ಬಹುಶಃ ಡೆವಿಲ್ ನಟ ದರ್ಶನ್‌ರ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿದೆ. ಅದಕ್ಕೆ ಕಾರಣ ಮತ್ತೆ ದರ್ಶನ್ ಯಾವಾಗ ಹೊರಗೆ ಬರ್ತಾರೋ ಗೊತ್ತಿಲ್ಲ. ಅಸಲಿಗೆ ಬರ್ತಾರಾ ಅನ್ನೋದೇ ಡೌಟು. ಈ ಬಗ್ಗೆ ಯಾವ ಜ್ಯೋತಿಷಿ ಕೂಡ ಭವಿಷ್ಯ ನುಡಿಯಲಾರ. ಅಲ್ಲದೆ, ಡೆವಿಲ್ ಬಳಿಕ ಸೆಟ್ಟೇರಬೇಕಿದ್ದ ಮೂರು ಸಿನಿಮಾಗಳ ಅಡ್ವಾನ್ಸ್ ವಾಪಸ್ ನೀಡಿದ್ದಾರೆ ಎನ್ನಲಾಗ್ತಿದೆ.
- ದಚ್ಚುಗೆ ಡೆವಿಲ್ ಕೊನೆ ಚಿತ್ರ..? ಉಳಿದೆಲ್ಲಾ ಅಡ್ವಾನ್ಸ್ ವಾಪಸ್?
- ಯಾವ ಜ್ಯೋತಿಷಿಗೂ ಗೊತ್ತಿಲ್ಲ ದರ್ಶನ್ ಮುಂದಿನ ಭವಿಷ್ಯ..!
- ಜೈಲಿಗೆ ಹೀರೋ ದಾಸ.. ಥಿಯೇಟರ್‌ಗೆ ಡೆವಿಲ್- ದಿ ಹೀರೋ
- ಡಿವಿಲ್‌ನಲ್ಲಿ ಮೀಡಿಯಾಗೆ ಟಾಂಗ್ ಕೊಡೋ ಕಂಟೆಂಟ್..?!
ತಾನು ಮಾಡಿದ ಮಹಾ ಎಡವಟ್ಟುಗಳು, ಅವು ಸಾಲದು ಅಂತ ಅಭಿಮಾನಿಗಳ ಹೆಸರಲ್ಲಿ ತರಲೆಗಳು ಮಾಡಿದ ಮಿಸ್ಟೇಕ್‌ಗಳಿಂದ ನಟ ದರ್ಶನ್ ಬೇಲ್‌ನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೆ ಚಿತ್ರರಂಗ, ಸಮಾಜ, ಅಭಿಮಾನಿಗಳು ಹಾಗೂ ಕುಟುಂಬದ ದರ್ಶನ ಅಷ್ಟು ಸುಲಭವಾಗಿಲ್ಲ. ಹೌದು.. ಒಂದಷ್ಟು ಮೂಲಗಳ ಪ್ರಕಾರ ಡೆವಿಲ್ ಸಿನಿಮಾನೇ ದಚ್ಚು ಕಟ್ಟಕಡೆಯ ಸಿನಿಮಾ ಎನ್ನಲಾಗ್ತಿದೆ.
ಯೆಸ್.. ಹಿರಿಯ ಕಾನೂನು ತಜ್ಞರು ಹೇಳಿದಂತೆ ದರ್ಶನ್‌ಗೆ ಕನಿಷ್ಟ 7 ವರ್ಷ ಸೆರೆಮನೆ ವಾಸ ಕನ್ಫರ್ಮ್. ಇನ್ ಕೇಸ್ 302 ಅಪ್ಲೈ ಮಾಡಿದ್ರೆ ಜೀವಾವಧಿ ಅಥವಾ ಮರಣದಂಡನೆ ನೀಡಿದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಹೀಗಿರುವಾಗ ಯಾವ ಜ್ಯೋತಿಷಿ ಕೂಡ ಡಿಬಾಸ್ ಮುಂದಿನ ಭವಿಷ್ಯವನ್ನು ಊಹಿಸಲಾರ. ಭವಿಷ್ಯ ಹೇಳಲಾರ. ಈ ಬಾರಿಯ ಬೇಲ್ ರದ್ದು ತೀರ್ಪು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಅಂತ ದೇಶಕ್ಕೆಲ್ಲಾ ಮಾದರಿ ಆಗಲಿದೆ ಎಂದಿದೆ. ಹಾಗಾಗಿ ದರ್ಶನ್ ನಿಜಕ್ಕೂ ಹೊರಬರ್ತಾರಾ..? ಬಂದು ಮತ್ತೆ ಸಿನಿಮಾ ಮಾಡ್ತಾರಾ ಅಂದ್ರೆ ಸದ್ಯಕ್ಕೆ ನೋ ಅಂತಲೇ ಆನ್ಸರ್ ಸಿಗ್ತಿದೆ.
