ಪವಿತ್ರಾ ಗೌಡ ಗೃಹ ಪ್ರವೇಶದಲ್ಲಿ ಡಿಬಾಸ್ ದರ್ಶನ್ ಮಿಂಚು!

ದಾಸನಿಗೆ ಪವಿತ್ರಾ ಗೆಳತಿನಾ..? ಪತ್ನಿನಾ..? ಏನಿದು ಮೀನಮ್ಮ..?

Your paragraph text (68)

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವಿತ್ರಾ ಗೌಡ ಕುರಿತಾದ ಸುದ್ದಿಯೊಂದು ಸದ್ಯ ಸಿಕ್ಕಾಪಟ್ಟೆ ಸಂಚಲನ ಮೂಡಿಸ್ತಿದೆ. ಇಷ್ಟು ದಿನ ಅಂತೆ ಕಂತೆ ಎನ್ನಲಾಗ್ತಿದ್ದ ಆ ನ್ಯೂಸ್ ಇದೀಗ ಅದೊಂದು ವಿಡಿಯೋದಿಂದ ನಿಜ ಅನಿಸ್ತಿದೆ. ದಚ್ಚು-ಪವಿತ್ರಾ ನಡುವೆ ಇರೋದು ಸ್ನೇಹನಾ ಪ್ರೀತಿನಾ ಅಂತಿದ್ರು. ಆದ್ರೀಗ ಅದಕ್ಕೊಂದು ಪಕ್ಕಾ ಕ್ಲ್ಯಾರಿಟಿ ಸಿಕ್ಕಿದೆ. ಇಂಟರೆಸ್ಟಿಂಗ್ ಅಂದ್ರೆ ದಾಸನ ತಾಯಿ ಮೀನಾ ಅವ್ರೇ ಆ ಸಂಬಂಧದ ಸಂಭ್ರಮಾಚರಣೆಗೆ ಸಾಕ್ಷಿ ಆಗಿರೋದು ಪರಮ ಅಚ್ಚರಿ.

ಪವಿತ್ರಾ ಗೌಡ.. ಒಂದು ಕಾಲದ ಸ್ಯಾಂಡಲ್‌ವುಡ್‌ನ ನಟಿಮಣಿ.. ಮಾಡೆಲ್. ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ರೆಡ್ ಕಾರ್ಪೆಟ್ ಅನ್ನೋ ಫ್ಯಾಷನ್ ಸ್ಟುಡಿಯೋ ಇಟ್ಕೊಂಡು, ಗ್ಲಾಮರ್ ಲೋಕದ ಜೊತೆ ನಂಟು ಹೊಂದಿದ್ದ ಚೆಲುವೆ. ಇಂದು ನಟ ದರ್ಶನ್ ಜೈಲು ಪಾಲಾಗೋದಕ್ಕೆ ಕಾರಣವಾಗಿರೋದು ಕೂಡ ಇದೇ ಪವಿತ್ರಾ ಅನ್ನೋದು ಬೇಸರದ ಸಂಗತಿ. ಯೆಸ್.. ಮದುವೆ ಆಗಿ, ಹೆಣ್ಣು ಮಗುವೊಂದರ ತಾಯಿ ಆಗಿದ್ರೂ ಸಹ, ಗಂಡ ಸಂಜಯ್ ಸಿಂಗ್‌ಗೆ ಡಿವೋರ್ಸ್ ನೀಡಿ, ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ರು. ಆದ್ರೆ ದರ್ಶನ್ ಜೊತೆ ಸ್ನೇಹ ಸಂಬಂಧ ಬೆಳೆಸಿ ತನ್ನ ಜೊತೆ ಸೂಪರ್ ಸ್ಟಾರ್ ಲೈಫ್ ಕೂಡ ಬೀದಿಗೆ ತಂದುಬಿಟ್ಟರು.

