ಮತ್ತೆ ಜೈಲು ಪಾಲಾದ ನಟ ದರ್ಶನ್ ವಿಚಾರ ಸ್ಯಾಂಡಲ್‌ವುಡ್ ಸೇರಿದಂತೆ ಕರ್ನಾಟಕ ಜನತೆಯಲ್ಲಿಯೋದು ಎರಡೇ ಎರಡು ಪ್ರಶ್ನೆ. ಒಂದು ಅವರು ಹೊರಗೆ ಬರ್ತಾರಾ ಇಲ್ವಾ..? ಮತ್ತೊಂದು ಡೆವಿಲ್ ಸಿನಿಮಾ ಅವರ ಅನುಪಸ್ಥಿತಿಯಲ್ಲೂ ರಿಲೀಸ್ ಆಗುತ್ತಾ..? ಅವೆರಡೂ ಬಿಲಿಯನ್ ಡಾಲರ್ ಪ್ರಶ್ನೆಗಳಿಗೆ ಎಕ್ಸ್‌ಕ್ಲೂಸಿವ್ ಉತ್ತರಗಳು ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
- ಅಂದು ‘ಸಾರಥಿ’.. ಇಂದು ‘ಡೆವಿಲ್’.. ಹಿಸ್ಟರಿ ರಿಪೀಟ್..?
- ದಚ್ಚು ಅನುಪಸ್ಥಿತಿಯಲ್ಲೇ ರಿಲೀಸ್ ಆಗುತ್ತಾ ಡೆವಿಲ್ ಚಿತ್ರ?
ಡೆವಿಲ್.. ಡೆವಿಲ್.. ಡೆವಿಲ್.. ಅದ್ಯಾವಾಗ ದರ್ಶನ್ ಕರಿಯರ್‌ಗೆ ಡೆವಿಲ್ ಸಿನಿಮಾ ಎಂಟ್ರಿ ಕೊಡ್ತೋ, ಅಂದೇ ಡಿಬಾಸ್ ಕೂಡ ಡೆವಿಲ್ ಆಗಿ ಬದಲಾಗಿಬಿಟ್ಟರು ಅನಿಸುತ್ತೆ. ಹೌದು.. ಈ ಟೈಟಲ್ ಫೈನಲ್ ಆದಾಗಿನಿಂದ ದಚ್ಚು ಬಾಳಲ್ಲಿ ನೆಗೆಟಿವ್ ಮೇಲೆ ನೆಗೆಟಿವ್ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಪ್ರಕಾಶ್ ವೀರ್ ನಿರ್ದೇಶಿಸಿ, ನಿರ್ಮಿಸ್ತಿರೋ ಡೆವಿಲ್ ಸಿನಿಮಾ, ಶೂಟಿಂಗ್ ವೇಳೆ ಆದ ಎಲ್ಲಾ ಬೆಳವಣಿಗೆಗಳು ಗೊತ್ತೇ ಇವೆ.
ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿರೋದೇ ಒಂದು ಪವಾಡ. ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಸೆಂಟ್ರಲ್ ಜೈಲಿಗೆ ಹೋಗಿದ್ದ ದಾಸ, ಅದಾದ ಬಳಿಕ ಬಳ್ಳಾರಿ ಜೈಲಿಗೂ ಹೋಗಿಬಂದ್ರು. ಈ ಮಧ್ಯೆ ಬೇಲ್ ಮೇಲೆ ಹೊರಬಂದು ಸಿನಿಮಾ ಮುಗಿಸಿಕೊಟ್ರು. ಆದ್ರೆ 14 ವರ್ಷಗಳ ಹಿಂದೆ ದರ್ಶನ್ ಸಿನಿಯಾನದಲ್ಲಿ ಏನಾಗಿತ್ತೋ ಈಗಲೂ ಅದೇ ಮತ್ತೆ ಮರುಕಳಿಸುತ್ತಿದೆ.
