ಹಾವಳಿ ಇಡ್ತಿದ್ದ ದಚ್ಚುಗಿಲ್ಲ ದೀಪಾವಳಿ.. ಇಡೀ ಲೈಫ್ ದಿವಾಳಿ..!!

ಹಣ, ಆಸ್ತಿ, ಅಂತಸ್ತು, ಫ್ಯಾನ್ಸ್, ಸ್ಟಾರ್ಡಮ್ ಎಲ್ಲವೂ ಶೂನ್ಯ..!

Untitled design 2025 10 23t191657.798

ಡಿಬಾಸ್ ದರ್ಶನ್.. ಒಂದು ಕಾಲದಲ್ಲಿ ನಾನೇ.. ನಾನು ಬಿಟ್ರೆ ಇಲ್ಲ ಅಂತ ಸಿಕ್ಕಾಪಟ್ಟೆ ಮೆರೆದ ಸೂಪರ್ ಸ್ಟಾರ್. ಸಿಕ್ಕ ಸಿಕ್ಕವರಿಗೆಲ್ಲಾ ಟಾಂಗ್ ಕೊಟ್ಕೊಂಡು, ದೌಲತ್‌‌ನಲ್ಲಿ ಮೆರೆದವರು. ಇದೀಗ ಬಾಲ ಮುದುರಿಕೊಂಡು ಜೈಲಿನ ಕೋಣೆಯ ಮೂಲೆಯೊಂದರಲ್ಲಿ ಕೂರುವಂತಾಗಿದೆ. ಎಲ್ಲಾ ಸ್ಟಾರ್ಸ್‌ ಬಹಳ ವಿಜೃಂಭಣೆಯಿಂದ ದೀಪಾವಳಿ ಸೆಲೆಬ್ರೇಟ್ ಮಾಡ್ತಿದ್ರೆ, ಇಲ್ಲಿ ದಾಸನ ಲೈಫೇ ದಿವಾಳಿ ಆಗಿಬಿಟ್ಟಿದೆ.

ಒಂದಲ್ಲ ಎರಡೆರಡು ಫಾರ್ಮ್ ಹೌಸ್‌‌ಗಳು, ಬೆಂಗಳೂರು-ಮೈಸೂರಿನಲ್ಲಿ ಮನೆಗಳು. ಐಷಾರಾಮಿ ಎಸಿ ಕಾರ್‌‌ಗಳು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಅಭಿಮಾನಿಗಳು. ಸಿನಿಮಾಗಳನ್ನ ಹಬ್ಬಗಳಂತೆ ಸೆಂಭ್ರಮಿಸೋ ಚಿತ್ರಪ್ರೇಮಿಗಳು. ಕೈ ತುಂಬಾ ಕೆಲಸ ಕೊಡುವ ನಿರ್ಮಾಪಕರುಗಳು.. ಕೈಗೊಬ್ಬ, ಕಾಲಿಗೊಬ್ಬ ಆಳುಗಳು. ಇಷ್ಟೆಲ್ಲಾ ಇದ್ದ ಒಬ್ಬ ಸೂಪರ್ ಸ್ಟಾರ್, ಇಂದು ಜೈಲಲ್ಲಿ ಏನೂ ಇಲ್ಲದಂತೆ ಕಾನೂನಿನ ಬಲೆಗೆ ಸಿಲುಕಿಕೊಂಡಿರೋದು ಈ ಜನರೇಷನ್‌‌ನ ದೊಡ್ಡ ದುರಂತವೇ ಸರಿ.

 

ಹಾವಳಿ ಇಡ್ತಿದ್ದ ದಚ್ಚುಗಿಲ್ಲ ದೀಪಾವಳಿ.. ಇಡೀ ಲೈಫ್ ದಿವಾಳಿ

ಹಣ, ಆಸ್ತಿ, ಅಂತಸ್ತು, ಫ್ಯಾನ್ಸ್, ಸ್ಟಾರ್ಡಮ್ ಎಲ್ಲವೂ ಶೂನ್ಯ..!

ಯೆಸ್.. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ, ಒಡೆಯ, ಯಜಮಾನ ಅಂತೆಲ್ಲಾ ತರಹೇವಾರಿ ಬಿರುದುಗಳಿಂದ ಕರೆಸಿಕೊಳ್ತಿದ್ದ ಡಿಬಾಸ್ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಎಲ್ಲವನ್ನೂ ತ್ಯಾಗ ಮಾಡಿ, ಗಿಳಿ ಪಂಜರ ಸೇರಿದಂತೆ ಇದ್ದ ಸ್ವತಂತ್ರವನ್ನೇ ಕಳೆದುಕೊಂಡಿದ್ದಾರೆ. ಮಡದಿ, ಮಗ, ಅಮ್ಮ, ಅಕ್ಕ, ತಮ್ಮ, ಸೋದರಳಿಯರ ಜೊತೆ ಅದ್ಧೂರಿ ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಬೇಕಿದ್ದ ದರ್ಶನ್‌‌ ಲೈಫ್ ಅಕ್ಷರಶಃ ದಿವಾಳಿ ಆಗಿದೆ.