ರೇಣುಕಾಸ್ವಾಮಿ ಮರ್ಡರ್ ಆಗಿ ಎರಡು ವರ್ಷಗಳ ಮೇಲಾಯ್ತು. ಅದೇ ಪ್ರಕರಣದಲ್ಲಿ ಅರೆಸ್ಟ್ ಆಗಿ ಜೈಲು ಪಾಲಾಗಿರೋ ಪವಿತ್ರಾ ಗೌಡ ಆರೋಪಿ ನಂಬರ್ 1 ಆದ್ರೆ.. ನಟ ದರ್ಶನ್ ಆರೋಪಿ ನಂಬರ್ 2. ಸತತ ಎರಡು ವರ್ಷಗಳಿಂದ ಜೈಲೂಟ ಸವಿಯುತ್ತಾ, ಪಂಜರದ ಪಕ್ಷಿಗಳಂತೆ ನಾಲ್ಕು ಗೋಡೆ ಮಧ್ಯೆ ಪಚ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿದ್ದಾರೆ ದರ್ಶನ್-ಪವಿತ್ರಾ ಗೌಡ. ಒಂದ್ಕಡೆ ಪವಿತ್ರಾಗೆ ಬೇಲ್ ರಿಜೆಕ್ಟ್ ಆಗಿದೆ. ಮತ್ತೊಂದ್ಕಡೆ ಡಿಬಾಸ್ ದರ್ಶನ್‌ಗೆ ಮಾಫಿ ಸಾಕ್ಷಿ ಪ್ರದೋಷ್ ಕಂಟಕ ಆಗ್ತಿದ್ದಾರೆ.

ಇವೆಲ್ಲದೆ ನಡುವೆ ರಾಷ್ಟ್ರಪತಿ ದ್ರೌಪದಿ  ಮುರ್ಮು ಅವರಿಗೆ ನಟ ದರ್ಶನ್ ಫ್ಯಾನ್ಸ್ ಪತ್ರ ಕೂಡ ಬರೆದಿದ್ದಾರೆ. ತಾಯಿ ಹೃದಯದ ನೀವು ಈ ಕೇಸ್‌‌ನಿಂದ ನಮ್ಮ ನೆಚ್ಚಿನ ನಟನನ್ನ ಬಿಡುಗಡೆಗೊಳಿಸಲು ಗಮನ ಹರಿಸಿ ತಾಯಿ ಅಂತ ಮನವಿ ಮಾಡಿದ್ದಾರೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಬಾಂಬ್ ಸಿಡಿದಿದೆ. ಅದೇನಪ್ಪಾ ಅಂದ್ರೆ ಪವಿತ್ರಾ ಗೌಡ ಮನೆಯ ಗೃಹ ಪ್ರವೇಶದಲ್ಲಿ ದಾಸ ದರ್ಶನ್ ಮಿಂಚ್ತಿರೋ ವಿಡಿಯೋ ದೇಶಾದ್ಯಂತ ಗುಸು ಗುಸು ಅಂತ ಮಾತನಾಡಿಕೊಳ್ಳುವಂತಾಗಿದೆ. ಅದೊಂದು ವಿಡಿಯೋ ಸಾಕಷ್ಟು ನಾನಾ ಅರ್ಥಗಳಿಗೆ ದಾರಿ ಮಾಡಿಕೊಟ್ಟಿದೆ.

ಹೌದು.. ಬೆಂಗಳೂರಿನ ಕುಬೇರನ ಮೂಲೆ ಆರ್ ಆರ್ ನಗರದಲ್ಲಿ ನಿರ್ಮಿಸಿರೋ ಪವಿತ್ರಾ ಗೌಡ ಹೊಚ್ಚ ಹೊಸ ಮನೆಯ ಗೃಹ ಪ್ರವೇಶದ ವೇಳೆ ನಟ ದರ್ಶನ್ ಅಲ್ಲಿ ಉಪಸ್ಥಿತರಿದ್ದಾರೆ. ಅಲ್ಲಿಗೆ ದಾಸ ಬರೀ ಗೆಸ್ಟ್ ರೀತಿ ಹೋಗಿ ಬಂದಿದ್ರೆ ಬಹುಶಃ ಯಾರೂ ಅದನ್ನ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಗಂಡನ ರೀತಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಪವಿತ್ರಾ ಗೌಡ ಜೊತೆ ಹೋಮಕ್ಕೆ ಕೂತು, ಪೂಜೆಯಲ್ಲಿ ಸತಿ-ಪತಿಯಂತೆ ಅವರಿಬ್ಬರು ಪರಸ್ಪರ ಹಾರಗಳನ್ನ ಬದಲಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.

