ಡೆವಿಲ್ ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರದ ಒಂದೊಂದೇ ವಿಡಿಯೋ ಸಾಂಗ್ ಕೂಡ ರಿಲೀಸ್ ಆಗ್ತಿದೆ. ವಿಜಯಲಕ್ಷ್ಮಿ ದರ್ಶನ್ ರಾಜ್ಯಾದ್ಯಂತ ವಿಜಯಯಾತ್ರೆಗೆ ಮುಂದಾಗಿದ್ದಾರೆ. ಇದೆಲ್ಲದರ ನಡುವೆ ಡೆವಿಲ್ ಸಿನಿಮಾದಲ್ಲಿ ದರ್ಶನ್ ಪುತ್ರ ವಿನೀಶ್ ಅಭಿನಯಿಸಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ ವೈರಲ್ ಫೋಟೋಸ್ ಹಿಂದಿನ ಅಸಲಿಯತ್ತು ಇಲ್ಲಿದೆ ನೋಡಿ..
- ಎರಡನೇ ವಾರಕ್ಕೆ ಕಾಲಿಟ್ಟ ಡೆವಿಲ್ ಹೇಗಿದೆ ರೆಸ್ಪಾನ್ಸ್..?
- ಡೆವಿಲ್ ವಿಜಯಯಾತ್ರೆಯಲ್ಲಿ ವಿಜಯಲಕ್ಷ್ಮಿ, ದರ್ಶನ್ ಖುಷ್
- ಅಪ್ಪನಂತೆ ಮಗ..ವಿನೀಶ್-ದರ್ಶನ್ ಟ್ವಿನ್ನಿಂಗ್..!
- ಡೆವಿಲ್‌ನಲ್ಲಿ ದರ್ಶನ್‌ಗೆ ಡ್ಯೂಪ್ ಹಾಕಿದ್ರಾ ವಿನೀಶ್..?
ಡಿಸೆಂಬರ್ 11ರಂದು ಬಿಡುಗಡೆಯಾಗಿದ್ದ ‘ಡೆವಿಲ್’ ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರದ ಒಂದೊಂದೇ ವಿಡಿಯೋ ಸಾಂಗ್ ಕೂಡ ರಿಲೀಸ್ ಆಗ್ತಿದೆ. ಸದ್ಯ ಇದ್ರೆ ನೆಮ್ಮದಿಯಾಗಿ ಇರ್ಬೆಕ್ ವಿಡಿಯೋ ಸಾಂಗ್ ರಿಲೀಸ್ ಆಗಿ ಒಳ್ಳೆ ವ್ಯೂಸ್ ಪಡೆಯುತ್ತಿದೆ. ಥೀಯೇಟರ್ ನಲ್ಲಿ ಈ ಹಾಡಿಗೆ ಶಿಳ್ಳೆ ಹೊಡೆದು ಹೆಜ್ಜೆ ಹಾಕಿದ ಪ್ರೇಕ್ಷಕರು ಈಗ ಮೊಬೈಲ್ ನಲ್ಲೆ ಸಾಂಗ್ ಕೇಳುತ್ತ ತಲೆದೂಗುತ್ತಿದ್ದಾರೆ.
ಇನ್ನು ವಿಜಯಲಕ್ಷ್ಮಿ ದರ್ಶನ್ ರಾಜ್ಯಾದ್ಯಂತ ವಿಜಯಯಾತ್ರೆಗೆ ಮುಂದಾಗಿದ್ದಾರೆ. ಮಂಡ್ಯದಿಂದ ಆರಂಭಿಸಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಮುಂದಾಗಿದ್ದಾರೆ. ನಾಳೆ ಮಧ್ಯಾಹ್ನ1ಗಂಟೆಗೆ ಮಂಡ್ಯದ ಮಹಾವೀರ ಚಿತ್ರಮಂದಿರಕ್ಕೆ ಹಾಗು 21ರಂದು ಸಂಜೆ 5ಗಂಟೆಗೆ ದಾವಣಗೆರೆಯ ಗೀತಂಜಲಿ ಚಿತ್ರಮಂದಿರಕ್ಕೆ ಭೇಟಿ ಥೀಯೇಟರ್ ವಿಸಿಟ್ ಮಾಡಲಿದ್ದಾರೆ ವಿಜಯಲಕ್ಷ್ಮಿ.
ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶನ ಮಾಡಿರುವ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಚ್ಚರಿ ಅಂದ್ರೆ ಆಕ್ಷನ್ ಸನ್ನಿವೇಶವೊಂದರಲ್ಲಿ ದರ್ಶನ್ ಪುತ್ರ ವಿನೀಶ್ ಕೂಡ ಬಂದು ಹೋಗಿದ್ದಾರೆ. ಎಸ್, ಥೇಟ್ ದರ್ಶನ್ ರೀತಿಯಲ್ಲೇ ಕಾಸ್ಟ್ಯೂಮ್ ತೊಟ್ಟು ವಿನೀಶ್ ಫೋಟೋ ಹಿಡಿಸಿಕೊಂಡಿದ್ದಾರೆ. ಹೈಟು, ಪರ್ಸನಾಲಿಟಿ ಎಲ್ಲದರಲ್ಲೂ ವಿನೀಶ್ ತಂದೆಯನ್ನೇ ಹೋಲುತ್ತಾರೆ. ಹೀಗಾಗಿ ಆಕ್ಷನ್ ಸನ್ನಿವೇಶದಲ್ಲಿ ಅಪ್ಪನಿಗೆ ಡ್ಯೂಪ್ ಹಾಕಿದ್ದಾರೆ ವಿನೀಶ್.
ಈ ವಿಚಾರ ಸಿನಿಮಾ ನೋಡಿದ ಬಹುತೇಕರಿಗೆ ಗೊತ್ತಾಗಿಲ್ಲ. ಸಿನಿಮಾಗಳಲ್ಲಿ ನಾಯಕ, ನಾಯಕಿಗೆ ಡ್ಯೂಪ್ ಹಾಕುವುದು ಹೊಸದೇನು ಅಲ್ಲ. ಅದೇ ರೀತಿ ಡೆವಿಲ್ ಚಿತ್ರದ ಸಣ್ಣ ಝಲಕ್‌ನಲ್ಲಿ ವಿನೀಶ್ ಬಂದು ಹೋಗಿದ್ದಾರೆ. ಉದಯ್‌ಪುರದಲ್ಲಿ ಡೆವಿಲ್ ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿತ್ತು. ವಿಜಯಲಕ್ಷ್ಮಿ ದರ್ಶನ್ ಹಾಗೂ ಮಗ ವಿನೀಶ್ ಕೂಡ ಚಿತ್ರತಂಡದ ಜೊತೆ ಅಲ್ಲಿಗೆ ಹೋಗಿದ್ದರು. ಸದ್ಯ ವೈರಲ್ ಆಗುತ್ತಿರುವ ಫೋಟೊಗಳಲ್ಲಿ ದರ್ಶನ್ ವಿನೀಶ್ ಒಂದೇ ರೀತಿ ಮೇಕಪ್, ಗೆಟಪ್ ಹಾಕಿಕೊಂಡಿದ್ದಾರೆ. ಈಗಾಗಲೇ ಬಾಲನಟನಾಗಿ ವಿನೀಶ್ ಮಿ. ಐರಾವತ ಹಾಗೂ ಯಜಮಾನ ಚಿತ್ರಗಳ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಇದೀಗ ಡೆವಿಲ್ ನಲ್ಲಿ ಅಪ್ಪನಿಗೆ ಡೂಪ್ ಹಾಕಿದ್ದು ಡಿ ಫ್ಯಾನ್ಸ್ ಗೆ nostalgia ಫೀಲ್ ಕೊಡ್ತಿದೆ.
ವಿನೀಶ್-ದರ್ಶನ್ ಟ್ವಿನ್ನಿಂಗ್ ಆಗಿ ಕಾಣ್ತಿರುವ ಫೋಟೋಸ್ ನ ಜೈಮಾತಾ ಕಂಬೈನ್ಸ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು 24 ಗಂಟೆಗಳ ನಿರಂತರ ಚಿತ್ರೀಕರಣ. ಒಂದು ದಿನದಿಂದ ಕೊನೆಯ ದಿನದವರೆಗೆ ಉದಯಪುರದಲ್ಲಿ ನಡೆದ ದಿ ಡೆವಿಲ್ ಸಿನಿಮಾ ಚಿತ್ರೀಕರಣ ಎಂದು ಬರೆದುಕೊಂಡಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಕೂಡ ಅಭಿಮಾನಿಗಳು ಅದ್ಧೂರಿಯಾಗಿ ಡೆವಿಲ್ ಸಿನಿಮಾ ಬರಮಾಡಿಕೊಂಡಿದ್ದರು. ಸದ್ಯ 2ನೇ ವೀಕೆಂಡ್ ಹೇಗಿರುತ್ತೆ ರೆಸ್ಪಾನ್ಸ್ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





