ಲೇಖಕರು: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ನಡುವೆ ಡಿಸೆಂಬರ್ 12 ಕ್ಕೆ ದರ್ಶನ್ ನಟನೆಯ ಡೆವಿಲ್ ರಿಲೀಸ್ ಪಕ್ಕಾ ಆಗಿದ್ದು ಇದೀಗ ಚಿತ್ರದ ಎರಡನೇ ಸಾಂಗ್ ರಿಲೀಸ್ ಆಗಿದೆ. ಬಿಡುಗಡೆ ಆಗಿರೋ ಒಂದೇ ಒಂದು ಸಲ ಸಾಂಗ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ದರ್ಶನ್ ಕಾಟೇರ ಸಿನಿಮಾ ನಂತರ ಈಗ ಡೆವಿಲ್ ಅವತಾರವೆತ್ತಿದ್ದಾರೆ. ಎಲ್ಲವೂ ಸರಿ ಇದ್ದಿದ್ದರೆ ಇಷ್ಟೊತ್ತಿಗೆ ಸಿನಿಮಾದ ಪ್ರಚಾರದಲ್ಲಿ ಬುಸಿಯಾಗಿರಬೇಕಿದ್ದ ದಾಸ ಪರಪ್ಪನ ಅಗ್ರಹಾರದಲ್ಲಿದ್ದು ಪತ್ನಿ ವಿಜಯಲಕ್ಷ್ಮಿ ಪ್ರಚಾರದ ಜವಾಬ್ದಾರಿ ಹೊತ್ತಿದ್ದಾರೆ. ಸಾರಥಿ ಸಮಯದಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ದರ್ಶನ್ ಇದೀಗ ಡೆವಿಲ್ ಸಮಯದಲ್ಲಿ ರೇಣುಕಾಸ್ವಾಮಿ ಹತ್ಯೆ ಕೇಸ್ ಆರೋಪಿಯಾಗಿ ಎರಡನೇ ಬಾರಿಗೆ ಜೈಲು ಸೇರಿದ್ದು ಡೆವಿಲ್ ಪ್ರಚಾರಕ್ಕೆ ಗೈರಾಗಲಿದ್ದಾರೆ.
ಡೆವಿಲ್ ಎರಡನೇ ಸಾಂಗ್ ಔಟ್, ದಚ್ಚು ಲವ್ ಮೂಡ್ ಆನ್
ಒಂದೆ ಒಂದು ಸಲ ಸೋತು ಬಿಡು ನೀ ಎಂದ ದರ್ಶನ್
ದರ್ಶನ್ ಡೆವಿಲ್ ಅವತಾರವೆತ್ತೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ, ತೆರೆ ಮೇಲೆ ದರ್ಶನ್ ರನ್ನ ಹೊಸ ಲುಕ್ ನಲ್ಲಿ ನೋಡೋಕೆ ಹೊಸ ಅವತಾರದಲ್ಲಿ ನೋಡೋಕೆ ಅಬಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಈ ನಡುವೆ ಕಳೆದ ವರ್ಷ ಡಿಸೆಂಬರ್ ಗೆ ಬರಬೇಕಿದ್ದ ಡೆವಿಲ್ , ರಿಲೀಸ್ ಆಗೋದು ಲೇಟಾದರು ಲೇಟೆಸ್ಟಾಗಿ ಡೆವಿಲ್ ಪ್ರಚಾರವನ್ನ ಮಾಡೊಕೆ ಟೀಂ ಅಣಿಯಾಗಿದೆ. ಬಹುಶ ಈ ಸಲ ಡೆವಿಲ್ ಪ್ರಚಾರವನ್ನ ದಾಸನ ಸೆಲೆಬ್ರೆಟಿಗಳು ಸೋಷಿಯಲ್ ಮಿಡಿಯಾದಲ್ಲಿ ಕ್ಯಾಂಪೇನ್ ಮಾಡೋ ಮೂಲಕ ಗೆಲ್ಲಿಸೋ ಲಕ್ಷಣಗಳೆ ಕಾಣ್ತಿವೆ. ಒಂದು ಕಡೆ ಡೆವಿಲ್ ಗೆ ಪ್ರಚಾರವೇ ಬೇಡ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕಾಟೇರ ಸಿನಿಮಾನಂತರ ಸುಮಾರು 2 ವರ್ಷದ ಅಂತರದಲ್ಲಿ ದರ್ಶನ್ ತರೆ ಮೇಲೆ ಬರ್ತಿರೋ ಸಿನಿಮಾ ಅನ್ನೋ ಕಾರಣಕ್ಕೆ, ಮತ್ತೊಂದು ದರ್ಶನ್ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲು ವಾಸ ಅನುಭವಿಸಿ ಮತ್ತೆ ಶೂಟಿಂಗಲ್ಲಿ ಬಾಗವಹಿಸ್ತಾರೋ ಸಿನಿಮಾ ಮುಗಿಸ್ತಾರೋ ಇಲ್ಲವೋ ಅನ್ನೋ ಗೊಂದಲದ ನಡುವೆಯು ಥಿಯೇಟರ್ ಗೆ ಡೆವಿಲ್ ಡಿಸೆಂಬರ್ 12 ಕ್ಕೆ ಬರೋದು ಪಕ್ಕ ಆಗಿದೆ
ಈಗಾಗಲೇ ಡೆವಿಲ್ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ನಡೀತಾ ಇದ್ದು , ಈಗಾಗಲೇ ರಿಲೀಸ್ ಆಗಿರೋ ಸಾಂಗ್ ಇದ್ರೆ ನೆಮ್ಮದಿಯಾಗಿರರ್ಬೇಕು ಅನ್ನೋ ಗುಂಗಿನಲ್ಲಿ ದಾಸನ ಅಭಿಮಾನಿಗಳಿದ್ದಾರೆ. ಥೈಲೆಂಡ್ ನಲ್ಲಿ ನಡೆದ ಶೂಟಿಂಗ್ ವೇಳೆ ದರ್ಶನ್ ರ ಲುಕ್ ನೊಡಿ ಕಳೆದೇಹೋಗಿದ್ಧಾರೆ. ಅಭಿಮಾನಿಗಳು , ಇದರ ಜೊತೆ ಜೊತೆಗೆ ರಾಜಸ್ತಾನದ ಉದಯಪುರದಲ್ಲಿ ಶೂಟಿಂಗ್ ನ ಮೇಕಿಂಗ್ ವಿಡಿಯೋ ನೊಡಿದ ಅಬಿಮಾನಿಗಳು ದರ್ಶನ್ ಮಗ ವಿನೀಶ್ ಕೂಡ ಈ ಸಿನಿಮಾದಲ್ಲಿ ನಟಿಸಿರೋಕೆ ಡಬಲ್ ಧಮಾಕ ಅನ್ನೋದರ ಜೊತೆಗೆ ಸಿನಿಮಾ ಪ್ರಚಾರಕ್ಕೆ ಈಗಾಗಲೇಸೋಷಿಯಲ್ ಮಿಡಿಯಾದಲ್ಲಿ ಅಭಿಯಾನ ಶುರು ಮಾಡಿಕೊಂಡಿದ್ದಾರೆ
ಬಿಕಿನಿಯಲ್ಲಿ ರಚನಾ ರೈ..ಪಡ್ಡೆಗಳ ಹಾರ್ಟ್ ಡವ ಡವ
ಅಜನೀಶ್ ಸಂಗೀತ.. ಪ್ರಮೋದ್ ಸಾಹಿತ್ಯ ಮೆಲೋಡಿ ಕಿಕ್
