ಡಿಬಾಸ್ ದರ್ಶನ್ ಇಲ್ಲಿಯ ತನಕ ಒಬ್ಬ ಸೂಪರ್ ಸ್ಟಾರ್, ಸಮಾಜ ಸೇವಕ, ಪ್ರಾಣಿಪ್ರಿಯ, ಪಕ್ಷಿಪ್ರಿಯ ಅಂತಷ್ಟೇ ಸಮಾಜಕ್ಕೆ ಗೊತ್ತಿತ್ತು. ಆದ್ರೀಗ ಆ ಆನ್‌ಸ್ಕ್ರೀನ್ ಹೀರೋ ಮುಖದ ಹಿಂದಿನ ಅಸಲಿ ಮುಖವಾಡ ಬಯಲು ಮಾಡಿದ್ದಾರೆ ಮಾಫಿ ಸಾಕ್ಷಿದಾರ ಪ್ರದೋಶ್. ರೇಣುಕಾಸ್ವಾಮಿಗೆ ನೀಡಿರೋ ಆ ಚಿತ್ರಹಿಂಸೆಯನ್ನ ನೆನೆಸಿಕೊಂಡ್ರೆ.. ಅರೇ ದಾಸ ದರ್ಶನ್ ಮನಸ್ಸು ಇಷ್ಟೊಂದು ವಿಕೃತನಾ ಅಂತ ಅನಿಸದೇ ಇರಲ್ಲ.
ಅಬ್ಬಬ್ಬಾ.. ಇಷ್ಟೊಂದು ವಿಕೃತನಾ ಡಿಬಾಸ್ ದರ್ಶನ್ ಮನಸ್ಸು..?
OMG..! ಯಾವ ಶತ್ರುವಿಗೂ ಬೇಡ ಗುರು ಇಂತಹ ಚಿತ್ರಹಿಂಸೆ..!
ಪಟ್ಟಣಗೆರೆ ಶೆಡ್‌ನ ಭೀಕರ, ಭೀಭತ್ಸ ಕ್ಷಣಗಳು ಈಗ ರೆಕಾರ್ಡ್
ಸೂಪರ್ ಸ್ಟಾರ್ ದರ್ಶನ್ ಎರಡನೇ ಮುಖ ಬಟಾ ಬಯಲು..!
ಚಾಲೆಂಜಿಂಗ್ ಸ್ಟಾರ್ ದರ್ಶನ್.. ರಾತ್ರೋ ರಾತ್ರಿ ಸ್ಟಾರ್ ಆದವರಲ್ಲ. ಲೈಟ್ ಬಾಯ್ ನಿಂದ ಹಿಡಿದು ಸೂಪರ್ ಸ್ಟಾರ್ ತಟನಕ ಹಂತ ಹಂತವಾಗಿ, ತನ್ನ ಸ್ವಂತ ಛಲ ಹಾಗೂ ಟ್ಯಾಲೆಂಟ್‌ನಿಂದ ಬೆಳೆದು ಬಂದ ಸ್ಟಾರ್. ಚಿತ್ರರಂಗದಲ್ಲಿ ಗಾಡ್‌ಫಾದರ್ ಹಾಗೂ ಹಣದ ಬಲ ಇಲ್ಲದೆ ಬೆಳೆಯೋದು ಕಷ್ಟಸಾಧ್ಯ. ಅಂಥದ್ರಲ್ಲಿ ಮೆರಿಟ್‌ನಲ್ಲಿ ತನ್ನದೇ ಆದ ಸಾಮ್ರಾಜ್ಯ ಕಟ್ಟಿ, ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆದವರು ದಾಸ ದರ್ಶನ್.
56 ಸಿನಿಮಾಗಳ ಮೂಲಕ ಚಿತ್ರರಂಗಕ್ಕೆವ ಆಸರೆಯಾಗಿದ್ದ ಬಹುದೊಡ್ಡ ಸ್ಟಾರ್ ಇಂದು ಮರ್ಡರ್ ಕೇಸ್‌ನಲ್ಲಿ ಜೈಲು ಪಾಲಾಗಿ, ನಾಲ್ಕು ಗೋಡೆ ಮಧ್ಯೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಂಧಿಯಾಗಿದ್ದಾರೆ. ದರ್ಶನ್ ಇಲ್ಲಿಯ ತನಕ ಒಬ್ಬ ಒಳ್ಳೆಯ ನಟ, ಸಮಾಜ ಸೇವಕ, ಪ್ರಾಣಿ ಹಾಗೂ ಪಕ್ಷಿ ಪ್ರಿಯ ಅನ್ನೋದಷ್ಟೇ ನಮಗೂ ನಿಮಗೆಲ್ಲಾ ಗೊತ್ತಿತ್ತು. ಆದ್ರೆ ರೇಣುಕಾಸ್ವಾಮಿ ಸಾವಿನ ಹಿಂದೆ ಆತ ಏನೆಲ್ಲಾ ಮಾಡಿದ್ದಾರೆ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡೋ ಮೂಲಕ ದಾಸನ ಮತ್ತೊಂದು ಕರಾಳ ಮುಖ ಬಯಲು ಮಾಡಿದ್ದಾರೆ ಪ್ರದೋಶ್.
