ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ದಿ ಡೆವಿಲ್ ಚಿತ್ರದ ಪ್ರಮೋಷನ್ ಶುರುವಾಗಿದೆ. ಸದ್ಯ ಹೊಸ ವಿಡಿಯೋ ರಿಲೀಸ್ ಆಗಿದ್ದು.. ಡೆವಿಲ್ ಅಂದ್ರೆ ಏನು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಚಿತ್ರತಂಡ ಅಭಿಮಾನಿಗಳಿಗೆ ಟಾಸ್ಕ್ ಕೊಟ್ಟಿದ್ದಾರೆ.. ಇದರ ನಡುವೆ ದರ್ಶನ್.. ವಿಜಯಲಕ್ಷ್ಮಿ ಡೆವಿಲ್ ಬಗ್ಗೆ ಏನು ಹೇಳಿದ್ದಾರೆ ನೋಡೋಣ ಬನ್ನಿ.
ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್ನಲ್ಲಿ ಚಾರ್ಜ್ ಫ್ರೇಮ್ ಪ್ರಕ್ರಿಯೆ ಆಗಿದೆ. ಆದರೆ ದರ್ಶನ್ ಸೇರಿದಂತೆ ಆರೋಪಿಗಳೆಲ್ಲ ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದಿದ್ದಾರೆ. ಈ ನಡುವೆ ಹೊರಗಡೆ ಡೆವಿಲ್ ಪ್ರಚಾರ ಶುರುವಾಗಿದೆ. ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.. ಇನ್ನೇನು ಪ್ರಚಾರಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಿದ್ದು ಇಡೀ ತಂಡ ಡೆವಿಲ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಡೆವಿಲ್ ಅಂದ್ರೆ ಏನು..? ದಚ್ಚು-ರಚ್ಚು & ಟೀಂ ಹೇಳಿದ್ದೇನು..?
ಡೆವಿಲ್ ಬಗ್ಗೆ ವಿಜಯಲಕ್ಷ್ಮಿ ಸ್ಲೇಟ್ ಮೇಲೆ ಬರೆದಿದ್ದೇನು..?
ಡೆವಿಲ್ ಬಳಗಕ್ಕೆ ದರ್ಶನ್ ಮತ್ತೆ ಜೈಲು ಸೇರೋದು ಮೊದಲೆ ಗೊತ್ತಿತ್ತಾ ಅನ್ನೋ. ಪ್ರಶ್ನೆ ಈಗ ಮೂಡಿದೆ. ಎಸ್, ಒಂದೇ ಒಂದು ಸಲ ಹಾಡಿನ ಚಿತ್ರೀಕರಣದ ಸಮಯದಲ್ಲಿಯೇ ಡೆವಿಲ್ ಪ್ರಚಾರಕ್ಕೆ ಚಿತ್ರತಂಡ ಪ್ಲಾನ್ ಮಾಡಿದ್ರು ಅನ್ಸುತ್ತೆ. ಬ್ಯಾಂಕಾಕ್ ನಲ್ಲಿ ಶೂಟಿಂಗ್ ವೇಳೆ ವಿಭಿನ್ನವಾಗಿ ಪ್ರಚಾರದ ಪ್ಲಾನ್ ಮಾಡಿರೋ ಚಿತ್ರತಂಡದ ಸೀಕ್ರೆಟ್ ಈಗ ರಿವೀಲ್ ಆಗಿದೆ. ಹೌದು ಡೆವಿಲ್ ಚಿತ್ರದ ವಿಚಾರವಾಗಿ ಸ್ಲೇಟ್ ಹಿಡಿದು ಅನುಭವ ಹಂಚಿಕೊಂಡಿರೋ ಚಿತ್ರತಂಡ ನಟ ದರ್ಶನ್ ಕೂಡಾ ಡೆವಿಲ್ ಅನುಭವ ಹೇಳಿದ್ದಾರೆ.
