ರೇಣುಕಾಸ್ವಾಮಿ ಸತ್ತು ಒಂದು ವರ್ಷ ಕಳೆಯಿತು. ಇಂದಿಗೂ ಡಿಬಾಸ್ ದರ್ಶನ್‌ಗಿಲ್ಲ ನೆಮ್ಮದಿ. ಏನೇ ಮಾಡ್ಬೇಕಂದ್ರೂ ಆ ಕಳಂಕದಿಂದ ಮುಕ್ತರಾಗದೆ ಮಾಡಲಾಗ್ತಿಲ್ಲ. ಅದ್ರಲ್ಲೂ ತೆಲುಗು ಚಿತ್ರರಂಗದ ಯೂಟ್ಯೂಬರ್‌ಗಳು ದಚ್ಚು ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಕೊನೆಗೆ ತಪ್ಪಿನ ಅರಿವಾಗಿ ಕ್ಷಮೆ ಕೂಡ ಯಾಚಿಸಿದ್ದಾರೆ. ಅಂದಹಾಗೆ ಥಾಯ್ಲೆಂಡ್ ಟೂರ್ ಪೋಸ್ಟ್‌ಪೋನ್ ಆಗಿದ್ಯಾಕೆ..? ಡಿಬಾಸ್ ವರ್ಸಸ್ ಟಿಎಫ್‌ಐ ಕಥೆ ಏನು ಅಂತೀರಾ..? ಇಲ್ಲಿದೆ ಕಂಪ್ಲೀಟ್ ಮಾಹಿತಿ.
- ದಚ್ಚುಗೆ ಆ ಒಂದು ಭಯ.. ಥಾಯ್ಲೆಂಡ್ ಪೋಸ್ಟ್‌ಪೋನ್
- ಕೋರ್ಟ್ನಿಂದಾಗಿ ಡೆವಿಲ್ ಫಾರಿನ್ ಶೂಟ್ ಮುಂದಕ್ಕೆ..?
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಅನ್ನೋ ಮಾತಿನಂತೆ ದಶಕಗಳಿಂದ ಕಷ್ಟ ಪಟ್ಟು ಕಟ್ಟಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್‌ಡಮ್ ಕೋಟೆಯನ್ನ ಸ್ವತಃ ಅವರೇ ಒಂದೇ ಒಂದು ಘಟನೆಯಿಂದ ಪಾತಾಳಕ್ಕೆ ಬೀಳುವಂತೆ ಮಾಡಿಕೊಂಡಿದ್ದಾರೆ. ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಪ್ರಮುಖ ಆರೋಪಿ ಆಗಿರೋ ದರ್ಶನ್, ಎಷ್ಟೇ ಒಳ್ಳೆಯ ಕೆಲಸಗಳು ಮಾಡಿದ್ರೂ, ಮಾಡ್ತಿದ್ರೂ, ದೇವರ ಮೊರೆ ಹೋದ್ರೂ, ಆ ಕಳಂಕದಿಂಧ ಮುಕ್ತರಾಗಲು ಆಗ್ತಿಲ್ಲ.
ಒಂದ್ಕಡೆ ಸಮಾಜ, ಮತ್ತೊಂದ್ಕಡೆ ಕಾನೂನು, ಮಗದೊಂದು ಕಡೆ ಮಾಡಿದ ತಪ್ಪು. ಈ ಮೂರೂ ಬೆಂಬಿಡದೆ ಕಾಡ್ತಿವೆ ದರ್ಶನ್‌ರನ್ನ. ಅದೆಷ್ಟೇ ಅಭಿಮಾನಿ ಬಳಗ ಹೊಂದಿದ್ರೂ, ಕೋಟ್ಯಂತರ ರೂಪಾಯಿ ಆಸ್ತಿ, ಐಶಾರಾಮಿ ಕಾರ್‌ಗಳು, ಫಾರ್ಮ್ ಹೌಸ್‌ಗಳು ಇದ್ದರೂ ನೆಮ್ಮದಿ ಇಲ್ಲದಂತಾಗಿದೆ. ಅದ್ರಲ್ಲೂ ಡೆವಿಲ್ ಸಿನಿಮಾದ ಫಾರಿನ್ ಶೂಟ್‌ಗೆ ಇದೆಲ್ಲವೂ ಪ್ರತ್ಯಕ್ಷವಾಗಿಯೇ ಅಫೆಕ್ಟ್ ಆಗಿದೆ.
