ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ಏನೋ ಜೈಲು ಸೇರಿದ್ರು. ಆದ್ರೆ ಅದರಿಂದ ಎಷ್ಟು ಮಂದಿ ಪ್ರೊಡ್ಯೂಸರ್‌ಗಳು ಅತಂತ್ರದಲ್ಲಿದ್ದಾರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಒಂದಷ್ಟು ಮಂದಿಗೆ ಅಡ್ವಾನ್ಸ್ ವಾಪಸ್ ಮಾಡಿರೋ ದಚ್ಚು, ಮತ್ತಷ್ಟು ಮಂದಿಗೆ ಮಾಡಿಲ್ಲವಂತೆ. ಅವ್ರು ಹಣವೂ ಇಲ್ಲದೆ, ದರ್ಶನ್ ಡೇಟ್ಸ್ ಕೂಡ ಇಲ್ಲದೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ.
- ದರ್ಶನ್ ಜೈಲಲ್ಲಿ, ಪ್ರೊಡ್ಯೂಸರ್ ಟೆನ್ಷನ್‌ನಲ್ಲಿ.. 5 ಕೋಟಿ ಕಥೆ
- ‘ಒಡೆಯ’ ಮುಗಿದು 6 ವರ್ಷ.. ಹಣ, ಡೇಟ್ಸ್ ಎರಡೂ ಇಲ್ಲ..!
- ಸಿನಿಮಾ ಬೇಡ.. ಹಣ ವಾಪಸ್‌ಗೆ ಅಂಗಲಾಚುತ್ತಿರೋ ಶ್ರೀಧರ್
- ಬೇಲ್ ಮೇಲೆ ಬಂದಿದ್ದ ದಾಸನ ದರ್ಶನ ಸಿಕ್ಕಿದ್ದೇ ಪುಣ್ಯವಂತೆ..!
ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಕಾನೂನನ್ನು ಎಲ್ಲರೂ ಗೌರವಿಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಆದ್ರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿ ಜೈಲು ಸೇರಿರುವ ನಟ ದರ್ಶನ್‌ರಿಂದ ಸಾಕಷ್ಟು ಸಮಸ್ಯೆಗಳು ಎದುರಾಗ್ತಿವೆ. ಒಂದ್ಕಡೆ ಕುಟುಂಬ ದಚ್ಚುನ ಮಿಸ್ ಮಾಡ್ಕೋತಿದೆ. ಮಗದೊಂದು ಕಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಟನನ್ನ ಜಾಸ್ತಿನೇ ಮಿಸ್ ಮಾಡ್ಕೋತಿದ್ದಾರೆ. ಇನ್ನು ಅವ್ರನ್ನ ನಂಬಿ ದುಡ್ಡು ಹಾಕಿದವರು ಅತಂತ್ರದಲ್ಲಿದ್ದಾರೆ.
ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸಿರೋ ಡೆವಿಲ್ ಸಿನಿಮಾ ಇದೇ ಅಕ್ಟೋಬರ್ ಎಂಡ್‌ಗೆ ತೆರೆಗೆ ಬರ್ತಿದೆ. ಸಿನಿಮಾದ ಶೂಟಿಂಗ್ ಹಾಗೂ ಡಬ್ಬಿಂಗ್ ಕಾರ್ಯಗಳನ್ನ ಮುಗಿಸಿಕೊಟ್ಟಿರೋ ದರ್ಶನ್ ಒಳಗಿದ್ರೂ ಪ್ರಾಬ್ಲಂ ಇಲ್ಲ ಅಂದ್ಕೊಂಡ್ರೆ ತಪ್ಪಾಗಲಿದೆ. ಯಾಕಂದ್ರೆ ಹೀರೋ ಇಲ್ಲದೆ ಸಿನಿಮಾದ ಪ್ರಮೋಷನ್ಸ್ ಕೊಂಚ ಕಷ್ಟ. ಆದ್ರೆ ಸಾರಥಿ ಸಿನಿಮಾ ರೀತಿ ಮಿರಾಕಲ್ ಆದ್ರೂ ಅಚ್ಚರಿಯಿಲ್ಲ. ಇದೇ ಆಗಸ್ಟ್ 15ರಂದು ಡೆವಿಲ್ ಫಸ್ಟ್ ಸಾಂಗ್ ಇದ್ರೆ ನೆಮ್ದಿಯಾಗ್ ಇರ್ಬೇಕ್ ರಿಲೀಸ್ ಆಗ್ಬೇಕಿತ್ತು. ಪೋಸ್ಟ್‌ಪೋನ್ ಆಗಿದ್ದ ಆ ಗೀತೆ ಇದೇ ಆಗಸ್ಟ್ 24ಕ್ಕೆ ಬಿಡುಗಡೆ ಆಗ್ತಿದೆ.