ಪವಿತ್ರಾ ಮಗಳ ಜೊತೆ ಮಗುವಂತೆ ದರ್ಶನ್ ಕೀಟಲೆ ಮಾಡ್ತಾ ಖುಷ್ ಖುಷಿಯಾಗಿದ್ದಾರೆ. ನಟ ಡಿಬಾಸ್ ಮುಖದಲ್ಲಿ ಏನೋ ಪ್ರಪಂಚವನ್ನೇ ಗೆದ್ದು ಬಂದಂತಹ ಸಂಭ್ರಮ ಎದ್ದು ಕಾಣ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಆ ಗೃಹ ಪ್ರವೇಶ ಸಮಾರಂಭದಲ್ಲಿ ದರ್ಶನ್-ಪವಿತ್ರಾ ಜೋಡಿಯ ಜೊತೆ ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ತಾಯಿ ಮೀನಾ ತೂಗುದೀಪ ಅವರು ಕೂಡ ಉಪಸ್ಥಿತರಿದ್ದಾರೆ. ಇದನ್ನ ಕಂಡು ಮೀನಮ್ಮಾ ಏನಮ್ಮಾ ಇದೆಲ್ಲಾ ಅಂತ ಪ್ರಶ್ನಿಸ್ತಿದ್ದಾರೆ ನೆಟ್ಟಿಗರು.

ದರ್ಶನ್‌ಗೆ ಈಗಾಗ್ಲೇ ವಿಜಯಲಕ್ಷ್ಮೀ ಜೊತೆ ಮದ್ವೆ ಆಗಿ ಒಬ್ಬ ಮಗ ಕೂಡ ಇರೋದು ಇಡೀ ಕರ್ನಾಟಕಕ್ಕೇ ಗೊತ್ತಿದೆ. ಆದ್ರೆ ಮುದ್ದಿನ ಮಡದಿ, ಮಗ ಇದ್ಕೊಂಡು ಈ ರೀತಿ ದರ್ಶನ್ ಯಾರ ಭಯ, ಭಕ್ತಿ ಇಲ್ಲದೆ.. ರಾಜಾರೋಷವಾಗಿ ಪವಿತ್ರಾ ಮನೆಯ ಗೃಹ ಪ್ರವೇಶದಲ್ಲಿ ಭಾಗಿಯಾಗಿರೋದು ಅಚ್ಚರಿಯೇ ಸರಿ. ಅಲ್ಲಿಗೆ ಅಂತೆ ಕಂತೆಯಾಗಿ ಉಳಿದಿದ್ದ ಪವಿತ್ರಾ-ದರ್ಶನ್ ಅಕ್ರಮ ಸಂಬಂಧವನ್ನ ಸಕ್ರಮಗೊಳಿಸಲು ಹೊರಬಂದಿರೋ ಸಾಕ್ಷಿ ವಿಡಿಯೋ ಇದು ಅಂದ್ರೂ ತಪ್ಪಿಲ್ಲ.

ಸಿನಿಮಾಗಳ ಮೂಲಕ ಕೋಟ್ಯಂತರರ ಮಂದಿಗೆ ಹೀರೋ ಆಗಿ ಕಾಣಿಸಿಕೊಳ್ಳೋ ನಟ ದರ್ಶನ್.. ನಿಜ ಜೀವನದಲ್ಲಿ ಮಾಡಿರೋದು ಏನು..? ಅವ್ರನ್ನ ಫಾಲೋ ಮಾಡೋ ಅದೆಷ್ಟೋ ಮಂದಿ ಅಭಿಮಾನಿಗಳು ಇದ್ದಾರೆ. ಅದಕ್ಕೆಲ್ಲಾ ಏನು ಸಂದೇಶ ನೀಡ್ತಾರೆ..? ಸೊಸೆ ಇದ್ದುಕೊಂಡೇ.. ಮತ್ತೊಬ್ಬಳ ಜೊತೆ ಸಂಬಂಧ ಬೆಳೆಸಿರೋ ಮಗನಿಗೆ ಸಾಥ್ ನೀಡಿದ ಮೀನಾ ತೂಗುದೀಪ ಅವ್ರ ನಡೆ ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ.