ಹೌದು, ಡಿಬಾಸ್ ದರ್ಶನ್ ಜೂನ್ ತಿಂಗಳಲ್ಲೇ ಬ್ಯಾಂಕಾಕ್ ಹಾಗೂ ಯೂರೋಪ್ ಕಡೆ ಪಯಣ ಬೆಳೆಸ್ತಾರೆ ಎನ್ನಲಾಗಿತ್ತು. ಅದಕ್ಕಾಗಿ ಕೋರ್ಟ್ ಮೊರೆ ಹೋಗಿ ಪರ್ಮಿಷನ್ ಕೂಡ ಪಡೆದಿದ್ರು. ಆದ್ರೆ ಕೋರ್ಟ್ ಒಂದು ಕಂಡಿಷನ್ ಹಾಕಿತ್ತು. ತಿಂಗಳಿಗೊಮ್ಮೆ ಹಿಯರಿಂಗ್ ಇದ್ದಾಗ ಮಿಸ್ ಮಾಡದೆ ಕೋರ್ಟ್‌ಗೆ ದರ್ಶನ್ ಹಾಜರಾಗಬೇಕಿತ್ತು. ಹಾಗಾಗಿಯೇ ಇಂದು ಕೂಡ ಕೋರ್ಟ್‌ಗೆ ಹಾಜರಾಗಿದ್ರು ದಚ್ಚು. ಮೂಲಗಳ ಪ್ರಕಾರ ಮುಂದಿನ ವಾರ ಥಾಯ್ಲೆಂಡ್ ಫ್ಲೈಟ್ ಏರಲಿರೋ ಡೆವಿಲ್, ಅಲ್ಲಿನ ಸುಂದರ ತಾಣಗಳಲ್ಲಿ ಕಲರ್‌ಫುಲ್ ಸಾಂಗ್ಸ್‌ನ ಚಿತ್ರಿಸಿಕೊಂಡು ಬರ್ತಾರಂತೆ.
- ಡಿ ಬಾಸ್ v/s TFI.. ಯೂಟ್ಯೂಬರ್‌ಗೆ ಫ್ಯಾನ್ಸ್ ಹೆಡೆಮುರಿ
- ಕೊಲೆಗಾರ ಎಂದು ಅಪಪ್ರಚಾರ ಮಾಡಿದ ತೆಲುಗು ಭೂಪ
- Xನಲ್ಲಿ ದಚ್ಚು ಫ್ಯಾನ್ಸ್ ಗರಂ.. ಕ್ಷಮೆ ಕೋರಿದ ಯೂಟ್ಯೂಬರ್
ಹೌದು, ಕಳೆದ ನಾಲ್ಕೈದು ದಿನಗಳಿಂದ ಕೆಎಫ್‌ಐ ವರ್ಸಸ್ ಟಿಎಫ್‌ಐ ಟ್ರೆಂಡಿಂಗ್‌ನಲ್ಲಿದೆ. ಇದರ ಅರ್ಥ ಟಾಲಿವುಡ್ ವರ್ಸಸ್ ಸ್ಯಾಂಡಲ್‌ವುಡ್. ಇದು ಕನ್ನಡ ವರ್ಸಸ್ ತೆಲುಗು ಅನ್ನೋದಕ್ಕಿಂತ ಹೆಚ್ಚಾಗಿ ಟಾಲಿವುಡ್ ವರ್ಸಸ್ ದರ್ಶನ್. ಅದಕ್ಕೆ ಕಾರಣ ಆಂಧ್ರ ಮೂಲದ ಯೂಟ್ಯೂಬರ್ ಮಾಡಿದ ಎಡವಟ್ಟು.