ಇನ್ನು ಡೆವಿಲ್ ಚಿತ್ರದ ಹೀರೋ ಜೈಲಲ್ಲಿದ್ದು, ಡೆವಿಲ್ ದಿ ಹೀರೋ ಥಿಯೇಟರ್‌ಗೆ ಇದೇ ಅಕ್ಟೋಬರ್ ತಿಂಗಳಾಂತ್ಯಕ್ಕೆ ಹೋಗುವ ಮುನ್ಸೂಚನೆ ಇದೆ. ಆದ್ರೆ ಅದಾದ ಬಳಿಕ ದರ್ಶನ್‌ರ ಮೂರು ಸಿನಿಮಾಗಳು ಸರತಿ ಸಾಲಿನಲ್ಲಿದ್ದವು. ಅವ್ಯಾವೂ ಸಹ ಸೆಟ್ಟೇರುವ ಸೂಚನೆ ಇಲ್ಲ. ಎಲ್ಲಾ ಚಿತ್ರಗಳ ಅಡ್ವಾನ್ಸ್‌ನ ದರ್ಶನ್ ವಾಪಸ್ ನೀಡಿದ್ದಾರಂತೆ. ಹೌದು.. ಸೂರಪ್ಪ ಬಾಬು, ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಬಿ ಸುರೇಶ್- ಶೈಲಜಾ ನಾಗ್ ಜೊತೆಗಿನ ಪ್ರಾಜೆಕ್ಟ್‌ಗಳ ಕಾಸು ವಾಪಸ್ ನೀಡಿ, ಮುಂದೆ ನೋಡೋಣ ಎಂದಿದ್ದಾರಂತೆ ದಾಸ.
ಇವೆಲ್ಲಾ ಒಂದ್ಕಡೆ ಆದ್ರೆ, ಡೆವಿಲ್ ಟೀಸರ್‌ನಲ್ಲಿ ಮೀಡಿಯಾಗೆ ಟಾಂಗ್ ಕೊಡೋ ರೀತಿ ಡೈಲಾಗ್ಸ್ ಇವೆ. ಬೇಡ ಬೇಡ ಅಂದ್ರೂ ನನ್ನ ಬಗ್ಗೆ ಚಿತ್ರಿಸ್ತೀರಿ, ಅದಕ್ಕೆ ನನಗೆ ಕೋಪ ಬಂದಿದೆ ಅನ್ನೋ ಅರ್ಥದಲ್ಲಿ ಟೀಸರ್ ಚಿತ್ರಿಸಲಾಗಿದೆ. ಅಲ್ಲದೆ, ಪತ್ನಿಗೆ ಎಣ್ಣೆ ಏಟಲ್ಲಿ ಬೈದಿದ್ದ ಆಡಿಯೋ ಲೈನ್ಸ್‌ನ ಇಟ್ಕೊಂಡು ಬೇರೆ ಸಾಂಗ್ ಮಾಡಿದ್ದಾರೆ. ಇವೆಲ್ಲವೂ ಕೂಡ ಈ ಬಾರಿಯೂ ಸಹ ದರ್ಶನ್ ಜೊತೆ ಆತನ ಸಿನಿಮಾನ ಬ್ಯಾನ್ ಮಾಡಿದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್