2011ರಲ್ಲಿ ದರ್ಶನ್ ನಟನೆಯ ಸಾರಥಿ ಸಿನಿಮಾ ತೆರೆಕಂಡಿತ್ತು. ಆಗಲೂ ದಚ್ಚು ಜೈಲು ಪಾಲಾಗಿದ್ರು. ಹೌದು.. ಡೊಮೆಸ್ಟಿಕ್ ವಯಲೆನ್ಸ್ ಕೇಸ್‌ನಲ್ಲಿ ಹೆಂಡ್ತಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ರು. ಈಗಲೂ ಅದೇ ಕಥೆ. ಬಾಸು ಅದೇ ಹಳೇ ಕಥೆ ಅನ್ನುವಂತೆ ಸದ್ಯ ಮತ್ತೆ ಜೈಲೂಟ ಸವಿಯುತ್ತಿರೋ ದಾಸನಿಗೆ ಹಿಸ್ಟರಿ ರಿಪೀಟ್ ಆಗಿದೆ. ಈ ಬಾರಿಯೂ ಕೂಡ ನಾಯಕನಟ ಇಲ್ಲದೆ ಸಿನಿಮಾ ರಿಲೀಸ್ ಆಗಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.
- ಅಕ್ಟೋಬರ್ ತಿಂಗಳಾಂತ್ಯಕ್ಕೆ ಥಿಯೇಟರ್‌ಗೆ ಡೆವಿಲ್ ಎಂಟ್ರಿ
- ದೀಪಾ ಸನ್ನಿಧಿ ಜೊತೆ ದಿನಕರ್.. ಇಂದು ಪ್ರಕಾಶ್ ವೀರ್..?
ತಮ್ಮ ಸಹೋದರ ದರ್ಶನ್ ಜೈಲಲ್ಲಿದ್ದ ಹಿನ್ನೆಲೆ, ಸ್ವತಃ ನಿರ್ದೇಶಕ ದಿನಕರ್ ತೂಗುದೀಪ, ಚಿತ್ರದ ನಾಯಕನಟಿ ದೀಪಾ ಸನ್ನಿಧಿಯೊಂದಿಗೆ ಇಬ್ಬರೇ ಪ್ರಮೋಷನ್ಸ್ ಮಾಡಿದ್ರು. ಈಗ ಪ್ರಕಾಶ್ ವೀರ್‌ಗೆ ಬೇರೆ ಪರ್ಯಾಯ ಮಾರ್ಗ ಕಾಣ್ತಿಲ್ಲ. ಇದೇ ಅಕ್ಟೋಬರ್ ತಿಂಗಳಾಂತ್ಯಕ್ಕೆ ಡೆವಿಲ್ ಸಿನಿಮಾನ ಬಿಡುಗಡೆ ಮಾಡೋಕೆ ಯೋಜನೆ ರೂಪಿಸ್ತಿದ್ದಾರೆ ಎನ್ನಲಾಗ್ತಿದೆ. ಆದ್ರೆ ಹೀರೋ ಇಲ್ಲದೆ, ಡೆವಿಲ್ ಸಿನಿಮಾನ ರಿಲೀಸ್ ಮಾಡಬೇಕಿದೆ.
ದರ್ಶನ್ ಬಂದ ಮೇಲೆ ರಿಲೀಸ್ ಮಾಡೋಣ ಅನ್ನೋಕೆ, ಈಗಾಗ್ಲೇ ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡು ಸಿನಿಮಾನ ನಿರ್ಮಿಸಿದ್ದಾರೆ ಪ್ರಕಾಶ್ ವೀರ್. ಈಗಲೇ ತುಂಬಾ ತಡವಾಗಿದೆ. ಇನ್ನೂ ತಡ ಮಾಡೋದ್ರಿಂದ ಅದು ನಿರ್ಮಾಪಕರಿಗಷ್ಟೇ ಲಾಸ್. ಹಾಗಾಗಿ ಸಾರಥಿ ಸಿನಿಮಾ ಕೂಡ ಸಿಂಪಥಿಯಿಂದ ಬಾಕ್ಸ್ ಆಫೀಸ್‌ನಲ್ಲಿ ವರ್ಕೌಟ್ ಆಗಿತ್ತು. ಈಗಲೂ ಅದೇ ಸ್ಟ್ರ್ಯಾಟಜಿ ವರ್ಕ್ ಆಗುತ್ತಾ ಕಾದು ನೋಡಬೇಕಿದೆ.