ಬ್ಯಾಂಕಾಕ್ ಶೂಟಿಂಗ್ ಮುಗಿಸಿ ಬರ್ತಿದಂತೆ ಮತ್ತೆ ಜೈಲು ಪಾಲಾದ ದರ್ಶನ್ ಮತ್ತೆ ಹೊರಗೆ ಬಂದಿಲ್ಲ. ಈ ವೇಳೆ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಸಂಭಂದ ಪಟ್ಟ ವಿಷಯ ಹಾಗೂ ಅವರ ಸಿನಿಮಾ ಅಪ್ಡೇಟ್ ಗಳನ್ನ ನಾನೇ ಖುದ್ದಾಗಿ ಅವರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತೀನಿ ಅಂತ ಪೋಸ್ಟ್ ಮಾಡಿದ್ರು. ಇದೀಗ ಡೆವಿಲ್ ಥೈಲ್ಯಾಂಡ್ ನಲ್ಲಿ ಶೂಟಿಂಗ್ ಮಾಡಿದ್ದ ವಿಡಿಯೋ ರಿವೀಲ್ ಆಗಿದೆ. ಈ ಮೂಲಕ ದರ್ಶನ್ ಇಲ್ಲದಿದ್ದರೂ ಸಿನಿಮಾದ ಪ್ರಚಾರ ಮುಂದುವರೆದಿದೆ
ದರ್ಶನ್ ಮೌನ..ಸೆಲೆಬ್ರಿಟಿಗಳಿಗೆ ಡೆವಿಲ್ ದರ್ಶನ
ಡೆವಿಲ್‌ನಲ್ಲಿ ಬಿಗ್ ಬಾಸ್ ಗಿಲ್ಲಿ ನಟ..ಪೋಸ್ಟರ್ ಔಟ್
ಸದ್ಯ ಬಿಡುಗಡೆ ಆಗಿರುವ ವಿಡಿಯೋದಲ್ಲಿ ಮಗ ವಿನೀಶ್ ಹಾಗೂ ವಿಜಯಲಕ್ಷ್ಮಿ ಕೂಡ ಇದ್ದು ಡೆವಿಲ್ ಅಂದ್ರೆ ಹ್ಯಾಂಡ್ ಸಂ ಎಂದು ವಿಜಯಲಕ್ಷ್ಮಿ ಸ್ಲೇಟ್ ಮೇಲೆ ಬರೆದಿದ್ದಾರೆ.. ಇನ್ನು ಚಿತ್ರತಂಡದ ಕಲಾವಿದರು.. ತಂತ್ರಜ್ಞರು ಸ್ಲೇಟ್ ಮೇಲೆ ವಿಭಿನ್ನವಾಗಿ ಡೆವಿಲ್ ಅಂದ್ರೆ ಏನು ಅನ್ನೋದನ್ನ ಹೇಳಿಕೊಂಡಿದ್ದಾರೆ. ಆ ವಿಡಿಯೋ ಝಲಕ್ ಒಮ್ಮೆ ನೋಡಿ.
ಡಿಸೆಂಬರ್ 12ಕ್ಕೆ ರಾಜ್ಯಾದ್ಯಂತ ಡೆವಿಲ್ ರಿಲೀಸ್ ಆಗುತ್ತಿದೆ. ಹೀಗಾಗಿ ಮತ್ತೊಬ್ಬ ಕಲಾವಿದನ ಪೋಸ್ಟರ್ ಚಿತ್ರತಂಡ ಬಿಡುಗಡೆ ಮಾಡಿದೆ. ಎಸ್.. ಬಿಗ್‌ಬಾಸ್ ಕನ್ನಡ 12ನೇ ಸೀಸನ್‌ಗೆ ಕಾಲಿಟ್ಟಿರುವ ಗಿಲ್ಲಿ ನಟ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಹೀಗಿರುವಾಗ ಡೆವಿಲ್ ಚಿತ್ರತಂಡ ಗಿಲ್ಲಿಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು ಸಕತ್ ಸೀರಿಯಸ್ ಲುಕ್ ನಲ್ಲಿ ಗಿಲ್ಲಿ ಕಾಣಿಸಿಕೊಂಡಿದ್ದಾರೆ. Actually ಇದು ಗಿಲ್ಲಿ ಕರಿಯರ್ ಗೆ ಪ್ಲಸ್ ಪಾಯಿಂಟ್ ಆಗಳಿದ್ದು ದರ್ಶನ್ ಫ್ಯಾನ್ಸ್ ಬಿಗ್ ಬಾಸ್ ನಲ್ಲಿರೋ ಗಿಲ್ಲಿಗೂ ಈಗ ಸಪೋರ್ಟ್ ಮಾಡೋದು ಗ್ಯಾರಂಟಿ.





