ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ: ಯಶ್ ತಾಯಿಗೆ ದೀಪಿಕಾ ದಾಸ್ ತಿರುಗೇಟು

ಯಶ್ ಕುಟುಂಬದ ವಿರುದ್ಧ ದೀಪಿಕಾ ದಾಸ್‌ ಆಕ್ರೋಶ!

1 2025 08 23t091104.529

ರಾಕಿಂಗ್ ಸ್ಟಾರ್ ಯಶ್‌ರ ತಾಯಿ ಹಾಗೂ ಕೊತ್ತಲವಾಡಿ ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ರ ಹೇಳಿಕೆಗೆ ನಟಿ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಕೊತ್ತಲವಾಡಿ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಪತ್ರಕರ್ತರು ದೀಪಿಕಾ ದಾಸ್‌ರ ಬಗ್ಗೆ ಪ್ರಶ್ನೆ ಕೇಳಿದಾಗ, ಪುಷ್ಪಾ ಅವರು ಆಕ್ರೋಶಗೊಂಡು, “ದೀಪಿಕಾ ದಾಸ್ ಯಾವ ದೊಡ್ಡ ಹೀರೋಯಿನ್? ಯಾವ ಸಿನಿಮಾದಲ್ಲಿ ಸಾಧನೆ ಮಾಡಿದ್ದಾಳೆ? ಅವಳಿಗೂ ನಮಗೂ ಯಾವ ಸಂಬಂಧವೂ ಇಲ್ಲ. ಸಂಬಂಧಿಕರಾದರೂ ದೂರವೇ ಇಡುತ್ತೇವೆ,” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ದೀಪಿಕಾ ದಾಸ್ ಯಶ್‌ರ ಚಿಕ್ಕಮ್ಮನ ಮಕ್ಕಳಾಗಿದ್ದು, ಈ ಹೇಳಿಕೆ ಕುಟುಂಬದ ಒಳಗಿನ ಗಾಸಿಪ್‌ಗಳಿಗೆ ಇಂಬು ನೀಡಿತು.

ಪುಷ್ಪಾ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಖಡಕ್ ಆಗಿ ಉತ್ತರಿಸಿರುವ ದೀಪಿಕಾ ದಾಸ್, “ಹೊಸ ಕಲಾವಿದರನ್ನು ಬೆಳೆಸುವ ಜನರು ಕಲಾವಿದರಿಗೆ ಬೆಲೆ ಕೊಡುವುದನ್ನು ಕಲಿಯಬೇಕು. ಇದುವರೆಗೂ ಯಾರ ಹೆಸರನ್ನೂ ಬಳಸಿಕೊಂಡು ಬಂದಿಲ್ಲ, ಮುಂದೆಯೂ ಬರಲಾರೆ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಯಾರಿಗೂ ಭಯವಿಲ್ಲ ಅದು ಅಮ್ಮನಾದರೂ, ದೊಡ್ಡಮ್ಮನಾದರೂ, ಅಥವಾ ಪುಷ್ಪಮ್ಮನಾದರೂ ಸರಿ. ರಾಕಿಂಗ್ ಸ್ಟಾರ್ ಯಶ್‌ಗೆ ಗೌರವವಿದೆ, ಆದರೆ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ,” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ವಿಥ್‌ಡ್ಯೂರೆಸ್ಪೆಕ್‌ಟುಸ್ಟಾರ್‌ಆಫ್‌ಅವರ್ ಇಂಡಸ್ಟ್ರಿ. ನಾನು ಯಾವದೊಡ್ಡನಟಿ ಅಲ್ಲದಿದ್ದರು ಏನು ಸಾಧನೆಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ಅವರು ಪೋಸ್ಟ್​ನಲ್ಲಿ ಬರೆದಿದ್ದಾರೆ.

ದೀಪಿಕಾ ದಾಸ್‌ರ ಈ ತಿರುಗೇಟು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪುಷ್ಪಾ ಅವರ ಹೇಳಿಕೆಯನ್ನು ಕೆಲವರು ಬೆಂಬಲಿಸಿದರೆ, ದೀಪಿಕಾ ಅವರ ಧೈರ್ಯವನ್ನು ಮೆಚ್ಚಿಕೊಂಡವರೂ ಇದ್ದಾರೆ. ದೀಪಿಕಾ ದಾಸ್ ಬಿಗ್ ಬಾಸ್ ಮತ್ತು ಕಿರುತೆರೆಯ ಮೂಲಕ ಗುರುತಿಸಿಕೊಂಡಿದ್ದು, ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸುವ ಪ್ರಯತ್ನದಲ್ಲಿದ್ದಾರೆ. ಈ ವಿವಾದವು ಯಶ್ ಕುಟುಂಬ ಮತ್ತು ದೀಪಿಕಾ ನಡುವಿನ ಸಂಬಂಧದ ಬಗ್ಗೆ ಗಾಸಿಪ್‌ಗಳನ್ನು ಮತ್ತಷ್ಟು ಹೆಚ್ಚಿಸಿದೆ.

Exit mobile version