- ದರ್ಶನ್‌ಗೆ ಜೀವಾವಧಿಯೋ..? ಮರಣದಂಡನೆಯೋ..?
- ದಾಸನಿಗೆ ಕನಿಷ್ಠ 7 ವರ್ಷಗಳು ಜೈಲುವಾಸ ಗ್ಯಾರಂಟಿನಾ..?
- ಸೀನಿಯರ್ ಅಡ್ವೊಕೇಟ್ ಈ ಬಗ್ಗೆ ಎಕ್ಸ್‌ಕ್ಲೂಸಿವ್ ಟಾಕ್
- ಇದು ನಿಜಕ್ಕೂ ಆಘಾತಕಾರಿ ಹಾಗೂ ಅರಗಿಸಿಕೊಳ್ಳಲಾಗದ್ದು
ದರ್ಶನ್ ಈ ಹಿಂದೆ ಬೇಲ್ ಮೇಲೆ ಹೊರಗೆ ಬಂದಂತೆ ಈ ಬಾರಿ ಬರೋದು ಅಷ್ಟು ಸುಲಭದ ಮಾತಲ್ಲ. ಯಾಕಂದ್ರೆ ಬೇಲ್ ಆರ್ಡರ್‌ನ ಸ್ವತಃ ಸರ್ವೋಚ್ಚ ನ್ಯಾಯಾಲಯವೇ ರದ್ದು ಮಾಡಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಇಡೀ ದೇಶಕ್ಕೆಲ್ಲಾ ಇದನ್ನು ಮಹತ್ವದ ತೀರ್ಪು ಎಂದು ಪರಿಗಣಿಸಿ, ಎಲ್ಲಾ ರಾಜ್ಯಗಳಿಗೂ ಅದನ್ನ ಸಾರುವಂತೆ ಹೇಳಿದೆ. ಹಾಗಾಗಿ ಈ ಬೆಳವಣಿಗೆಗಳನ್ನ ನೋಡ್ತಿದ್ರೆ ಸದ್ಯಕ್ಕೆ ದರ್ಶನ್‌ಗೆ ಬೇಲ್ ಅಲ್ಲ, ಕಠಿಣ ಶಿಕ್ಷೆ ಆಗೋದು ಪಕ್ಕಾ ಎನ್ನಲಾಗ್ತಿದೆ.
ನುರಿತ ಕಾನೂನು ತಜ್ಞರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯಗಳನ್ನು ನೋಡ್ತಿದ್ರೆ ದರ್ಶನ್ ಲೈಫು ಮುಗೀತು ಅಂತಲೇ ಹೇಳಬಹುದು. ಹೌದು.. ಚಾಲೆಂಜಿಂಗ್ ಸ್ಟಾರ್ ಸದ್ಯ ಈ ಬಾರಿಯ ಚಕ್ರವ್ಯೂಹ ಭೇದಿಸಿ ಬರೋದು ಕಷ್ಟಸಾಧ್ಯ. ಒಳಗೆ ಹೋದ್ಮೇಲೆ ಹೊರಗೆ ಬರುವ ಎಲ್ಲಾ ಮಾರ್ಗಗಳು ಬಂದ್ ಆಗಿವೆ. ಅವರು ಮಾಡಿದ ಸರಣಿ ಎಡವಟ್ಟುಗಳು ಲಾ ಅಂಡ್ ಆರ್ಡರ್ ಬಲೆಯಲ್ಲಿ ಕ್ಲಿಷ್ಟವಾಗಿ ಸಿಲುಕಿಕೊಂಡಿವೆ.