ಈ ಗೃಹ ಪ್ರವೇಶ ಕಾರ್ಯಕ್ರಮ ನಡೆದು ಕೆಲವು ವರ್ಷಗಳೇ ಕಳೆದು ಹೋಗಿದೆ. ಆದ್ರೆ ಈಗ ವೈರಲ್ ಆಗ್ತಿದೆ ಆ ವಿಡಿಯೋ. ಇದನ್ನ ಈಗ ಲೀಕ್ ಮಾಡಿದ್ದು ಯಾರು..? ಇದು ಉದ್ದೇಶ ಪೂರ್ವಕವಾಗಿಯೇ ಸೋಶಿಯಲ್ ಮೀಡಿಯಾಗೆ ಸೋರಿಕೆ ಮಾಡಿದ್ರಾ ಅನ್ನೋ ಪ್ರಶ್ನೆಗಳು ಬಲವಾಗಿ ಕೇಳಿಬರ್ತಿವೆ. ಇದನ್ನೆಲ್ಲಾ ನೋಡ್ತಿದ್ರೆ ನಟ ದರ್ಶನ್‌‌ ಬಾಳು ಅಪವಿತ್ರ ಮಾಡಲೆಂದೇ ಯಾರೋ ಪ್ಲ್ಯಾನ್ ಮಾಡಿದಂತಿದೆ. ಅದೇ ಕಾರಣದಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಗೃಹ ಪ್ರವೇಶದ ವಿಡಿಯೋನ ಬಯಲು ಮಾಡಿದ್ದಾರೆ.

ನೋಡಿ.. ಇದು ದರ್ಶನ್ ಗೊತ್ತೋ ಗೊತ್ತಿಲ್ಲದೇನೋ ತನ್ನ ಲೈಫ್‌‌ಗೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಆದ್ರೆ ಅವರೊಟ್ಟಿಗೆ ಇರೋ ಅಷ್ಟೂ ಮಂದಿ ಸೇರಿ ಅವ್ರನ್ನ ಪ್ರೋತ್ಸಾಹಿಸೋ ಮೂಲಕ ಇಷ್ಟೆಲ್ಲಾ ಆಗೋಕೆ ಕಾರಣವಾಗಿದೆ. ಅಂದೇ ಜೊತೆಗಿದ್ದವರೆಲ್ಲಾ ಪ್ರಶ್ನಿಸಬಹುದಿತ್ತು. ನೀವು ಮಾಡ್ತಿರೋದು ಸರಿ ಇಲ್ಲ ಬಾಸ್. ದಯವಿಟ್ಟು ತಿದ್ದುಕೊಳ್ಳಿ ಅನ್ನಬಹುದಿತ್ತು. ಆದ್ರೆ ಅದ್ಯಾವುದೂ ಮಾಡಿಲ್ಲ. ನೀವು ಮಾಡಿದ್ದೇ ಸರಿ ಬಾಸ್. ನೀವೇ ಇಂದ್ರ.. ನೀವೇ ಚಂದ್ರ ಅಂತೆಲ್ಲಾ ಅಕ್ಷರಶಃ ಹಾಳು ಮಾಡಿದ್ದಾರೆ. ಅದರ ಪ್ರತಿಫಲ ಇಂದು ಜೈಲೂಟ ತಿನ್ನುವಂತಾಗಿದೆ.

ಒಟ್ಟಾರೆ ರೇಣುಕಾಸ್ವಾಮಿ ಮರ್ಡರ್ ಕೇಸ್ ಬಳಿಕ ಅರೆಸ್ಟ್ ಆಗಿದ್ದ ದರ್ಶನ್-ಪವಿತ್ರಾ ಗೌಡ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಆಗ ಕಮಿಷನರ್ ಮಾತಾಡ್ತಾ ದರ್ಶನ್ ಪತ್ನಿ ಪವಿತ್ರಾ ಗೌಡ ಅನ್ನೋ ಪದಬಳಕೆ ಮಾಡಿದ್ರು. ಆಕೆ ಹೆಂಡ್ತಿ ಅಲ್ಲ.. ಹಾಗಂತ ಬಳಸದಿರಲು ವಿಜಯಲಕ್ಷ್ಮೀ ಕೂಡ ದರ್ಶನ್ ಪರ ವಕೀಲರ ಮೂಲಕ ಮಾಧ್ಯಮಗಳಿಗೆ ಮನವಿ ಮಾಡಿದ್ರು. ಆದ್ರೀಗ ಪವಿತ್ರಾ ಗೌಡ ಕುತ್ತಿಗೆಯಲ್ಲಿ ಇರೋ ತಾಳಿ ನೋಡಿದ್ರೆ.. ದಚ್ಚು ಜೊತೆಗಿನ ಆಕೆಯ ಸಲುಗೆ ನೋಡಿದ್ರೆ ಅವರಿಬ್ಬರ ನಡುವೆ ಸ್ನೇಹ, ಪ್ರೀತಿ ಸಂಬಂಧವನ್ನ ಮೀರಿದ ಅನುಬಂಧವಿರೋದು ಮಾತ್ರ ಖಚಿತ ಅನಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version