ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಡೆವಿಲ್ ಚಿತ್ರದ ಕಥೆ ರಿಲೀಸ್‌ಗೂ ಮೊದಲೇ ಲೀಕ್ ಆಗಿಬಿಟ್ಟಿದೆ. ಬಹಳ ವರ್ಷಗಳ ನಂತ್ರ ಡಬಲ್ ಆ್ಯಕ್ಟಿಂಗ್ ಮಾಡಿರೋ ಡಿಬಾಸ್ ದರ್ಶನ್, ಈ ಬಾರಿ ನೋಡುಗರನ್ನ ನಿರೀಕ್ಷೆಗೂ ಮೀರಿ ಎಂಟರ್‌ಟೈನ್ ಮಾಡಲಿದ್ದಾರಂತೆ. ಎರಡು ಪಾತ್ರ ನಾಲ್ಕು ಶೇಡ್‌ಗಳಲ್ಲಿ ಸೈಕ್ ವಿಲನ್‌ನ ನೋಡಿದ್ರೆ ನೀವು ಹಂಡ್ರೆಡ್ ಪರ್ಸೆಂಟ್ ಸೈಕ್ ಆಗೋದು ಗ್ಯಾರಂಟಿ.

ದಿ ವೆಯ್ಟ್ ಈಸ್ ಓವರ್.. ಡೆವಿಲ್ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇಲ್ಲಿಯವರೆಗೂ ಡಿಸೆಂಬರ್ 12ಕ್ಕೆ ಡೆವಿಲ್ ತೆರೆಗಪ್ಪಳಿಸಲಿದೆ ಎನ್ನಲಾಗಿತ್ತು. ಆದ್ರೀಗ ಸೆಲೆಬ್ರಿಟಿಗಳು ಹಾಗೂ ಪ್ರೇಕ್ಷಕರ ಒತ್ತಾಯದ ಮೇರೆಗೆ ನಿರ್ಮಾಪಕರು, ಡೆವಿಲ್‌ನ ಇನ್ನೂ ಒಂದು ದಿನ ಬೇಗನೇ ಬೆಳ್ಳಿಪರದೆಗೆ ತರ್ತಿದ್ದಾರೆ. ಡಿಸೆಂಬರ್ 11ರಂದು ಡೆವಿಲ್ ಗ್ರ್ಯಾಂಡ್ ರಿಲೀಸ್ ಆಗ್ತಿದೆ.