55 ಸಿನಿಮಾಗಳನ್ನ ಮಾಡಿ, ತನ್ನದೇ ದೊಡ್ಡದೊಂದು ಸಾಮ್ರಾಜ್ಯ ಕಟ್ಟಿರೋ ನಟ ದರ್ಶನ್ ವಿರುದ್ಧ ಸಾಲು ಸಾಲು ವಿಡಿಯೋಗಳ ಮೂಲಕ ನೆಗೆಟೀವ್ ಸುದ್ದಿಗಳನ್ನ ಹಬ್ಬಿಸುತ್ತಿದ್ರು ತೆಲುಗು ಯೂಟ್ಯೂಬರ್. ಅದರಲ್ಲೂ ಆರೋಪಿ ಆಗಿರೋ ದರ್ಶನ್‌ರನ್ನ ಕೊಲೆಗಾರ ಅಂತೆಲ್ಲಾ ಪದ ಬಳಸಿ ನಿಂದಿಸಿದ್ದರು. ಇದು ಡಿಬಾಸ್ ದರ್ಶನ್ ಫ್ಯಾನ್ಸ್ ಗಮನಕ್ಕೆ ಬಂದು, ದರ್ಶನ್ ವರ್ಸಸ್ ತೆಲುಗು ಫಿಲ್ಮ್ ಇಂಡಸ್ಟ್ರಿ ಅಂತ ಎಕ್ಸ್ ನಲ್ಲಿ ಸರಣಿ ಪೋಸ್ಟ್‌ಗಳನ್ನ ಮಾಡಲು ಮುಂದಾದರು. ಅದು ಟ್ರೆಂಡಿಂಗ್‌ಗೆ ಬಂದು, ಯಾರೋ ಯೂಟ್ಯೂಬರ್ ಮಾಡಿದ ಎಡವಟ್‌ಗೆ ಇಡೀ ತೆಲುಗು ಚಿತ್ರರಂಗದ ಸ್ಟಾರ್ಸ್‌ಗೆ ಮುಜುಗರ ತರುವಂತಾಯ್ತು.
ಇದನ್ನು ಅರಿತ ಟಾಲಿವುಡ್ ಮಂದಿ ಆ ಯೂಟ್ಯೂಬರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತ್ರ ತನ್ನ ತಪ್ಪಿನ ಅರಿವಾಗಿ ನಟ ದರ್ಶನ್ ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಕ್ಷಮೆ ಯಾಚಿಸುವ ಮೂಲಕ ತಪ್ಪು ಒಪ್ಪಿಕೊಂಡಿದ್ದಾನೆ.
ಜೊತೆಗೆ ತಾನು ಮಾಡಿದ್ದ ಆ ಹಳೆಯ ವಿಡಿಯೋಗಳನ್ನೆಲ್ಲಾ ಡಿಲೀಟ್ ಮಾಡಿದ್ದಾನೆ. ಕಲಾವಿದರು ಅಂದಾಗ ಭಾಷೆ, ಗಡಿಯ ಹಂಗಿಲ್ಲ. ಎಲ್ಲರಲ್ಲೂ ಸಾಮರಸ್ಯ ಇರಬೇಕು. ಇನ್ನು ಇದ್ರಿಂದ ದರ್ಶನ್ ಗತ್ತು ಎಂಥದ್ದು ಅನ್ನೋದು ಬರೀ ಯೂಟ್ಯೂಬರ್‌ಗಷ್ಟೇ ಅಲ್ಲ, ಇಡೀ ತೆಲುಗು ಚಿತ್ರರಂಗಕ್ಕೂ ಗೊತ್ತಾಗಿದೆ.