ಕೋಟಿ ಕೋಟಿ ಆಸ್ತಿ, ಅಂತಸ್ತು ಇದ್ದರೂ ಸಹ ಒಂದು ಬೆಡ್ ಹಾಗೂ ತಲೆದಿಂಬಿಗಾಗಿ ಅಂಗಲಾಚುವಂತಾಗಿದೆ. ಎಲ್ಲವೂ ಸರಿ ಇದ್ದಾಗ ಸಿಕ್ಕಾಪಟ್ಟೆ ದುರಹಂಕಾರ, ದೌಲತ್ತಿನಲ್ಲಿ ಮೆರೆದ ಇವರು, ಎಲುಬಿಲ್ಲದ ನಾಲಗೆಯಿಂದ ಬಾಯಿಗೆ ಬಂದಂತೆ ಮಾತಾಡ್ತಿದ್ರು. ಅದ್ರಲ್ಲೂ ದೇವತಾ ಮನುಷ್ಯ ಅಪ್ಪು ಬಗ್ಗೆ ಮಾತನಾಡಿದ್ದು, ಹೆಂಡ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮಾಧ್ಯಮಗಳಿಗೆ ಛೇಡಿಸಿದ್ದು ಹಾಗೂ ಅದೃಷ್ಠಲಕ್ಷ್ಮೀ ಬಗ್ಗೆ ಅವಹೇಳನವಾಗಿ ಮಾತನಾಡಿದ್ದು ಮಾತ್ರ ಕ್ಷಮಿಸಲಾರದ ತಪ್ಪುಗಳು. ಇದೀಗ ಆ ಕರ್ಮ ತನ್ನನ್ನ ಇನ್ನಿಲ್ಲದೆ ಕಾಡ್ತಿದೆ. ಮಾಡಿದ್ದಿಣ್ಣೋ ಮಹಾರಾಯ ಅಂತಿದೆ.

ಇದ್ದಾಗ ದರ್ಪ, ದೌಲತ್ತು, ದುರಹಂಕಾರ.. ಈಗ ಎಲ್ಲಾ ನಶ್ವರ

ಪಶ್ಚಾತ್ತಾಪದ ಜೀವನ.. ನಿಜಕ್ಕೂ ನಿಮ್ಗೆ ಇದು ಬೇಕಿತ್ತಾ ಬಾಸ್?

ಒಂದ್ಕಡೆ ರೇಣುಕಾಸ್ವಾಮಿ ಸಾವಿಗೆ ಆಗ್ತಿರೋ ಪಶ್ಚಾತ್ತಾಪ.. ಮತ್ತೊಂದ್ಕಡೆ ಇಷ್ಟೆಲ್ಲಾ ಕಷ್ಟ ಪಟ್ಟು ದುಡಿದು ಕಟ್ಟಿದ ಆ ಬೃಹತ್ ಕೋಟೆಯನ್ನ ತಾನೇ ಛಿದ್ರ ಛಿದ್ರವಾಗುವಂತೆ ಹಾಳು ಮಾಡಿಕೊಂಡ ಲೈಫ್ ಕುರಿತ ಆತ್ಮಾವಲೋಕನ. ಇನ್ ಕೇಸ್.. ಬೇಲ್ ಸಿಕ್ಕಿ ದರ್ಶನ್ ಹೊರಬಂದರೂ ಸಹ ನೆಮ್ಮದಿಯಾಗಿ ಮೊದಲಿನ ರೀತಿ ಈ ಸಮಾಜದಲ್ಲಿ ಜೀವಿಸಲು ಸಾಧ್ಯವೇ..? ನಿಜ ಜೀವನದಲ್ಲಿ ಇಂತಹ ಎಡವಟ್ ಮಾಡಿಕೊಂಡು, ರಿಯಲ್ ಲೈಫ್‌‌ನಲ್ಲಿ ನಾನು ಸಮಾಜಕ್ಕೆ ಮಾದರಿ ಆಗುವ ಹೀರೋ ಆಗಿ ನಿಮಗೆ ಸಂದೇಶ ಕೊಡ್ತೀನಿ ಅಂದ್ರೆ ಜನ ಒಪ್ತಾರೆಯೇ..? ಸದ್ಯ ಡೆವಿಲ್ ಸಿನಿಮಾದಲ್ಲೇ ಅವ್ರ ಭವಿಷ್ಯದ ಬಂಡವಾಳ ಬಯಲಾಗಲಿದೆ.

ಅದಕ್ಕೇ ಹೇಳೋದು.. ಸದಾ ಸರಳತೆಯಿಂದ ಇರಬೇಕು, ಜೀವಿಸಬೇಕು. ಇನ್ನೊಬ್ಬರ ಏಳಿಗೆ ತನಗೆಗೆ ಖುಷಿ ತರಬೇಕೇ ಹೊರತು, ಅದ್ರಿಂದ ಅಸೂಯೆ ಬೆಳೆಸಿಕೊಳ್ಳಬಾರದು. ಎಂದೂ ಮತ್ತೊಬ್ಬರಿಗೆ ಕಂಪೇರ್ ಮಾಡಿಕೊಳ್ಳಬಾರದು. ವಿದ್ಯೆ, ವಿನಯತೆ, ಪರಸ್ಪರ ಗೌರವ ಒಬ್ಬ ವ್ಯಕ್ತಿಯ ಘನತೆಯನ್ನ ಮತ್ತಷ್ಟು ಹೆಚ್ಚಿಸುತ್ತವೆ. ಇಲ್ಲವಾದಲ್ಲಿ ಇಂತಹ ಕೆಟ್ಟ ಪರಿಸ್ಥಿತಿಗಳಿಗೆ ಸಾಕ್ಷಿ ಆಗಬೇಕಾಗುತ್ತದೆ. ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿರೋ ದರ್ಶನ್ ಪರಿಸ್ಥಿತಿ ಜೊತೆಗೆ ಮನಸ್ಥಿತಿ ಕೂಡ ಬದಲಾಗಬೇಕಿದೆ. ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿಯಾಗಿ ಆತ ಮತ್ತೆ ಚಿತ್ರರಂಗಕ್ಕೆ ಮರಳಬೇಕಿದೆ.

 

 

Exit mobile version