ಅಂದಹಾಗೆ ಈ ಹಿಂದೆ ವಿಡಿಯೋ ಮೂಲಕ ಕೆಲವೊಂದು ನಿರ್ಮಾಪಕರುಗಳ ಅಡ್ವಾನ್ಸ್ ಹಣ ವಾಪಸ್ ನೀಡಿರೋದನ್ನ ಸ್ವತಃ ದರ್ಶನ್ ಅವರೇ ಸ್ಪಷ್ಟ ಪಡಿಸಿದ್ರು. ಸೂರಪ್ಪ ಬಾಬು ಅಮೌಂಟ್ ವಾಪಸ್ ನೀಡಿದ್ರು. ಕೆವಿಎನ್ ಪ್ರೊಡಕ್ಷನ್ಸ್‌ನಡಿ ಪ್ರೇಮ್ ನಿರ್ದೇಶನದ ಚಿತ್ರ ಮಾಡೇ ಮಾಡ್ತೀನಿ ಅಂದಿದ್ರು. ಇನ್ನು ಡಿ57 ವೀರ ಸಿಂಧೂರ ಲಕ್ಷ್ಮಣ ಚಿತ್ರವನ್ನು ಯಜಮಾನ-ಕ್ರಾಂತಿ ನಿರ್ಮಾಪಕರುಗಳಾದ ಬಿ ಸುರೇಶ್- ಶೈಲಜಾ ನಾಗ್ ಜೊತೆ ಮಾಡೋದಾಗಿ ಅನೌನ್ಸ್ ಆಗಿತ್ತು. ಈ ಪೈಕಿ ಯಾರಿಗೆ ಅಡ್ವಾನ್ಸ್ ವಾಪಸ್ ಆಗಿದೆ..? ಯಾರಿಗೆ ಆಗಿಲ್ಲ ಅನ್ನೋದ್ರ ಬಗ್ಗೆ ಸ್ಪಷ್ಟನೆ ಇಲ್ಲ. ಆದ್ರೆ ಮತ್ತೊಬ್ಬ ನಿರ್ಮಾಪಕ ಒಂದಲ್ಲ ಎರಡಲ್ಲ ಬರೋಬ್ಬರಿ 5 ಕೋಟಿ ಅಡ್ವಾನ್ಸ್ ಮಾಡಿ, ಶಬರಿಯಂತೆ ಕಾಯ್ತಾ ಕೂತಿದ್ದಾರೆ. ಅವ್ರೇ ನಿರ್ದೇಶಕ ಕಮ್ ನಿರ್ಮಾಪಕ ಎಂ ಡಿ ಶ್ರೀಧರ್.
ಹೌದು.. ದರ್ಶನ್‌ಗೆ ಬುಲ್‌ಬುಲ್, ಪೊರ್ಕಿ ಹಾಗೂ ಒಡೆಯ ಹೀಗೆ ಮೂರು ಸಿನಿಮಾಗಳನ್ನ ನಿರ್ದೇಶಿಸಿರೋ ಸ್ಟಾರ್ ಡೈರೆಕ್ಟರ್ ಎಂ ಡಿ ಶ್ರೀಧರ್, ಒಡೆಯ ಸಿನಿಮಾದ ಸಮಯದಲ್ಲಿ ಮತ್ತೊಂದು ಸಿನಿಮಾಗೆ ಐದು ಕೋಟಿ ನೀಡಿ ಕಮಿಟ್ ಆಗಿದ್ದರಂತೆ. ಆದ್ರೆ ಒಡೆಯ ಚಿತ್ರ ಮುಗಿದು 6 ವರ್ಷಗಳಾದ್ರೂ ಇಂದಿಗೂ ದರ್ಶನ್ ಆ ಡೈರೆಕ್ಟರ್‌ಗೆ ಡೇಟ್ಸ್ ನೀಡಿಲ್ಲ. ಡೇಟ್ಸ್ ಹಾಳಾಗಿ ಹೋಗಲಿ, ದುಡ್ಡು ಕೂಡ ವಾಪಸ್ ನೀಡಿಲ್ಲ. ಇತ್ತೀಚೆಗೆ ಮೊದಲ ಬಾರಿ ಜೈಲಿಗೆ ಹೋಗಿಬಂದ ದರ್ಶನ್‌ನ ಭೇಟಿ ಆಗೋಕೆ ಹರಸಾಹಸ ಮಾಡಿ, ಒಮ್ಮೆ ಭೇಟಿ ಆಗಿ ಅಡ್ವಾನ್ಸ್ ಬಗ್ಗೆ ಪ್ರಸ್ತಾಪ ಮಾಡಿದ್ದರಂತೆ.
ಆದ್ರೀಗ ಎರಡನೇ ಬಾರಿ ಜೈಲು ಸೇರಿರೋ ದಾಸ ಯಾವಾಗ ವಾಪಸ್ ಬರ್ತಾರೋ ಗೊತ್ತಿಲ್ಲ. ಹಾಗಾಗಿ ಡೇಟ್ಸ್ ಬೇಡ ಕೊಟ್ಟ ಹಣ ವಾಪಸ್ ಕೊಟ್ರೆ ಸಾಕು ಅಂತ ಐದು ಕೋಟಿಗಾಗಿ ಎಂಡಿ ಶ್ರೀಧರ್ ಒದ್ದಾಡ್ತಿದ್ದಾರಂತೆ. ದಿನಕರ್ ತೂಗುದೀಪ ಹಾಗೂ ವಿಜಲಕ್ಷ್ಮೀ ದರ್ಶನ್‌ರನ್ನ ಸದ್ಯದಲ್ಲೇ ಈ ಬಗ್ಗೆ ಮಾತಾಡಿಸಿ, ಹಣ ವಾಪಸ್ ಕೇಳುವ ಮನಸ್ಸು ಕೂಡ ಮಾಡಿದ್ದಾರಂತೆ. ಆದ್ರೆ ದರ್ಶನ್‌ನ ಹೊರಗೆ ತರೋ ಧಾವಂತದಲ್ಲಿರೋ ಅವರುಗಳು ನಿಜಕ್ಕೂ ಎಂ ಡಿ ಶ್ರೀಧರ್ ಅಹವಾಲನ್ನು ಸ್ವೀಕರಿಸ್ತಾರಾ ಅನ್ನೋದೇ ಯಕ್ಷ ಪ್ರಶ್ನೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





