‌ರ ಜವಾನ್ ಚಿತ್ರದ ಮೂಲಕ ಬಿಟೌನ್‌ಗೆ ಎಂಟ್ರಿ ಕೊಟ್ಟಿದ್ದ ನಯನತಾರಾಗೆ ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಕ್ಕಿತ್ತು. ಹಾಗಾಗಿ ನಯನಾಗೆ ಇದು ಬಾಲಿವುಡ್‌ನ ಮತ್ತೊಂದು ಮೆಗಾ ಪ್ರಾಜೆಕ್ಟ್ ಕೂಡ ಹೌದು. ಸೋ.. ಇವರಿಬ್ಬರಿಂದ ಸಲ್ಮಾನ್ ಖಾನ್ ನಸೀಬು ಬದಲಾಗುತ್ತಾ..? ಕಾದು ನೋಡೋಣ.