2024ರ ಜೂನ್ 8ರಂದು ಏನೆಲ್ಲಾ ಆಯ್ತು ಅನ್ನೋದನ್ನ ಮಾಫಿ ಸಾಕ್ಷಿ ನುಡಿದಿರೋ ಪ್ರದೋಶ್ ಮಾತುಗಳಲ್ಲಿ ಪ್ರಪಂಚಕ್ಕೆ ಗೊತ್ತಾಗುವಂತೆ ಆಗಿದೆ. ನಿಜಕ್ಕೂ ರೇಣುಕಾಸ್ವಾಮಿ ಮಾಡಿದ್ದು ತಪ್ಪೇ. ಆದ್ರೆ ಆತನನ್ನ ಶಿಕ್ಷಿಸೋಕೆ ಕಾನೂನಿದೆ. ಅದರ ಚೌಕಟ್ಟಿನಲ್ಲಿ ಇವರು ಏನಾದ್ರೂ ಮಾಡಬಹುದಿತ್ತು. ಅದನ್ನ ಬಿಟ್ಟು ಕಾನೂನನ್ನೇ ಕೈಗೆತ್ತಿಕೊಂಡು ಮಾರಣಾಂತಿಕ ಹಲ್ಲೆ ಮಾಡಿ, ಚಿತ್ರಹಿಂಸೆ ನೀಡಿ ಜೀವ ತೆಗೆದಿರೋದು ಭಯ ಹುಟ್ಟಿಸುವಂತಿದೆ. ಪ್ರದೋಶ್ ಹೇಳಿಕೆಯಂತೆ ರೇಣುಕಾಸ್ವಾಮಿಗೆ ನಟ ದರ್ಶನ್ ನೀಡಿದ ಚಿತ್ರಹಿಂಸೆ ಯಾವ ಶತ್ರುವಿಗೂ ಬೇಡ ಅನಿಸುತ್ತೆ.
ರೇಣುಕಾಸ್ವಾಮಿ ಮುಂದೆ ಎಂಜಲು ಉಗಿದು, ಅದನ್ನ ನೆಕ್ಕುವಂತೆ ಹೇಳಿದ್ರಂತೆ ದರ್ಶನ್. ಅಷ್ಟೇ ಅಲ್ಲ.. ಸ್ವಾಮಿಗೆ ಪ್ಯಾಂಟ್ ಬಿಚ್ಚಿಸಿ, ಗುಪ್ತಾಂಗಕ್ಕೆ ಬೂಟ್ ಕಾಲಿನಲ್ಲಿ ಎರಡೆರಡು ಬಾರಿ ಒದ್ದಿದ್ದಾರೆ ದಾಸ ದಚ್ಚು. ಸಾಲದು ಅಂತ ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಎದೆಯ ಭಾಗವನ್ನು ಸುಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಆ ನಂತರ ತನ್ನ ಎರಡೂ ಕಾಲುಗಳಿಂದ ಸ್ವಾಮಿಯ ಎದೆಯ ಮೇಲೆ ಹತ್ತಿ ನಿಂತಿದ್ದಾರೆ. ಆಗ ಸತ್ತೋಗ್ತಾನೆ ಆತ ಅನ್ನೋ ಭಯದಲ್ಲಿ ಪ್ರದೋಶ್ ನಟ ದರ್ಶನ್‌ನ ಪಕ್ಕಕ್ಕೆ ಎಳೆದುಕೊಂಡಿದ್ದಾಗಿ ಹೇಳಿದ್ದಾರೆ. ನಿಜಕ್ಕೂ ಇದು ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದನ್ನ ಕೋರ್ಟ್ ಪರಿಶೀಲಿಸಲಿದೆ.