ಹಿರಿಯ ವಕೀಲರೊಬ್ಬರ ಹೇಳಿಕೆ ಪ್ರಕಾರ ದರ್ಶನ್‌ಗೆ ಕನಿಷ್ಟ 7 ವರ್ಷ ಜೈಲು ಶಿಕ್ಷೆ ಆಗಲಿದೆಯಂತೆ. ಯಾಕಂದ್ರೆ ರೇಣುಕಾಸ್ವಾಮಿಯನ್ನ ಕರೆಸಿದ್ದು ನಾನೇ ಅಂತ ದರ್ಶನ್ ಒಪ್ಪಿಕೊಂಡಿದ್ದು. ಆತನನ್ನ ಹೇಗೆ ಕರೆತಂದರೋ ಅದೇ ರೀತಿ ವಾಪಸ್ ಕಳುಹಿಸಿಕೊಡುವಲ್ಲಿ ಬೇಜವಾಬ್ದಾರಿತನ ತೋರಿದ್ದಾರೆ. ಸೋ.. ನೆಗ್ಲಿಜೆನ್ಸ್ ಆಧಾರದ ಮೇಲೆ 7 ವರ್ಷ ಸೆರೆವಾಸ ಆಗೋ ಸಾಧ್ಯತೆಗಳಿದೆ ಎಂದಿದ್ದಾರೆ.
302 ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಅಥ್ವಾ ಮರಣದಂಡನೆ ಕೂಡ ಆಗುವ ಸಾಧ್ಯತೆಯಿದೆ ಎಂದಿದ್ದಾರೆ ವಕೀಲರು. ಹೌದು.. 302 ಪ್ರಕಾರ ಜೀವ ಕಳೆದುಕೊಂಡ ರೇಣುಕಾಸ್ವಾಮಿ ಯಾವೆಲ್ಲಾ ರೀತಿ ಹಿಂಸೆ ಪಟ್ಟಿದ್ದಾನೆ..? ಆತನಿಗೆ ಚಿತ್ರ ಹಿಂದೆ ನೀಡಿದ್ದರಿಂದ ನರಳಿ ನರಳಿ ಸಾಯಿಸಿದ್ರೆ ಅದು ಘೋರವಾದ ಅಪರಾಧ ಆಗಲಿದೆ. ಆ ಘೋರವಾದ ಅಪರಾಧಕ್ಕೆ ಮರಣದಂಡನೆ ನೀಡುವ ಚಾನ್ಸಸ್ ಜಾಸ್ತಿ ಇದೆ ಎಂದಿದ್ದಾರೆ. ಪ್ರಜ್ಞೆ ತಪ್ಪಿದ ಬಳಿಕ ಆತನಿಗೆ ಎಲೆಕ್ಟ್ರಿಕ್ ಶಾಕ್ ನೀಡಿ, ನಂತರ ಎಬ್ಬಿಸಿ ಮತ್ತೆ ಹಿಂಸೆ ನೀಡಿದ್ದಾರೆ. ಬರೀ ದರ್ಶನ್ ಅಷ್ಟೇ ಅಲ್ಲ, ಸಾಕಷ್ಟು ಮಂದಿ ಆರೋಪಿಗಳಿಗೆ ಮರಣದಂಡನೆ ಆಗುವ ಸೂಚನೆ ನೀಡಿದ್ದಾರೆ.
ಇದು ದರ್ಶನ್ ಅವರ ಕುಟುಂಬ ಸೇರಿದಂತೆ ಅವ್ರ ಅಸಂಖ್ಯಾತ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಆಘಾತ ತರಬಹುದು. ಆದ್ರೆ ಇದೇ ಸತ್ಯ ಅಂತಿದ್ದಾರೆ ಕಾನೂನು ತಜ್ಞರು. ಆರಾಮಾಗಿ ಸಿನಿಮಾ ಮಾಡ್ಕೊಂಡು, ಮೋಜು ಮಸ್ತಿ ಮಾಡ್ಕೊಂಡು ಒಂದಷ್ಟು ಸಮಾಜ ಸೇವೆ ಮಾಡ್ತಾ ಬದುಕಬೇಕಿದ್ದ ದರ್ಶನ್, ಹೀಗೆ ನಿಜ ಜೀವನದಲ್ಲಿ ಹೀರೋಯಿಸಂ ತೋರಿಸೋಕೆ ಹೋಗಿ ನಿಜಕ್ಕೂ ತನಗೆ ತಾನೇ ಗುಂಡಿ ತೋಡಿಕೊಂಡಿದ್ದಾರೆ.