ಫ್ಯಾಮಿಲಿ ಬ್ಲಾಕ್‌ಬಸ್ಟರ್ ಅಯೋಗ್ಯ-2 ಸಿನಿಮಾನ ಯಾರೂ ತಡೆಯೋಕೆ ಆಗ್ತಿಲ್ಲ. ಬರೋಬ್ಬರಿ 27 ಸೆಂಟರ್ಸ್‌ನಲ್ಲಿ ಯಶಸ್ವೀ 50 ದಿನ ಪೂರೈಸೋ ಮೂಲಕ ಹಾಫ್ ಸೆಂಚುರಿ ಭಾರಿಸಿದೆ ಟೀಂ. ಮಂಡ್ಯದಲ್ಲಿ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಟ್ ಮಾಡಿದ್ದ ಸತೀಶ್-ಮಹೇಶ್ ಟೀಂ.. ಇದೀಗ ಅರಮನೆ ನಗರಿ ಮೈಸೂರಲ್ಲಿ ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆ ಮಾಡಿದೆ. ಇದರ ಫುಲ್ ಡಿಟೇಲ್ಸ್ ಇಲ್ಲಿದೆ..
- 27 ಸೆಂಟರ್ಸ್.. ಅಯೋಗ್ಯ ಗ್ರ್ಯಾಂಡ್ 50 ಡೇಸ್ ಸೆಲೆಬ್ರೇಷನ್
- ಮಂಡ್ಯದಲ್ಲಿ ಸಿಲ್ವರ್ ಜ್ಯುಬಿಲಿ.. ಮೈಸೂರಲ್ಲಿ ಗೋಲ್ಡನ್ ಜ್ಯುಬಿಲಿ
- ಈ ವರ್ಷದ ಫ್ಯಾಮಿಲಿ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಅಯೋಗ್ಯ-2
- ಕೇಕ್ ಕಟ್ ಮಾಡಿ.. ಫ್ಯಾನ್ಸ್ ಜೊತೆ ಸತೀಶ್-ಮಹೇಶ್ ಸಂಭ್ರಮ
ಟಾಕ್ಸಿಕ್, ಪ್ಯಾರಡೈಸ್‌ನಂತಹ ಬಿಗ್ ಬಜೆಟ್.. ಮೆಗಾ ಪ್ಯಾನ್ ಇಂಡಿಯಾ ಸಿನಿಮಾಗಳೇ ಅಡ್ರೆಸ್‌ಗೆ ಇಲ್ಲದಂತೆ ಹೋದವು. ಆದ್ರೆ ಅವುಗಳ ಮಧ್ಯೆ ಅಯೋಗ್ಯ-2 ಸಿನಿಮಾ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋದು ನಿಜಕ್ಕೂ ಖುಷಿಯ ವಿಚಾರ. ಯೆಸ್.. ರಾಜ್ಯದಾದ್ಯಂತ ಒಂದಲ್ಲ, ಎರಡಲ್ಲ ಬರೋಬ್ಬರಿ 27 ಸೆಂಟರ್‌ಗಳಲ್ಲಿ ಅಯೋಗ್ಯ-2 ಗ್ರ್ಯಾಂಡ್ ಗೋಲ್ಡನ್ ಜ್ಯುಬಿಲಿಗೆ ಕಾಲಿಟ್ಟಿದೆ.
ಇತ್ತೀಚೆಗೆ ರಿಲೀಸ್ ಆಗ್ತಿರೋ ಸಿನಿಮಾಗಳು ಒಂದು ವಾರ ಥಿಯೇಟರ್‌ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳೋದು ಕಷ್ಟಕರವಾಗಿದೆ. ಅಂಥದ್ರಲ್ಲಿ ಅಯೋಗ್ಯ-2 ಸಿನಿಮಾ ಯಶಸ್ವಿ 50 ದಿನ ಪೂರೈಸಿ, ಶತದಿನೋತ್ಸವದತ್ತ ಮುನ್ನುಗ್ಗುತ್ತಿರೋದು ಖುಷಿಯ ವಿಚಾರ. ಕಥೆಯಲ್ಲಿ ಸಾರ, ಪಾತ್ರಗಳಲ್ಲಿ ಜೀವಂತಿಕೆ ಇದ್ದು, ಅದು ಚಿತ್ರಪ್ರೇಮಿಗಳಿಗೆ ರುಚಿಸಿದ್ರೆ ಸಾಕು. ಅಂತಹ ಸಿನಿಮಾಗಳನ್ನ ಜನ ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ಸದ್ಗಯ ಅಯೋಗ್ಯ-2 ಅಂತಹ ಗಟ್ಟಿ ಕಥೆಯಿಂದ ಹಳ್ಳಿ ಸೊಗಡು, ಸೊಬಗನ್ನ ಹೆಚ್ಚಿಸಿದೆ.
ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಜೋಡಿಯ ಅಯೋಗ್ಯ-2ಗೆ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ರು. ಮಟನ್ ಹಾಗೂ ಬೆಣ್ಣೆಯಾಗಿ ಶಿವರಾಜ್ ಕೆ ಆರ್ ಪೇಟೆ, ಗಿರಿ ಕಾಣಿಸಿಕೊಂಡಿದ್ರು. ಪ್ರಜ್ಞಾ ಮಿಲ್ಕಿ ಬ್ಯೂಟಿಯಾಗಿ ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ರು. 25 ದಿನ ಕಂಪ್ಲೀಟ್ ಆದಾಗ ಮಂಡ್ಯದ ಸಂಜಯ್ ಥಿಯೇಟರ್‌ನಲ್ಲಿ ಗ್ರ್ಯಾಂಡ್ ಸೆಲೆಬ್ರೇಷನ್ ಮಾಡಿದ್ದ ಚಿತ್ರತಂಡ, ಇದೀಗ 50 ಡೇಸ್ ಸೆಲೆಬ್ರೇಷನ್‌ನ ಅರಮನೆ ನಗರಿ ಮೈಸೂರಲ್ಲಿ ನಡೆಸಿದೆ.
ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡಿ, ಹೂಮಳೆ ಸುರಿಸಿದ್ದಾರೆ ಅಭಿಮಾನಿಗಳು. ಯೆಸ್.. ಮೈಸೂರಿನ ಲಿಡೋ ಥಿಯೇಟರ್ ಬಳಿ ದೊಡ್ಡ ಪ್ರಮಾಣದಲ್ಲಿ ಜಮಾಯಿಸಿದ್ದ ಚಿತ್ರಪ್ರೇಮಿಗಳು ಅಯೋಗ್ಯ-2 ಟೀಂಗೆ ಅಭೂತಪೂರ್ವ ಸ್ವಾಗತ ಕೋರಿತು. ಹೀರೋ ಸತೀಶ್, ಡೈರೆಕ್ಟರ್ ಮಹೇಶ್ ಜೊತೆ ಶಿವರಾಜ್ ಕೆ ಆರ್ ಪೇಟೆ ಹಾಗೂ ಗಿರಿ ಕೂಡ ಸಾಥ್ ನೀಡಿದ್ರು.
66 ಸೆಂಟರ್‌ಗಳಲ್ಲಿ 25 ಡೇಸ್ ಕಂಪ್ಲೀಟ್ ಮಾಡಿದ್ದ ಅಯೋಗ್ಯ-2 ಸಿನಿಮಾ, ಇದೀಗ 27 ಸೆಂಟರ್‌ಗಳಲ್ಲಿ 50 ಡೇಸ್ ಕೂಡ ಕಂಪ್ಲೀಟ್ ಮಾಡಿದೆ. ಇದು ನಿಜವಾಗಿಯೂ ಒಳ್ಳೆಯ ಸಿನಿಮಾಗೆ ಕನ್ನಡಿಗರು ತೋರಿದ ಪ್ರೀತಿ, ಅಭಿಮಾನದ ಪ್ರತೀಕವಾಗಿದೆ. ಒಟ್ಟಾರೆ ಅಯೋಗ್ಯ-2 ಇಷ್ಟು ದೊಡ್ಡ ಹಿಟ್ ಆಗ್ತಿದ್ದಂತೆ ಡೈರೆಕ್ಟರ್ ಮಹೇಶ್‌ಗೆ ಡಿಮ್ಯಾಂಡ್ ಹೆಚ್ಚಿದೆ. ಗಣೇಶ್, ಶರಣ್ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್ಸ್ ಮಹೇಶ್ ಜೊತೆ ಕೈ ಜೋಡಿಸೋ ಸೂಚನೆ ಕೂಡ ಸಿಕ್ಕಿದೆ. ನಿರ್ಮಾಪಕ ಮುನೇಗೌಡ ಕೂಡ ದಿಲ್‌ಖುಷ್ ಆಗಿದ್ದು, ಅಯೋಗ್ಯ-3 ಶುರು ಮಾಡೋಕೆ ರೆಡಿ ಅಂತಿದ್ದಾರೆ.
ಪ್ರಯೋಗಗಳನ್ನ ಮಾಡಲು ಹೋಗಿ ಕೈ ಸುಟ್ಟಿಕೊಂಡಿದ್ದ ಸತೀಶ್ ಸಿನಿಮೋತ್ಸಾಹವನ್ನ ಹೆಚ್ಚಿಸಿದೆ ಈ ಅಯೋಗ್ಯ-2 ಸಕ್ಸಸ್. ರವಿಚಂದ್ರನ್ ಕಾಲ್ಗುಣ, ಸತೀಶ್-ರವಿಶಂಕರ್ ಜುಗಲ್ಬಂದಿ, ರಚಿತಾ ಸ್ಟಾರ್ಡಮ್ ಕೂಡ ಈ ಸಿನಿಮಾಗೆ ಪ್ಲಸ್ ಆಗಿದ್ದು, ಮಣ್ಣಿನ ಕಥೆಗಳನ್ನ ಮಾಡೋದ್ರಲ್ಲಿ ಮಹೇಶ್ ಪಂಟರ್ ಅನಿಸಿಕೊಂಡಿದ್ದಾರೆ. ಸೋ.. ಅವ್ರ ನೆಕ್ಸ್ಟ್ ವೆಂಚರ್ ಹೇಗಿರಲಿದೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