ಈಗಾಗಲೇ ಟೀಸರ್ ಹಾಗು ಅಜನೀಶ್ ಲೋಕನಾಥ್ ಸಂಗೀತದ “ಇದ್ದರೆ ನೆಮ್ಮದಿಯಾಗಿರರ್ಬೇಕು” ಸಾಂಗ್ ಮೂಲಕ ಪ್ರಮೊಷನ್ ಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಇದರ ಜೊತೆಗೆ ಡೆವಿಲ್ ಚಿತ್ರದ ಸಾಂಗ್ ಮೇಕಿಂಗ್ ನಲ್ಲಿಯು ಕೂಡ ದಾಸನ ಅಭಿಮಾನಿ ಬಳಗ ದರ್ಶನ್ ರ ಲುಕ್ ಗೆ ಫಿದಾ ಆಗಿದ್ದು ನೋವಿನಲ್ಲೂ ದಾಸನ ಡೆಡಿಕೇಷನ್ ನೋಡಿ ಕಳೆದು ಹೋಗಿದ್ದಾರೆ. ಇದರ ಜೊತೆಗೆ ಈಗ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಗೆ ಮುಹೂರ್ತ ಪಿಕ್ಸ್ ಆಗಿದ್ದು ದರ್ಶನ್ ಜೊತೆಗೆ ರಚನಾ ರೈ ನಟಿಸಿರೋ ಥೈಲೆಂಡ್ ನಲ್ಲಿ ಶೂಟ್ ಮಾಡಲಾಗಿರೊ ಸ್ಪೆಷಲ್ ಸಾಂಗ್ ಇದಾಗಿದೆ.
ದರ್ಶನ್ ಸಿನಿಮಾ ಅಂದ ಮೇಲೆ ಅಲ್ಲೊಂದು ಮೆಲೋಡಿಯಸ್ ಸಾಂಗ್ ಇದ್ದೇ ಇದೆ. ಅದೇ ರೀತಿ ಅಜನೀಶ್ ಲೋಕನಾಥ್ ಸಂಗೀತ.. ಪ್ರಮೋದ್ ಮರವಂತೆ ಸಾಹಿತ್ಯದ ಒಂದೆ ಒಂದು ಸಲ ಅನ್ನೋ ಲಿರಿಕಲ್ ಸಾಲುಗಳನ್ನ ಹೊಂದಿದೆ. ಸಾಂಗ್ ಬಿಡುಗಡೆ ಆಗಿ ಕೆಲವೇ ನಿಮಿಷಗಳಲ್ಲಿ ವೈರಲ್ ಆಗ್ತಿದ್ದು ಇದರಲ್ಲಿ ರಚನಾ ರೈ ಬಿಕಿನಿ ತೊಟ್ಟು ಗಮನ ಸೆಳೆದಿದ್ದಾರೆ. ಇನ್ನು ದರ್ಶನ್ ಸಖತ್ ಕಾಸ್ಟೂಮ್ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ಹಾಡನ್ನ ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ್ ಹಾಡಿದ್ದಾರೆ. ಮಿಲನ ಪ್ರಕಾಶ್ ನಿರ್ದೇಶನ.. ಜಯಮ್ಮ ನಿರ್ಮಾಣ ಡೆವಿಲ್ ಚಿತ್ರಕ್ಕಿದೆ. ಒಟ್ಟಿನಲ್ಲಿ ದರ್ಶನ್ ಡೆವಿಲ್ ಅಗಿ ಬರೋದಕ್ಕು ಮುನ್ನ ಚಿತ್ರದ ಮೆಲೋಡಿ ಟ್ರಾಕ್ ಬಿಡುಗಡೆ ಆಗಿದ್ದು, ಇದ್ದರೆ ನೆಮ್ಮದಿಯಾಗಿರಬೇಕು ಸಾಲಿಗೆ ಈ ಸಾಂಗ್ ಸೇರುತ್ತಾ ಮತ್ತೊಂದು ಸಕ್ಸಸ್ ಸಿಗುತ್ತಾ ಕಾದು ನೋಡಬೇಕಿದೆ.