ಡೆವಿಲ್ ಕಥೆ ಲೀಕ್.. ಡಿ-12ಕ್ಕೂ ಒಂದು ದಿನ ಮೊದ್ಲೇ ಎಂಟ್ರಿ
ಡಿಬಾಸ್ ಡಬಲ್ ಆ್ಯಕ್ಟಿಂಗ್.. 4 ಶೇಡ್ಸ್.. ಸೈಕ್ ವಿಲನ್ ಕಿಕ್
ಟೀಸರ್, ಸಾಂಗ್ಸ್ ಹಾಗೂ ಅವುಗಳ ಮೇಕಿಂಗ್ ಝಲಕ್‌ಗಳು ಒಂದಕ್ಕಿಂತ ಒಂದು ಜೋರಾಗಿದ್ದು, ದರ್ಶನ್ ಫ್ಯಾನ್ಸ್‌ಗಷ್ಟೇ ಅಲ್ಲ, ಚಿತ್ರಪ್ರೇಮಿಗಳ ಕಾತುರತೆಯನ್ನ ಹೆಚ್ಚಿಸಿವೆ. ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾದ ಕಥೆ ರಿಲೀಸ್‌ಗೂ ಮೊದಲೇ ಲೀಕ್ ಆಗಿಬಿಟ್ಟಿದೆ. ಡಿಬಾಸ್ ದರ್ಶನ್ ಈ ಚಿತ್ರದಲ್ಲಿ ಡಬಲ್ ರೋಲ್‌ಗಳಲ್ಲಿ ಕಾಣಸಿಗಲಿದ್ದಾರೆ ಎನ್ನಲಾಗ್ತಿದೆ. ಎರಡು ಪಾತ್ರ, ನಾಲ್ಕು ಡಿಫರೆಂಟ್ ಶೇಡ್ಸ್ ಇದ್ದು, ಸೈಕ್ ವಿಲನ್ ಪಾತ್ರವಂತೂ ನೋಡುಗರನ್ನ ಹಂಡ್ರೆಡ್ ಪರ್ಸೆಂಟ್ ಸೈಕ್ ಮಾಡಲಿದೆ ಅಂತಿದ್ದಾರೆ.
ಮೊದಲಿಗೆ ಲಾಂಚ್ ಆದಂತಹ ಡೆವಿಲ್ ಬರ್ತ್ ಡೇ ಟೀಸರ್‌ನಲ್ಲಿರೋದೇ ಆ ವಿಲನ್ ಪಾತ್ರಧಾರಿಯ ಗಮ್ಮತ್ತಿನ ಝಲಕ್. ಅದು ಜಸ್ಟ್ ಟೀಸರ್. ಪಿಕ್ಚರ್ ಅಭಿ ಬಾಕಿ ಹೈ ಎನ್ನಲಾಗ್ತಿದೆ. ಅಂದಹಾಗೆ ಬಹಳ ವರ್ಷಗಳ ನಂತ್ರ ಡಿಬಾಸ್ ಹೀಗೆ ಡಬಲ್ ಆ್ಯಕ್ಟಿಂಗ್ ಮಾಡ್ತಿರೋದು. ಈ ಹಿಂದೆ ಬಾಸ್ ಹಾಗೂ ಇಂದ್ರ ಚಿತ್ರಗಳಲ್ಲಿ ಡಬಲ್ ರೋಲ್‌ಗಳನ್ನ ಮಾಡಿದ್ರು. ಇದೀಗ ಡೆವಿಲ್ ಚಿತ್ರದಲ್ಲೂ ಎರಡೆರಡು ಪಾತ್ರಗಳನ್ನ ನಿಭಾಯಿಸಿದ್ದಾರಂತೆ ದರ್ಶನ್.
ಬಾಕ್ಸ್ ಆಫೀಸ್ ರೂಲ್‌ಗೆ ಟ್ರೂ ಎಂಪರರ್ ದಚ್ಚು ಕಮಿಂಗ್
ಪಕ್ಕಾ ಪೈಸಾ ವಸೂಲ್.. 100% ಕಮರ್ಷಿಯಲ್ ಪ್ಯಾಕೇಜ್
ಪಕ್ಕಾ ಪೈಸಾ ವಸೂಲ್ ಮೂವಿ ಆಗಿರೋ ಡೆವಿಲ್, ಔಟ್ ಅಂಡ್ ಔಟ್ ಕಮರ್ಷಿಯಲ್ ಎಲಿಮೆಂಟ್ಸ್‌ನಿಂದ ಕೂಡಿರಲಿದೆ. ಟಿಕೆಟ್‌ಗೆ ಕಾಸು ಕೊಟ್ಟು ಥಿಯೇಟರ್ ಒಳಗೆ ಹೋಗೋರಿಗೆ ಮೋಸ ಇಲ್ಲದಂತೆ ಮಸ್ತ್ ಮನರಂಜನೆ ಸಿಗಲಿದೆ. ಡ್ಯಾನ್ಸ್, ಫೈಟ್ಸ್ ಹಾಗೂ ಸಾಂಗ್ಸ್ ನೆಕ್ಸ್ಟ್ ಲೆವೆಲ್‌ಗಿದ್ದು, ಒಂದೊಂದು ಹಾಡಿಗೆ ಕೋಟ್ಯಂತರ ರೂಪಾಯಿ ದುಡ್ಡು ಖರ್ಚು ಮಾಡಿದ್ದಾರೆ ನಿರ್ಮಾಪಕರು.

ಅಲೋಹೋಮೊರಾ ಸಾಂಗ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಅದ್ರಲ್ಲಿರೋ ಡಿಬಾಸ್ ಹುಕ್ ಸ್ಟೆಪ್ಸ್ ಟ್ರೆಂಡಿಯಾಗಿವೆ. ದರ್ಶನ್‌ರನ್ನ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ರಚನಾ ರೈ ಅನ್ನೋ ಕನ್ನಡತಿಗೆ ಈ ಸಿನಿಮಾ ಲಾಂಚ್‌ಪ್ಯಾಡ್ ಆಗಿದ್ದು, ಚೊಚ್ಚಲ ಚಿತ್ರದಲ್ಲೇ ಸಿಕ್ಸರ್ ಬಾರಿಸಲಿದ್ದಾರೆ ಕರಾವಳಿ ಬ್ಯೂಟಿ. ಸುಧಾಕರ್ ಎಸ್ ರಾಜ್ ಸಿನಿಮಾಟೋಗ್ರಫಿ, ರಾಬರ್ಟ್ ಸಂತು ಕೊರಿಯೋಗ್ರಫಿ, ಅಜನೀಶ್ ಕೋಕನಾಥ್ ಸಂಗೀತ, ಅನಿರುದ್ದ್ ಶಾಸ್ತ್ರಿ ಸಾಹಿತ್ಯ ಮತ್ತು ಗಾಯನ ಎಲ್ಲವೂ ಡೆವಿಲ್ ಚಿತ್ರದ ನಿರ್ಮಾಪಕರಿಗೆ ನೆಮ್ಮದಿ ತರಿಸಿವೆ.





