ಬೆಂಗಳೂರು: ಒಂದು ಕಡೆ ನಟ ದರ್ಶನ್ ಅವರನ್ನು ಸುತ್ತುವರಿದಿರುವ ಕಾನೂನು ಹೋರಾಟ ಮುಂದುವರಿದಿದ್ದರೆ, ಮತ್ತೊಂದೆಡೆ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಪತಿಯ ಸಂಕಷ್ಟ ನಿವಾರಣೆಯಾಗಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಬೆನ್ನಲ್ಲೇ, ವಿಜಯಲಕ್ಷ್ಮಿ ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳಿಗೆ ತೆರಳಿ ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸುತ್ತಿದ್ದಾರೆ.
ದರ್ಶನ್ ಅವರ ಕಷ್ಟಗಳು ದೂರವಾಗಬೇಕು, ಕಾನೂನು ಹೋರಾಟದಲ್ಲಿ ಅವರಿಗೆ ಪರಿಹಾರ ಸಿಗಬೇಕು ಎಂಬ ಆಶಯದೊಂದಿಗೆ ವಿಜಯಲಕ್ಷ್ಮಿ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಅವರು ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದಿದ್ದಾರೆ.
ಮಾದಪ್ಪನಿಗೆ ವಿಶೇಷ ಪೂಜೆ
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ ವಿಜಯಲಕ್ಷ್ಮಿ, ಮಾದಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ್ ಅವರಿಗಾಗಿ ಪ್ರಾರ್ಥಿಸಿದ್ದಾರೆ. ಪತಿಯ ಸಂಕಷ್ಟಗಳು ದೂರವಾಗಿ ಶೀಘ್ರದಲ್ಲೇ ಒಳ್ಳೆಯ ದಿನಗಳು ಬರಲಿ ಎಂಬ ಆಶಯದೊಂದಿಗೆ ಅವರು ದೇವರ ಮೊರೆ ಹೋಗಿದ್ದಾರೆ.
ಒಂದ್ಕಡೆ ಕಾನೂನು ಹೋರಾಟ, ಮತ್ತೊಂದ್ಕಡೆ ಟೆಂಪಲ್ ರನ್
ದರ್ಶನ್ ಅವರ ಪ್ರಕರಣದ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗಳು ಒಂದೆಡೆ ನಡೆಯುತ್ತಿವೆ. ಮತ್ತೊಂದೆಡೆ ವಿಜಯಲಕ್ಷ್ಮಿ ಅವರು ಪತಿಯ ಪರವಾಗಿ ದೇವರ ಮೊರೆ ಹೋಗುತ್ತಿದ್ದಾರೆ.
ದರ್ಶನ್ ಅವರ ಸಂಕಷ್ಟ ನಿವಾರಣೆಗೆ ವಿಜಯಲಕ್ಷ್ಮಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಹರಕೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ತಮ್ಮ ಪತಿಯ ಮೇಲಿರುವ ಸಂಕಷ್ಟಗಳು ದೂರವಾಗಿ ಅವರು ನೆಮ್ಮದಿಯಿಂದ ಇರಬೇಕು ಎಂಬುದು ಅವರ ಮುಖ್ಯ ಆಶಯವಾಗಿದೆ.
ದರ್ಶನ್ ಅವರಿಗೆ ಸಂಬಂಧಿಸಿದ ಕಾನೂನು ಪ್ರಕರಣದಲ್ಲಿ ವಿವಿಧ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ನಿರಂತರವಾಗಿ ಪತಿಯ ಬೆಂಬಲಕ್ಕೆ ನಿಂತಿದ್ದಾರೆ. ಇದಕ್ಕೂ ಮುನ್ನವೂ ವಿಜಯಲಕ್ಷ್ಮಿ ಹಲವು ದೇವಾಲಯಗಳಿಗೆ ತೆರಳಿ ದರ್ಶನ್ ಅವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
